Pension status check-ಮಾರ್ಚ-2024 ತಿಂಗಳ ಎಲ್ಲಾ ಬಗ್ಗೆಯ ಪಿಂಚಣಿ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

March 17, 2024 | Siddesh

ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯದಿಂದ ಪ್ರತಿ ತಿಂಗಳು ಎಲ್ಲಾ ಬಗ್ಗೆಯ ಪಿಂಚಣಿಯನ್ನು ಪಡೆಯುವ ಅರ್ಹ ಫಲಾನುಭವಿಗಳಿಗೆ ಮಾರ್ಚ-2024 ತಿಂಗಳ ಪಿಂಚಣಿ(Pension status check) ಹಣವನ್ನು ವರ್ಗಾವಣೆ ಮಾಡಲಾಗಿದೆ.

ವಿವಿಧ ಯೋಜನೆಯಡಿ ಅಂದರೆ ಅಂಗವಿಕಲರ ಪಿಂಚಣಿ(Disability Pay), ವಿಧವಾ ವೇತನ , ಸಂಧ್ಯಾ ಸುರಕ್ಷಾ (Sandhya Suraksha Pay), (Manaswini Pay), ಮೈತ್ರಿ (Maitrhi Pay),ವೃದ್ಧರು, ಅಂಗವಿಕಲರು, ವೃದ್ಧಾಪ್ಯ ವೇತನ (Old Age Pay) ಯೋಜನೆಯಡಿ ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಿರುವವರು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಈ ತಿಂಗಳ ಹಣ ಜಮಾ ಅಗಿದಿಯಾ ಎಂದು ನಿಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: PDO job notification-2024: 247 ಪಿಡಿಒ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಇಲ್ಲಿದೆ ಅಧಿಸೂಚನೆ ವಿವರ.

ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಪಿಂಚಣಿ ಯೋಜನೆಗಳ ಅನುಷ್ಥಾನವನ್ನು ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯವು ಎಲ್ಲಾ ಬಗ್ಗೆಯ ಪಿಂಚಣಿ ಯೋಜನೆಗಳನ್ನು ಅನುಷ್ಥಾನ ಮಾಡುತ್ತದೆ. ಈ ಕೆಳಗೆ ಮೊಬೈಲ್ ನಲ್ಲೇ ಹಳ್ಳಿವಾರು ಪಿಂಚಣಿದಾರರ ಅರ್ಹ ಫಲಾನುಭವಿಗಳ ಪಟ್ಟಿಯನ್ನು(Pension Beneficiary list) ಹೇಗೆ ಪಡೆಯಬವುದು ಮತ್ತುಇತರೆ ವಿವರವನ್ನು ತಿಳಿಸಲಾಗಿದೆ.

Pension Beneficiary list- ಮೊಬೈಲ್ ನಲ್ಲಿ ನಿಮ್ಮ ಹಳ್ಳಿಯಲ್ಲಿ ಪಿಂಚಣಿ ಪಡೆಯಲು ಅರ್ಹರಿರುವ ಪಟ್ಟಿ ನೋಡುವ ವಿಧಾನ:

ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಈಗಾಗಲೇ ವಿವಿಧ ಪಿಂಚಣಿ ಯೋಜನೆಯಡಿ ಅರ್ಜಿ ಸಲ್ಲಿಸಿದವರು ತಮ್ಮ ಹಳ್ಳಿಯ  ಅರ್ಹ ಪಿಂಚಣಿದಾರರ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ನಿಮ್ಮ ಮೊಬೈಲ್ ನಲ್ಲೇ ನೋಡಬವುದು.

ಇದನ್ನೂ ಓದಿ: BBMP job notification- ಬಿ.ಬಿ.ಎಂ.ಪಿಯಿಂದ 11,307 "ಡಿ ಗ್ರೂಪ್ ಪೌರಕಾರ್ಮಿಕರ" ಭರ್ತಿಗೆ ಅರ್ಜಿ ಆಹ್ವಾನ!

Step-1: ಮೊದಲಿಗೆ ಈ ಲಿಂಕ್ Pension application status ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು ತದನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಬಳಿಕ ನಿಮ್ಮ ತಾಲ್ಲೂಕು, ಗ್ರಾಮೀಣ/ನಗರ ಪ್ರದೇಶದ ಆಯ್ಕೆಯಲ್ಲಿ ಟಿಕ್ ಮಾಡಿಕೊಳ್ಳಬೇಕು.

Step-2: ಈ ಮೇಲಿನ ಹಂತವನ್ನು ಪೂರ್ಣಗೊಳಿಸಿದ ನಂತರಕ ನಿಮ್ಮ ಹೋಬಳಿ, ಮತ್ತು ಗ್ರಾಮ/ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಂಡ ನಂತರ 5 ಅಂಕಿಯ ಕ್ಯಾಪ್ಚರ್ ಗೋಚರಿಸುತ್ತದೆ ಅನ್ನು ಕೆಳಗಿನ "Enter the captcha" ಕಾಲಂ ನಲ್ಲಿ ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಹಳ್ಳಿಯ/ಗ್ರಾಮದ ಪಿಂಚಣಿದಾರರ ಅರ್ಹ ಫಲಾನುಭವಿಗಳ ಪಟ್ಟಿ ತೋರಿಸುತ್ತದೆ.

ಈ ಪಟ್ಟಿಯಲ್ಲಿ ಯಾವ ಯೋಜನೆಯಡಿ ಎಷ್ಟು? ಪಿಂಚಣಿ ಪಡೆಯುತ್ತಿದ್ದಾರೆ ಮತ್ತು ಮಂಜೂರಾದ ದಿನಾಂಕ, ಫಲಾನುಭವಿ ಹೆಸರು ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿ ತೋರಿಸುತ್ತದೆ.

ಇದನ್ನೂ ಓದಿ: Free sewing machine training- ಮಹಿಳೆಯರಿಗೆ 30 ದಿನ ಉಚಿತ ಹೊಲಿಗೆ ತರಬೇತಿ ಪಡೆಯಲು ಅರ್ಜಿ ಆಹ್ವಾನ!

Pension status check- ನಿಮಗೆ ಮಾರ್ಚ-2024 ತಿಂಗಳ ಪಿಂಚಣಿ ಹಣ ಜಮಾ ಅಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ:

ಸಾರ್ವಜನಿಕರು ರಾಜ್ಯ ಸರಕಾರದ ಇ-ಅಡಳಿತ ವಿಭಾಗದಿಂದ ಬಿಡುಗಡೆ ಮಾಡಿರುವ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಡೌನ್ಲೋಡ್ ಮಾಡಿಕೊಂಡು ನಿಮಗೆ ಮಾರ್ಚ-2024 ತಿಂಗಳ ಪಿಂಚಣಿ ಹಣ ಜಮಾ ಅಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

Step-1: ಪ್ರಥಮದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ DBT Karnataka app ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2:  ಬಳಿಕ ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಮತ್ತು ಮೊಬೈಲ್ ಸಂಖ್ಯೆಗೆ ಬರುವ OTP ನಂಬರ್ ಹಾಕಿ ಈ ಅಪ್ಲಿಕೇಶನ್ ಅನ್ನು ತೆರೆಯಲು ನಾಲ್ಕು ಅಂಕಿಯ ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಬೇಕು.

ಇದನ್ನೂ ಓದಿ: School admission- ಉಚಿತವಾಗಿ  12 ಸಾವಿರ ಸೀಟ್ ಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

Step-3:  ಮೇಲಿನ ಹಂತ ಪೂರ್ಣಗೊಳಿಸಿದ ಬಳಿಕ 4 ಅಂಕಿಯ ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಅಗಬೇಕು ಇಲ್ಲಿ ಮುಖಪುಟದಲ್ಲಿ "ಪಾವತಿ ಸ್ಥಿತಿ"  ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಸರಕಾರದಿಂದ ಯಾವೆಲ್ಲ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ಹಣ ಜಮಾ ಅಗುತ್ತದೆ ಎನ್ನುವ ವಿವರ ತೋರಿಸುತ್ತದೆ ಇಲ್ಲಿ ಪಿಂಚಣಿ ಯೋಜನೆಯ ಮೇಲೆ ಕ್ಲಿಕ್ ಮಾಡಬೇಕು. 

Step-4:  ಪಿಂಚಣಿ ಯೋಜನೆಯ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ ನಿಮಗೆ ತಿಂಗಳುವಾರು ಯಾವ ದಿನ ಪಿಂಚಣಿ ಹಣ ನಿಮಗೆ ಜಮಾ ಅಗಿದೆ? ಎಷ್ಟು ಮೊತ್ತ? ಯಾವ ಬ್ಯಾಂಕ್ ಅದರ ಹೆಸರು, UTR ನಂಬರ್ ವಿವರ ತೋರಿಸುತ್ತದೆ.

ವಿಶೇಷ ಮಾಹಿತಿ: ನಿಮಗೆ ಪಿಂಚಣಿ ಬರದಿದ್ದರೆ ತಪ್ಪದೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್(NPCI mapping)/ಇ-ಕೆವೈಸಿ ಮಾಡಿಕೊಳ್ಳಬೇಕು.

ಇ-ಕೆವೈಸಿ ಏಕೆ ಮಾಡಿಸಬೇಕು?

ಸಂಬಂಧಪಟ್ಟ ಇಲಾಖೆಯಿಂದ ಕಾಲ ಕಾಲಕ್ಕೆ ಯೋಜನೆಯಡಿ ಹಣ ವರ್ಗಾವಣೆ ಮಾಡಲಾಗುತ್ತಿರುವ ಅರ್ಹ ಫಲಾನುಭವಿಗಳ ನೈಜತೆಯನ್ನು ದೃಡೀಕರಿಸಲು ಇ-ಕೆವೈಸಿ ಮಾಡಿಸಬೇಕಾಗುತ್ತದೆ.

ಇದನ್ನೂ ಓದಿ: Agriculture university courses- ಕೃಷಿ ವಿಶ್ವವಿದ್ಯಾನಿಲಯ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ!

Pension yojana npci mapping- ಇ-ಕೆವೈಸಿ/ಆಧಾರ್ ಜೋಡಣೆ ಎಲ್ಲಿ ಮಾಡಿಸಬೇಕು?

ಸದ್ಯ ಅಂಗವಿಕಲರ ಪಿಂಚಣಿ(Disability Pay), ವಿಧವಾ ವೇತನ , ಸಂಧ್ಯಾ ಸುರಕ್ಷಾ (Sandhya Suraksha Pay), (Manaswini Pay), ಮೈತ್ರಿ (Maitrhi Pay),ವೃದ್ಧರು, ಅಂಗವಿಕಲರು, ವೃದ್ಧಾಪ್ಯ ವೇತನ (Old Age Pay) ಪಡೆಯುತ್ತಿರುವ ಅನೇಕ ಜನರ ತಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಜೋಡಣೆ ಮಾಡಿರುವುದಿಲ್ಲ ಈ ಕಾರಣದಿಂದಾಗಿ ಅನೇಕ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ(DBT) ಮೂಲಕ ಹಣ ಸಂದಾಯ ಮಾಡಲು ತೊಡಕು ಉಂಟಾಗಿರುವುದರಿಂದ ಮುಂದಿನ ತಿಂಗಳುಗಳಲ್ಲಿ ಪಿಂಚಣಿ ಹಣ ಪಡೆಯಲು ಈ ರೀತಿಯ ಅರ್ಹ ಫಲಾನುಭವಿಗಳು ತಪ್ಪದೇ ನಿಮ್ಮ ಬ್ಯಾಂಕ್ ಖಾತೆಯಿರುವ ಶಾಖೆಗೆ ಭೇಟಿ ಮಾಡಿ NPCI ಮ್ಯಾಪಿಂಗ್ ಮಾಡಿಕೊಳ್ಳಬೇಕು ಎಂದು ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

NPCI status check- ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿದಿಯೋ ಇಲ್ಲವೋ ಎಂದು ತಿಳಿಯುವ ವಿಧಾನ:

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ DBT karnakataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ Aadhar number ಮತ್ತು OTP ನಮೂದಿಸಿ ಲಾಗಿನ್ ಅಗಿ aadhar and bank seeding details ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಅಧಾರ್ ಲಿಂಕ್ / NPCI mapping ಅಗಿದಿಯೋ ಇಲ್ಲವೋ ಎಂದು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬವುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: