ಸಾರ್ವಜನಿಕರು ಕೃಷಿ ಪೂರಕ ಸ್ವಂತ ಉದ್ಯೋಗವನ್ನು ಆರಂಭಿಸಲು ಮತ್ತು ವ್ಯಾಪಾರ, ಶಿಕ್ಷಣಕ್ಕೆ ಕೇಂದ್ರ ಸರಕಾರದ 15 ಯೋಜನೆಯಡಿ ಸಹಾಯಧನದಲ್ಲಿ ಬ್ಯಾಂಕ್ ಮೂಲಕ ಸಾಲವನ್ನು(Bank Loan Application) ಪಡೆಯಲು ಅರ್ಹ ಅರ್ಜಿದಾರರು ತಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಜನ್ ಸಮರ್ಥ ಪೋರ್ಟಲ್ ಅನ್ನು ಬಿಡುಗಡೆಗೊಳಿಸಲಾಗಿದೆ.
ಜನ್ ಸಮರ್ಥ ಪೋರ್ಟಲ್(Jan Samarth Portal) ಮೂಲಕ ಸಾರ್ವಜನಿಕರು 7 ವಿಭಾಗದ ಒಟ್ಟು 15 ಯೋಜನೆಯಡಿ ಸಹಾಯಧನದಲ್ಲಿ ಸಾಲವನ್ನು ಪಡೆಯಲು ಅಗತ್ಯ ದಾಖಲಾತಿಗಳ ಸಮೇತ ತಮ್ಮ ಮೊಬೈಲ್ ನಲ್ಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಕಚೇರಿಯನ್ನು ಪದೇ ಪದೇ ಅಲೆದಾಡುವ ಸಮಸ್ಯೆಯೇ ಇರುವುದಿಲ್ಲ.
ಏನಿದು ಜನ್ ಸಮರ್ಥ ಪೋರ್ಟಲ್? ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಸಾರ್ವಜನಿಕರುತ್ ಜನ್ ಸಮರ್ಥ ಪೋರ್ಟಲ್ ಮೂಲಕ ಯಾವೆಲ್ಲ ಯೋಜನೆಯಡಿ ಸಹಾಯಧನದಲ್ಲಿ ಬ್ಯಾಂಕ್ ಮೂಲಕ ಸಾಲವನ್ನು(Jan Samarth Website Loan Application) ಪಡೆಯಬಹುದು? ಜನ್ ಸಮರ್ಥ ಪೋರ್ಟಲ್ ನಲ್ಲಿ ಅರ್ಜಿದಾರರು ಸಲ್ಲಿಸಿರುವ ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ? ಇದರ ಪ್ರಯೋಜನವನ್ನು ಪಡೆದುಕೊಳ್ಳುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Anganwadi Jobs-ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಸೇರಿ 491 ಹುದ್ದೆಗಳಿಗೆ ಅರ್ಜಿ ಆಹ್ವಾನ!
Central Government Subsidy Loan Schemes-ಯಾವೆಲ್ಲ ಯೋಜನೆಯಡಿ ಸಾಲ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು?
1) ಕಿಸಾನ್ ಕ್ರೆಡಿಟ್ ಕಾರ್ಡ(KCC)
2) ಕೃಷಿ ಚಿಕಿತ್ಸಾಲಯಗಳು ಮತ್ತು ಕೃಷಿ ವ್ಯಾಪಾರ ಕೇಂದ್ರಗಳ ಯೋಜನೆ(ACABC)
3) ಕೃಷಿ ಮಾರುಕಟ್ಟೆ ಮೂಲಸೌಕರ್ಯ(AMI)
4) ಕೃಷಿ ಮೂಲ ಸೌಕರ್ಯ ನಿಧಿ(AIF)
5) ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ(PMEGP)
6) ನೇಕಾರ ಮುದ್ರಾ ಯೋಜನೆ(WMS)
7) ಪ್ರಧಾನ ಮಂತ್ರಿ ಮುದ್ರಾ ಯೋಜನೆ(PMMY)
8) ಪ್ರಧಾನ ಮಂತ್ರಿ ಬೀದಿ ವ್ಯಾಪಾರಿ ಅತ್ಮನಿರ್ಭರ್ ನಿಧಿ ಯೋಜನೆ(PM-SVANidhi)
9) ಮ್ಯಾನುಯಲ್ ಸ್ಕ್ಯಾವೆಂಜರ್ ಗಳ ಪುನರ್ವಸತಿಗಾಗಿ ಸ್ವಯಂ ಉದ್ಯೋಗ ಯೋಜನೆ(SRMS)
10) ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ(StandUpIndia)
11) ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(DAY-NRLM)
ಇದನ್ನೂ ಓದಿ: Agriculture Loan- ರೈತರಿಗೆ ಸಿಹಿ ಸುದ್ದಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ ಸರಕಾರ!

Documents For Bank Loan-ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:
- ಅರ್ಜಿದಾರರ ಆಧಾರ್ ಕಾರ್ಡ
- ಪಾನ್ ಕಾರ್ಡ
- ಪೋಟೋ
- ಕಳೆದ 3-6 ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್
- ವಿದ್ಯಾರ್ಹತೆ ಪ್ರಮಾಣ ಪತ್ರ
- ಗುರುತಿನ ಚೀಟಿ
- ಆದಾಯ ತೆರಿಗೆ ಪಾವತಿ ವಿವರ(ಲಭವಿದ್ದಲ್ಲಿ ಮಾತ್ರ)
- ಮೊಬೈಲ್ ನಂಬರ್
Loan Application On Mobile-ಬ್ಯಾಂಕ್ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ:
ಸಾರ್ವಜನಿಕರು ಕೇಂದ್ರ ಸರಕಾರದ ಸಹಾಯಧನ ಆಧಾರಿತ ಯೋಜನೆಯಡಿ ಸಾಲವನ್ನು ಪಡೆಯಲು ಯಾವುದೇ ಬ್ಯಾಂಕ್ ಕಚೇರಿಯನ್ನು ಭೇಟಿ ಮಾಡದೇ ತಮ್ಮ ಮನೆಯಲ್ಲೇ ಕುಳಿತುಕೊಂಡು ಮೊಬೈಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಡಿಜಿಟಲ್ ಪರಿಶೀಲನೆ ಕೈಗೊಂಡು ಸಾಲವನ್ನು ಪಡೆಯಲು ಅವಕಾಶವಿರುತ್ತದೆ.
ಇದನ್ನೂ ಓದಿ: Krishi Pumpset-ಕೃಷಿ ಪಂಪ್ ಸೆಟ್ ಗೆ 7 ತಾಸು ವಿದ್ಯುತ್ ಪೂರೈಕೆ ಮಹತ್ವದ ಪ್ರಕಟಣೆ!
Online Loan Application-ಸಾಲಕ್ಕಾಗಿ ನಿಮ್ಮ ಮೊಬೈಲ ನಲ್ಲೇ ಅರ್ಜಿ ಸಲ್ಲಿಸಬಹುದು?
ಸ್ವಂತ ಉದ್ಯೋಗವನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವರು ಅಭ್ಯರ್ಥಿಗಳು ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಜನ್ ಸಮರ್ಥ ಪೋರ್ಟಲ್ ಅನ್ನು ಪ್ರವೇಶ ಮಾಡಿ ತಮ್ಮ ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು.
Step-1: ಪ್ರಥಮದಲ್ಲಿ Online Loan Application ಇಲ್ಲಿ ಕ್ಲಿಕ್ ಮಾಡಿ ಜನ್ ಸಮರ್ಥ ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.
Step-2: ಬಳಿಕ ಮುಖಪುಟದಲ್ಲಿ ಕಾಣುವ “ಲಾಗಿನ್/Login” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಅನ್ನು ನಮೂದಿಸಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.
ಇದನ್ನೂ ಓದಿ: Adike Bele Parihara-ರೈತರಿಗೆ ₹104 ಕೋಟಿ ಬೆಳೆ ನಷ್ಟ ಪರಿಹಾರ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ಗಮನಿಸಿ: ಮೊದಲ ಬಾರಿಗೆ ಈ ವೆಬ್ಸೈಟ್ ಅನ್ನು ಪ್ರವೇಶ ಮಾಡುತ್ತಿರುವವರು “ನೋಂದಾಯಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬೇಕು.
Step-3: ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಯಾವ ಬ್ಯಾಂಕ್ ನಿಂದ ಸಾಲವನ್ನು ಪಡೆಯಲು ಬಯಸುತ್ತೀರೋ ಆ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಂಡು ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
Loan Sanction Method-ಸಾಲವನ್ನು ಹೇಗೆ ಮಂಜೂರು ಮಾಡಲಾಗುತ್ತದೆ?
ಒಮ್ಮೆ ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಜನ್ ಸಮರ್ಥ ಪೋರ್ಟಲ್ ಅನ್ನು ಪ್ರವೇಶ ಮಾಡಿ ಲೋನ್ ಪಡೆಯಲು ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸಿದ ಬಳಿಕ ತಾವು ಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಆಯ್ಕೆ ಮಾಡಿದ ಬ್ಯಾಂಕ್ ಗೆ ಈ ಅರ್ಜಿ ಆನ್ಲೈನ್ ಮೂಲಕ ಹೋಗುತ್ತದೆ ಬಳಿಕ ಬ್ಯಾಂಕ್ ಅಧಿಕಾರಿಗಳು ನಿಮಗೆ ಕರೆ ಮಾಡಿ ಬ್ಯಾಂಕ್ ಶಾಖೆಯನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಲು ತಿಳಿಸುತ್ತಾರೆ.
ಅರ್ಜಿದಾರರ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಅರ್ಹತೆ ಅನುಸಾರ ಬ್ಯಾಂಕ್ ನಿಂದ ಒಂದು ಅಥವಾ ಎರಡು ವಾರದ ಒಳಗಾಗಿ ಸಾಲವನ್ನು ಮಂಜೂರು ಮಾಡಲಾಗುತ್ತದೆ.