Raagi Kharidi Kendra-ಕ್ವಿಂಟಾಲ್ ಗೆ ₹4,290 ರೂ ರಂತೆ ರಾಗಿ ಖರೀದಿಗೆ ಕೇಂದ್ರ ಆರಂಭ!

March 12, 2025 | Siddesh
Raagi Kharidi Kendra-ಕ್ವಿಂಟಾಲ್ ಗೆ ₹4,290 ರೂ ರಂತೆ ರಾಗಿ ಖರೀದಿಗೆ ಕೇಂದ್ರ ಆರಂಭ!
Share Now:

ಈಗಾಗಲೇ ನೋಂದಣಿಯನ್ನು ಮಾಡಿಕೊಂಡಿರುವ ಅರ್ಹ ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿಯನ್ನು ಖರೀದಿ(Raagi Kharidi Kendra) ಮಾಡಲು ರಾಜ್ಯ ಕೆಲವು ಜಿಲ್ಲೆಗಳಲ್ಲಿ 3 ತಿಂಗಳ ವರೆಗೆ ರೈತರಿಂದ ನೇರವಾಗಿ ರಾಗಿಯನ್ನು ಖರೀದಿ ಮಾಡಲು ಖರೀದಿ ಕೇಂದ್ರವನ್ನು ತೆರೆಯಲಾಗಿದೆ.

ಆಹಾರ ಉತ್ಪನ್ನಗಳಿಗೆ ಉತ್ತಮ ದರವನ್ನು ನೀಡಿ ರೈತರಿಗೆ ಈ ಬೆಳೆಗಳನ್ನು ಬೆಳೆಯಲು ಉತೇಜನವನ್ನು ನೀಡಲು ಪ್ರತಿ ವರ್ಷ ಬೆಂಬಲ ಬೆಲೆ ಯೋಜನೆಯ ಮೂಲಕ ವಿವಿಧ ಕೃಷಿ ಉತ್ಪನ್ನಗಳನ್ನು ಈಗಾಗಲೇ ಖರೀದಿ ಮಾಡಲು ಕೇಂದ್ರಗಳನ್ನು(Raagi Kharidi) ತೆರೆಯಲಾಗಿದ್ದು ಇದೆ ಮಾದರಿಯಲ್ಲಿ ರಾಗಿಯನ್ನು ಸಹ ಖರೀದಿ ಮಾಡಲು ಕೇಂದ್ರಗಳನ್ನು ತಾಲ್ಲೂಕು ಮಟ್ಟದಲ್ಲಿ ತೆರೆಯಲಾಗುತ್ತಿದೆ.

ಇದನ್ನೂ ಓದಿ: Annabhagya-ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಯಲ್ಲಿ ಬದಲಾವಣೆ!

ಪ್ರಸ್ತುತ ಯಾವೆಲ್ಲ ಸ್ಥಳಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ? ಬೆಂಬಲ ಬೆಲೆ(MSP Yojana) ಯೋಜನೆಯಡಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ಯಾವ ಕ್ರಮಗಳನ್ನು ಅನುಸರಿಸಬೇಕು? ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ನಿಗದಿಪಡಿಸಿರುವ ಮಾರ್ಗಸೂಚಿಗಳೇನು? ಇನ್ನಿತರೆ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

Raagi Kharidi Kendra-2025: ಮಾಗಡಿ ತಾಲೂಕಿನ ಸೋಲೂರಿನಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಎಚ್.ಸಿ.ಬಾಲಕೃಷ್ಣಚಾಲನೆ:

ಮಾಗಡಿ ತಾಲೂಕಿನ ಸೋಲೂರುನಲ್ಲಿ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ರಾಗಿಯನ್ನು ಖರೀದಿ ಮಾಡಲು ಶಾಸಕರಾದ ಎಚ್.ಸಿ.ಬಾಲಕೃಷ್ಣ ಅವರು ರಾಗಿ ಖರೀದಿ ಕೇಂದ್ರಕ್ಕೆ ಚಾಲನೆಯನ್ನು ನೀಡಿದರು.

ಈ ಕುರಿತು ಚಾಲನೆ ನೀಡಿದ ಬಳಿಕ ಮಾಹಿತಿ ಹಂಚಿಕೊಂಡಿರುವ ಅವರು ಈಗಾಗಲೇ ರಾಗಿ ಮಾರಾಟಕ್ಕೆ ನೊಂದಾಯಿಸಿಕೊಂಡಿರುವ ರೈತರಿಂದ ನೇರವಾಗಿ ರಾಗಿಯನ್ನು ಇಂದಿನಿಂದಲೇ ಖರೀದಿ ಮಾಡಲಾಗುವುದು ಎಂದರು. ಒಟ್ಟು 1.56 ಲಕ್ಷ ಕ್ವಿಂಟಾಲ್ ರಾಗಿ ಮಾರಾಟಕ್ಕೆ ರೈತರು ನೊಂದಾಯಿಸಿಕೊಂಡಿದ್ದಾರೆ ಇಲ್ಲಿನ ರಾಗಿ ಖರೀದಿ ಕೇಂದ್ರದಲ್ಲಿ 3 ತಿಂಗಳವರೆಗೆ ರಾಗಿಯನ್ನು ರೈತರಿಂದ ಖರೀದಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: BPL Ration Card- ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ನೂತನ ಕ್ರಮ!

Raagi Kharidi Kendra (3)

ರೈತರು ಯಾವುದೆ ಗೊಂದಲಕ್ಕೆ ಒಳಗಾಗುವುದು ಬೇಡ. ತಮ್ಮ ಸರದಿಯ ಸಮಯವನ್ನು ಪಡೆದುಕೊಂಡು ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬಹುದು. ಪ್ರತಿ ಕ್ವಿಂಟಾಲ್‌ಗೆ 4,290 ರೂ. ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Bembala Bele Yojane-ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಮಾರ್ಗಸೂಚಿಗಳು:

ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ರಾಗಿಯನ್ನು ಖರೀದಿ ಮಾಡವ ಪ್ರತಿ ಕ್ವಿಂಟಾಲ್ ರಾಗಿಗೆ ರೂ. ₹4290/- ದರವನ್ನು ನಿಗದಿಪಡಿಸಲಾಗಿದೆ.

ಪ್ರತಿ ಒಬ್ಬ ರೈತರಿಂದ ಒಂದು ಎಕರೆಗೆ ಕನಿಷ್ಠ 10 ಕ್ವಿಂಟಾಲ್ ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಖರೀದಿ ಮಾಡಲಾಗುತ್ತದೆ.

FAQ ಮಾನದಂಡಗಳಂತೆ ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Free Pump Repair Training-ಮೋಟರ್ ರಿವೈಂಡಿಂಗ್ ಮತ್ತು ಪಂಪ್ ಸೇಟ್ ರಿಪೇರಿ ತರಬೇತಿಗೆ ಅರ್ಜಿ!

Raagi MSP Price-ರಾಗಿಯನ್ನು ಮಾರಾಟ ಮಾಡಲು ಅನುಸರಿಸಬೇಕಾದ ಕ್ರಮಗಳು:

ರೈತರು ಬೆಂಬಲ ಬೆಲೆ ಯೋಜನೆಯಡಿ ರಾಗಿಯನ್ನು ಮಾರಾಟ ಮಾಡಲು ಮೊದಲು ಖರೀದಿ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ವಿವರವನ್ನು ಒದಗಿಸಿ ನೋಂದಣಿಯನ್ನು ಮಾಡಿಕೊಳ್ಳಬೇಕು. ಬಳಿಕ ನಿಗದಿಪಡಿಸಿದ ದಿನಾಂಕದಂದು ರಾಗಿಯನ್ನು ತೆಗೆದುಕೊಂಡು ಹೋಗಿ ರಾಗಿಯನ್ನು ಮಾರಾಟ ಮಾಡಬೇಕು.

MSP DBT Amount-ನೇರ ನಗದು ವರ್ಗಾವಣೆ ಮೂಲಕ ಹಣ ವರ್ಗಾವಣೆ:

ರೈತರು ಖರೀದಿ ಕೇಂದ್ರವನ್ನು ಭೇಟಿ ಮಾಡಿ ರಾಗಿಯನ್ನು ಮಾರಾಟ ಮಾಡಿದ ಬಳಿಕ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಹಣಕ್ಕಾಗಿ ಯಾವುದೆ ಸರಕಾರಿ ಕಚೇರಿಯನ್ನು ಅಲೆದಾಡು ಅವಶ್ಯಕತೆಯಿರುವುದಿಲ್ಲ.

APMC Helpline-ಇನ್ನು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ- 1800 425 1552

ಇದನ್ನೂ ಓದಿ: Business loan-ಸ್ವಂತ ಉದ್ದಿಮೆಯನ್ನು ಮಾಡಲು 15 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: