Pension Scheme-ರಾಜ್ಯದಲ್ಲಿ 4.5 ಲಕ್ಷ ಅನರ್ಹ ಫಲಾನುಭವಿಗಳಿಗೆ ವೃದ್ದಾಪ್ಯ ವೇತನ! ಶೀಘ್ರದಲ್ಲೇ ಬಂದ್ ಅಗಲಿದೆ ಪಿಂಚಣಿ!

September 29, 2025 | Siddesh
Pension Scheme-ರಾಜ್ಯದಲ್ಲಿ 4.5 ಲಕ್ಷ ಅನರ್ಹ ಫಲಾನುಭವಿಗಳಿಗೆ ವೃದ್ದಾಪ್ಯ ವೇತನ! ಶೀಘ್ರದಲ್ಲೇ ಬಂದ್ ಅಗಲಿದೆ ಪಿಂಚಣಿ!
Share Now:

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಹಿರಿಯ ನಾಗರಿಕರಿಗೆ ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸಲು ಆರ್ಥಿಕವಾಗಿ ನೆರವು ನೀಡಲು ವಿವಿಧ ಪಿಂಚಣಿ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಸುಮಾರು 4.5 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ವೃದ್ದಾಪ್ಯ ವೇತನ,ವಿಧವಾ ವೇತನ,ಸಂದ್ಯಾ ಸುರಕ್ಷಾ ಯೋಜನೆಗಳನ್ನು ಅನುಷ್ಥಾನ ಮಾಡಲಾಗುತ್ತಿದ್ದು ಈ ಯೋಜನೆಯಡಿ ಪಿಂಚಣಿಯನ್ನು ಪಡೆಯಲು ಮಾರ್ಗಸೂಚಿ ಪ್ರಕಾರ ಅನರ್ಹರಿದ್ದರು ಸಹ ಅರ್ಜಿ ಸಲ್ಲಿಸಿ ವಿವಿಧ ಪಿಂಚಣಿ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿರುವವರು ದೊಡ್ಡ ಸಂಖ್ಯೆಯಲ್ಲಿ ಕಂಡುಬಂದಿದ್ದು ಅನರ್ಹ ಫಲಾನುಭವಿಗಳನ್ನು ಪಟ್ಟಿ ಮಾಡಿ ಇಲಾಖೆಯಿಂದ ಮರು ಪರಿಶೀಲನೆ ಮಾಡಲು ಮುಂದಾಗಿದೆ.

ಇದನ್ನೂ ಓದಿ: Speed Post-ಅಂಚೆ ಇಲಾಖೆಯಿಂದ ಅಕ್ಟೋಬರ್ 01 ರಿಂದ ಸ್ಪೀಡ್ ಪೋಸ್ಟ್ ನಲ್ಲಿ ಮಹತ್ವದ ಬದಲಾವಣೆ!

ಇಂದಿನ ಅಂಕಣದಲ್ಲಿ ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ವೃದ್ದಾಪ್ಯ ವೇತನ,ವಿಧವಾ ವೇತನ,ಸಂದ್ಯಾ ಸುರಕ್ಷಾ ಯೋಜನೆಗಳ ಫಲಾನುಭವಿಗಳನ್ನು ರದ್ದು ಮಾಡಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುವುದರ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಪಿಂಚಣಿ ಪಡೆಯುತ್ತಿರುವ ಅನರ್ಹರ ವಿವರ ಹೀಗಿದೆ:

ರಾಜ್ಯ ಸರಕಾರದಿಂದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ವಿವಿಧ ಯೋಜನೆ ಅಡಿಯಲ್ಲಿ ಪಿಂಚಣಿಯನ್ನು ಪಡೆಯುತ್ತಿರುವ ಅನರ್ಹ ಪಿಂಚಣಿದಾರ ವಿವರ ಈ ಕೆಳಗಿನಂತಿದೆ:

60 ವರ್ಷ ಭರ್ತಿಯಾಗದೇ ಇದ್ದರು ಸಹ ಅರ್ಜಿಯನ್ನು ಸಲ್ಲಿಸಿರುವುದು.
ಆದಾಯ ತೆರಿಗೆ ಪಾವತಿ ಮಾಡುವವರು ಸಹ ಅರ್ಜಿ ಸಲ್ಲಿಸಿ ಪಿಂಚಣಿಯನ್ನು ಪಡೆಯುತ್ತಿರುವುದು.
ಸರ್ಕಾರಿ ನೌಕರಿಯಲ್ಲಿರುವ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಿ ಪಿಂಚಣಿ ಪಡೆಯುತ್ತಿರುವುದು.

ಇದನ್ನೂ ಓದಿ: Narega Job Card-ನರೇಗಾ ಯೋಜನೆ ಜಾಬ್ ಕಾರ್ಡಗೆ ಇ-ಕೆವೈಸಿ ಕಡ್ಡಾಯ!

4.5 ಲಕ್ಷಕ್ಕೂ ಹೆಚ್ಚಿನ ಅನರ್ಹರಿಗೆ ಪಿಂಚಣಿ:

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಅಧಿಕೃತ ಅಂಕಿ-ಅಂಶದ ಪ್ರಕಾರ 4,52,451 ಲಕ್ಷ ಅನರ್ಹ ಪಿಂಚಣಿದಾರರನ್ನು ಗುರುತಿಸಲಾಗಿದ್ದು ಆದಾಯ ತೆರಿಗೆ ಪಾವತಿದಾರರು, ಸರಕಾರಿ ನೌಕರರ ಕುಟುಂಬದ ಸದಸ್ಯರು, GST ಪಾವತಿದಾರರು, 60 ವರ್ಷ ಪೂರೈಸದೇ ಇರುವವರು ಅರ್ಜಿ ಸಲ್ಲಿಸಿ ಈ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವುದು ಕಂಡುಬಂದಿದೆ.

Pension Scheme

ಇದನ್ನೂ ಓದಿ: Caste Survey-ಮೊಬೈಲ್ ನಲ್ಲೇ ಜಾತಿಗಣತಿ ಸಮೀಕ್ಷೆ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಮರು ಪರಿಶೀಲನೆ ಮಾಡಿ ಪಿಂಚಣಿ ರದ್ದು ಮಾಡಲು ಕ್ರಮ:

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ಅನರ್ಹ ಪಿಂಚಣಿದಾರರ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು ಇಂತಹ ಅರ್ಜಿಗಳನ್ನು ಮರು ಪರಿಶೀಲನೆ ಮಾಡಿ ಪಿಂಚಣಿ ಸ್ಥಗಿತಗೊಳಿಸಲು ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಯೋಜನೆವಾರು ಪಿಂಚಣಿ ಮೊತ್ತದ ವಿವರ:

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ಈ ಕೆಳಗೆ ತಿಳಿಸಿರುವ ವಿವಿಧ ಯೋಜನೆಯಡಿ ಪಿಂಚಣಿಯನ್ನು ಒದಗಿಸಲಾಗುತ್ತದೆ.

  • ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ/ಸಂಧ್ಯಾ ಸುರಕ್ಷಾ- 800/- ರಿಂದ 1,200/- ರೂ
  • ವಿಧವಾ ಪಿಂಚಣಿ ಯೋಜನೆ- ರೂ 800/-
  • ಮೈತ್ರಿ ಯೋಜನೆ- ರೂ 800/-
  • ಸಾಲದ ಭಾದೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ - ರೂ 800/-
  • ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ- ರೂ 10,000/-
  • ಎಂಡೋಸಲ್ಫಾನ್‌ ಸಂತ್ರಸ್ಥರಿಗೆ ಮಾಸಿಕ ಪಿಂಚಣಿ- ರೂ 2000/- ರಿಂದ ರೂ 4000/- ರವರೆಗೆ.
  • ಅಂಗವಿಕಲ ಪಿಂಚಣಿ: ರೂ . 1400/- ರಿಂದ ರೂ 2000/- ರವರೆಗೆ.
  • ಸಂಧ್ಯಾ ಸುರಕ್ಷಾ ಯೋಜನ- ರೂ 1200/-
  • ಮನಸ್ವಿನಿ ಯೋಜನೆ- ರೂ 800/-

ಇದನ್ನೂ ಓದಿ: Infosys Scholarship-ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!

ನಿಮ್ಮ ಹಳ್ಳಿಯ ಅರ್ಹ ಪಿಂಚಣಿದಾರರ ಪಟ್ಟಿಯನ್ನು ಮೊಬೈಲ್ ನಲ್ಲೇ ನೋಡಿ:

ಈಗಾಗಲೇ ಅರ್ಜಿಯನ್ನು ಸಲ್ಲಿಸಿ ಪಿಂಚಣಿಯನ್ನು ಪಡೆಯುತ್ತಿರುವ ನಿಮ್ಮ ಹಳ್ಳಿಯ ಅರ್ಹ ಪಿಂಚಣಿದಾರರ ಪಟ್ಟಿಯನ್ನು ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ನೋಡಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ "Pension Beneficiary List" ಮಾಡಿ ಅಧಿಕೃತ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ಜಾಲತಾಣವನ್ನು ಪ್ರವೇಶ ಮಾಡಿ.

Step-2: ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮೀಣ/ನಗರ ಆಯ್ಕೆ ಮಾಡಿಕೊಂಡು ಬಳಿಕ ನಿಮ್ಮ ಹೋಬಳಿ, ಗ್ರಾಮ ಆಯ್ಕೆ ಮಾಡಿ ಕೆಳಗೆ ಕಾಣುವ Captcha ಕೋಡ್ ಅನ್ನು ಹಾಕಿ Serach ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಪಿಂಚಣಿ ಪಡೆಯಲು ಅರ್ಹರಿರುವ ಫಲಾನುಭವಿಗಳ ಪಟ್ಟಿ ತೋರಿಸುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: