Old RTC And Mutation-ಮೊಬೈಲ್ ನಲ್ಲೇ ಹಳೆಯ ಪಹಣಿ ಮ್ಯುಟೇಷನ್ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

December 10, 2025 | Siddesh
Old RTC And Mutation-ಮೊಬೈಲ್ ನಲ್ಲೇ ಹಳೆಯ ಪಹಣಿ ಮ್ಯುಟೇಷನ್ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!
Share Now:

ರಾಜ್ಯ ಸರಕಾರವು ಕಂದಾಯ ಇಲಾಖೆಯ ಸೇವೆಯನ್ನು ರೈತರಿಗೆ ಒದಗಿಸಲು ಜನ ಸ್ನೇಹಿ ಮಾದರಿಯನ್ನು ಜಾರಿಗೆ ತರಲು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಹಳೆಯ ಪಹಣಿ(Old Pahani) ಮತ್ತು ಮ್ಯುಟೇಷನ್(Mutation) ದಾಖಲೆಗಳನ್ನು ಆನ್ಲೈನ್ ಮೂಲಕವೇ ಸುಲಭ ಮತ್ತು ಸರಳ ವಿಧಾನವನ್ನು ಅನುಸರಿಸಿ ತ್ವರಿತವಾಗಿ ಪಡೆದುಕೊಳ್ಳಲು ಕಂದಾಯ ಇಲಾಖೆಯು(Revenue Department) ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು recordroom.karnataka.gov.in ತಂತ್ರಾಂಶವನ್ನು ಜಾರಿಗೆ ತಂದಿದೆ.

ಕಂದಾಯ ಇಲಾಖೆಯಿಂದ ರೈತರ ಜಮೀನಿಗೆ ಸಂಬಂಧಪಟ್ಟ ಅಧಿಕೃತ ದಾಖಲೆಗಳಾದ ಹಳೆಯ ಪಹಣಿ ಮ್ಯುಟೇಷನ್ ಅನ್ನು ಡಿಜಿಟಲ್(Online Mutation) ಮಾದರಿಯಲ್ಲಿ ದಾಖಲಿಸಿ ಸ್ವಂತ ರೈತರೇ ಯಾವುದೇ ಸರಕಾರಿ ಕಚೇರಿಯನ್ನು ಭೇಟಿ ಮಾಡಿ ತಾವು ಇದ್ದಲ್ಲಿಯೇ ಮೊಬೈಲ್ ಮೂಲಕ ಶುಲ್ಕ ಪಾವತಿ ಮಾಡಿ ಹಳೆಯ ಪಹಣಿ ಮತ್ತು ಮ್ಯುಟೇಷನ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ನೂತನ ವೆಬ್ಸೈಟ್ ಅನ್ನು ಜಾರಿಗೆ ತರಲಾಗಿದ್ದು ಈ ಕುರಿತು ಅನೇಕ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿದ್ದು ಈ ತಂತ್ರಾಂಶದ ಬಗ್ಗೆ ಸಂಪೂರ್ಣ ವಿವರವನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Maize MSP-ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಗೆ ಹೆಚ್ಚಳ! ಕ್ವಿಂಟಾಲ್ ಗೆ 2,400/- ರೂ ನಿಗದಿ!

ಇಂದಿನ ಲೇಖನದಲ್ಲಿ ಏನಿದು recordroom.karnataka.gov.in ತಂತ್ರಾಂಶ? ಇದರಿಂದ ರೈತರಿಗೆ ಯಾವೆಲ್ಲ(Karnataka Revenue Deparment Online Services)ಪ್ರಯೋಜನಗಳಿವೆ? ರೈತರು ತಮ್ಮ ಮೊಬೈಲ್ ನಲ್ಲಿ ಈ ತಂತ್ರಾಂಶವನ್ನು ಬಳಕೆ ಮಾಡಿಕೊಂಡು ಯಾವೆಲ್ಲ ದಾಖಲೆಗಳನ್ನು ಪಡೆದುಕೊಳ್ಳಬಹುದು? ಇದರ ಹಂತವಾರು ವಿಧಾನದ ಮಾಹಿತಿ ಸೇರಿದಂತೆ ಇನ್ನಿತರೆ ಅವಶ್ಯಕ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Record Room Website-ಏನಿದು recordroom.karnataka.gov.in ತಂತ್ರಾಂಶ?

ಕಂದಾಯ ಇಲಾಖೆಯಿಂದ ನಮ್ಮ ರಾಜ್ಯದ ಎಲ್ಲಾ ತಾಲ್ಲೂಕುಗಳನ್ನು ಜೂನ್ 2025 ರಿಂದ ಅಧಿಕೃತವಾಗಿ ಈ recordroom.karnataka.gov.in ತಂತ್ರಾಶವನ್ನು ಜಾರಿಗೆ ತರಲಾಗಿದ್ದು ರೈತರು ತಮ್ಮ ಮೊಬೈಲ್ ನಲ್ಲೇ ಈ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಜಮೀನಿಗೆ ಸಂಬಂಧಪಟ್ಟ ಯಾವುದೇ ಬಗ್ಗೆಯ ಹಳೆಯ ಅಥವಾ ಬಹು ಹಿಂದಿನ ವರ್ಷದ ಮೂಲ ದಾಖಲೆಯ ಡಿಜಿಟಲ್ ಸಹಿ ಪ್ರತಿಯನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ತಮ್ಮ ಮೊಬೈಲ್ ಮೂಲಕವೇ ಶುಲ್ಕ ಪಾವತಿ ಮಾಡಿ ಪಡೆದುಕೊಳ್ಳಬಹುದು ಅಥವಾ ತಮ್ಮ ತಾಲ್ಲೂಕಿನ ರೇಕಾರ್ಡ್ ರೂಮ್ ವಿಭಾಗವನ್ನು ಭೇಟಿ ಮಾಡಿ ಸಹ ಆ ದಿನವೇ ವಿವಿಧ ದಾಖಲೆಗಳನ್ನು ಪಡೆದುಕೊಳ್ಳಬಹುದು.

Bhu Suraksha Scheme Benefits-ರೈತರಿಗೆ ಯಾವೆಲ್ಲ ಪ್ರಯೋಜನಗಳಿವೆ?

ಕೃಷ್ಣ ಬೈರೇಗೌಡ ಕಂದಾಯ ಸಚಿವರು ಈ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು ಇದ್ದರಿಂದ ರೈತರಿಗೆ ಅನೇಕ ಪ್ರಯೋಜನಗಳಿವೆ "ಭೂ ಸುರಕ್ಷಾ" ಎನ್ನುವ ಮಹತ್ವಾಕಾಂಕ್ಷಿ ಯೋಜನೆಯಡಿಯಲ್ಲಿ ಪ್ರಸ್ತುತ ತಾಲೂಕು ಕಚೇರಿಯ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಪ್ರಮುಖವಾದ ಹಳೆಯ ಅವಧಿಯ ಭೂ ದಾಖಲೆಗಳನ್ನು ಇಂಡೆಕ್ಸಿಂಗ್ , ಕ್ಯಾಟಲಾಗಿಂಗ್, ಸ್ಕಾನಿಂಗ್ ಮತ್ತು ಅಪ್ಲೋಡ್ ಮಾಡಿ ಗಣಕೀಕರಣ ಮಾಡಿರುವುದರಿಂದ ರೈತರಿಗೆ ಆಗುವ ಪ್ರಯೋಜನಗಳ ಪಟ್ಟಿ ಹೀಗಿದೆ:

ಇದನ್ನೂ ಓದಿ: Shrama Shakti Yojana-ಶ್ರಮ ಶಕ್ತಿ ಯೋಜನೆಯಡಿ ₹50,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!

ರೈತರು ತ್ವರಿತವಾಗಿ ತಮ್ಮ ಜಮೀನಿಗೆ ಸಂಬಂಧಿಸಿದ 1977 ರಿಂದ ಇಲ್ಲಿಯವರೆಗೆ ಪಹಣಿ ಮತ್ತು ಮ್ಯುಟೇಶನ್ ಪ್ರತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದ್ದರಿಂದ ಸಮಯ ಮತ್ತು ಸರಕಾರಿ ಕಚೇರಿ ಅಲೆದಾಟಕ್ಕೆ ಬ್ರೇಕ್ ಬಿಳುತ್ತದೆ.

ಈ ತಂತ್ರಾಂಶದಲ್ಲಿ ಹಳೆಯ/ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳುವುದರಿಂದ ನಕಲಿ ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

ರೈತರು ತಮ್ಮ ಮೊಬೈಲ್ ನಲ್ಲೇ ತಾವು ಇದ್ದ ಸ್ಥಳದಿಂದಲೇ ಜಮೀನಿಗೆ ಸಂಬಂಧಿಸಿದ ಹಳೆಯ ದಾಖಲೆಗಳನ್ನು ಪಡೆಯಬಹುದು ಜೊತೆಗೆ ತಂತ್ರಾಂಶದಲ್ಲಿ ಲಭ್ಯವಿಲ್ಲದ ದಾಖಲೆಯನ್ನು ಪಡೆಯಲು ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Mahindra Sarathi Scholarship-ಮಹೀಂದ್ರಾ ಸಾರಥಿ ಅಭಿಯಾನದ ಅಡಿಯಲ್ಲಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Old RTC And Mutation

ಇದನ್ನೂ ಓದಿ: Kotak Scholarship-ಕೋಟಕ್ ಕನ್ಯಾ ಸ್ಕಾಲರ್‌ಶಿಪ್ ₹1.5 ಲಕ್ಷ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

Online Old RTC-ಮೊಬೈಲ್ ನಲ್ಲಿ ಜಮೀನಿನ ಹಳೆಯ ದಾಖಲೆಗಳನ್ನು ಪಡೆಯುವುದು ಹೇಗೆ?

ರೈತರು ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಕಂದಾಯ ಇಲಾಖೆಯ recordroom.karnataka.gov.in ತಂತ್ರಾಂಶವನ್ನು ಭೇಟಿ ಮಾಡಿ ತಮ್ಮ ಮನೆಯಲ್ಲೇ ಇದ್ದು ಮೊಬೈಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ನಿಮ್ಮ ಜಮೀನಿಗೆ ಸಂಬಂಧಿಸಿದ ಹಳೆಯ ದಾಖಲೆಗಳನ್ನು ಶೀಘ್ರದಲ್ಲೇ ಪಡೆಯಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Online Mutation And Old RTC ಮಾಡಿ ಕಂದಾಯ ಇಲಾಕೆಯ ಅಧಿಕೃತ recordroom.karnataka.gov.in ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ನಂತರ ಈ ಪೇಜ್ ನಲ್ಲಿ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ "ಓಟಿಪಿ ರಚಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ ಓಟಿಪಿ ಅನ್ನು ಪಡೆದು ಬಳಿಕ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-3: ಲಾಗಿನ್ ಅದ ನಂತರ ನಿಮ್ಮ ಹೆಸರು, ವಿಳಾಸ ಇನ್ನಿತರೆ ಅವಶ್ಯಕ ಮಾಹಿತಿಯನ್ನು ಭರ್ತಿ ಮಾಡಿ "Next" ಬಟನ್ ಮೇಲೆ ಕ್ಲಿಕ್ ಮಾಡಿ ಈ ಪೇಜ್ ನಲ್ಲಿ ನಿಮಗೆ ಯಾವ ದಾಖಲೆ ಅವಶ್ಯವಿದೆ ಎನ್ನುವ ಮಾಹಿತಿಯನ್ನು ಆಯ್ಕೆ ಮಾಡಿಕೊಂಡು "Next" ಬಟನ್ ಮೇಲೆ ಕ್ಲಿಕ್ ಮಾಡಿ.

Step-4: ಡಾಕ್ಯುಮೆಂಟ್‌ನಿಂದ ಅಗತ್ಯವಿರುವ ಪುಟಗಳನ್ನು ಆಯ್ಕೆ ಮಾಡಿ. ಪುಟಗಳನ್ನು ಇಚ್ಛೆಪಟ್ಟಿಗೆ ಸೇರಿಸಿ, ದಾಖಲೆಯ ಪೂರ್ವವೀಕ್ಷಣೆಯನ್ನು ಮಾಡಿ, ಆನ್ಲೈನ್ ಶುಲ್ಕ ​​ಪಾವತಿ ಮಾಡಿ ಕೊನೆಯಲ್ಲಿ ಡಾಕ್ಯುಮೆಂಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: Free Sewing Machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Revenue Department Record Room-ರೈತರು ಯಾವೆಲ್ಲ ದಾಖಲೆಗಳನ್ನು ಪಡೆದುಕೊಳ್ಳಬಹುದು?

ರೈತರು www.recordroom.karnataka.gov.in ತಂತ್ರಾಂಶದ ಮೂಲಕ ಅಥವಾ ತಾಲೂಕು ಕಚೇರಿಯ ಈ ವಿಭಾಗದಲ್ಲಿ ತಮ್ಮ ಜಮೀನಿಗೆ ಸಂಬಂಧಿಸಿದ ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಪಡೆಯಬಹುದು

  • ಹಳೆಯ ಪಹಣಿ(1977 ರಿಂದ).
  • ಹಳೆಯ ಮ್ಯುಟೇಶನ್.
  • ಹಕ್ಕುಪತ್ರ.
  • ಕಂದಾಯ ನಕ್ಷೆ.
  • ಭೂ ಪರಿವರ್ತನೆ ಪತ್ರ.
  • ಸರ್ವೆ ದಾಖಲೆಗಳು ಇತ್ಯಾದಿ.

ಇದನ್ನೂ ಓದಿ: Business Loan Subsidy-ಮಹಿಳಾ ನಿಗಮದಿಂದ ಮಹಿಳೆಯರಿಗೆ ಸ್ವಂತ ಉದ್ದಿಮೆ ಆರಂಭಿಸಲು ₹1.5 ಲಕ್ಷ ಸಬ್ಸಿಡಿ!

Bhu Suraksha Yojana-ಡಿಜಿಟಲ್ ಭೂದಾಖಲೆಗಳ ವಿತರಣೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಕಂದಾಯ ಆಯುಕ್ತಾಲಯದ ಭೂಮಿ ಉಸ್ತುವಾರಿ ಕೋಶದಿಂದ "ಕಂದಾಯ ದಾಖಲೆಗಳ ಗಣಕೀಕರಣ" ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ರಾಜ್ಯದ ಕೆಲವು ತಾಲ್ಲೂಕು ಕಚೇರಿಗಳಲ್ಲಿರುವ 'ಎ' ಮತ್ತು 'ಬಿ' ವರ್ಗದ ದಾಖಲೆಗಳ ಗಣಕೀಕರಣ ಪೂರ್ಣಗೊಂಡಿದ್ದು, 'ಕಂದಾಯ ದಾಖಲೆಗಳ ಗಣಕೀಕರಣ' ಎಂಬ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ರಾಜ್ಯದ ತಾಲ್ಲೂಕು ಕಚೇರಿಗಳ ಪೈಕಿ ಇದುವರೆಗೂ 20 ಕೋಟಿಗೂ ಹೆಚ್ಚಿನ ಪುಟಗಳನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ.

“ಕಂದಾಯ ದಾಖಲೆಗಳ ಗಣಕೀಕರಣ" ತಂತ್ರಾಂಶವು ಈ ಹಿಂದೆ NIC ಅಭಿವೃದ್ಧಿಪಡಿಸಿದ್ದ "ಅಭಿಲೇಖಾಲಯ" ಎಂಬ ತಂತ್ರಾಂಶದ ಮುಂದುವರೆದ ಭಾಗವಾಗಿದ್ದು, ಪ್ರಸ್ತುತ ತಂತ್ರಾಂಶದಲ್ಲಿ ಕಡತ /ವಹಿಗಳ ಇಂಡೆಕ್ಸಿಂಗ್ ಮತ್ತು ಕ್ಯಾಟಲಾಗಿಂಗ್ ಜೊತೆಗೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸದರಿ ತಂತ್ರಾಂಶದಲ್ಲಿ ಅಪ್ ಲೋಡ್ ಸಹ ಮಾಡಲಾಗುತ್ತಿದೆ.

ಸದರಿ ತಂತ್ರಾಂಶದ ಮೂಲಕ ಅಭಿಲೇಖಾಲಯಗಳಲ್ಲಿ ಅಪ್ ಲೋಡ್ ಮಾಡಿ ಶಿರಸ್ತೇದಾರರಿಂದ ಪರಿಶೀಲನೆ ಮಾಡಿರುವ ದಾಖಲೆಗಳನ್ನು "ಕಂದಾಯ ದಾಖಲೆಗಳ ಗಣಕೀಕರಣ" ತಂತ್ರಾಂಶದ www.recordroom.karnataka.gov.in ಜಾಲದಲ್ಲಿ ಸಾರ್ವಜನಿಕರು ಅಭಿಲೇಖಾಲಯದ ದೃಡೀಕೃತ ದಾಖಲೆಗಳನ್ನು ಆನ್-ಲೈನ್ ಮೂಲಕ ಸ್ವತಃ ತಾವೇ ಪಡೆಯಬಹುದು ಅಥವಾ ಅಭಿಲೇಖಾಲಯಗಳಿಗೆ ಬೇಟಿ ನೀಡಿಯೂ ಸಹ ಡಿಜಿಟಲ್ ಭೂದಾಖಲೆಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: