New GST Rates-ಕೇಂದ್ರ ಸರಕಾರದಿಂದ ರೈತರಿಗೆ ಸಿಹಿ ಸುದ್ದಿ: ಟ್ರಾಕ್ಟರ್ ಖರೀದಿಯ ಮೇಲೆ GST ದರದಲ್ಲಿ ಭಾರೀ ಇಳಿಕೆ!

September 4, 2025 | Siddesh
New GST Rates-ಕೇಂದ್ರ ಸರಕಾರದಿಂದ ರೈತರಿಗೆ ಸಿಹಿ ಸುದ್ದಿ: ಟ್ರಾಕ್ಟರ್ ಖರೀದಿಯ ಮೇಲೆ GST ದರದಲ್ಲಿ ಭಾರೀ ಇಳಿಕೆ!
Share Now:

ಕೇಂದ್ರ ಸರಕಾರವು ರೈತರಿಗೆ ಮತ್ತು ದೇಶದ ನಾಗರಿಕರಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಉಡುಗೊರೆಯನ್ನು ಘೋಷಿಸಿದೆ, ಟ್ರಾಕ್ಟರ್‌ಗಳು ಮತ್ತು ಕೃಷಿ ಯಂತ್ರೋಪಕರಣಗಳ ಖರೀದಿಯ ಮೇಲಿನ ವಸ್ತು ಮತ್ತು ಸೇವಾ ತೆರಿಗೆ (GST) ದರವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದ್ದು ಇದರ ವಿವರವನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಭಾರತದ ಕೃಷಿ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರಕಾರವು ರೈತರಿಗೆ ಒಂದು ಸಂತಸದ ಸುದ್ದಿಯನ್ನು ಘೋಷಿಸಿದೆ. ಟ್ರಾಕ್ಟರ್‌ಗಳು ಮತ್ತು ಕೃಷಿ ಯಂತ್ರೋಪಕರಣಗಳ(GST for Automobiles) ಖರೀದಿಯ ಮೇಲಿನ ವಸ್ತು ಮತ್ತು ಸೇವಾ ತೆರಿಗೆ (GST) ದರವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಈ ನಿರ್ಧಾರವು ರೈತರಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಕೃಷಿ ಕ್ಷೇತ್ರದ ಆಧುನೀಕರಣಕ್ಕೆ ಸಹಾಯಕವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇದನ್ನೂ ಓದಿ: Property Registration Fee-ರಾಜ್ಯ ಸರಕಾರದಿಂದ ಆಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ!

Tractors GST Rate-ಟ್ರಾಕ್ಟರ್ ಖರೀದಿಯ ಮೇಲೆ GST ದರದಲ್ಲಿ ಭಾರೀ ಇಳಿಕೆ:

ಕೇಂದ್ರ ಸರಕಾರದ ಇತ್ತೀಚಿನ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಟ್ರಾಕ್ಟರ್‌ಗಳು ಮತ್ತು ಟ್ರಾಕ್ಟರ್ ಭಾಗಗಳ ಮೇಲಿನ ಜಿಎಸ್‌ಟಿ ದರವನ್ನು 12% ರಿಂದ 5% ಕ್ಕೆ ಇಳಿಸಲಾಗಿದೆ. ಇದರಿಂದ ಟ್ರಾಕ್ಟರ್‌ಗಳ ಬೆಲೆಯಲ್ಲಿ ಗಣನೀಯ ಕಡಿತವಾಗಲಿದ್ದು, ರೈತರಿಗೆ ಆರ್ಥಿಕ ಭಾರ ಕಡಿಮೆಯಾಗಲಿದೆ. ಇದರ ಜೊತೆಗೆ, ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳು, ಲಘು ಪೋಷಕಾಂಶಗಳ ಮೇಲಿನ ಜಿಎಸ್‌ಟಿ ದರವನ್ನು ಸಹ ಕಡಿಮೆ ಮಾಡಲಾಗಿದೆ, ಇದು ಕೃಷಿ ಕ್ಷೇತ್ರಕ್ಕೆ ಒಟ್ಟಾರೆಯಾಗಿ ದೊಡ್ಡ ಲಾಭವನ್ನು ತಂದುಕೊಡಲಿದೆ.

New GST Benefits To Farmers-ರೈತರಿಗೆ ಈ ನಿರ್ಧಾರದ ಪ್ರಯೋಜನಗಳು:

  • ಜಿಎಸ್‌ಟಿ ದರ ಇಳಿಕೆಯಿಂದ ಟ್ರಾಕ್ಟರ್‌ಗಳ ಬೆಲೆ ಕಡಿಮೆಯಾಗಲಿದ್ದು, ಸಣ್ಣ ಮತ್ತು ಮಧ್ಯಮ ರೈತರಿಗೆ ಆಧುನಿಕ ಕೃಷಿ ಉಪಕರಣಗಳನ್ನು ಖರೀದಿಸಲು ಸುಲಭವಾಗಲಿದೆ.
  • ಟ್ರಾಕ್ಟರ್‌ಗಳು ಮತ್ತು ಯಂತ್ರೋಪಕರಣಗಳ ಬಳಕೆಯಿಂದ ರೈತರು ತಮ್ಮ ಕೃಷಿ ಕೆಲಸಗಳನ್ನು ತ್ವರಿತವಾಗಿ ಮತ್ತು ಸಮರ್ಥವಾಗಿ ನಿರ್ವಹಿಸಬಹುದು, ಇದರಿಂದ ಉತ್ಪಾದಕತೆಯಲ್ಲಿ ಗಣನೀಯ ಏರಿಕೆಯಾಗಲಿದೆ.
  • ಜಿಎಸ್‌ಟಿ ಕಡಿತದಿಂದ ರೈತರಿಗೆ ಆರ್ಥಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ, ಉಳಿತಾಯವಾದ ಹಣವನ್ನು ಇತರ ಕೃಷಿ ಅಗತ್ಯಗಳಿಗೆ ಬಳಸಬಹುದು.

ಇದನ್ನೂ ಓದಿ: LIC Scholarship- ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ!ಎಲ್ಐಸಿಯಿಂದ ₹ 40,000 ವಿದ್ಯಾರ್ಥಿವೇತನ!

New GST Benefits-ಜಿಎಸ್‌ಟಿ ಇಳಿಕೆಯಿಂದ ಯಾವೆಲ್ಲ ಪ್ರಯೋಜನಗಳಿವೆ?

ಈ ಜಿಎಸ್‌ಟಿ ದರ ಕಡಿತವು ಟ್ರಾಕ್ಟರ್ ತಯಾರಕ ಕಂಪನಿಗಳಿಗೂ ಲಾಭದಾಯಕವಾಗಲಿದೆ. ಟ್ರಾಕ್ಟರ್‌ಗಳ ಬೇಡಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದ್ದು, ಇದರಿಂದ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯೂ ಹೆಚ್ಚಲಿದೆ. ಜೊತೆಗೆ, ಕೃಷಿ ಯಂತ್ರೋಪಕರಣಗಳ ತಯಾರಿಕೆಗೆ ಉತ್ತೇಜನ ಸಿಗಲಿದೆ.

Revised GST Rates Applicable From Which Date-ಪರಿಷ್ಕೃತ GST ಯಾವಾಗಿನಿಂದ ಜಾರಿಗೆ ಬರಲಿದೆ?

ಪರಿಷ್ಕೃತ ಹೊಸ ಜಿಎಸ್‌ಟಿ ದರ ವಿವರವು 22 ಸೆಪ್ಟೆಂಬರ್ 2025 ರಿಂದ ಜಾರಿಗೆ ಬರಲಿವೆ ಎಂಬ ಮಾಹಿತಿ ಇತ್ತೀಚಿನ ವರದಿಗಳ ಪ್ರಕಾರ ಲಭ್ಯವಿದೆ. ಜಿಎಸ್‌ಟಿ ಕೌನ್ಸಿಲ್‌ನ 56ನೇ ಸಭೆಯಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್‌ಗಳನ್ನು (5% ಮತ್ತು 18%) ಅನುಮೋದಿಸಲಾಗಿದೆ.

ಇದನ್ನೂ ಓದಿ: Godown Subsidy-ಹಳ್ಳಿಯಲ್ಲಿ ಗೋಡೌನ್ ನಿರ್ಮಾಣಕ್ಕೆ ಶೇ 33% ಸಬ್ಸಿಡಿ ಪಡೆಯಲು ಅವಕಾಶ!

ದೈನಂದಿನ ಅವಶ್ಯಕ ವಸ್ತುಗಳ ಮೇಲೆ ಪರಿಷ್ಕೃತ GST ದರ:

ವಸ್ತುಗಳುಹಿಂದಿನ ದರಪರಿಷ್ಕೃತ ದರ
ತಲೆಗೆ ಹಚ್ಚುವ ಎಣ್ಣೆ, ಶ್ಯಾಂಪು, ಪೇಸ್ಟ್, ಸಾಬೂನು, ಟೂತ್ ಬ್ರಷ್, ಶೇವಿಂಗ್ ಕ್ರೀಮ್18%5%
ಬೆಣ್ಣೆ, ತುಪ್ಪ, ಚೀಸ್ & ಹಾಲಿನ ಸ್ಪ್ರೆಡ್ಸ್12%5%
ಪ್ಯಾಕ್ ಮಾಡಿರುವ ನಂಕ್ಮೀನ್ಸ್, ಭುಜಿಯಾ & ಮಿಶ್ರಣಗಳು12%5%
ಪಾತ್ರೆಗಳು12%5%
ಹಸುಗೂಸುಗಳಿಗೆ ಬಾಟಲ್‌ಗಳು, ನ್ಯಾಪ್ಕಿನ್‌ಗಳು & ಕ್ಲೀನಿಕಲ್ ಡಯಪರ್‌ಗಳು12%5%
ಹೊಲಿಗೆ ಯಂತ್ರಗಳು & ಭಾಗಗಳು12%5%

ಇದನ್ನೂ ಓದಿ: Pearl Farming-ಕೃಷಿ ವಿಶ್ವವಿದ್ಯಾಲಯದಿಂದ ಮುತ್ತು ಕೃಷಿ ತರಬೇತಿಗೆ ಅರ್ಜಿ ಆಹ್ವಾನ!

ರೈತರಿಗೆ ಸಂಬಂಧಿಸಿದ ಮತ್ತು ಕೃಷಿ ಉಪಕರಣಗಳ ಮೇಲೆ ಪರಿಷ್ಕೃತ GST ದರ ವಿವರ:

ವಸ್ತುಗಳುಹಿಂದಿನ ದರಪರಿಷ್ಕೃತ ದರ
ಟ್ರಾಕ್ಟರ್ ಟೈರ್‌ಗಳು & ಭಾಗಗಳು18%5%
ಟ್ರಾಕ್ಟರ್‌ಗಳು12%5%
ಜೈವಿಕ ಕೀಟನಾಶಕಗಳು, ಮೈಕ್ರೋ ನ್ಯೂಟ್ರಿಯಂಟ್12%5%
ಡ್ರಿಪ್ ಇರಿಗೇಶನ್ ಪರಿಕರಗಳು& ಸ್ಪ್ರಿಂಕ್ಲರ್‌ಗಳು12%5%
ಕೃಷಿ, ತೋಟಗಾರಿಕೆ, ಅರಣ್ಯ ಯಂತ್ರೋಪಕರಣಗಳು12%5%

ಇದನ್ನೂ ಓದಿ: Computer Training-ಕೆನರಾ ಬ್ಯಾಂಕ್ ವತಿಯಿಂದ 3 ತಿಂಗಳ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ!

ಆರೋಗ್ಯ ವಿಮಾ ಯೋಜನೆ ಮತ್ತು ಪರಿಕರಗಳ ಮೇಲೆ GST ರಿಯಾಯಿತಿ ವಿವರ:

ವಸ್ತುಗಳುಹಿಂದಿನ ದರಪರಿಷ್ಕೃತ ದರ
ವೈಯಕ್ತಿಕ ಆರೋಗ್ಯ & ಜೀವ ವಿಮೆ18%Nil
ತಾಪಮಾನ ಮಾಪಕ18%5%
ವೈದ್ಯಕೀಯ ಆಮ್ಲಜನಕ12%5%
ಎಲ್ಲಾ ಡಯಾಗ್ನೊಸ್ಟಿಕ್ ಕಿಟ್‌ಗಳು & ರಿಯಾಜೆಂಟ್‌ಗಳು12%5%
ಗ್ಲೂಕೋಮೀಟರ್ & ಟೆಸ್ಟ್ ಸ್ಟ್ರಿಪ್‌ಗಳು12%5%
ಕನ್ನಡಕಗಳು12%5%

ಇದನ್ನೂ ಓದಿ: CET Result-2025: ಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟ!

ವಿದ್ಯಾರ್ಥಿಗಳಿಗೆ ದಿನನಿತ್ಯ ಅವಶ್ಯವಿರುವ ಸಾಧನಗಳ ಮೇಲೆ ಮೇಲೆ GST ವಿನಾಯಿತಿ:

ವಸ್ತುಗಳುಹಿಂದಿನ ದರಪರಿಷ್ಕೃತ ದರ
ನಕ್ಷೆಗಳು, ಚಾರ್ಟ್‌ಗಳು & ಗ್ಲೋಬ್‌ಗಳು12%Nil
ಪೆನ್ಸಿಲ್, ಶಾರ್ಪನರ್, ಕ್ರೇಯಾನ್ಸ್ & ಪ್ಯಾಸ್ಟೆಲ್‌ಗಳು12%Nil
Exercise Books & Notebooks12%Nil
ರಬ್ಬರ್5%Nil

ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಉಳಿತಾಯ:

ವಸ್ತುಗಳುಹಿಂದಿನ ದರಪರಿಷ್ಕೃತ ದರ
ಏರ್ ಕಂಡೀಷನರ್‌ಗಳು28%18%
ಟಿವಿ (32 ಇಂಚುಗಳ ಮೇಲಾಗಿರುವವು – LED & LCD ಸೇರಿ)28%18%
ಮಾನಿಟರ್‌ಗಳು & ಪ್ರೊಜೆಕ್ಟರ್‌ಗಳು28%18%
ಡಿಶ್ ವಾಶಿಂಗ್ ಯಂತ್ರಗಳು28%18%

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: