PM Kisan List-ಪಿಎಂ ಕಿಸಾನ್ 21ನೇ ಕಂತಿನ ಹಣ ವರ್ಗಾವಣೆಗೆ ಅರ್ಹ ರೈತರ ಪಟ್ಟಿ ಬಿಡುಗಡೆ!

November 17, 2025 | Siddesh
PM Kisan List-ಪಿಎಂ ಕಿಸಾನ್ 21ನೇ ಕಂತಿನ ಹಣ ವರ್ಗಾವಣೆಗೆ ಅರ್ಹ ರೈತರ ಪಟ್ಟಿ ಬಿಡುಗಡೆ!
Share Now:

ಕೇಂದ್ರ ಸರಕಾರದಿಂದ ಇದೆ ನವೆಂಬರ್ 19 ರಂದು ದೇಶದ 9 ಕೋಟಿ ರೈತರ ಖಾತೆಗೆ ನೇರವಾಗಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM Kisan Beneficiary List) 21ನೇ ಕಂತಿನ ಹಣವನ್ನು ವರ್ಗಾವಣೆ ಮಾಡಲು ಅಧಿಕೃತ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಇದರಂತೆ 21ನೇ ಕಂತಿನ ಹಣವನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಇಂದಿನ ಲೇಖನದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM Kisan 21th Instalment) ನೇ ಕಂತಿನ ಆರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ರೈತರು ತಮ್ಮ ಮೊಬೈಲ್ ಮೂಲಕವೇ ಹೇಗೆ ಚೆಕ್ ಮಾಡುವುದು? ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದೇ ಇದ್ದರೆ ಯಾವ ಕ್ರಮ ಅನುಸರಿಸಬೇಕು? ಹಾಗೂ ಈ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಯಾವೆಲ್ಲ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Rolls Royce India Scholarship-ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ನಮ್ಮ ದೇಶದಲ್ಲಿ ಕೇಂದ್ರ ಸರಕಾರವು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಸಣ್ಣ ಪ್ರಮಾಣದಲ್ಲಿ ಆರ್ಥಿಕ ನೆರವನ್ನು ಒದಗಿಸಲು 2019 ರಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು(Kisan samman nidhi) ಜಾರಿಗೆ ತರಲಾಗಿದ್ದು ಇಲ್ಲಿಯವರೆಗೆ ಈ ಯೋಜನೆಯಡಿ ಒಟ್ಟೂ 20 ಕಂತು ಅಂದರೆ ಒಟ್ಟು 40,000/- ರೂ ಆರ್ಥಿಕ ನೆರವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದ್ದು, ಪ್ರಸ್ತುತ 21ನೇ ಕಂತಿನ ಹಣ ವರ್ಗಾವಣೆಗೆ ಸಕಲ ಸಿದ್ಧತೆಯನ್ನು ಇಲಾಖೆ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ.

PM Kisan 21th Instalment Date-19 ನವೆಂಬರ್ 2025 ರಂದು ರೈತರ ಖಾತೆಗೆ 21ನೇ ಕಂತಿನ ಹಣ ಬಿಡುಗಡೆ:

ದೇಶದ ಒಟ್ಟೂ 9 ಕೋಟಿ ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಒಂದೇ ಕ್ಲಿಕ್ ನಲ್ಲಿ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ರೂ ಆರ್ಥಿಕ ನೆರವನ್ನು 19 ನವೆಂಬರ್ 2025 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ದೇಶದ ಎಲ್ಲಾ ರೈತರಿಗೆ ಹಣ ಜಮಾ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ: Nikon India scholarship-ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

PM Kisan Amount Transfer Event-ಪಿಎಂ ಕಿಸಾನ್ ವಿಡಿಯೋ ಕಾನ್ಪರೆನ್ಸ್ ನಲ್ಲಿ ಭಾಗವಹಿಸಲು ನೋಂದಣಿ ಮಾಡಿ:

ದೇಶದ ಎಲ್ಲಾ ಭಾಗದ ರೈತರ ಮನೆಯಲ್ಲೇ ಇದ್ದು ತಮ್ಮ ಮೊಬೈಲ್ ಮೂಲಕ ಪಿಎಂ ಕಿಸಾನ್ ಹಣ ವರ್ಗಾವಣೆ ಕಾರ್ಯಕ್ರಮದಲ್ಲಿ ಪ್ರಧಾನ ನರೇಂದ್ರ ಮೋದಿಯವರ ಕಾರ್ಯಮದಲ್ಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಕೆಳಗಿನ ವಿಧಾನವನ್ನು ಅನುಸರಿಸಿ ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಂಡು ರೈತರು ಭಾಗವಹಿಸಬಹುದು.

Step-1: ಮೊದಲಿಗೆ Register Now ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Udyogini Yojane-ರಾಜ್ಯ ಮಹಿಳಾ ನಿಗಮದಿಂದ ಉದ್ಯೋಗಿನಿ ಯೋಜನೆಯಡಿ 1.5 ಲಕ್ಷ ಸಹಾಯಧನಕ್ಕೆ ಅರ್ಜಿ ಅಹ್ವಾನ!

pm kisan farmers list

ಇದನ್ನೂ ಓದಿ: PM Kisan 21th Installment-ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಗೆ ಅಧಿಕೃತ ದಿನಾಂಕ ನಿಗಧಿ!

Step-2: ಇದಾದ ಬಳಿಕ ಇಲ್ಲಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಹಾಕಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ಭಾಗವಹಿಸಲು ನಿಮಗೆ ವೆಬ್ ಲಿಂಕ್ ಬರುತ್ತದೆ ರಂದು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಾರ್ಯಕ್ರಮದ ಲೈವ್ ನಲ್ಲಿ ಭಾಗವಹಿಸಬಹುದು.

PM Kisan Beneficiary List-2025: 21ನೇ ಕಂತಿನ ಹಣ ವರ್ಗಾವಣೆಗೆ ಅರ್ಹ ರೈತರ ಪಟ್ಟಿ:

ಕೇಂದ್ರ ಸರಕಾರದಿಂದ ಪಿಎಂ ಕಿಸಾನ್ ಅಧಿಕೃತ ಜಾಲತಾಣದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ 21ನೇ ಕಂತಿನ ಆರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿಯಲ್ಲಿ ಈಗಾಗಲೇ ಪ್ರಕಟಿಸಲಾಗಿದ್ದು ರೈತರು ಕೆಳಗಿನ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಪಿಎಂ ಕಿಸಾನ್ ಅರ್ಹ ರೈತರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.

Step-1: ರೈತರು ಪ್ರಥಮ ಹಂತದಲ್ಲಿ ಈ ವೆಬ್ ಲಿಂಕ್ "PM Kisan Farmer List 2025" ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ಜಾಲತಾಣವನ್ನು ಪ್ರವೇಶ ಮಾಡಿ.

Step-2: ತದನಂತರ ಈ ಪುಟದಲ್ಲಿ ಬಲ ಭಾಗದಲ್ಲಿ ಕಾಣಿಸುವ "Beneficiary List" ಬಟನ್ ಮೇಲೆ ಕ್ಲಿಕ್ ಮಾಡಿ ರಾಜ್ಯ ನಿಮ್ಮ ಜಿಲ್ಲೆ,ತಾಲ್ಲೂಕು,ಹಳ್ಳಿ ಅನ್ನು ಆಯ್ಕೆ ಮಾಡಿಕೊಂಡು ಮಾಡಿಕೊಂಡು "Get Report" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ 21ನೇ ಕಂತಿನ ಕಿಸಾನ್ ಸಮ್ಮಾನ್ ರೂ 2,000/- ಆರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ರೈತ ಪಟ್ಟಿ ಕಾಣಿಸುತ್ತದೆ.

Step-3: ರೈತರು ಒಮ್ಮೆ ಈ ಹಳ್ಳಿವಾರು ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಪರೀಶಿಲಿಸಿ ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: Mahindra Scholarship-ಮಹೀಂದ್ರ ಸಂಸ್ಥೆಯಿಂದ ರೂ 6,000/- ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನ!

ವಿಶೇಷ ಸೂಚನೆ: ಪಿಎಂ ಕಿಸಾನ್ ಯೋಜನೆಯಡಿ ಯಾವುದೇ ತಾಂತ್ರಿಕ ದೋಷಗಳಿಲ್ಲದೇ 20ನೇ ಕಂತಿನ ಆರ್ಥಿಕ ನೆರವನ್ನು ಪಡೆದಿರುವ ರೈತರಿಗೆ 21ನೇ ಕಂತಿನ ರೂ 2,000/- ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಲಿದೆ ಒಮ್ಮೆ ರೈತರು ಈ ಮೇಲಿನ ವಿಧಾನವನ್ನು ಅನುಸರಿಸಿ ಅರ್ಹ ರೈತರ ಹಳ್ಳಿವಾರು ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳಿ.

PM Kisan Farmer List-ಪಟ್ಟಿಯಲ್ಲಿ ಹೆಸರಿಲ್ಲದೇ ಇದ್ದರೆ ಹೀಗಿ ಮಾಡಿ:

ರೈತರು ತಮ್ಮ ಮೊಬೈಲ್ ಮೂಲಕ ಮೇಲಿನ ವಿಧಾನವನ್ನು ಅನುಸರಿಸಿ ಪಿಎಂ ಕಿಸಾನ್ ಅರ್ಹ ರೈತರ ಪಟ್ಟಿಯನ್ನು ಚೆಕ್ ಮಾಡಿದಾಗ ನೀವು ಯೋಜನೆಯ ಮಾರ್ಗಸೂಚಿ ಪ್ರಕಾರ ಅರ್ಹರಿದ್ದರು ಸಹ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಬಿಟ್ಟು ಹೋಗಿದ್ದರೆ ಕೂಡಲೇ ಅಗತ್ಯ ದಾಖಲಾತಿಗಳಾದ ಆಧಾರ್ ಕಾರ್ಡ,ಪಹಣಿ,ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ತೆಗೆದುಕೊಂಡು ನಿಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: KSRTC Flybus Service-ಬೆಂಗಳೂರು ವಿಮಾನ ನಿಲ್ದಾಣದಿಂದ ದಾವಣಗೆರೆಗೆ ಫ್ಲೈ ಬಸ್ ಸೇವೆ ಆರಂಭ!

PM Kisan 21th Instalment-ಪಿಎಂ ಕಿಸಾನ್ ಹಣ ಪಡೆಯಲು ಈ ನಿಯಮ ಪಾಲನೆ ಕಡ್ಡಾಯ:

ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನಾಲ್ಕು ತಿಂಗಳಿಗೊಮ್ಮೆ ರೂ ಆರ್ಥಿಕ ನೆರವನ್ನು ಪಡೆಯಲು ರೈತರ ಈ ಕೆಳಗಿನ ಪಟ್ಟಿಯಲ್ಲಿರುವ ತಾಂತ್ರಿಕ ಮಾಹಿತಿಯು ಸರಿಯಾಗಿರುವುದು ಕಡ್ಡಾಯವಾಗಿದೆ.

ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್: ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಕಡ್ಡಾಯವಾಗಿ ರೈತರು ತಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ ಲಿಂಕ್ ಅಗಿರುವುದು ಕಡ್ಡಾಯವಾಗಿದೆ.

ಅರ್ಜಿದಾರರ ಇ-ಕೆವೈಸಿ: ಇಲ್ಲಿಯವರೆಗೆ ಪಿಎಂ ಕಿಸಾನ್ ಅರ್ಜಿಗೆ ಇ-ಕೆವೈಸಿ ಅನ್ನು ಮಾಡಿಕೊಳ್ಳದೇ ಇರುವವರು ಆಧಾರ್ ಕಾರ್ಡ,ಮೊಬೈಲ್ ಅನ್ನು ತೆಗೆದುಕೊಂಡು ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಕೆವೈಸಿಯನ್ನು ಮಾಡಿಸಿಕೊಳ್ಳಿ.

ಜಮೀನು-ಆಧಾರ್ ವಿವರ ತಾಳೆಯಾಗಬೇಕು: ಪಿಎಂ ಕಿಸಾನ್ ಅರ್ಜಿದಾರರು ತಾವು ಅರ್ಜಿ ಸಲ್ಲಿಸುವಾಗ ನೀಡಿರುವ ಪಹಣಿಯ ಮಾಲೀಕರ ವಿವರದಲ್ಲಿ ಬದಲಾವಣೆ ಅಥವಾ ತಿದ್ದುಪಡೆ ಅದರೆ ಕೂಡಲೇ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ನಿಮ್ಮ ಪಿಎಂ ಅರ್ಜಿಯನ್ನು ಸರಿಪಡಿಸಿಕೊಳ್ಳಿ. ಇಲ್ಲವಾದಲ್ಲಿ ಜಮೀನು-ಆಧಾರ್ ವಿವರ ತಾಳೆಯಾಗುತ್ತಿಲ್ಲ ಎನ್ನುವ ಕಾರಣದಿಂದ ನಿಮ್ಮಗೆ ಈ ಯೋಜನೆಯ ಆರ್ಥಿಕ ನೆರವು ವರ್ಗಾವಣೆಗೆ ತಡೆ ನೀಡಲಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: