HomeNew postsLand documents-2024: ಕಂದಾಯ ಇಲಾಖೆಯ ಅಲೆದಾಟಕ್ಕೆ ಬೀಳಲಿದೆ ಬ್ರೇಕ್! ಜಮೀನುಗಳ ಪೋಡಿ, ದುರಸ್ತಿಗೆ ನೂತನ ಕ್ರಮ!

Land documents-2024: ಕಂದಾಯ ಇಲಾಖೆಯ ಅಲೆದಾಟಕ್ಕೆ ಬೀಳಲಿದೆ ಬ್ರೇಕ್! ಜಮೀನುಗಳ ಪೋಡಿ, ದುರಸ್ತಿಗೆ ನೂತನ ಕ್ರಮ!

ಕಂದಾಯ ಇಲಾಖೆಯಿಂದ ಮಂಜೂರಾದ ಜಮೀನುಗಳ ಪೋಡಿ ಮತ್ತು ದುರಸ್ತಿ ಪಾರದರ್ಶಕಗೊಳಿಸಲು ನೂತನ ಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಸದನದಲ್ಲಿ ಕಂದಾಯ(karnataka revenue department) ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಏನಿದು ನೂತನ ಕ್ರಮ? ಹೇಗೆ ಕಾರ್ಯ ನಿರ್ವಹಿಸಲಿದೆ? ಇದರಿಂದ ರೈತರಿಗೆ ಅಗುವ ಪ್ರಯೋಜನಗಳೇನು? ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ರೈತರು ತಮ್ಮ ಜಮೀನಿನ ಮಾಲೀಕತ್ವಕ್ಕೆ ಸಂಬಂದಪಟ್ಟ ದಾಖಲೆಗಳಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸರಕಾರಿ ಕಚೇರಿಗಳನ್ನು ಅನೇಕ ಬಾರಿ ಅಲೆದಾಡುವ ಪರಿಸ್ಥಿತಿ ಇದ್ದು ಇದಕ್ಕೆ ಸೂಕ್ತ ಪರಿಹಾರ ಕ್ರಮ ಅನುಸರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಗೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ.

ಇದನ್ನೂ ಓದಿ: Parihara amount-2024: ಮಳೆಯಿಂದ ಉಂಟಾದ ನಷ್ಟಕ್ಕೆ ರಾಜ್ಯ ಸರಕಾರದಿಂದ 775 ಕೋಟಿ ಅನುದಾನ!ಯಾರಿಗೆಲ್ಲ ಸಿಗಲಿದೆ ಪರಿಹಾರದ ಹಣ!

Land documents-2024: ಕಂದಾಯ ಇಲಾಖೆಯಿಂದ ಜಮೀನುಗಳ ಪೋಡಿ, ದುರಸ್ತಿಗೆ ನೂತನ ಕ್ರಮ: ಸಚಿವ ಕೃಷ್ಣ ಬೈರೇಗೌಡ

ಪ್ರಸ್ತುತ ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ರೈತರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಸರ್ಕಾರ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆ ಇತ್ಯಾದಿಗಳ ಇತ್ಯರ್ಥಕ್ಕಾಗಿ ಕಂದಾಯ ಅದಾಲತ್‌ಗಳನ್ನು ನಡೆಸುತ್ತಿದೆ. 

ಮಂಜೂರಾದ ಜಮೀನುಗಳ ಪೋಡಿ, ದುರಸ್ತಿ ಕಾರ್ಯವನ್ನು ಆನ್‌ಲೈನ್‌ ಮುಖಾಂತರ ನಿರ್ವಹಿಸಲು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನ ಮಂಡಲ ಕಲಾಪದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

Kandaya adalath-ಕಂದಾಯ ಅದಾಲತ್‌ ಎಂದರೇನು?

ಕಂದಾಯ ಇಲಾಖೆಯಿಂದ ಒಂದು ಗ್ರಾಮ/ಹಳ್ಳಿಯನ್ನು ಗುರುತಿಸಿ ನಂತರ ಒಂದು ದಿನಾಂಕವನ್ನು ನಿಗದಿಪಡಿಸಿ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ನೇರವಾಗಿ ಆ ಹಳ್ಳಿ/ಗ್ರಾಮಕ್ಕೆ ಭೇಟಿ ಮಾಡಿ ಸ್ಥಳದಲ್ಲೇ ಅರ್ಜಿದಾರರ ಅರ್ಜಿಯನ್ನು ಪರೀಶಿಲಿಸಿ ಅಲ್ಲಿ ಸರಿಪಡಿಸುವಂತಹ ಅರ್ಜಿಗಳಿಗೆ ಪರಿಹಾರ ಕ್ರಮವನ್ನು ಕೈಗೊಳ್ಳುವುದು.

ಸ್ಥಳದಲ್ಲೇ ಪರಿಹಾರಿಸಲು ಅಗದಂತಹ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ಸರಿಪಡಿಸಲಾಗುವುದು ಎಂದು ಅರ್ಜಿದಾರರಿಗೆ ಇಂತಿಷ್ಟು ಸಮಯ ಅಗುತ್ತದೆ ಎಂದು ಖತರಿ ನೀಡಲಾಗುತ್ತದೆ.

ಇದನ್ನೂ ಓದಿ: Southern Railway Recruitment-2024: ದಕ್ಷಿಣ ರೈಲ್ವೆ ಇಲಾಖೆಯಿಂದ 2438 ಹುದ್ದೆಗಳ ನೇಮಕಾತಿ!

ಈ ಕಾರ್ಯಕ್ರಮವು ಕೇವಲ ಒಂದು ದಿನಕ್ಕೆ ಸೀಮಿತವಾಗಿರುವುದಿಲ್ಲ ಅವಶ್ಯಕತೆಗೆ ಅನುಗುಣವಾಗಿ ಕಾಲ ಕಾಲಕ್ಕೆ ಹೋಬಳಿ ಮತ್ತು ಹಳ್ಳಿ ಮಟ್ಟದಲ್ಲಿ ನಡೆಸಲಾಗುತ್ತದೆ.

ಈ ಕಂದಾಯ ಅದಾಲತ್‌ ಕಾರ್ಯಕ್ರಮದ ಮೂಲಕ ಪಿಂಚಣಿ ಯೋಜನೆಯಡಿ ಅರ್ಹರಿರುವ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಒದಗಿಸಲಾಗುತ್ತದೆ  ಕಂದಾಯ ಇಲಾಖೆಗಳ ಇತ್ಯಾದಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ತಿಳಿಸಲಾಗುತ್ತದೆ.

Podi application webiste-ಜಮೀನುಗಳ ಪೋಡಿ, ದುರಸ್ತಿ ಕಾರ್ಯವನ್ನು ಆನ್‌ಲೈನ್‌ ಮುಖಾಂತರ ನಿರ್ವಹಿಸಲು ಹೊಸ ತಂತ್ರಾಂಶ:

ರೈತರು ತಮ್ಮ ಜಮೀನುಗಳ ಪೋಡಿ, ದುರಸ್ತಿಗೆ ಕಂದಾಯ ಇಲಾಖೆಯನ್ನು ಅನೇಕ ಬಾರಿ ಭೇಟಿ ಅರ್ಜಿ ಸಲ್ಲಿಸಿದರು ಹಲವು ತಿಂಗಳು ಕಳೆದರು ತಮ್ಮ ಅರ್ಜಿ ವಿಲೇವಾರಿಯೇ ಅಗಿರುವುದಿಲ್ಲ ಎಂದು ಅನೇಕ ರೈತರು ಕಂದಾಯ ಇಲಾಕೆಯ ಅಧಿಕಾರಿಗಳನ್ನು ದೂರುತ್ತಾರೆ, ಇನ್ನು ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಲು ಅರ್ಜಿ ಸಲ್ಲಿಕೆ ವಿಧಾನವನ್ನು ಆನ್‌ಲೈನ್‌ ಮುಖಾಂತರ ನಿರ್ವಹಿಸಲು ಕಂದಾಯ ಇಲಾಖೆಯಿಂದ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನ ಮಂಡಲ ಕಲಾಪದಲ್ಲಿ ಮಾಹಿತಿ ತಿಳಿಸಿದ್ದಾರೆ.

ಇದ್ದರಿಂದ ನಿಗದಿತ ಸಮಯದಲ್ಲಿ ಅರ್ಜಿ ವಿಲೇವಾರಿ ಮಾಡಲು ಸದ್ಯವಾಗುತ್ತದೆ ಜೊತೆಗೆ ಅಧಿಕಾರಿಗಳಿಗೆ ಸಮರ್ಪಕವಾಗಿ ಕೆಲಸ ಮಾಡಲು ಸಹಕರಿ ರೈತರು ಹಲವು ತಿಂಗಳು ಕಾಯುವುದು ತಪ್ಪುತ್ತದೆ ಎನ್ನುಲಾಗುತ್ತಿದೆ. 

ಇದನ್ನೂ ಓದಿ: Diploma in veterinary: 2 ವರ್ಷದ ಪಶುಸಂಗೋಪನಾ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಈ land records website link-ಈ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಜಮೀನ ಎಲ್ಲಾ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲೇ ನೋಡಬಹುದು!

ರೈತರು/ಸಾರ್ವಜನಿಕರು ಈ land records website ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ತಮ್ಮ ಮೊಬೈಲ್ ನಲ್ಲೇ ನಿಮ್ಮ ಜಮೀನಿಗೆ ಸಂಬಂದಪಟ್ಟ ಎಲ್ಲಾ ಉಪಯುಕ್ತ ದಾಖಲಾತಿಗಳನ್ನು ಮನೆಯಲ್ಲೇ ಕುಳಿತು ಡೌನ್ಲೋಡ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಬಹುದು.

Most Popular

Latest Articles

- Advertisment -

Related Articles