Parihara list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರಿದ್ಯಾ? ಚೆಕ್ ಮಾಡಿ.

Facebook
Twitter
Telegram
WhatsApp

ಪ್ರತಿ ಬಾರಿಯು ರಾಜ್ಯ ಸರಕಾರದಿಂದ ನೆರೆ ಹಾವಳಿ ಅಥವಾ ಅನಿರೀಕ್ಷಿತ ಅವಗಡಗಳಿಂದ ಉಂಟಾಗುವ ಬೆಳೆ ಹಾನಿಗೆ ಪರಿಹಾರದ ಹಣವನ್ನು ಸರಕಾರದ Parihara ತಂತ್ರ‍ಾಂಶವನ್ನು ಬಳಕೆ ಮಾಡಿಕೊಂಡು NDRF ಮಾರ್ಗಸೂಚಿ ಪ್ರಕಾರ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು.

ಆದರೆ ಈ ಮಾದರಿಯನ್ನು ಅನುಸರಿಸಿ ಈ ಹಿಂದೆ ಜಮಾ ಮಾಡುತ್ತಿದ್ದ ಪರಿಹಾರದ ಹಣವು ಹೆಚ್ಚು ಅನರ್ಹ ಫಲಾನುಭವಿಗಳಿಗೆ ವರ್ಗಾವಣೆ ಅಗಿರುವುದನ್ನು ಗಮನಿಸಿ ಪ್ರಸ್ತುತ ಕಂದಾಯ ಸಚಿವರು ಈ ಬಾರಿ ಬರ ಪರಿಹಾರದ ಹಣವನ್ನು ವರ್ಗಾವಣೆ ಮಾಡಲು ಅರ್ಹ ಫಲಾನುಭವಿಗಳನ್ನು ಗುರುತಿಸಿ ನೇರ ನಗದು ವರ್ಗಾವಣೆ(DBT) ಮೂಲಕ ಹಣ ಹಾಕಲು ಪ್ರೂಟ್ಸ್ (FID) ತಂತ್ರಾಂಶದ ರೈತರ ವಿವರವನ್ನು ಬಳಕೆ ಮಾಡಿಕೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ.

ಈ ಕಾರಣದಿಂದ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ನಷ್ಟಕ್ಕೆ ಪ್ರತಿಯೊಬ್ಬ ರೈತರು ಬರ ಪರಿಹಾರವನ್ನು ಪಡೆಯಲು ಕೃಷಿ ಇಲಾಖೆಯ fruits ತಂತ್ರಾಂಶದಲ್ಲಿ ನೊಂದಣಿಯಾಗಿ  FID ನಂಬರ್ ಅನ್ನು ಹೊಂದುವುದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: New ration shop- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?

FID list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ:

ಜಮೀನನ್ನು ಹೊಂದಿರುವ ರೈತರು ಈ ವರ್ಷ ಎಲ್ಲಾ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಪರಿಹಾರದ ಹಣವನ್ನು ಪಡೆಯಲು FID ನಂಬರ್ ಹೊಂದಿರುವುದರ ಜೊತೆಗೆ ತಮ್ಮ ಹೆಸರಿಸಲ್ಲಿರುವ ಎಲ್ಲಾ ಸರ್ವೆ ನಂಬರ್ ಗಳನ್ನು ಈ ನಂಬರ್ ಗೆ ಸೇರ್ಪಡೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

Step-1: ಈ ಲಿಂಕ್ ಮೇಲೆ parihara list ಕ್ಲಿಕ್ ಮಾಡಿ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ Search ಬಟನ್ ಮೇಲೆ ಕ್ಲಿಕ್ ಮಾಡಿದಾಗ “FruitID” ಎಂದು ತೋರಿಸಿ 16 ಅಂಕಿಯ “FID1404000xxxxxxx” ಈ ರೀತಿ FID ನಂಬರ್ ಮತ್ತು ಕೆಳಗೆ ನಿಮ್ಮ ಹೆಸರು ತೋರಿಸಿದರೆ ನೀವು ಬರ ಪರಿಹಾರ ಪಡೆಯಲು ಅರ್ಹರು ಎಂದು.

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

ಒಂದೊಮ್ಮೆ ನಿಮ್ಮ ಅಧಾರ್ ನಂಬರ್ ಹಾಕಿ Search ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ Object reference not set to an instance of an object ಅಥವಾ Aadhaar Number is Incorrect/No data fund ಎಂದು ಗೋಚರಿಸಿ ಯಾವುದೇ ಮಾಹಿತಿ ತೋರಿಸಿಲ್ಲ ಎಂದಾದರೆ ತಕ್ಷಣ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ನಿಮ್ಮ ಆಧಾರ್ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಎಲ್ಲಾ ಜಮೀನಿನ ಪಹಣಿ/ಉತಾರ್ ಸಮೇತ ಭೇಟಿ ಮಾಡಿ FID ನಂಬರ್ ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ: MSP price-2023: ಬೆಂಬಲ ಬೆಲೆಯಲ್ಲಿ ರಾಗಿ,ಜೋಳ,ಭತ್ತ ಖರೀದಿ! ಬೆಲೆ ಎಷ್ಟು? ನೊಂದಣಿ ಪ್ರಕ್ರಿಯೆ ಹೇಗಿರಲಿದೆ?

FID ಅಲ್ಲಿ ಎಲ್ಲಾ ಸರ್ವೆ ನಂಬರ್ ಇರುವುದು ಕಡ್ಡಾಯ:

ರೈತರು ಸರಕಾರದ ವಿವಿಧ ಪ್ರಯೋಜನೆ ಪಡೆಯಲು FID ನಂಬರ್ ಹೊಂದುವುದು ಎಷ್ಟು ಮುಖ್ಯವೋ ಅದೇ ರೀತಿ Fruits ID ಯಲ್ಲಿ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನಿನ ಸರ್ವೆ ನಂಬರ್ ಸೇರ್ಪಡೆ ಅಗಿರುವುದು ಸಹ ಕಡ್ಡಾಯ ಮಾಡಲಾಗಿರುತ್ತದೆ.

ನಿಮ್ಮ FID ಸಂಖ್ಯೆಯಲ್ಲಿ ಯಾವೆಲ್ಲ ಸರ್ವೆ ನಂಬರ್ ಸೇರ್ಪಡೆಯಾಗಿವೆ? ಯಾವುದು ಅಗಿಲ್ಲ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ> FID status check

ಈ ಹಿಂದಿನ ಪದ್ದತಿಯಲ್ಲಿ  ಇತ್ತು ಅನೇಕ ಲೋಪದೋಷಗಳು:

NDRF ಮಾರ್ಗಸೂಚಿ ಪ್ರಕಾರ ಕಂದಾಯ ಇಲಾಖೆ ಅಧಿಕಾರಿಗಳು ಈ ಹಿಂದಿನ ವರ್ಷಗಳಲ್ಲಿ ಬೆಳೆ ಹಾನಿ ಪರಿಹಾರ/ಬರ,ನೆರೆ ಹಾವಳಿ ಪರಿಹಾರವನ್ನು ನೀಡಲು ಪರಿಹಾರ(Parihara) ತಂತ್ರಾಂಶದಲ್ಲಿ ಮೊದಲು ಹಾನಿಯಾದ ರೈತರ ಅರ್ಜಿಯನ್ನು ನೊಂದಣಿ ಮಾಡಿ ನಂತರ ಜಿಲ್ಲಾ ಮಟ್ಟದಿಂದ DBT ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿತು. 

ಇಲ್ಲಿ ಯಾವ ಬ್ಯಾಂಕ್ ಖಾತೆ ಹಾಕಿ ನೊಂದಣಿ ಮಾಡಿರುತ್ತಾರೋ ಅವರ ಖಾತೆಗೆ ಪರಿಹಾರದ ಹಣ ಜಮಾ ಅಗುತ್ತಿತು ಪರಿಹಾರದ ಹಣದ ಆಸೆಗೆ ಯಾರದ್ದೋ ಜಮೀನಿಗೆ ಯಾರದ್ದೋ ಬ್ಯಾಂಕ್ ಖಾತೆಗೆ ವಿವರ ಹಾಕಿ ನೋಂದಣಿ ಮಾಡಿ ಅನರ್ಹ ಫಲಾನುಭವಿಗಳಿಗೆ ಹಣ ವರ್ಗಾಹಿಸಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದುವು ಈ ಕಾರಣದಿಂದಾಗಿ ಈ ವರ್ಷ ಕೃಷಿ ಇಲಾಖೆಯ ಪ್ರೂಟ್ಸ್ ತಂತ್ರಾಂಶವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

parihara website link: click here 

ಇದನ್ನೂ ಓದಿ: ರೈತರು ನಿಮ್ಮ FID ನಂಬರ್ ನಲ್ಲಿ ಯಾವೆಲ್ಲ ಸರ್ವೆ ನಂಬರ್ ಸೇರ್ಪಡೆಯಾಗಿವೆ? ಎಂದು ನಿಮ್ಮ ಮೊಬೈಲ್‌ನಲ್ಲೇ ತಿಳಿಯಿರಿ!

ಇದನ್ನೂ ಓದಿ:  Mixed breed cow Unit: ಶೇ.90 ರ ಸಹಾಯಧನದಲ್ಲಿ ಮಿಶ್ರ ತಳಿ ಹಸು ವಿತರಣೆ

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Google Pay loan

Google Pay loan-ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 9.0 ಲಕ್ಷದವರೆಗೆ ಲೋನ್!

ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ನಲ್ಲಿ ಬಳಕೆದಾರರು ವೈಯಕ್ತಿಕ ಸಾಲ(Google Pay loan) ಪಡೆಯಲು ಅವಕಾಶವಿದ್ದು, ಲೋನ್ ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ? ಇತರೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಸಾರ್ವಜನಿಕರು ಲೋನ್

D.Pharm. Admission

D.Pharm admission-2024: ಡಿ.ಫಾರ್ಮ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!

ಕರ್ನಾಟಕ ಸರ್ಕಾರ ಔಷಧ ನಿಯಂತ್ರಣ ಇಲಾಖೆ ಪರೀಕ್ಷಾ ಪ್ರಾಧಿಕಾರ ಮಂಡಳಿಯಿಂದ ಡಿ.ಫಾರ್ಮಸಿ(D.Pharmacy ) ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಔಷಧ ನಿಯಂತ್ರಣ ಇಲಾಖೆಯ ಪರೀಕ್ಷಾ ಪ್ರಾಧಿಕಾರ ಮಂಡಳಿಯಿಂದ(D.Pharm. Admission) 2024-25 ನೇ ಶೈಕ್ಷಣಿಕ

Colgate Scholarship

Colgate Scholarship 2024 – ಕೋಲ್ ಗೇಟ್ ಕಂಪನಿಯಿಂದ ವಿದ್ಯಾರ್ಥಿಗಳಿಗೆ 75 ಸಾವಿರ ವಿದ್ಯಾರ್ಥಿ ವೇತನ!

Colgate Keep India Smiling Scholarship 2024 – ಕೋಲ್ ಗೇಟ್ ಕಂಪನಿಯು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಸಹಾಯವಾಗುವಂತೆ ಭರ್ಜರಿ 75,000 ರೂ. ವರೆಗೆ ವಿದ್ಯಾರ್ಥಿ ವೇತನವನ್ನು ನೀಡಲು ಅರ್ಹ