Breaking News:
LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ! Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000! Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
HomeNew postsRevenue Department- ಕಂದಾಯ ಇಲಾಖೆಗೆ ಡಿಜಿಟಲ್ ಸ್ಪರ್ಶ! ಏನಿದು ನೂತನ ಮಾದರಿ? ಇಲ್ಲಿದೆ ಸಂಪೂರ್ಣ ವಿವರ.

Revenue Department- ಕಂದಾಯ ಇಲಾಖೆಗೆ ಡಿಜಿಟಲ್ ಸ್ಪರ್ಶ! ಏನಿದು ನೂತನ ಮಾದರಿ? ಇಲ್ಲಿದೆ ಸಂಪೂರ್ಣ ವಿವರ.

ಕಂದಾಯ ಇಲಾಖೆಯ(Revenue Department) ಎಲ್ಲಾ ಕಡತಗಳ ವಿಲೇವಾರಿಗೆ ಶೀಘ್ರದಲ್ಲಿಯೇ ತಂತ್ರಜ್ಞಾನ ಆಧಾರಿತ ಆನ್‌ಲೈನ್ ಸೇವೆಗಳನ್ನು ಕಲ್ಪಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು ಪತ್ರಿಕಾ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕಂದಾಯ ಇಲಾಖೆಯಲ್ಲಿ ತಂತ್ರಜ್ಞಾನ ಆಧಾರಿತ ಆನ್‌ಲೈನ್ ಸೇವೆಗಳನ್ನು ಒದಗಿಸಿ, ಜನರನ್ನು ಕಚೇರಿಗಳಿಗೆ ಭೇಟಿ ಮಾಡುವುದರಿಂದ ಮುಕ್ತಿಗೊಳಿಸುವುದೇ ನಮ್ಮ ಮುಖ್ಯ ಉದ್ದೇಶವೆಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದರು.

ನಿನ್ನೆ ವಿಕಾಸಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಂದಾಯ ಇಲಾಖೆ, ಭೂಮಾಪನ, ಕಂದಾಯ ವವ್ಯಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಕಂದಾಯ ಆಯುಕ್ತಾಲಯ ಇವರ ಸಹಯೋಗದಲ್ಲಿ ಹೊಸದಾಗಿ ಆಯ್ಕೆಯಾದ 991 ಪರವಾನಗಿ ಭೂಮಾಪಕರುಗಳಿಗೆ ಪರವಾನಗಿ ಪ್ರಮಾಣಪತ್ರ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ಟಾಪ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಇಲಾಖೆಯ ಮುಂದಿನ ಯೋಜನೆಗಳ ಕುರಿತು ಹಂಚಿಕೊಂಡಿರುವ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Free adhar update- ಉಚಿತವಾಗಿ ಆಧಾರ್ ಕಾರ್ಡ ನವೀಕರಣ ಮಾಡಲು ಇನ್ನು 2 ದಿನ ಮಾತ್ರ ಅವಕಾಶ!

Revenue Department- ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆ:

ಪ್ರತಿ ತಿಂಗಳು ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಮೋಜಿಣಿ ಅಡಿಯಲ್ಲಿ ಸ್ವೀಕರಿಸಿ ವಿಲೇವಾರಿ ಮಾಡಲಾಗುತ್ತಿದೆ. ಕಳೆದ ವರ್ಷ ಮೇ ನಿಂದ ಈ ಫೆಬ್ರವರಿವರೆಗೆ ಒಟ್ಟು 11,77,564 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಹೊಸದಾಗಿ ಆಯ್ಕೆಯಾದ ಸುಮಾರು 991 ಭೂಮಾಪಕರಿಗೆ ತರಬೇತಿಯನ್ನು ಸಹ ಒದಗಿಸಲಾಗಿದೆ. 

ಡೋಣ್ ಆಧಾರಿತ ಮರು ಭೂಮಾಪನ ಕಾರ್ಯ ಕೈಗೊಳ್ಳಲಾಗಿದ್ದು, ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ 21 ಜಿಲ್ಲೆಗಳಲ್ಲಿ 1,50,000 ಚದರ ಕಿ.ಮೀ ಡೋನ್ ತಂತ್ರಜ್ಞಾನ ಬಳಸಿಕೊಂಡು ಭೂಮಾಪನ ಕಾರ್ಯ ಕೈಗೊಳ್ಳಲಾಗುತ್ತಿದೆ. ರಾಮನಗರ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಂಪೂರ್ಣ ಡೋಣ್ ಫೈಯಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ತಿಳಿಸಿದರೆ.

ಇದನ್ನೂ ಓದಿ: Best Home loan- 2024: ಉಚಿತ ಮನೆ ಯೋಜನೆಯಡಿ ರೂ. 1 ಲಕ್ಷ ಸಹಾಯಧನ! ಈ ವಿಧಾನ ಅನುಸರಿಸಿ ಅರ್ಜಿ ಸಲ್ಲಿಸಿ.

Revenue Department Digital- ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಕಂದಾಯ ಇಲಾಖೆಗೆ ಡಿಜಿಟಲ್ ಸ್ಪರ್ಶ:

ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿ ಶಾಶ್ವತ ಯೋಜನೆ ಜಾರಿ ಮಾಡಿ. ಇದಕ್ಕೆ ನೀಲಿನಕ್ಷೆಯನ್ನು ಸಿದ್ಧಪಡಿಸಬೇಕು. ಇದಕ್ಕೆ ಅನುಗುಣವಾಗಿ ಸಿಬ್ಬಂದಿಗಳನ್ನು ನೇಮಿಸಿ ಕಾರ್ಯಕ್ರಮಗಳು ತ್ವರಿತಗತಿಯಲ್ಲಿ ಮಾಡಬೇಕು. ನಾವಿನ್ನು 18 ರಿಂದ 19ನೇ ಶತಮಾನದ ಮನಸ್ಥಿತಿಯಲ್ಲಿದ್ದೆವೆ. ಈ ಶತಮಾನದ ಹೊಸ ತಂತ್ರಜ್ಞಾನಗಳಿಗೆ ನಮ್ಮನ್ನು ಒಗ್ಗಿಸಿಕೊಂಡು ವೇಗವಾಗಿ ಕೆಲಸ ನಿರ್ವಹಿಸಬೇಕೆಂದರು.

ಸರ್ಕಾರವು 364 ಸರ್ಕಾರಿ ಸರ್ವೇಯರ್‌ಗಳ ನೇಮಕಾತಿಗೆ ಒಪ್ಪಿಗೆ ನೀಡಿದ್ದು, ಇನ್ನು 6 ತಿಂಗಳೊಳಗೆ ಇವರಿಗೆ ನೇಮಕಾತಿ ಪೂರ್ಣಗೊಳ್ಳಲಿದೆ. 27 ಸಹಾಯಕ ನಿರ್ದೇಶಕರು, ಭೂದಾಖಲೆಗಳ ಹುದ್ದೆಗಳ ಆಯ್ಕೆಗೆ ಅರ್ಜಿ ಕರೆಯಲಾಗಿದೆ. ಅಲ್ಲದೆ 541 ಸರ್ವೇಯರ್‌ಗಳ ನೇರ ನೇಮಕಾತಿಗೆ ಸಹ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿದೆ. 500 ಸರ್ವೇಯರ್‌ಗಳ ಹೆಚ್ಚವರಿ ಹುದ್ದೆಗಳಿಗೆ ಸಹ ಬೇಡಿಕೆ ಇಡಲಾಗಿದ್ದು, ಮುಂಬರುವ ದಿನಗಳಲ್ಲಿ ನೇಮಕವಾಗಲಿದೆ. 13 ಕೋಟಿ ವೆಚ್ಚದಲ್ಲಿ 420 ರೋವರ್ಸ್ ಮಿಷನ್‌ಗಳ ಟೆಂಡ‌ರ್ ಕರೆಯಲಾಗಿದೆ. ಇದರಿಂದ ಭೂ ಅಳತೆ ಕಾರ್ಯ ಸುಗಮವಾಗಿ ಕೈಗೊಳ್ಳಲಾಗುವುದೆಂದರು.

ಇದನ್ನೂ ಓದಿ: Baal aadhaar- ಚಿಕ್ಕ ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ! ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದರೆ ತಪ್ಪದೇ ಈ ಮಾಹಿತಿ ತಿಳಿಯಿರಿ!

Land records- ಎಲ್ಲಾ ಗ್ರಾಮ ಆಡಳತಾಧಿಕಾರಿಗಳ / ಲೆಕ್ಕಾಧಿಕಾರಿಗಳಿಗೆ 25 ಕೋಟಿ ವೆಚ್ಚದಲ್ಲಿ ಲ್ಯಾಪ್‌ಟಾಪ್ ವಿತರಣೆ: 

ಭೂದಾಖಲೆಗಳಲ್ಲಿ ಅತಿ ಮುಖ್ಯವಾದ ಆಕಾರ್‌ಬಂದ್ ಪುಸ್ತಕಗಳ ಗಣಕೀಕರಣ ಕಾರ್ಯ ಕೈಗೊಳ್ಳಲಾಗುತ್ತಿದ್ದು ಬಾಕಿ ಇರುವ 80 ಲಕ್ಷ ಆಕಾರ್ ಬಂದ್ ಮಾಹಿತಿಯನ್ನು ಆಂದೋಲನ ರೂಪದಲ್ಲಿ ಗಣಕೀಕರಣ ಗೊಳಿಸಲಾಗುತ್ತಿದ್ದು, ಒಂದೆರೆಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಇದಕ್ಕೆ ಹೊಸ ಮಾದರಿ ಕ್ಯಾಮೆರಾ, ಕಂಪ್ಯೂಟರ್, ಪಿಂಟರ್‌ಗಳ ಖರೀದಿ 55 ಕೋಟಿ ರೂಗಳಿಗೆ ಟೆಂಡರ್ ನೀಡಲಾಗಿದೆ. ನಕಲಿ ವ್ಯವಹಾರಗಳನ್ನು ತಡೆಯಲು ದಾಖಲೆಗಳನ್ನು ಡಿಜಿಟಲೀಕರಣ ಮಾಡಿ, ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗುತ್ತಿದೆ.

ಗ್ರಾಮ ಆಡಳತಾಧಿಕಾರಿಗಳ / ಲೆಕ್ಕಾಧಿಕಾರಿಗಳಿಗೆ 25 ಕೋಟಿ ವೆಚ್ಚದಲ್ಲಿ ಲ್ಯಾಪ್‌ಟಾಪ್ ಖರೀದಿಸಿ ವಿತರಣೆ ಮಾಡಲಾಗುತ್ತಿದ್ದು, ಒಂದು ವರ್ಷದಲ್ಲಿ ಇವರೆಲ್ಲರಿಗೂ ವಿತರಿಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಎಲ್ಲಾ ಕಡತಗಳೂ ಆನ್‌ಲೈನ್ ಮೂಲಕವಾಗಿ ತ್ವರಿತ ವಿಲೇವಾರಿ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಇದೇ ಏಪ್ರಿಲ್ 01 ರಿಂದ ಗ್ರಾಮ ಸೇವಕರಿಗೆ ನೀಡುವ ವೇತನವನ್ನು 13 ಸಾವಿರದಿಂದ 18 ಸಾವಿರಕ್ಕೆ ಹೆಚ್ಚಿಸಲಾಗುವುದುದೆಂದರು.

ಇದನ್ನೂ ಓದಿ: Labour card- ಕಾರ್ಮಿಕ ಕಾರ್ಡ ಹೊಂದಿರುವವರು ಇ-ಕಾರ್ಡ ಪಡೆಯಲು ಅರ್ಜಿ ಆಹ್ವಾನ!

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ರಿಜ್ವಾನ್ ಅರ್ಷದ್, ಕಂದಾಯ ಇಲಾಖೆಯನ್ನು ಗೊಂದಲದ ಗೂಡಗಿಯೇ ಇನ್ನು ಜನ ನೋಡುತ್ತಿದ್ದಾರೆ. ಕಂದಾಯ ಸಚಿವರ ನೇತೃತ್ವದಲ್ಲಿ ಯೋಜನೆಗಳು ಜನರಿಗೆ ತ್ವರಿತವಾಗಿ ತಲುಪಲು ಇದಕ್ಕೆ ಅಧಿಕಾರಿ, ಸಿಬ್ಬಂದಿಗಳ ಕಾರ್ಯಕ್ಷಮತೆ ಸಹ ಬಹು ಮುಖ್ಯ ಎಂದರು.

ಸಮಾರಂಭದಲ್ಲಿ ಭೂಮಾಪನ ಮಾರ್ಗದರ್ಶಿ ಸಂಪುಟ-1, ಸಂಪುಟ-2, ಭೂಮಾಪನ ಇಲಾಖೆ ಪದಕೋಶವನ್ನು ಗಣ್ಯರು ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರು ಜೆ.ಮಂಜುನಾಥ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಕಂದಾಯ ಇಲಾಖೆ ಆಯುಕ್ತರಾದ ಸುನೀಲ್ ಕುಮಾರ್, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಮುಂತಾದವರು ಉಪಸ್ಥಿತರಿದ್ದರು

Most Popular

Latest Articles

- Advertisment -

Related Articles