ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಆಹಾರ ಇಲಾಖೆಯಿಂದ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಅನರ್ಹ ಬಿಪಿಎಲ್ ಕಾರ್ಡದಾರರನ್ನು(BPL Card) ಗುರುತಿಸಿ ಇಂತಹ ಕಾರ್ಡಗಳನ್ನು ರದ್ದುಪಡಿಸಲು ನೂತನ ಕ್ರಮವನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ.
ನಿನ್ನೆ ಈ ಕುರಿತು ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಅವರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ ಆಹಾರ ಇಲಾಖೆ ಸಚಿವರು ಅನರ್ಹ ಬಿಪಿಎಲ್ ಕಾರ್ಡಗಳನ್ನು(Ineligible BPL Crad List) ನಿಖರವಾಗಿ ಗುರುತಿಸಿ ಅರ್ಹ ಫಲಾನುಭವಿಗಳಿಗೆ ಮಾತ್ರ ಸರಕಾರದ ಸೌಲಭ್ಯವನ್ನು ವಿತರಣೆ ಮಾಡಲು ಕ್ರಮವಹಿಸಲು ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿ(VA), ಪಿಡಿಒ(PDO), ಕಂದಾಯ ನಿರೀಕ್ಷಕರ(RI) ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿ ಅನರ್ಹ ಕಾರ್ಡಗಳನ್ನು ರದ್ದುಪಡಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ: Business loan-ಸ್ವಂತ ಉದ್ದಿಮೆಯನ್ನು ಮಾಡಲು 15 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
ಆಹಾರ ಇಲಾಖೆ(Food Department) ಸಹಯೋಗದಲ್ಲಿ ಗ್ರಾಮ ಮಟ್ಟದ ಸಮಿತಿಯ ಜೊತೆಗೂಡಿ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರನ್ನು ಪತ್ತೆಹಚ್ಚಿ ಬಿಪಿಲ್ ಕಾರ್ಡದಾರರ ಪಟ್ಟಿಯಿಂದ ಈ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದು ಹಾಕಲು ಈ ಸಮಿತಿ ನೆರವಾಗಲಿದೆ ಎಂದು ಸದನದಲ್ಲಿ ಸಚಿವರು ತಿಳಿಸಿದರು.
Karnataka Food Department-ಎಲ್ಲರ ಸಹಕಾರ ಅಗತ್ಯ: ಸಚಿವ ಕೆ.ಹೆಚ್. ಮುನಿಯಪ್ಪ
ಆಹಾರ ಇಲಾಖೆಯ ಅಧಿಕಾರಿಗಳು ಈ ಹಿಂದೆ ರಾಜ್ಯದ್ಯಂತ ಅನರ್ಹ ಬಿಪಿಎಲ್ ಕಾರ್ಡದಾರರನ್ನು ಪತ್ತೆ ಮಾಡಿ ಕಾರ್ಡಗಳನ್ನು ರದ್ದುಗೊಳಿಸಲು ಮುಂದಾದಗ ದೊಡ್ಡ ಮಟ್ಟದ ಗೊಂದಲ ಉಂಟಾಗಿತ್ತು ಅರ್ಹರಿಗೆ ಸರಕಾರದ ಸವಲತ್ತನ್ನು ಒದಗಿಸಿ ಅನರ್ಹರಿಗೆ ಸೌಲಭ್ಯವನ್ನು ಪಡೆಯುವುದುದನ್ನು ತಪ್ಪಿಸುವುದು ಸರಕಾರದ ಮುಖ್ಯ ಉದ್ದೇಶವಾಗಿರುತ್ತದೆ ಅದ್ದರಿಂದ ಸದನದ ಎಲ್ಲಾ ಸದಸ್ಯರು ಸಹ ಅನರ್ಹ ಬಿಪಿಎಲ್ ಕಾರ್ಡದಾರರನ್ನು ಪತ್ತೆ ಹಚ್ಚಿ ರದ್ದುಗೊಳಿಸುವ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.
Invalied BPL Cards-20 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ ಪತ್ತೆ:
ಆಹಾರ ಇಲಾಖೆಯ ಪ್ರಸ್ತುತ ಅಂಕಿ-ಅಂಶದ ಮಾಹಿತಿ ಮತ್ತು ಬಿಪಿಎಲ್ ಕಾರ್ಡ ಪಡೆಯಲು ಜಾರಿಯಲ್ಲಿರುವ ಮಾನದಂಡದ ಪ್ರಕಾರ ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡಗಳು ಚಾಲ್ತಿಯಲ್ಲಿವೆ ಎಂದು ಆಹಾರ ಇಲಾಖೆ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಸದನದಲ್ಲಿ ತಿಳಿಸಿದರು.
ಇದನ್ನೂ ಓದಿ: Loan Application- ಬ್ಯಾಂಕ್ ನಿಂದ ಸಾಲ ಪಡೆಯುವುದು ಈಗ ಭಾರೀ ಸುಲಭ!
BPL Card Status-ಬಿಪಿಎಲ್ ಕಾರ್ಡಅಂಕಿ ಅಂಶ(ಸೆಪ್ಟಂಬರ್-2024 ರವರೆಗೆ):
ಕೇಂದ್ರ ಸರಕಾರದನ್ವಯ ಒಟ್ಟು ಇರಬೇಕಾದ ಬಿಪಿಎಲ್ ಕಾರ್ಡಗಳು- 1.03 ಕೋಟಿ
ಪ್ರಸ್ತುತ ರಾಜ್ಯದಲ್ಲಿ ವಿತರಣೆಯಾಗಿರುವ ಬಿಪಿಎಲ್ ಕಾರ್ಡಗಳು- 1.16 ಕೋಟಿ
ಒಟ್ಟು ಸದಸ್ಯರು- 3,58,87,666

ಇದನ್ನೂ ಓದಿ: Krishi Pumpset-ಕೃಷಿ ಪಂಪ್ ಸೆಟ್ ಗೆ 7 ತಾಸು ವಿದ್ಯುತ್ ಪೂರೈಕೆ ಮಹತ್ವದ ಪ್ರಕಟಣೆ!
BPL Card Cancellation Guidelines-ಬಿಪಿಎಲ್ ಕಾರ್ಡ ಪಡೆಯಲು ಇಲಾಖೆಯು ನಿಗದಿಪಡಿಸಿರುವ ಮಾರ್ಗಸೂಚಿ:
ಪಡಿತರ ಚೀಟಿಯ ದುರುಪಯೋಗವನ್ನು ತಡೆಗಟ್ಟಲು ರಾಜ್ಯ ಸರ್ಕಾರವು ರೂಪಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಪಡೆದುಕೊಂಡವರನ್ನು ಪತ್ತೆ ಹಚ್ಚುವ ಕೆಲಸವನ್ನು ನಿರಂತರವಾಗಿ ಇಲಾಖೆಯಿಂದ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಲಾಖೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಜೊತೆ ಮಾಹಿತಿ ವಿನಿಮಯ ಮಾಡಿಕೊಂಡು ಆದಾಯ ತೆರಿಗೆ ಪಾವತಿದಾರರು, ಜಿ.ಎಸ್.ಟಿ ಮತ್ತು ವೃತ್ತಿತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರು,
ಹಾಗೂ ರೂ. 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರು ಹಾಗೂ 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವವರ ಮಾಹಿತಿಯನ್ನು ಪಡೆದು ಈ ಕುಟುಂಬಗಳು ಹೊಂದಿರುವ ಪಡಿತರ ಚೀಟಿಗಳ ಜೊತೆ ತಾಳೆ ಮಾಡಿ ಅಂತಹವರು ಹೊಂದಿದ್ದ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿಗಳನ್ನು/ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡಿ ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲಾಗುತ್ತದೆ.
ಇದನ್ನೂ ಓದಿ: Agriculture Loan- ರೈತರಿಗೆ ಸಿಹಿ ಸುದ್ದಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ ಸರಕಾರ!
BPL Card Cancellation-ರೇಶನ್ ಕಾರ್ಡ ಸಂಪೂರ್ಣ ರದ್ದಾಗುವುದಿಲ್ಲ:
ಬಿಪಿಎಲ್ ಕಾರ್ಡ ಪಡೆಯಲು ಅನರ್ಹ ಇರುವವರನ್ನು ಗುರುತಿಸಿ ಆ ಕಾರ್ಡ ಅನ್ನು ರದ್ದುಪಡಿಸಿ ಎಪಿಎಲ್ ಕಾರ್ಡ ವಿತರಣೆ ಮಾಡಲಾಗುತ್ತದೆ ವಿನಃ ಸಂಪೂರ್ಣ ರೇಶನ್ ಕಾರ್ಡ ಅನ್ನು ರದ್ದುಪಡಿಸಲಾಗುವುದಿಲ್ಲ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
Ration card e-KYC-ಇ-ಕೆವೈಸಿ ಮಾಡಿಕೊಳ್ಳಲು ಸೂಚನೆ:
ಬಿಪಿಎಲ್ ಕಾರ್ಡ ಅನ್ನು ಹೊಂದಿರುವವರು ತಪ್ಪದೇ ಕೂಡಲೇ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯನ್ನು ನೇರವಾಗಿ ಅಗತ್ಯ ದಾಖಲೆ ಮತ್ತು ಖುದ್ದು ಪಡಿತರ ಚೀಟಿಯಲ್ಲಿರುವ ಸದಸ್ಯರು ನೇರವಾಗಿ ಭೇಟಿ ಮಾಡಿ ಇ-ಕೆವೈಸಿಯನ್ನು ಮಾಡಿಕೊಳ್ಳಬೇಕು ಎಂದು ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಇಲ್ಲವಾದ್ದಲ್ಲಿ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಸಮಯದಲ್ಲಿ ಪರಿಶೀಲನೆ ವೇಳೆಯಲ್ಲಿ ನಿಮ್ಮ ಪಡಿತರ ಕಾರ್ಡ ಕುರಿತು ನಿಖರ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
Ration Card Details Check-ರೇಶನ್ ಕಾರ್ಡನ ಎಲ್ಲಾ ಮಾಹಿತಿ ಇಲ್ಲಿ ಲಭ್ಯ:
ಈ Ration Card Details Check ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯದ ಆಹಾರ ಇಲಾಖೆಯ ಅಧಿಕೃತ ತಂತ್ರಾಂಶವನ್ನು ನೇರವಾಗಿ ನಿಮ್ಮ ಮೊಬೈಲ್ ನಲ್ಲೇ ಭೇಟಿ ಮಾಡಿ ನಿಮ್ಮ ಪಡಿತರ ಚೀಟಿಯ ಸ್ಥಿತಿ, ಇ-ಕೆವೈಸಿ ಸ್ಥಿತಿ, ರದ್ದಾದ ಪಡಿತರ ಚೀಟಿ ಪಟ್ಟಿ, ಅನ್ನಭಾಗ್ಯ DBT ಹಣ ಪಾವತಿ ವಿವರ, ಪಡಿತರ ಚೀಟಿ ತಿದ್ದುಪಡಿ ಅರ್ಜಿ ಸ್ಥಿತಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಬಹುದು.