PM-Kisan Application-ಪಿಎಂ ಕಿಸಾನ್ ಹೊಸ ಅರ್ಜಿ ಸಲ್ಲಿಸಲು ಅವಕಾಶ! ಇಂದೇ ಅರ್ಜಿ ಸಲ್ಲಿಸಿ!

April 17, 2026 | Siddesh
PM-Kisan Application-ಪಿಎಂ ಕಿಸಾನ್ ಹೊಸ ಅರ್ಜಿ ಸಲ್ಲಿಸಲು ಅವಕಾಶ! ಇಂದೇ ಅರ್ಜಿ ಸಲ್ಲಿಸಿ!
Share Now:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ದೇಶದ ಎಲ್ಲಾ ರೈತರಿಗೆ ವಾರ್ಷಿಕ ರೂ 6,000/- ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ ಪ್ರಸ್ತುತ ನೂತನವಾಗಿ ತಮ್ಮ ಹೆಸರಿಗೆ ಜಮೀನನ್ನು ವರ್ಗಾವಣೆ ಮಾಡಿಕೊಂಡಿರುವ ಅರ್ಹ ರೈತ ಬಾಂಧವರು ಈ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಜಿ(PM-Kisan New Application) ಸಲ್ಲಿಸಲು ರಾಜ್ಯ ಕೃಷಿ ಇಲಾಖೆಯಿಂದ ಅವಕಾಶ ನೀಡಲಾಗಿದೆ.

ಈ ಯೋಜನೆಯಲ್ಲಿ ಪ್ರಮುಖವಾಗಿ(Kisan Samman Nidhi Yojane) ಪಿತ್ರಾರ್ಜಿತ ಆಸ್ತಿ ಅಥವಾ ಪೌತಿ ಉತ್ತರಾಧಿಕಾರದಿಂದಾಗಿ ಇತ್ತೀಚೆಗೆ ತಮ್ಮ ಹೆಸರಿಗೆ ಜಮೀನನ್ನು ವರ್ಗಾವಣೆ ಮಾಡಿಸಿಕೊಂಡಿರುವ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ, 2019 ರ ನಂತರ ಜಮೀನನ್ನು ನೇರವಾಗಿ ಖರೀದಿಸಿದವರು ಈ ಸೌಲಭ್ಯಕ್ಕೆ ಹೊರತಾಗಿರುತ್ತಾರೆ. ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರವಲ್ಲದೆ, ದೊಡ್ಡ ಹಿಡುವಳಿದಾರರೂ ಕೂಡ ನಿಗದಿತ ಮಾನದಂಡಗಳನ್ನು ಪೂರೈಸಿದರೆ ಈ ಯೋಜನೆಯ ಲಾಭ ಪಡೆಯಬಹುದು.

ಇದನ್ನೂ ಓದಿ: 2nd Puc Exam-2: ವಿದ್ಯಾರ್ಥಿಗಳೇ ಗಮನಿಸಿ! ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಧಿಕೃತ ದಿನಾಂಕ ಪ್ರಕಟ!

ಇಂದಿನ ಅಂಕಣದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-Kisan)ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಪ್ರಸ್ತುತ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವುದು ಹೇಗೆ? ಅಗತ್ಯ ದಾಖಲಾತಿಗಳು ಯಾವುವು? ಆನ್ಲೈನ್ ಮೂಲಕ ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ ಸೇರಿದಂತೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Bapuji Seva Kendra-ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನೂತನ ವ್ಯವಸ್ಥೆ ಜಾರಿ!

Who Can Apply For PM-Kisan Yojana-ಯಾವೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರಬೇಕು.

2019 ರ ನಂತರ ಕೃಷಿ ಜಮೀನನ್ನು ಖರೀದಿ ಮಾಡಿದವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ತಂದೆಯಿಂದ ಅಥವಾ ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ಪ್ರಸ್ತುತ ವರ್ಗಾವಣೆ ಮಾಡಿಕೊಂಡಿರುವವರು(ಪೌತಿ/ವಿಭಾಗ) ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಸಣ್ಣ ಮತ್ತು ದೊಡ್ಡ ಜಮೀನುದಾರರು ಎರಡು ವರ್ಗದ ರೈತರು ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: Skill Training-24 ದಿನಗಳ ಉಚಿತ ಫ್ಯಾಶನ್ ಡಿಸೈನಿಂಗ್ ಮತ್ತು ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ!

ಆದಾಯ ತೆರಿಗೆ ಪಾವತಿದಾರರು, ಕುಟುಂಬದಲ್ಲಿ ಸರ್ಕಾರಿ ನೌಕರಿಯಲ್ಲಿರುವವರು ಜಿಎಸ್.ಟಿ ಪಾವತಿಯನ್ನು ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಗಂಡ-ಹೆಂಡತಿ ಇಬ್ಬರ ಹೆಸರಿನಲ್ಲಿಯೂ ಸಹ ಕೃಷಿ ಜಮೀನು ಇದ್ದಲ್ಲಿ ಒಬ್ಬರ ಹೆಸರಿನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

PM-Kisan Application-ಎಲ್ಲಿ ಅರ್ಜಿ ಸಲ್ಲಿಸಬೇಕು?

ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಲು ಅರ್ಹರಿರುವ ರೈತರ ಮಿತ್ರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

Required Documents For PM-Kisan Scheme-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಒದಗಿಸಬೇಕಾದ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಅರ್ಜಿದಾರ ರೈತರ ಆಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ಜಮೀನಿನ ಪಹಣಿ
  • ಮೊಬೈಲ್ ನಂಬರ್

ಇದನ್ನೂ ಓದಿ: Danta Bhagya-ರಾಜ್ಯಾದ್ಯಂತ ದಂತ ಭಾಗ್ಯ ಯೋಜನೆ ಜಾರಿ! ಯಾವೆಲ್ಲ ಸೌಲಭ್ಯ ಪಡೆಯಬಹುದು?

PM-Kisan Application Status Check-ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ?

ಒಮ್ಮೆ ರೈತರು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎನ್ನವ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ ಲಿಂಕ್ "PM-Kisan Application Status" ಮೇಲೆ ಕ್ಲಿಕ್ ಮಾಡಿ ಅಧಿಕೃತ ಪಿಎಂ ಕಿಸಾನ್ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: BPL Card-14 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ಕಾರ್ಯ ಚುರುಕು! ಇಲ್ಲಿದೆ ರದ್ದಾದ ಕಾರ್ಡ ಪಟ್ಟಿ!

PM-Kisan New Application

Step-2: ಇದಾದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣಿಸುವ "ಸ್ಥಿತಿ ಪರಿಶೀಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ "ಪಿಎಂಕೆಐಡಿ/PMKID" ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿದ ಬಳಿಕ ನೀಡಿರುವ PMKID ಅನ್ನು ನಮೂದಿಸಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಮೊಬೈಲ್ ಮೂಲಕವೇ ಯಾವುದೇ ಸರ್ಕಾರಿ ಕಚೇರಿಯನ್ನು ಭೇಟಿ ಮಾಡದೇ ಚೆಕ್ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: