HomeAgricultureRaagi Msp price-ರೈತರಿಗೆ ಸಿಹಿ ಸುದ್ದಿ ಕ್ವಿಂಟಲ್‌ಗೆ ₹4,290 ರೂ ರಂತೆ ರಾಗಿ ಖರೀದಿ!

Raagi Msp price-ರೈತರಿಗೆ ಸಿಹಿ ಸುದ್ದಿ ಕ್ವಿಂಟಲ್‌ಗೆ ₹4,290 ರೂ ರಂತೆ ರಾಗಿ ಖರೀದಿ!

ಬೆಂಬಲ ಬೆಲೆ ಯೋಜನೆಯಡಿ ಪ್ರತಿ ವರ್ಷ ರಾಗಿ ಖರೀದಿಸುವಂತೆ ಈ ವರ್ಷವು ಬೆಂಬಲ ಬೆಲೆ ಯೋಜನೆಯಡಿ ಅರ್ಹ ರೈತರಿಂದ ರಾಗಿಯನ್ನು ಖರೀದಿ(Raagi Msp price) ಮಾಡಲು ಖರೀದಿ ಕೇಂದ್ರಗಳನ್ನು ತೆರೆಯಲು ಸಿದ್ದತೆಯನ್ನು ನಡೆಸಿದ್ದು ರಾಗಿ ಬೆಳೆದಿರುವ ರೈತರು ತಮ್ಮ ಉತ್ಪನ್ನವನ್ನು ಉತ್ತಮ ಬೆಲೆಯಲ್ಲಿ ಮಾರಾಟ ಮಾಡಬಹುದಾಗಿದೆ.

ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್ ಗೆ ರೂ ₹4,290 ರಂತೆ ರಾಗಿಯನ್ನು ಖರೀದಿ ಮಾಡಲು ಸಿದ್ದತೆಯನ್ನು ನಡೆಸಿದ್ದು ಈ ಯೋಜನೆಯಡಿ ರಾಗಿಯನ್ನು ಮಾರಾಟ ಮಾಡಲು ರೈತರು ಯಾವ ಕ್ರಮವನ್ನು ಅನುಸರಿಸಬೇಕು? ತಾವು ಬೆಳೆದಿರುವ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಹೇಗೆ ಮಾರಾಟ ಮಾಡುವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Supreme Court Order- ಸುಪ್ರೀಂಕೋರ್ಟ್ ನಿಂದ ಕೃಷಿ ಭೂಮಿ ಮಾರಾಟದ ಬಗ್ಗೆ ಮಹತ್ವದ ತೀರ್ಪು ಪ್ರಕಟ!

ಪ್ರಸ್ತುತ ತುಮಕೂರು ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ರಾಗಿಯನ್ನು ರೈತರಿಂದ ನೇರವಾಗಿ ಖರೀದಿ ಮಾಡಲು ಜಿಲ್ಲೆಯ ವಿವಿಧ ಭಾಗಗಳಲ್ಲಿ 10 ಖರೀದಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತದಿಂದ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದು, ಕುಣಿಗಲ್ ತಾಲ್ಲೂಕಿನಲ್ಲಿ 2 ಕೇಂದ್ರಗಳನ್ನು, ತುಮಕೂರು, ಶಿರಾ, ಮಧುಗಿರಿ, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಗುಬ್ಬಿ ತಾಲ್ಲೂಕು ಹಾಗೂ ಹುಳಿಯಾರಿದಲ್ಲಿ ತಲಾ ಒಂದೊಂದು ಕೇಂದ್ರ ಸೇರಿ ಒಟ್ಟು 10 ರಾಗಿ ಖರೀದಿ ಕೇಂದ್ರ ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Raagi Msp Price Details-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ನಿಗದಿಪಡಿಸಿದ ಪ್ರಮುಖ ದಿನಾಂಕಗಳು:

ರಾಗಿಯನ್ನು ರೈತರು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು 01 ಡಿಸೆಂಬರ್ 2024 ರಿಂದ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ನೊಂದಣಿ ಮಾಡಿಕೊಂಡ ರೈತರಿಂದ 01 ಜನವರಿ 2025 ರಿಂದ 31 ಮಾರ್ಚ್ 2024ರ ವರೆಗೆ ರಾಗಿಯನ್ನು ಖರೀದಿ ಮಾಡಲಾಗುತ್ತದೆ.

ಇದನ್ನೂ ಓದಿ: PAN Card News: ನಿಮ್ಮ ಬಳಿ ಪಾನ್ ಕಾರ್ಡ್ ಇದ್ಯಾ? ಆಗಿದ್ದರೆ ತಪ್ಪದೆ ಈ ಮಾಹಿತಿ ತಿಳಿಯಿರಿ!

ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಈ ದಾಖಲೆಗಳು ಇರುವುದು ಕಡ್ಡಾಯ:

ರೈತರು ತಾವು ಬೆಳೆದ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಕೃಷಿ ಇಲಾಕೆಯ ಪ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಜಮೀನಿನ ಮಾಹಿತಿಯನ್ನು ನಮೂದಿಸಿ ಪ್ರೂಟ್ಸ್ ಐಡಿಯನ್ನು
ಹೊಂದಿರುವುದು ಕಡ್ಡಾಯವಾಗಿದೆ.

ಹೀಗಿದ್ದಲ್ಲಿ ಮಾತ್ರ ಬೆಂಬಲ ಬೆಲೆಯಲ್ಲಿ ರೈತರು ತಾವು ಬೆಳೆದಿರುವ ರಾಗಿ ಉತ್ಪನ್ನವನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಏನಿದು ಪ್ರೂಟ್ಸ್ ಐಡಿ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ.

raagi

ಇದನ್ನೂ ಓದಿ: Janana pramana patra-2024: ಜನನ ಪ್ರಮಾಣ ಪತ್ರ ಪಡೆಯುವುದು ಬಾರೀ ಸುಲಭ! ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!

Fruits Id-ಪ್ರೂಟ್ಸ್ ಐಡಿ ಪಡೆಯುವುದು ಹೇಗೆ?

ರೈತರು ತಮ್ಮ ಜಮೀನಿನ ಪಹಣಿ/ಊತಾರ್/RTC ಮತ್ತು ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಿ ಪ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಅಗತ್ಯ ವಿವರವನ್ನು ಭರ್ತಿ ಮಾಡಿ ಪ್ರೂಟ್ಸ್ ಐಡಿಯನ್ನು ಪಡೆಯಬಹುದು.

Raagi Kharidi kendra-ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡುವುದು ಹೇಗೆ?

ರಾಜ್ಯ ಸರಕಾರದಿಂದ ರಾಗಿ ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ತೆರೆದ ನಂತರ ರೈತರು ತಮ್ಮ ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್, ಜಮೀನ ಪಹಣಿಯನ್ನು ತೆಗೆದುಕೊಂಡು ಖರೀದಿ ಕೇಂದ್ರವನ್ನು ಭೇಟಿ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬೇಕು ಈ ಸಮಯದಲ್ಲಿ ನೀವು ಯಾವ ದಿನ ರಾಗಿಯನ್ನು ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಬರಬೇಕು ಎಂದು ತಿಳಿಸಲಾಗುತ್ತದೆ ಆ ದಿನ ರಾಗಿಯನ್ನು ತೆಗೆದುಕೊಂಡು ಹೋಗಿ ರಾಗಿಯನ್ನು ಮಾರಾಟ ಮಾಡಬೇಕು.

ಇದನ್ನೂ ಓದಿ: PMMVY Yojana- ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ ರೂ 11,000 ಸಾವಿರ ಅರ್ಥಿಕ ನೆರವು!

ಒಮ್ಮೆ ರಾಗಿಯನ್ನು ಮಾರಾಟ ಮಾಡಿದ ಬಳಿಕ 15 ರಿಂದ 20 ದಿನದ ನಂತರ ರೈತರ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ರಾಗಿ ಮಾರಾಟದ ಹಣ ಜಮಾ ಅಗುತ್ತದೆ.

Most Popular

Latest Articles

Related Articles