HomeAgricultureSupreme Court Order- ಸುಪ್ರೀಂಕೋರ್ಟ್ ನಿಂದ ಕೃಷಿ ಭೂಮಿ ಮಾರಾಟದ ಬಗ್ಗೆ ಮಹತ್ವದ ತೀರ್ಪು ಪ್ರಕಟ!

Supreme Court Order- ಸುಪ್ರೀಂಕೋರ್ಟ್ ನಿಂದ ಕೃಷಿ ಭೂಮಿ ಮಾರಾಟದ ಬಗ್ಗೆ ಮಹತ್ವದ ತೀರ್ಪು ಪ್ರಕಟ!

ತಮ್ಮ ಪೂರ್ವಜರಿಂದ ಬಂದಿರುವ ಕೃಷಿ ಭೂಮಿಯನ್ನು ಮತ್ತೊಬ್ಬರಿಗೆ ಮಾರಾಟ(Agriculture land for sale) ಮಾಡುವುದರ ಕುರಿತು ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು ಹೊರಬಿದ್ದಿದೆ. ಕೃಷಿ ಭೂಮಿಯನ್ನು ಮಾರಾಟ ಮಾಡುವಾಗ ಯಾವೆಲ್ಲ ಅಂಶಗಳನ್ನು ಅನುಸರಿಸಬೇಕು ಎನ್ನುವ ಪ್ರಮುಖ ಉಪಯುಕ್ತ ಸಾರ್ವಜನಿಕ ಸ್ನೇಹಿ ಆದೇಶವನ್ನು ಹೊರಡಿಸಲಾಗಿದೆ.

ಹಿಂದೂ ವಾರಸುದಾರರು ತಮ್ಮ ಕುಟುಂಬದ ಪೂರ್ವಜನರ ಹೆಸರಿನಲ್ಲಿರುವ ಕೃಷಿ ಭೂಮಿಯನ್ನೆನಾದರು ಮಾರಾಟ ಮಾಡಬೇಕು ಎನ್ನುವ ಇಚ್ಚೆ ಹೊಂದಿದ್ದರೆ ಪ್ರಥಮ ಆದ್ಯತೆಯನ್ನು ತಮ್ಮ ಕುಟುಂಬದ ಇತರೆ ಸದಸ್ಯರಿಗೆ ಮೊದಲ ಮನ್ನಣೆಯನ್ನು ನೀಡಬೇಕು ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಇದನ್ನೂ ಓದಿ: PAN Card News: ನಿಮ್ಮ ಬಳಿ ಪಾನ್ ಕಾರ್ಡ್ ಇದ್ಯಾ? ಆಗಿದ್ದರೆ ತಪ್ಪದೆ ಈ ಮಾಹಿತಿ ತಿಳಿಯಿರಿ!

ತಮ್ಮ ಪೂರ್ವಜರ ಆಸ್ತಿಯನ್ನು ಹೊರಗಿನ ವ್ಯಕ್ತಿಗೆ ನೇರವಾಗಿ ಮಾರಾಟ ಮಾಡುವಂತಿಲ್ಲ ಎಂದು ಹಿಮಾಚಲ ಪ್ರದೇಶ ರಾಜ್ಯದ ಪ್ರಕರಣ ಒಂದರಲ್ಲಿ ಸುಪ್ರೀಂಕೋರ್ಟನ(Supreme Court Order) ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಲಲಿತ್ ಮತ್ತು ಎಂಆರ್ ಶಾ ರವರು ಈ ತೀರ್ಪನ್ನು ನೀಡಿದ್ದಾರೆ.

Supreme Court

ಇದನ್ನೂ ಓದಿ: Janana pramana patra-2024: ಜನನ ಪ್ರಮಾಣ ಪತ್ರ ಪಡೆಯುವುದು ಬಾರೀ ಸುಲಭ! ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!

Agriculture land- ಕೃಷಿ ಭೂಮಿ ಮಾರಾಟ ಸಮಯದಲ್ಲಿ ಈ ವ್ಯಕ್ತಿಗಳಿಗೆ ಮೊದಲ ಆದ್ಯತೆ ನೀಡಬೇಕು:

ಕೃಷಿ ಭೂಮಿಯ ಮಾರಾಟಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಕೃಷಿ ಭೂಮಿ ಸೆಕ್ಷನ್ 22 ರ ನಿಬಂಧನೆಗಳ ಅಡಿಯಲ್ಲಿ ಬರುತ್ತದೆ, ಇಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು. ಸೆಕ್ಷನ್ 22 ಒಬ್ಬ ವ್ಯಕ್ತಿಯು ಮರಣಹೊಂದಿದಾಗ, ಆ ವ್ಯಕ್ಯಿಯ ಹೆಸರಿನಲ್ಲಿರುವ ಆಸ್ತಿಯು ಅವನ ವಾರಸುದಾರರಿಗೆ ಹಂಚಿಕೆಯಾಗುತ್ತದೆ. ವಾರಸುದಾರನು ತನ್ನ ಪಾಲನ್ನು ಮಾರಾಟ ಮಾಡುವ ಇಚ್ಚೆ ಹೊಂದಿದ್ದರೆ, ಅವನು ತನ್ನ ಉಳಿದ ವಾರಸುದಾರರಿಗೆ ಮೊದಲ ಆದ್ಯತೆಯನ್ನು ನೀಡಬೇಕಾಗುತ್ತದೆ.

ಕೃಷಿ ಭೂಮಿಗೆ ಸೆಕ್ಷನ್ 22 ರ ನಿಬಂಧನೆಗಳು ಅನ್ವಯವಾಗುತ್ತವೆ ಮತ್ತು ಷೇರು ಮಾರಾಟದಲ್ಲಿ ವ್ಯಕ್ತಿಯು ತನ್ನ ಕುಟುಂಬ ಸದಸ್ಯರಿಗೆ ಆದ್ಯತೆ ನೀಡಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ಸೆಕ್ಷನ್ 4(2) ರ ರದ್ದತಿಯು ಈ ನಿಯಮದ ಮೇಲೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಇದು ಅಧಿಕಾರಾವಧಿಯ ಹಕ್ಕುಗಳಿಗೆ ಸಂಬಂಧಿಸಿದೆ ಎಂದು ನ್ಯಾಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: PMMVY Yojana- ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ ರೂ 11,000 ಸಾವಿರ ಅರ್ಥಿಕ ನೆರವು!

ಕುಟುಂಬದ ಆಸ್ತಿ ಕುಟುಂಬದೊಳಗೆ ಉಳಿಯುತ್ತದೆ ಮತ್ತು ಹೊರಗಿನವರು ಅದರಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಈ ನಿಬಂಧನೆಯ ಮುಖ್ಯ ಉದ್ದೇಶವಾಗಿದೆ ಎಂದು ಪೀಠವು ತಿಳಿಸಿದೆ.

agriculture land

ಇದನ್ನೂ ಓದಿ: MGNREGA-2024: ನರೇಗಾ ಯೋಜನೆಯಡಿ 5.0 ಲಕ್ಷದ ವರೆಗೆ ವೈಯಕ್ತಿಕ ಕಾಮಗಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ!

Agriculture land Supreme Court Case-ಕೃಷಿ ಭೂಮಿ ಮಾರಾಟ ಪ್ರಕರಣದ ಹಿನ್ನೆಲೆ ವಿವರ ಹೀಗಿದೆ:

ಹಿಮಾಚಲ ಪ್ರದೇಶ ರಾಜ್ಯದ ಲಜಪತ್ ಎನ್ನುವ ವ್ಯಕ್ತಿಯು ಮರಣ ಹೊಂದಿದ್ದ ಬಳಿಕ ಇವರ ಕೃಷಿ ಭೂಮಿಯನ್ನು ನಾಥು ಮತ್ತು ಸಂತೋಷ್ ಎಂಬ ಇಬ್ಬರು ಪುತ್ರರ ನಡುವೆ ಹಂಚಿಕೆ ಮಾಡಲಾಗಿರುತ್ತದೆ. ಸಂತೋಷ್ ತನ್ನ ಪಾಲನ್ನು ಹೊರಗಿನವರಿಗೆ ಮಾರಿದ. ನಾಥು ಅವರು ಹಿಂದೂ ಉತ್ತರಾಧಿಕಾರ ಕಾನೂನಿನ ಸೆಕ್ಷನ್ 22 ರ ಅಡಿಯಲ್ಲಿ ಆಸ್ತಿಯ ಮೇಲೆ ಆದ್ಯತೆಯ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ಈ ಪ್ರಕರಣವನ್ನು ವಿಚಾರಣೆ ಮಾಡಿದ ನ್ಯಾಯಾಲಯವು ನಾಥು ಪರವಾಗಿ ತೀರ್ಪು ನೀಡಿತ್ತು ಅಲ್ಲದೇ ಇದೆ ತೀರ್ಪನ್ನು ಹೈಕೋರ್ಟ್ ಕೂಡ ಬೆಂಬಲ ಸೂಚಿಸಿದೆ.

Most Popular

Latest Articles

Related Articles