Mudra Loan-ಮುದ್ರಾ ಯೋಜನೆಯಡಿ ಸ್ವಂತ ಉದ್ದಿಮೆಗೆ ಸಾಲ ಪಡೆಯುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!

February 16, 2026 | Siddesh
Mudra Loan-ಮುದ್ರಾ ಯೋಜನೆಯಡಿ ಸ್ವಂತ ಉದ್ದಿಮೆಗೆ ಸಾಲ ಪಡೆಯುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!
Share Now:

ಕೇಂದ್ರ ಸರಕಾರದಿಂದ ಸ್ವಂತ ಉದ್ದಿಮೆಯನ್ನು ಮಾಡುತ್ತಿರುವ ನಾಗರಿಕರಿಗೆ ಆರ್ಥಿಕ ನೆರವನ್ನು ಒದಗಿಸಲು ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಮೂಲಕ ಸಾಲವನ್ನು(Mudra Loan Yojana) ಪಡೆಯಲು ಪ್ರಧಾನ ಮಂತ್ರಿ ಮುದ್ರಾ ಯೋಜನೆ' (PMMY) ಅನ್ನು ಅನುಷ್ಥಾನ ಮಾಡಲಾಗಿತ್ತಿದ್ದು ಕಳೆದ ಬಜೆಟ್ ನಲ್ಲಿ ಗರಿಷ್ಠ ಸಾಲದ ಮಿತಿಯನ್ನು ಸಹ ಏರಿಕೆ ಮಾಡಲಾಗಿದ್ದು, ಈ ಯೋಜನೆಯ ಪ್ರಯೋಜನವನ್ನು ಪಡೆಯಲು ನಾಗರಿಕರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಭಾರತದ ಆರ್ಥಿಕತೆಯನ್ನು ಬಲಪಡಿಸಲು ಮತ್ತು ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರವು ಜಾರಿಗೆ ತಂದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಎಂದರೆ ಅದು 'ಪ್ರಧಾನ ಮಂತ್ರಿ ಮುದ್ರಾ ಯೋಜನೆ' (PMMY). ಸಣ್ಣ ಮತ್ತು ಅತಿಸಣ್ಣ ಉದ್ದಿಮೆದಾರರಿಗೆ ಬ್ಯಾಂಕುಗಳ ಮೂಲಕ ಸುಲಭವಾಗಿ ಸಾಲ(Mudra Loan Application) ಸೌಲಭ್ಯ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಯೋಜನೆಯಡಿ ನೀಡಲಾಗುವ ಗರಿಷ್ಠ ಸಾಲದ ಮಿತಿಯನ್ನು ₹10 ಲಕ್ಷದಿಂದ ₹20 ಲಕ್ಷಕ್ಕೆ ಏರಿಸಿರುವುದು ಸಣ್ಣ ಉದ್ದಿಮೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ.

ಇದನ್ನೂ ಓದಿ: PM-Kisan Amount-22 ಸಾವಿರ ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಬಾಕಿ ಹಣ!

ವಿಶೇಷವಾಗಿ 'ತರುಣ್ ಪ್ಲಸ್' (Tarun Plus) ಎಂಬ ಹೊಸ ವಿಭಾಗದ ಅಡಿಯಲ್ಲಿ, ಈ ಹಿಂದೆ ಮುದ್ರಾ ಸಾಲ ಪಡೆದು ಅದನ್ನು ಯಶಸ್ವಿಯಾಗಿ ಮರುಪಾವತಿ ಮಾಡಿದ ಉದ್ಯಮಿಗಳಿಗೆ ಈಗ ₹20 ಲಕ್ಷದವರೆಗೆ ಸಾಲ ಪಡೆಯುವ ಅವಕಾಶವಿದೆ. ಯಾವುದೇ ಆಸ್ತಿ ಅಡಮಾನ ಇಡದೆಯೇ (Collateral Free) ದೊಡ್ಡ ಮಟ್ಟದ ಸಾಲ ಸಿಗುತ್ತಿರುವುದು ಮಧ್ಯಮ ವರ್ಗದ ವ್ಯಾಪಾರಿಗಳಿಗೆ ವರದಾನವಾಗಿದೆ. ನೀವು ಸಣ್ಣ ಅಂಗಡಿ ಇಟ್ಟಿರಲಿ ಅಥವಾ ಉತ್ಪಾದನಾ ಘಟಕವನ್ನು ಆರಂಭಿಸುವ ಕನಸು ಕಂಡಿರಲಿ, ಮುದ್ರಾ ಯೋಜನೆ ನಿಮ್ಮ ಕನಸಿಗೆ ರೆಕ್ಕೆ ನೀಡಲಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಆರ್ಥಿಕ ನೆರವು ನೀಡಿ, ಅವರನ್ನು ಉದ್ಯಮಶೀಲರನ್ನಾಗಿ ಮಾಡುವುದು ಈ ಯೋಜನೆಯ ಗುರಿ. ಉತ್ಪಾದನೆ, ವ್ಯಾಪಾರ(Mudra Loan) ಮತ್ತು ಸೇವಾ ವಲಯದಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುವವರಿಗೆ ಈ ಯೋಜನೆ ಅನ್ವಯಿಸುತ್ತದೆ. ಈ ಲೇಖನದಲ್ಲಿ ಮುದ್ರಾ ಯೋಜನೆಯಡಿ ಸಾಲ ಪಡೆಯುವ ಸಂಪೂರ್ಣ ಪ್ರಕ್ರಿಯೆ, ಅರ್ಹತೆ ಮತ್ತು ಅಗತ್ಯ ದಾಖಲೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ವಿವರಿಸಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ಇತರೆ ಸ್ನೇಹಿತರಿಗೂ ಸಹ ಹಂಚಿಕೊಳ್ಳಿ.

ಇದನ್ನೂ ಓದಿ: Gruhalakshmi Amount-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಜಮಾ ವಿವರವನ್ನು ತಿಳಿಯುವುದು ಹೇಗೆ?

Mudra Loan Scheme-ಯಾವೆಲ್ಲ ಉದ್ದಿಮೆಗೆ ಸಾಲ ಪಡೆಯಬಹುದು?

ಮುದ್ರಾ ಯೋಜನೆಯು ಕೇವಲ ಒಂದು ವಲಯಕ್ಕೆ ಸೀಮಿತವಾಗಿಲ್ಲ. ವಿವಿಧ ಉದ್ದಿಮೆಗಳಿಗೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಅವಕಾಶವಿದ್ದು ಇವುಗಳ ಪಟ್ಟಿ ಈ ಕೆಳಗಿನಂತಿವೆ:

ಸಣ್ಣ ಅಂಗಡಿಗಳು, ಸೂಪರ್ ಮಾರ್ಕೆಟ್, ಹಣ್ಣು-ತರಕಾರಿ ವ್ಯಾಪಾರ, ಬಟ್ಟೆ ಅಂಗಡಿ.ಬ್ಯೂಟಿ ಪಾರ್ಲರ್, ಜಿಮ್, ಟೈಲರಿಂಗ್ ಶಾಪ್, ಡ್ರೈ ಕ್ಲೀನಿಂಗ್, ಫೋಟೋ ಸ್ಟುಡಿಯೋ, ರಿಪೇರಿ ಶಾಪ್‌ಗಳು. ಹಪ್ಪಳ-ಸಂಡಿಗೆ ಉದ್ಯಮ, ಬೇಕರಿ ಉತ್ಪನ್ನಗಳು, ಸಣ್ಣ ಪ್ರಮಾಣದ ಗಾರ್ಮೆಂಟ್ಸ್, ಪೀಠೋಪಕರಣ ತಯಾರಿಕೆ.

ಟ್ಯಾಕ್ಸಿ, ಆಟೋ ರಿಕ್ಷಾ, ಸರಕು ಸಾಗಣೆ ವಾಹನಗಳ ಖರೀದಿ. ಹೈನುಗಾರಿಕೆ (Dairy), ಕುರಿ ಸಾಕಣೆ, ಮೀನುಗಾರಿಕೆ ಮತ್ತು ಜೇನು ಸಾಕಣೆ ಮುಂತಾದ ಕೃಷಿ ಪೂರಕ ಚಟುವಟಿಕೆಗಳನ್ನು ಮಾಡುತ್ತಿರುವವರು ಮತ್ತು ಹೊಸದಾಗಿ ಮಾಡಲು ಇಚ್ಚೆಯನ್ನು ಹೊಂದಿರುವವರು ಸಾಲ ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Shakti Yojane Smart Card-ಇನ್ಮುಂದೆ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಆಧಾರ್ ಬದಲು ಸ್ಮಾರ್ಟ್ ಕಾರ್ಡ್!

Who Can Apply For Mudra Loan-ಯಾರೆಲ್ಲ ಸಾಲ ಪಡೆಯಲು ಅರ್ಹರು:

  • ಸಿಬಿಲ್ ಸ್ಕೋರ್ -1 ಅಥವಾ 650 ಕ್ಕಿಂತ ಹೆಚ್ಚಿರುವ ನಾಗರಿಕರು ಅರ್ಜಿ ಸಲ್ಲಿಸಬಹುದು.
  • ಸ್ವಂತ ಉದ್ದಿಮೆ ಅಥವಾ ವ್ಯಾಪಾರವನ್ನು ಮಾಡಲು ಇಚ್ಚೆ ಹೊಂದಿರುವವರು ಮತ್ತು ಈಗಾಗಲೇ ಉದ್ದಿಮೆಯನ್ನು ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು.
  • ಅರ್ಜಿದಾರರ ಅಭ್ಯರ್ಥಿಯ ವಯಸ್ಸು 18 ವರ್ಷ ಭರ್ತಿಯಾಗಿರಬೇಕು.

Collateral Free Loan-ಗ್ಯಾರಂಟಿ ಇಲ್ಲದೆ ಸಾಲ ಪಡೆಯಬಹುದು:

ಮುದ್ರಾ ಯೋಜನೆಯ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ 'ಯಾವುದೇ ಗ್ಯಾರಂಟಿ ಇಲ್ಲದೆ ಸಾಲ'. ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆಯಬೇಕೆಂದರೆ ಮನೆ, ಸೈಟು ಅಥವಾ ಚಿನ್ನವನ್ನು ಅಡಮಾನ ಇಡಬೇಕಾಗುತ್ತದೆ. ಆದರೆ ಮುದ್ರಾ ಯೋಜನೆಯಡಿ ಯಾವುದೇ ಭೌತಿಕ ಆಸ್ತಿಯನ್ನು ಅಡಮಾನ ಇಡುವ ಅಗತ್ಯವಿಲ್ಲ ಮತ್ತು ಸಾಲದ ಮರುಪಾವತಿಯ ಭರವಸೆಯನ್ನು ಸರ್ಕಾರವೇ 'ಕ್ರೆಡಿಟ್ ಗ್ಯಾರಂಟಿ ಫಂಡ್' ಮೂಲಕ ಬ್ಯಾಂಕುಗಳಿಗೆ ನೀಡುತ್ತದೆ. ಹೀಗಾಗಿ, ಆಸ್ತಿ ಇಲ್ಲದ ಬಡ ಮತ್ತು ಮಧ್ಯಮ ವರ್ಗದ ಯುವಕರು ಧೈರ್ಯವಾಗಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Free Skill Training-31 ದಿನದ ಉಚಿತ ಎಂಬ್ರಾಯಡರಿ ತರಬೇತಿ ಪಡೆಯಲು ಅರ್ಜಿ ಆಹ್ವಾನ!

Mudra Loan Application-ಎಲ್ಲಿ ಅರ್ಜಿ ಸಲ್ಲಿಸಬೇಕು?

ನಾಗರಿಕರು ಮುದ್ರಾ ಯೋಜನೆಯ ಪ್ರಯೋಜನವನ್ನು ಪಡೆಯಲು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಬ್ಯಾಂಕ್ ಖಾತೆಯನ್ನು ಹೊಂದಿರುವ ಶಾಖೆಯನ್ನು ಭೇಟಿ ಮಾಡಿ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕು. ರಾಷ್ಟ್ರೀಕೃತ್/ಖಾಸಗಿ/ಗ್ರಾಮೀಣ ಬ್ಯಾಂಕುಗಳಲ್ಲಿ ಈ ಯೋಜನೆ ಲಭ್ಯವಿರುತ್ತದೆ.

Mudra Loan Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

ನಾಗರಿಕರು ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯಲು ಆನ್ಲೈನ್ ಮೂಲಕವು ಸಹ ಅರ್ಜಿ ಸಲ್ಲಿಸಲು ಅವಕಾಶವಿದ್ದು JanSamarth ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಕೆಳಗಿನ ವಿಧಾನವನ್ನು ಅನುಸರಿಸಿ:

Step-1: ನಾಗರಿಕರು ಮೊದಲಿಗೆ ಈ Mudra Loan Online Application ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ JanSamarth ಪೋರ್ಟಲ್ ಅನ್ನು ಪ್ರವೇಶ ಮಾಡಿ.

ಇದನ್ನೂ ಓದಿ: Grama Sahayaka Pension-ಕಂದಾಯ ಇಲಾಖೆಯ ಗ್ರಾಮ ಸಹಾಯಕರಿಗೆ ರೂ. 5.00 ಲಕ್ಷ ಇಡಿಗಂಟು ಸೌಲಭ್ಯಕ್ಕೆ ಆದೇಶ ಪ್ರಕಟ!

Mudra Loan

Step-2: ಇದಾದ ಬಳಿಕ ಈ ಪೇಜ್ ನಲ್ಲಿ "ನೋಂದಾಯಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಿ.

Step-3: ನಂತರ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಬಳಿಕ ನಿಮ್ಮ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ದಾಖಲೆಗಳನ್ನು ಸಲ್ಲಿಸಿ ಅನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ತಿಳಿಸಿ.

Mudra Loan Required Documents-ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

ಮುದ್ರಾ ಯೋಜನೆಯಡಿ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಅವಶ್ಯವಿರುವ ದಾಖಲೆಗಳ ಪಟ್ಟಿ ಹೀಗಿದೆ:

  • ಆಧಾರ್ ಕಾರ್ಡ್.
  • ಪಾನ್ ಕಾರ್ಡ್.
  • ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್.
  • ಉದ್ಯಮದ ನೋಂದಣಿ ಪ್ರಮಾಣ ಪತ್ರ (Udyam Registration).
  • ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್.
  • ಯೋಜನಾ ವರದಿ (Project Report)(ನೀವು ಮಾಡಲು ಉದ್ದೇಶಿಸಿರುವ ಉದ್ಯಮದ ವಿವರ, ಲಾಭ ಮತ್ತು ವೆಚ್ಚದ ಅಂದಾಜು ಪಟ್ಟಿ)
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ(ಮೀಸಲಾತಿ ಅಡಿಯಲ್ಲಿ ಸೌಲಭ್ಯ ಪಡೆಯಬೇಕಿದ್ದಲ್ಲಿ)

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: