PM Kisan-2025: ಪಿ ಎಂ ಕಿಸಾನ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಪ್ರಕಟ!

May 8, 2025 | Siddesh
PM Kisan-2025: ಪಿ ಎಂ ಕಿಸಾನ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಪ್ರಕಟ!
Share Now:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM Kisan) ಯೋಜನೆಯಡಿ ಈಗಾಗಲೇ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ಸರ್ಕಾರದಿಂದ ಮಹತ್ವದ ಮಾಹಿತಿಯನ್ನು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ಇದರ ವಿವರವನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಈ ಯೋಜನೆಯಡಿ ದಿನಾಂಕ 25 ಫೆಬ್ರವರಿ 2025 ರಂದು 19ನೇ ಕಂತಿನ ಹಣವನ್ನು(PM-Kisan 19th installment)ನೇರ ನಗದು ವರ್ಗಾವಣೆ(DBT) ಮೂಲಕ ಎಲ್ಲ ಅರ್ಹ ರೈತರ ಖಾತೆಗೆ ಜಮಾ ಮಾಡಲಾಗಿದ್ದು ಇನ್ನು ಎರಡು ತಿಂಗಳಲ್ಲಿ 20ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: Diploma Admission-2025: ಸರ್ಕಾರಿ ಕೋಟಾದಡಿ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಪ್ರಸ್ತುತ ಈ ಲೇಖನದಲ್ಲಿ ಪಿ ಎಂ ಕಿಸಾನ್ ಯೋಜನೆಯ(Kisan Samman) ಕುರಿತು ಕೆಲವು ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ಈ ಮಾಹಿತಿಯು ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ಈ ಮಾಹಿತಿಯನ್ನು ಶೇರ್ ಮಾಡಿ ಇತರ ರೈತರಿಗೂ ಈ ಮಾಹಿತಿ ತಿಳಿಸಲು ಸಹಕರಿಸಿ.

PM Kisan Amount-ಈ ಯೋಜನೆಯಡಿ ಇಲ್ಲಿಯವರೆಗೆ 38,000 ರೂ ಅರ್ಥಿಕ ನೆರವು ರೈತರ ಖಾತೆಗೆ:

ಕೇಂದ್ರ ಸರ್ಕಾರದ ರೈತ ಪರ ಯೋಜನೆಗಳಲ್ಲಿ ಬಹುಮುಖ್ಯ ಯೋಜನೆಯು ಇದಾಗಿದ್ದು ಇಲ್ಲಿಯವರೆಗೆ ಈ ಯೋಜನೆಯಡಿ ರೈತರ ಖಾತೆಗೆ ಒಟ್ಟು 19 ಕಂತುಗಳ ಹಣವನ್ನು ಜಮಾ ಮಾಡಲಾಗಿದ್ದು ಒಟ್ಟು 38,00/- ರೂ ಆರ್ಥಿಕ ನೆರವನ್ನು ವರ್ಗಾವಣೆ ಮಾಡಲಾಗಿದೆ ಎಂದು ಕೇಂದ್ರದ ಅಧಿಕೃತ ಪಿ ಎಂ ಕಿಸಾನ್ ಯೋಜನೆಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Free Computer Training-ಉಚಿತ ವಸತಿಸಹಿತ 45 ದಿನಗಳ ಕಂಪ್ಯೂಟರ್ ಡಿ.ಟಿ.ಪಿ ತರಬೇತಿಗೆ ಅರ್ಜಿ ಆಹ್ವಾನ!

PM Kisan Mobile Number Update ಪಿ ಎಂ ಕಿಸಾನ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಪ್ರಕಟ!

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಿ ಆರ್ಥಿಕ ನೆರವನ್ನು ಪಡೆಯುತ್ತಿರುವ ಫಲಾನುಭವಿಗಳು ಮೊಬೈಲ್ ನಂಬರ್ ಅನ್ನು ಸರಿಪಡಿಸಿಕೊಳ್ಳಲು ಅಥವಾ ನೂತನ ಮೊಬೈಲ್ ಸಂಖ್ಯೆಯನ್ನು ಸೇರಿಸಲು ಅಧಿಕೃತ ಲಿಂಕ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಕೆಳಗಿನ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲೇ ಮೊಬೈಲ್ ನಂಬರ್ ಅನ್ನು ಅಪ್ಡೇಟ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ PM Kisan Mobile Number Update ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ಇಲ್ಲಿ ಮುಖಪುಟದಲ್ಲಿರುವ ಬಟನ್ ಮೇಲೆ ಕ್ಲಿಕ್ ಮಾಡಿ ಪಿ ಎಂ ಕಿಸಾನ್ ನೋಂದಣಿ ಸಂಖ್ಯೆಯನ್ನು ನಮೂದಿಸಿ ಪಕ್ಕದಲ್ಲಿ ಕಾಣುವ ಕ್ಯಾಪ್ಚ ಕೋಡ್ ಅನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿ ನಂತರದ ಪೇಜ್ ನಲ್ಲಿ ನಿಮ್ಮ ಹಾಲಿ ಮೊಬೈಲ್ ನಂಬರ್ ಕಾಣಿಸುತ್ತದೆ ಇದು ಸರಿ ಇಲ್ಲದೇ ಇದ್ದ ಪಕ್ಷದಲ್ಲಿ ಸರಿಯಾದ ಮೊಬೈಲ್ ನಂಬರ್ ಅನ್ನು ಹಾಕಿ "Update" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಅಪ್ಡೇಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Gruhalakshmi Pending Amount-ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ವರ್ಗಾವಣೆಗೆ ಡೇಟ್ ಫಿಕ್ಸ್!

kisan samman

PM Kisan Mobile Number-ಮೊಬೈಲ್ ನಂಬರ್ ತಪ್ಪದೇ ಸರಿಪಡಿಸಿಕೊಳ್ಳಿ:

ಈ ಯೋಜನೆಯಡಿ ಹಣ ವರ್ಗಾವಣೆ ಮತ್ತು ಇನ್ನಿತರೆ ಮಾಹಿತಿಯನ್ನು ಸರಿಯಾದ ಸಮಯಕ್ಕೆ ಕಾಲ ಕಾಲಕ್ಕೆ ಪಡೆಯಲು ಅಧಿಕೃತ ಕಿಸಾನ್ ಸಮ್ಮಾನ್ ವೆಬ್ಸೈಟ್ ನಲ್ಲಿ ಸರಿಯಾಗಿ ನಮೂದಿಸಿರುವುದು ಕಡ್ಡಾಯವಾಗಿರುವ ಕಾರಣ ಪಿ ಎಂ ಕಿಸಾನ್ ಫಲಾನುಭವಿ ರೈತರು ತಪ್ಪದೇ ಸರಿಯಾದ ಮೊಬೈಲ್ ನಂಬರ್ ಅನ್ನು ದಾಖಲಿಸುವುದು ಅತೀ ಮುಖ್ಯ.

PM Kisan Farmer list 2025-ನಿಮ್ಮ ಹಳ್ಳಿಯ ಪಿ ಎಂ ಕಿಸಾನ್ ಅರ್ಹ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ:

ರೈತರು ತಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಈ ಯೋಜನೆಯಡಿ ಆರ್ಥಿಕ ನೆರವು ಬರುತ್ತಿದೆ ಮತ್ತು ಈ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ಅಧಿಕೃತ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ತಂತ್ರಾಂಶವನ್ನು ಪ್ರವೇಶ ಮಾಡಿ ಚೆಕ್ ಮಾಡಿಕೊಳ್ಳಬಹುದು.

Step-1: ಪ್ರಥಮದಲ್ಲಿ ಈ ವೆಬ್ಸೈಟ್ ಲಿಂಕ್ ಮೇಲೆ PM Kisan Farmer list ಒತ್ತಿ ಅಧಿಕೃತ ಪಿ ಎಂ ಕಿಸಾನ್ ತಂತ್ರಾಂಶವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Horticulture Training-ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ! ರೂ 1,750/- ಮಾಸಿಕ ಶಿಷ್ಯವೇತನ!

pmkisan

Step-2: ಇದಾದ ನಂತರ ಈ ಪೇಜ್ ನ ಮುಖಪುಟದಲ್ಲಿ ಗೋಚರಿಸುವ "Beneficiary List" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ತದನಂತರ ಈ ಪುಟದಲ್ಲಿ ರೈತರು ರಾಜ್ಯ-Karnataka ಮತ್ತು ಪಕ್ಕದಲ್ಲಿರುವ ಕಾಲಂ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿಯ ಹೆಸರನ್ನು ಸೆಲೆಕ್ಟ್ ಮಾಡಿಕೊಂಡು "Get Report" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ನೋಡಬಹುದಾಗಿದೆ. ಒಮ್ಮೆ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಿಕೊಳ್ಳಿ.

ಇದನ್ನೂ ಓದಿ: Morarji College Admission-ಉಚಿತ ಮೊರಾರ್ಜಿ ಪಿಯು ವಸತಿ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ!

PM Kisan Amount Status Check-ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:

Step-1: ಪ್ರಥಮದಲ್ಲಿ ಈ "PM Kisan Amount Status Check" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ "Know Your Status" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರೈತರು ತಮ್ಮ ಅರ್ಜಿ ನೋಂದಣಿ ಸಂಖ್ಯೆಯನ್ನು ನಮೂದಿಸಿ "Get OTP" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ಯೋಜನೆಯಡಿ ಇಲ್ಲಿಯವರೆಗೆ ಎಷ್ಟು ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಸೂಚನೆ: ನಿಮ್ಮ ನೋಂದಣಿ ಸಂಖ್ಯೆ/Registration No ಗೊತ್ತಿಲ್ಲದೇ ಇದ್ದರೆ "Know Your Registaration No" ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ನೋಂದಣಿ ಸಂಖ್ಯೆಯನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: