Phonepe App Useful Tips-ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಇದೆಯಾ? ತಪ್ಪದೇ ಈ ಸುದ್ದಿ ನೋಡಿ!

August 25, 2025 | Siddesh
Phonepe App Useful Tips-ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಇದೆಯಾ? ತಪ್ಪದೇ ಈ ಸುದ್ದಿ ನೋಡಿ!
Share Now:

ಪ್ರಸ್ತುತ ಡಿಜಿಟಲ್ ವಹಿವಾಟಿನ ಜಗತ್ತಿನಲ್ಲಿ ಬಹುತೇಕೆ ಎಲ್ಲಾ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ವಿವಿಧ ಬಗ್ಗೆಯ ಬಿಲ್ ಪಾವತಿಗೆ(UPI Payment) ಹಾಗೂ ಇತರರಿಗೆ ಹಣವನ್ನು ಸಂದಾಯ ಮಾಡಲು ಯುಪಿಐ(UPI) ಆಧಾರಿತ ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ಒಂದಾದ ಫೋನ್ ಪೇ ಅನ್ನು ಬಳಕೆ ಮಾಡುತ್ತಾರೆ ಇಂದಿನ ಅಂಕಣದಲ್ಲಿ ಈ ಅಪ್ಲಿಕೇಶನ್ ಬಳಕೆ ಕುರಿತು ಒಂದಿಷ್ಟು ಅವಶ್ಯಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ದೊಡ್ಡ ಸಂಖ್ಯೆಯ ಪೋನ್ ಪೇ(Phone Pe/Google Pay) ಮೊಬೈಲ್ ಅಪ್ಲಿಕೇಶನ್ ಬಳಕೆದಾರರಿಗೆ ಈ ಮಾಹಿತಿ ತಿಳಿದಿಲ್ಲ, ಫೋನ್ ಪೇ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿರುವ ಕಂಪನಿಯು ಕಾಲ ಕಾಲಕ್ಕೆ ವಿನೂತನ ಆಯ್ಕೆಗಳನ್ನು ಬಳಕೆದಾರರಿಗೆ ಪರಿಚಯ ಮಾಡಲಾಗುತ್ತದೆ ಈ ನಿಟ್ಟಿನಲ್ಲಿ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Free Medical Equipment-60 ವರ್ಷ ಮೇಲ್ಪಟವರಿಗೆ ಉಚಿತವಾಗಿ ವೈದ್ಯಕೀಯ ಸಾಧನಗಳನ್ನು ಪಡೆಯಲು ಅರ್ಜಿ ಆಹ್ವಾನ!

ಈ ಅಂಕಣದಲ್ಲಿ ಫೋನ್ ಪೇ(Phone Pe Users) ಬಳಸುವವರು ತಪ್ಪದೇ ತಿಳಿದಿರಬೇಕಾದ ಅಗತ್ಯ ಮಾಹಿತಿ ವಿವರ ಯಾವುದು? ಈ ಅಪ್ಲಿಕೇಶನ್ ಬಳಸುವವರು ಯಾವೆಲ್ಲ ಸುರಕ್ಷಿತಾ ಕ್ರಮಗಳನ್ನು ತೆಗೆದುಕೊಳ್ಳಬೇಕು? ಇತ್ಯಾದಿ ಅಗತ್ಯ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Phone Pe Useful Tips-ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಇದೆಯಾ? ಈ ಮಾಹಿತಿ ತಪ್ಪದೇ ತಿಳಿಯಿರಿ:

(1) ಫೋನ್‌ಪೇ ಆ್ಯಪ್ ಮೇಲೆ ಟ್ಯಾಪ್ ಮಾಡಿ ಹಣ ಪಾವತಿ ಮಾಡಬಹುದು/QR Code Scanner:

ವಿವಿಧ ಯುಪಿಐ ಪಾವತಿ ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ಬಹುತೇಕ ಅತೀ ಹೆಚ್ಚು ಜನರು ಬಳಕೆ ಮಾಡುವ ಆಯ್ಕೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಯನ್ನು ಮಾಡುವುದನ್ನು ಈ ವಿಧಾನದಲ್ಲಿ ನೂತನ ಆಯ್ಕೆಯನ್ನು ಸಂಸ್ಥೆಯು ಪರಿಚಯಿಸಿದ್ದು ಫೋನ್‌ಪೇ ಪೇಮೆಂಟ್ ಆ್ಯಪ್‌ನಲ್ಲಿ ಇನ್ನೂ ಸುಲಭವಾಗಿ ಪೇಮೆಂಟ್ ಮಾಡುವ ಫೀಚರ್‌ಗಳನ್ನು ಹೊಸದಾಗಿ ಪರಿಚಯಿಸಲಾಗಿದೆ.

ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ, ಪೇಮೆಂಟ್ ಮಾಡಲು ಫೋನ್‌ಪೇ ಆ್ಯಪ್ ಓಪನ್ ಮಾಡುತ್ತೀರಿ. ಆದರೆ, ಮೊಬೈಲ್ ಸ್ಕ್ರಿನ್ ಮೇಲಿರುವ ಫೋನ್‌ಪೇ ಆ್ಯಪ್ ಮೇಲೆ ಟ್ಯಾಪ್ ಮಾಡಿ, ಹೋಲ್ಡ್ ಮಾಡಿದರೆ ನೇರವಾಗಿ ಸ್ಕ್ಯಾನ್ ಮಾಡುವ ಆಯ್ಕೆ ತೋರಿಸುತ್ತದೆ ಆಗ ನೀವು ಸುಲಭವಾಗಿ ಪೇಮೆಂಟ್ ಮಾಡಬಹುದು.

ಇದನ್ನೂ ಓದಿ: Reliance Foundation Scholarship-ರಿಲಯನ್ಸ್ ಫೌಂಡೇಶನ್ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ₹2 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

(2) "ಯುಪಿಐ ಲೈಟ್ ಫೀಚರ್/UPI Lite" ಬಳಸಿದ್ದಲ್ಲಿ ಯುಪಿಐ ಪಿನ್ ಹಾಕುವ ಅವಶ್ಯಕತೆ ಇರುವುದಿಲ್ಲ:

ಪೋನ್‌‌ಪೇ ನಲ್ಲಿ ನೀವೇನಾದರು 1,000 ರೂ. ಅಥವಾ ಅದಕ್ಕಿಂತ ಕಡಿಮೆ ಮೊತ್ತ ಕಳಿಸಬೇಕಾದರೆ, ಯುಪಿಐ ಪಿನ್ ಮೂದಿಸಲೇಬೇಕು ಅಂತ ಇಲ್ಲ. ಫೋನ್‌ಪೇನಲ್ಲಿನ 'ಯುಪಿಐ ಲೈಟ್ ಫೀಚರ್' ಮೂಲಕ 1,000/- ಕ್ಕಿಂತ ಅಲ್ಪ ಮೊತ್ತದ ಹಣವನ್ನು ಪಾವತಿ ಮಾಡಲು ಯುಪಿಐ ಪಿನ್ ನಂಬರ್ ಇಲ್ಲದೇ ನೀವು ಇತರಿಗೆ ಹಣವನ್ನು ಹಾಕಲು ಅವಕಾಶವನ್ನು ಕಲ್ಪಿಸಲಾಗಿದೆ.

(3) ಸ್ನೇಹಿತರೊಂದಿಗೆ ಪಾರ್ಟಿ ಬಿಲ್ ಹಂಚಿಕೊಳ್ಳಲು "ಸ್ಪ್ಲಿಟ್ ಎಕ್ಸ್‌ಪೆನ್ಸಸ್/Split Expenses " ಆಯ್ಕೆ ಬಳಸಬಹುದು:

ಪೋನ್‌‌ಪೇ ಸಂಸ್ಥೆಯು ಅಪ್ಲಿಕೇಶನ್ ನಲ್ಲಿ "ಸ್ಪ್ಲಿಟ್ ಎಕ್ಸ್‌ಪೆನ್ಸಸ್Split Expenses" ಎನ್ನುವ ಆಯ್ಕೆಯನ್ನು ಬಿಡುಗಡೆಗೊಳಿಸಿದ್ದು ಈ ಆಯ್ಕೆಯ ಮೂಲಕ ನೀವು ಗೆಳೆಯರ ಜತೆ ಯಾವುದಾದರೂ ಹೋಟೆಲ್‌ಗೆ ಹೋಗಿ ಊಟ ಮಾಡಿ, ಬಿಲ್ ಅನ್ನು ಸಮಾನವಾಗಿ ಹಂಚಿಕೊಳ್ಳಲು/ಪಾವತಿಸಲು ಈ ಆಯ್ಕೆಯನ್ನು ನೀವು ಬಳಕೆ ಮಾಡಿಕೊಳ್ಳಬಹುದು.

ಸ್ವಿಟ್ ಎಕ್ಸ್‌ಪೆನ್ಸಸ್ ಫೀಚ‌ರ್ ಆಯ್ಕೆ ಮಾಡಿಕೊಂಡು ನೀವು ಪಾರ್ಟಿ ಮಾಡಲು ಹೋದವರ ಹೆಸರನ್ನು ಸೇರಿಸಿ. ಆಗ ಪ್ರತಿಯೊಬ್ಬರೂ ಎಷ್ಟು ಹಣ ನೀಡಬೇಕು ಎಂಬುದು ತಿಳಿಯುವುದರ ಜತೆಗೆ ಅವರಿಗೆ ನೋಟಿಫಿಕೇಶನ್ ಕೂಡ ಹೋಗುತ್ತದೆ ಆದ ಎಲ್ಲರೂ ಸುಲಭವಾಗಿ ಪೇಮೆಂಟ್ ಮಾಡಬಹುದು. ಒಮ್ಮೆ ಈ ಆಯ್ಕೆಯನ್ನು ಪ್ರಯತ್ನಿಸಿ ನೋಡಿ.

ಇದನ್ನೂ ಓದಿ: Subsidy Schemes Application-ವಿಕಲಚೇತನರ ಇಲಾಖೆಯಿಂದ ಟಾಕಿಂಗ್ ಲ್ಯಾಪ್ ಟಾಪ್ ವಿತರಣೆ ಸೇರಿ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ!

Internet Speed Test-ಉತ್ತಮ ಇಂಟರ್ ನೆಟ್ ಇರುವುದನ್ನು ಖಚಿತಪಡಿಸಿಕೊಂಡು ಬಳಿಕ ಹಣ ಪಾವತಿ ಮಾಡಿ:

ಪೋನ್ ಪೇ,ಗೂಗಲ್ ಪೇ ಮತ್ತು ಇತರೆ ಯುಪಿಐ ಆಧಾರಿತ ಪಾವತಿಗೆ ಸಂಬಂಧಪಟ್ಟ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡುವ ಗ್ರಾಹಕರು ಹಣವನ್ನು ಪಾವತಿ ಮಾಡುವ ಮುನ್ನ ತಮ್ಮ ಮೊಬೈಲ್ ನಲ್ಲಿ ಇಂಟರ್ ನೆಟ್ ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಂಡ ಬಳಿಕವೇ ಹಣವನ್ನು ಪಾವತಿ ಮಾಡಿ ಒಂದೊಮ್ಮೆ ನಿಮ್ಮ ಮೊಬೈಲ್ ನಲ್ಲಿ ಇಂಟರ್ ನೆಟ್ ಸಮಪರ್ಕವಾಗಿ ಇಲ್ಲದೇ ಇದ್ದರೆ ಹಣ ಪಾವತಿ ಸಮಯದಲ್ಲಿ "Payment Processing" ಎಂದು ತೋರಿಸಿಬಿಡುತ್ತದೆ.

Safety measures to be followed by PhonePe users-ಫೋನ್ ಪೇ ಬಳಕೆ ಮಾಡುವವರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳೇನು?

ಫೋನ್‌ಪೇ (PhonePe) ಬಳಕೆ ಮಾಡುವವರು ತಮ್ಮ ಆರ್ಥಿಕ ಭದ್ರತೆ ಮತ್ತು ಖಾತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ಮುಖ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಕೆಳಗೆ ಕೆಲವು ಪ್ರಮುಖ ಕ್ರಮಗಳನ್ನು ನೀಡಲಾಗಿದೆ:

ಇದನ್ನೂ ಓದಿ: Bele Samikshe App-2025: ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ಪ್ರಾರಂಭ!ಈಗಲೇ ನಿಮ್ಮ ಬೆಳೆ ವಿವರ ದಾಖಲಿಸಿ!

ಬಲವಾದ ಪಿನ್/ಪಾಸ್‌ವರ್ಡ್ ಬಳಸಿ: ಫೋನ್‌ಪೇಗೆ ಬಲವಾದ ಮತ್ತು ವಿಶಿಷ್ಟವಾದ UPI ಪಿನ್‌ ಸೆಟ್ ಮಾಡಿ. ಸುಲಭವಾಗಿ ಊಹಿಸಬಹುದಾದ ಸಂಖ್ಯೆಗಳಾದ 1234 ಅಥವಾ ಜನ್ಮದಿನಾಂಕವನ್ನು ತಪ್ಪಿಸಿ.

ನಿಮ್ಮ ಫೋನ್‌ಪೇ ಖಾತೆಗೆ ಲಾಗಿನ್ ಮಾಡಲು ಬಲವಾದ ಫೋನ್ ಲಾಕ್ (ಪಿನ್, ಪಾಸ್‌ವರ್ಡ್, ಅಥವಾ ಫಿಂಗರ್‌ಪ್ರಿಂಟ್) ಬಳಸಿ.

UPI ಪಿನ್ ಗೌಪ್ಯವಾಗಿಡಿ: ನಿಮ್ಮ UPI ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಸ್ನೇಹಿತರು ಅಥವಾ ಕುಟುಂಬದವರನ್ನೂ ಒಳಗೊಂಡಂತೆ.
ಫೋನ್‌ಪೇ ಸಿಬ್ಬಂದಿಯಿಂದಲೂ ಯಾವುದೇ ಕಾರಣಕ್ಕೂ ಪಿನ್ ಕೇಳುವುದಿಲ್ಲ. ಒಂದು ವೇಳೆ ಯಾರಾದರೂ ಕೇಳಿದರೆ, ಅದು ವಂಚನೆಯಾಗಿರಬಹುದು.

ಇದನ್ನೂ ಓದಿ: Valmiki Nigama Subsidy Yojane-ವಾಲ್ಮೀಕಿ ನಿಗಮದಿಂದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಅಧಿಕೃತ ಆಪ್ ಬಳಸಿ: ಫೋನ್‌ಪೇ ಆಪ್‌ನ ಅಧಿಕೃತ ಆವೃತ್ತಿಯನ್ನು ಕೇವಲ Google Play Store ಅಥವಾ Apple App Storeನಿಂದ ಡೌನ್‌ಲೋಡ್ ಮಾಡಿ.
ಇಮೇಲ್, SMS, ಅಥವಾ ಇತರ ಮೂಲಗಳಿಂದ ಬಂದ ಲಿಂಕ್‌ಗಳ ಮೂಲಕ ಆಪ್ ಡೌನ್‌ಲೋಡ್ ಮಾಡಬೇಡಿ.

ಸಂದೇಶಗಳ ಬಗ್ಗೆ ಜಾಗರೂಕರಾಗಿರಿ: ಅನಗತ್ಯ SMS, WhatsApp, ಅಥವಾ ಇಮೇಲ್‌ನಲ್ಲಿ ಬಂದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಇವು ಫಿಶಿಂಗ್‌ಗೆ ಸಂಬಂಧಿಸಿರಬಹುದು.
UPI ID, ಬ್ಯಾಂಕ್ ಖಾತೆ ವಿವರ, ಅಥವಾ OTP (One-Time Password) ಕೇಳುವ ಯಾವುದೇ ಸಂದೇಶಗಳನ್ನು ನಂಬಬೇಡಿ.

OTP ಗೌಪ್ಯವಾಗಿಡಿ: ಫೋನ್‌ಪೇ ವಹಿವಾಟಿಗೆ OTP ಅಗತ್ಯವಾದರೆ, ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
OTP ಕೇಳುವ ಯಾವುದೇ ಕರೆ, ಸಂದೇಶ, ಅಥವಾ ಇಮೇಲ್‌ಗೆ ಪ್ರತಿಕ್ರಿಯೆ ನೀಡಬೇಡಿ.

ವಹಿವಾಟಿನ ವಿವರಗಳನ್ನು ಪರಿಶೀಲಿಸಿ: ಹಣ ಕಳುಹಿಸುವ ಮೊದಲು UPI ID, ಫೋನ್ ಸಂಖ್ಯೆ, ಅಥವಾ ಖಾತೆ ವಿವರಗಳನ್ನು ಎರಡು ಬಾರಿ ಪರಿಶೀಲಿಸಿ.
QR ಕೋಡ್ ಸ್ಕ್ಯಾನ್ ಮಾಡುವಾಗ, ಅದು ಸರಿಯಾದ ಫಲಾನುಭವಿಗೆ ಸಂಬಂಧಿಸಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ನಿಯಮಿತವಾಗಿ ಖಾತೆಯನ್ನು ಮೇಲ್ವಿಚಾರಣೆ ಮಾಡಿ: ನಿಮ್ಮ ಬ್ಯಾಂಕ್ ಖಾತೆ ಮತ್ತು ಫೋನ್‌ಪೇ ವಹಿವಾಟುಗಳ ಇತಿಹಾಸವನ್ನು ನಿಯಮಿತವಾಗಿ ಪರಿಶೀಲಿಸಿ.
ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ, ತಕ್ಷಣ ಫೋನ್‌ಪೇ ಗ್ರಾಹಕ ಸೇವೆಯನ್ನು ಸಂಪರ್ಕಿಸಿ.

ಸಾರ್ವಜನಿಕ Wi-Fi ತಪ್ಪಿಸಿ: ಸಾರ್ವಜನಿಕ Wi-Fi ನೆಟ್‌ವರ್ಕ್‌ಗಳಲ್ಲಿ ಫೋನ್‌ಪೇ ವಹಿವಾಟುಗಳನ್ನು ಮಾಡುವುದನ್ನು ತಪ್ಪಿಸಿ. ಸುರಕ್ಷಿತ ಇಂಟರ್ನೆಟ್ ಸಂಪರ್ಕವನ್ನು ಬಳಸಿ.

ಪ್ ಅನ್ನು ಅಪ್‌ಡೇಟ್ ಮಾಡಿ: ಫೋನ್‌ಪೇ ಆಪ್‌ನ ಇತ್ತೀಚಿನ ಆವೃತ್ತಿಯನ್ನು ಯಾವಾಗಲೂ ಬಳಸಿ, ಏಕೆಂದರೆ ಹೊಸ ಆವೃತ್ತಿಗಳು ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತವೆ.

ಗ್ರಾಹಕ ಸೇವೆ ಸಂಪರ್ಕ: ಯಾವುದೇ ಸಮಸ್ಯೆ ಅಥವಾ ವಂಚನೆಯ ಶಂಕೆ ಇದ್ದರೆ, ಫೋನ್‌ಪೇನ ಅಧಿಕೃತ ಗ್ರಾಹಕ ಸೇವೆಯನ್ನು (1800-120-2122) ಸಂಪರ್ಕಿಸಿ ಅಥವಾ ಆಪ್‌ನಲ್ಲಿರುವ "ಸಹಾಯ" ವಿಭಾಗವನ್ನು ಬಳಸಿ.

ಅನಗತ್ಯ ಅನುಮತಿಗಳನ್ನು ತೆಗೆದುಹಾಕಿ: ಫೋನ್‌ಪೇಗೆ ಅಗತ್ಯವಿಲ್ಲದ ಫೋನ್ ಅನುಮತಿಗಳನ್ನು (ಉದಾಹರಣೆಗೆ, ಕ್ಯಾಮೆರಾ, ಮೈಕ್ರೊಫೋನ್) ನಿಷ್ಕ್ರಿಯಗೊಳಿಸಿ.

ವಂಚನೆಯ ಬಗ್ಗೆ ತಿಳಿದಿರಿ: "ಕ್ಯಾಶ್‌ಬ್ಯಾಕ್" ಅಥವಾ "ಉಚಿತ ಉಡುಗೊರೆ" ಆಫರ್‌ಗಳ ಆಮಿಷಕ್ಕೆ ಒಳಗಾಗಬೇಡಿ. ಫೋನ್‌ಪೇ ಇಂತಹ ಆಫರ್‌ಗಳನ್ನು ಅಧಿಕೃತ ಚಾನೆಲ್‌ಗಳ ಮೂಲಕವೇ ಒದಗಿಸುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: