ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ(Disabled pension scheme) ನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ.
ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ ಘೋಷವಾಕ್ಯದಡಿ ಈ ವರ್ಷದ ವಿಶ್ವ ವಿಕಲಚೇತನರ ದಿನಾಚರಣೆ(Department of Women and Child Development Empowerment of Differently Abled and Senior Citizens)ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕರ್ಮದಲ್ಲಿ ನೂತನ ಯೋಜನೆಯನ್ನು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: SSP scholarship 2024-ವಿದ್ಯಾರ್ಥಿ ವೇತನ ಪಡೆಯಲು ಹೊಸ ಆದೇಶ ಪ್ರಕಟ!
ರಾಜ್ಯ ಸರಕಾರದಿಂದ ವಿಕಲಚೇತನರಿಗೆ ಯಾವೆಲ್ಲ ಯೋಜನೆಗಳನ್ನು ಜಾರಿಗೆ ತರಲಾಗಿದೆ? ನೂತನ ಯೋಜನೆಯ ವಿವರ, ವಿಕಲಚೇತನರು ಈ ಯೋಜನೆಗಳ ಪ್ರಯೋಜನ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Disabled pension scheme karnataka- ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000:
ಮೆದುಳು ಪಾರ್ಶ್ವವಾಯು (Cerebral Palsy), ಮಸ್ಕುಲರ್ ಡಿಸ್ಟೋಫಿ (Muscular Distrophy), ಪಾರ್ಕಿನ್ ಸನ್ ಖಾಯಿಲೆ(Parkinsons’s Disease) ಮತ್ತು ಮಲ್ಟಿಪಲ್ ಸ್ಟೆರೋಸಿಸ್ (Multiple Sclerosis) ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆ ಮಾಡುತ್ತಿರುವವರಿಗೆ 2024-25ನೇ ಸಾಲಿನಿಂದ ಪ್ರತಿ ತಿಂಗಳು ರೂ.1,000/-ಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
Disability schemes in karnataka- ದೃಷ್ಟಿದೋಷ ಇರುವವರಿಗೆ ಯೋಜನೆಗಳು:
1) ಟಾಕಿಂಗ್ ಲ್ಯಾಪ್‌ಟಾಪ್ ಯೋಜನೆ.
2) ಬ್ರೆಲ್‌ಕಿಟ್ ಯೋಜನೆ.
3) ಶಿಶುಪಾಲನಾ ಭತ್ಯೆ ಯೋಜನೆ.
4) ಡಿಜಿಟಲ್ ಬುಕ್ ಬ್ಯಾಂಕ್ ಯೋಜನೆ.
5) ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ (ರೆಟ್ರೋಫಿಟೆಂಟ್ ಸಹಿತ) ಯೋಜನೆ.
ಬೌದ್ಧಿಕ ವಿಕಲಚೇತನರಿಗೆ ಇರುವ ಯೋಜನೆಗಳು:
1) ವಿಕಲಚೇತನರ ಪೋಷಕರ ಜೀವ ವಿಮಾ ಯೋಜನೆ.
2) ನಿರಾಮಯ ವೈದ್ಯಕೀಯ ವಿಮಾ ಯೋಜನೆ.
Disabled welfare department karnataka yojana-ಎಲ್ಲಾ ವಿಧದ ವಿಕಲಚೇತನರಿಗೆ ಇರುವ ಯೋಜನೆಗಳು:
1) ವಿದ್ಯಾರ್ಥಿವೇತನ ಯೋಜನೆ.
2) ಪ್ರೋತ್ಸಾಹಧನ ಯೋಜನೆ.
3) ಶುಲ್ಕ ಮರುಪಾವತಿ ಯೋಜನೆ.
4) ಸಾಧನ ಸಲಕರಣೆ ಯೋಜನೆ.
5) ಬ್ಯಾಟರಿ ಚಾಲಿತ ಗಾಲಿ ಕುರ್ಚಿಗಳು.
6) ವೈದ್ಯಕೀಯ ಪರಿಹಾರ ನಿಧಿ ಯೋಜನೆ.
7) ಆಧಾರ ಸಾಲ ಯೋಜನೆ.
8) ನಿರುದ್ಯೋಗ ಭತ್ಯೆ ಯೋಜನೆ.
9) ವಿವಾಹ ಪ್ರೋತ್ಸಾಹದರ ಯೋಜನೆ.
10) ಗ್ರಾಮೀಣ / ನಗರ ಪುನರ್ವಸತಿ ಯೋಜನೆ.
11) ಮರಣ ಪರಿಹಾರ ಧನ ಯೋಜನೆ.
ಇದನ್ನೂ ಓದಿ: Yashaswini yojana-ಯಶಸ್ವಿನಿ ಯೋಜನೆಯಡಿ 5 ಲಕ್ಷದ ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ! ರಾಜ್ಯ ಸರಕಾರದಿಂದ ಹೊಸ ಆದೇಶ ಪ್ರಕಟ!
ಇದನ್ನೂ ಓದಿ: Free cylinder scheme-ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!
Handicapped pension scheme-ಅಂಕಿ-ಸಂಖ್ಯೆ ಮಾಹಿತಿ:
2021ರ ಜನಗಣತಿಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 13,24,205 ವಿಕಲಚೇರನರಿದ್ದು ಇದರಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆಯಿಂದ 9,73,388 ವಿಕಲಚೇತನರಿಗೆ ಪ್ರತಿ ತಿಂಗಳು ಪಿಂಚಣಿಯನ್ನು ನೀಡಲಾಗುತ್ತಿದೆ.
ಇಲಾಖೆಯಿಂದ ಒಟ್ಟು 8,04,074 ರಿಗೆ ವಿಶಿಷ್ಟ ಗುರುತಿನ ಚೀಟಿ (UDID) ನೀಡಲಾಗಿದೆ.
Application link-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಮೇಲಿ ತಿಳಿಸಿರುವ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಿರುವ ಅರ್ಜಿದಾರರು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಪಡೆದು ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯನ್ನು ಭೇಟಿ ಮಾಡಿ.
Helpline number-ಸಹಾಯವಾಣಿ: 1902
Website-ವೆಬ್ಸೈಟ್: Click here