PMEGP ಯೋಜನೆಯಡಿ ಸ್ವಂತ ಉದ್ಯೋಗಕ್ಕೆ ಸಿಗಲಿದೆ ಭರ್ಜರಿ ಸಬ್ಸಿಡಿ ಸಾಲ: ಯಾರೆಲ್ಲ ಅರ್ಜಿ ಸಲ್ಲಿಸಬಹುದು?

June 13, 2026 | Siddesh
PMEGP ಯೋಜನೆಯಡಿ ಸ್ವಂತ ಉದ್ಯೋಗಕ್ಕೆ ಸಿಗಲಿದೆ ಭರ್ಜರಿ ಸಬ್ಸಿಡಿ ಸಾಲ: ಯಾರೆಲ್ಲ ಅರ್ಜಿ ಸಲ್ಲಿಸಬಹುದು?
Share Now:

ಇಂದಿನ ದಿನಗಳಲ್ಲಿ ಸ್ವಂತ ಉದ್ಯೋಗ ಅಥವಾ ಬಿಸಿನೆಸ್ ಆರಂಭಿಸಬೇಕು ಎಂಬ ಕನಸು ಬಹುತೇಕ ಯುವಕ-ಯುವತಿಯರಲ್ಲಿ ಇರುತ್ತದೆ. ಆದರೆ, ಸ್ವಂತ ಉದ್ದಿಮೆ ಕೈಗೊಳ್ಳಲು ಪ್ರಮುಖವಾಗಿ ಎದುರಾಗುವ ದೊಡ್ಡ ಸಮಸ್ಯೆಯೆಂದರೆ ಅದು ಬಂಡವಾಳದ ಕೊರತೆ. ಇಂತಹ ನಿರುದ್ಯೋಗಿ ಯುವಕ-ಯುವತಿಯರಿಗೆ ಹಾಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬಯಸುವವರಿಗೆ ಕೇಂದ್ರ ಸರ್ಕಾರವು ಒಂದು ಅತ್ಯುತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅದುವೇ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (Prime Minister Employment Generation Programme - PMEGP). ಈ ಯೋಜನೆಯಡಿ ಹೊಸ ಉದ್ಯೋಗಗಳನ್ನು ಪ್ರಾರಂಭಿಸಲು ಸರ್ಕಾರವು ಬ್ಯಾಂಕ್‌ಗಳ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ.

ಕರ್ನಾಟಕದಾದ್ಯಂತ ಈ ಯೋಜನೆಯು ವ್ಯಾಪಕವಾಗಿ ಜಾರಿಯಲ್ಲಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶದ ಅರ್ಹ ಫಲಾನುಭವಿಗಳಿಗೆ ತಮ್ಮ ಕಾಲಿನ ಮೇಲೆ ತಾವು ನಿಲ್ಲಲು ಆಸರೆ ನೀಡುತ್ತಿದೆ. ಈ ಯೋಜನೆಯ(PMEGP Yojana) ಮುಖ್ಯ ಉದ್ದೇಶವೆಂದರೆ ಸ್ಥಳೀಯ ಮಟ್ಟದಲ್ಲೇ ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ಹೊಸ ತಲೆಮಾರಿನ ಉದ್ಯಮಿಗಳನ್ನು ಪ್ರೋತ್ಸಾಹಿಸಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದಾಗಿದೆ. ನೀವು ಉತ್ಪಾದನಾ ವಲಯ (Manufacturing) ಅಥವಾ ಸೇವಾ ವಲಯಕ್ಕೆ (Service Sector) ಸಂಬಂಧಿಸಿದ ಯಾವುದೇ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಪಿಎಂಇಜಿಪಿ ಯೋಜನೆ ನಿಮಗೆ ಒಂದು ವರದಾನವಾಗಬಲ್ಲದು.

ಇದನ್ನೂ ಓದಿ: Farmer Award-ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಈ ಯೋಜನೆಯ(PMEGP Scheme Application) ಕುರಿತು ಮಾಹಿತಿಯ ಕೊರತೆಯಿದ್ದು, ಅರ್ಜಿಯನ್ನು ಸಲ್ಲಿಸುವುದು ಹೇಗೆ? ಯಾವೆಲ್ಲ ಉದ್ದಿಮೆಗಳಿಗೆ ಸಾಲ ಸಿಗುತ್ತದೆ? ಮತ್ತು ಏನೆಲ್ಲಾ ದಾಖಲಾತಿಗಳು ಬೇಕಾಗುತ್ತವೆ ಎಂಬ ಗೊಂದಲಗಳು ಸಾರ್ವಜನಿಕರಲ್ಲಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ನಿಟ್ಟಿನಲ್ಲಿ, ಪಿಎಂಇಜಿಪಿ ಯೋಜನೆಯ ಸಂಪೂರ್ಣ ವಿವರಗಳು, ಅರ್ಹತಾ ಮಾನದಂಡಗಳು, ಸಹಾಯಧನದ ಪ್ರಮಾಣ ಮತ್ತು ಅವಶ್ಯಕ ದಾಖಲೆಗಳ ಸಮಗ್ರ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

Who Can Apply For PMEGP Scheme-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಪಿಎಂಇಜಿಪಿ ಯೋಜನೆಯಡಿ ಸಾಲ ಸೌಲಭ್ಯ ಮತ್ತು ಸಬ್ಸಿಡಿ ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು (ಗರಿಷ್ಠ ವಯೋಮಿತಿಯ ನಿರ್ಬಂಧ ಇರುವುದಿಲ್ಲ).
  • ಉತ್ಪಾದನಾ ವಲಯದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆ ಹಾಗೂ ಸೇವಾ ವಲಯದಲ್ಲಿ 5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಕನಿಷ್ಠ 8ನೇ ತರಗತಿ ಪಾಸಾಗಿರಬೇಕು. (ಇದಕ್ಕಿಂತ ಕಡಿಮೆ ಮೊತ್ತದ ಸಾಲಕ್ಕೆ ವಿದ್ಯಾಹರ್ಹತೆಯ ಕಡ್ಡಾಯ ಇರುವುದಿಲ್ಲ).
  • ಈ ಯೋಜನೆಯು ಕೇವಲ ಹೊಸದಾಗಿ ಪ್ರಾರಂಭಿಸುವ ಉದ್ಯಮಗಳಿಗೆ ಮಾತ್ರ ಅನ್ವಯಿಸುತ್ತದೆ. ಹಳೆಯ ಉದ್ದಿಮೆಯ ನವೀಕರಣ ಅಥವಾ ವಿಸ್ತರಣೆಗೆ ಇದು ಅನ್ವಯಿಸುವುದಿಲ್ಲ.
  • ಸ್ವಸಹಾಯ ಗುಂಪುಗಳು (SHGs), ಸಹಕಾರ ಸಂಘಗಳು ಮತ್ತು ಚಾರಿಟೇಬಲ್ ಟ್ರಸ್ಟ್‌ಗಳು ಸಹ ಈ ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
  • ಉತ್ಪಾದನಾ ವಲಯಕ್ಕೆ ಗರಿಷ್ಠ 50 ಲಕ್ಷ ರೂ. ಹಾಗೂ ಸೇವಾ ವಲಯಕ್ಕೆ ಗರಿಷ್ಠ 20 ಲಕ್ಷ ರೂ. ವರೆಗಿನ ಪ್ರಾಜೆಕ್ಟ್‌ಗಳಿಗೆ ಸಾಲ ಸಿಗಲಿದೆ.

ಇದನ್ನೂ ಓದಿ: GKVK Krishi Mele-2026: ಅಕ್ಟೋಬರ್ 15 ರಿಂದ 18 ರ ವರೆಗೆ ಜಿಕೆವಿಕೆಯಲ್ಲಿ ‘ಬೆಂಗಳೂರು ಕೃಷಿಮೇಳ-2026'

PMEGP Scheme Subsidy Amount-ಎಷ್ಟು ಸಬ್ಸಿಡಿ ಪಡೆಯಬಹುದು?

ಪಿಎಂಇಜಿಪಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ. 35 ರವರೆಗಿನ ಸಬ್ಸಿಡಿ ಪಡೆಯಲು ಅವಕಾಶವಿದ್ದು ಗ್ರಾಮೀಣ ಭಾಗ ಮತ್ತು ಮಹಿಳೆಯರಿಗೆ ಶೇ. 35 ರವರೆಗಿನ ಸಬ್ಸಿಡಿ ನಿಗದಿಪಡಿಸಿದ್ದು ನಗರ ಪ್ರದೇಶದಲ್ಲಿ ಶೇ. 25 ರವರೆಗಿನ ಸಬ್ಸಿಡಿ ನೀಡಲಾಗುತ್ತದೆ.

How To Apply For PMEGP Scheme-ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂಇಜಿಪಿ ಯೋಜನೆಗೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (KVIC) ಅಧಿಕೃತ ಜಾಲತಾಣವಾದ kviconline.gov.in/pmegpeportal ಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಜಿಲ್ಲೆಯ DIC-ಜಿಲ್ಲಾ ಕೈಗಾರಿಕಾ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Police Police Constable-ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಈ ದಾಖಲೆ ಸಲ್ಲಿಸುವುದು ಕಡ್ಡಾಯ!

PMEGP Scheme Details-ಯಾವೆಲ್ಲ ಉದ್ದಿಮೆಗೆ ಸಬ್ಸಿಡಿ ಪಡೆಯಬಹುದು?

ಪಿಎಂಇಜಿಪಿ ಯೋಜನೆಯಡಿ ಈ ಕೆಳಗಿನ ಪ್ರಮುಖ ಸ್ವಂತ ಉದ್ಯೋಗಗಳಿಗೆ ಸಾಲ ಮತ್ತು ಸಹಾಯಧನ ದೊರೆಯುತ್ತದೆ:

ಸಿದ್ಧ ಉಡುಪು ತಯಾರಿಕೆ / ಟೈಲರಿಂಗ್: ರೆಡಿಮೇಡ್ ಬಟ್ಟೆಗಳ ಪ್ಯಾಕ್ ಹಾಗೂ ಹೊಲಿಗೆ ಕೇಂದ್ರಗಳು,ಬ್ಯೂಟಿ ಪಾರ್ಲರ್: ಆಧುನಿಕ ಸೌಂದರ್ಯ ವರ್ಧಕ ಕೇಂದ್ರಗಳು,ಪೇಪರ್ ಪ್ಲೇಟ್ ತಯಾರಿಕೆ: ಪರಿಸರ ಸ್ನೇಹಿ ಪೇಪರ್ ಕಪ್ ಮತ್ತು ಪ್ಲೇಟ್‌ಗಳ ಉತ್ಪಾದನಾ ಯುನಿಟ್, ಎಲೆಕ್ಟ್ರಿಕಲ್ ಸರ್ವೀಸ್: ವಿದ್ಯುತ್ ಉಪಕರಣಗಳ ರಿಪೇರಿ ಮತ್ತು ಮಾರಾಟ ಸೇವೆ,ಸೈಬರ್ ಸೆಂಟರ್: ಕಂಪ್ಯೂಟರ್, ಇಂಟರ್ನೆಟ್ ಮತ್ತು ಡಿಜಿಟಲ್ ಸೇವಾ ಕೇಂದ್ರಗಳು,ಟೂ ವೀಲರ್ ಸರ್ವೀಸ್: ದ್ವಿಚಕ್ರ ವಾಹನಗಳ ಗ್ಯಾರೇಜ್ ಮತ್ತು ಸರ್ವೀಸ್ ಸ್ಟೇಷನ್,ಸೌಂಡ್ಸ್ & ಲೈಟಿಂಗ್ಸ್: ಶುಭ ಸಮಾರಂಭಗಳಿಗೆ ಬೆಳಕು ಮತ್ತು ಧ್ವನಿವರ್ಧಕ ಸರಬರಾಜು ವ್ಯವಸ್ಥೆ,ಶಾಮಿಯಾನ ಸರ್ವೀಸ್: ಪೆಂಡಾಲ್ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಸೇವೆಗಳು,ಮರದ ಕೆಲಸ (ಕಾರ್ಪೆಂಟರಿ): ಪೀಠೋಪಕರಣ ಹಾಗೂ ಮರದ ಕೆತ್ತನೆ ಉದ್ಯಮ,ಆಹಾರ ಉತ್ಪನ್ನ ತಯಾರಿಕೆ: ಬೇಕರಿ ಬಿಸ್ಕೆಟ್, ಉಪ್ಪಿನಕಾಯಿ, ಹಪ್ಪಳ ಇತ್ಯಾದಿ ಆಹಾರ ಸಂಸ್ಕರಣೆ,ಅಡಿಕೆ ಹಾಳೆ ತಟ್ಟೆ ತಯಾರಿಕೆ: ಪರಿಸರ ಪೂರಕ ಅಡಿಕೆ ಮರದ ಹಾಳೆಯ ತಟ್ಟೆಗಳು ಮತ್ತು ಕಪ್‌ಗಳ ತಯಾರಿಕೆ,ಸೆಂಟ್ರಿಂಗ್ ಶೀಟ್ ಸರ್ವೀಸ್: ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಸೆಂಟ್ರಿಂಗ್ ಸಾಮಗ್ರಿಗಳ ಬಾಡಿಗೆ ಉದ್ದಿಮೆ,
ಮೊಬೈಲ್ ಶಾಪ್: ಮೊಬೈಲ್ ಮಾರಾಟ ಮತ್ತು ರಿಪೇರಿ ಅಂಗಡಿಗಳು.

ಇದನ್ನೂ ಓದಿ: PC Job Notification-3,395 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟ!

ಹೋಟೆಲ್ / ಕ್ಯಾಂಟೀನ್ (ಸಸ್ಯಾಹಾರಿ): ಸಣ್ಣ ಮತ್ತು ಮಧ್ಯಮ ಗಾತ್ರದ ಉಪಾಹಾರ ಮಂದಿರಗಳು,ಅಕ್ಕಿ ಹಿಟ್ಟಿನ ಗಿರಣಿ (ಫ್ಲೋರ್ ಮಿಲ್) ಮತ್ತು ಎಣ್ಣೆ ಮಿಲ್: ಗಾಣದ ಎಣ್ಣೆ ಹಾಗೂ ಹಿಟ್ಟಿನ ಮಿಲ್‌ಗಳು,ಬೇಕರಿ ವಸ್ತು ತಯಾರಿಕೆ: ಬ್ರೆಡ್, ಕೇಕ್ ಹಾಗೂ ಸ್ನ್ಯಾಕ್ಸ್ ತಯಾರಿಕಾ ಘಟಕಗಳು,
ಕೋಳಿ ಸಾಕಾಣಿಕೆ: ಬ್ರಾಯ್ಲರ್ ಹಾಗೂ ನಾಟಿ ಕೋಳಿ ಸಾಕಾಣಿಕೆ ಕೇಂದ್ರಗಳು,ಹೊಗೆ ಚೆಕ್ ತಪಾಸಣಾ ಕೇಂದ್ರ: ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡುವ ಕೇಂದ್ರ (Emission Testing Center),ಸ್ಟೀಲ್ ಫರ್ನಿಚರ್ / ವೆಲ್ಡಿಂಗ್ ವರ್ಕ್ಸ್: ಕಬ್ಬಿಣದ ಗೇಟ್, ಕಿಟಕಿ ಹಾಗೂ ಸ್ಟೀಲ್ ಪೀಠೋಪಕರಣಗಳ ತಯಾರಿಕೆ,ಕ್ಯಾಟರಿಂಗ್ ಸರ್ವೀಸ್: ಸಭೆ-ಸಮಾರಂಭಗಳಿಗೆ ಅಡುಗೆ ಸಿದ್ಧಪಡಿಸುವ ಸೇವೆ,ಗೇರು ಬೀಜ ಪರಿಷ್ಕರಣೆ: ಗೋಡಂಬಿ ಸಂಸ್ಕರಣೆ ಮತ್ತು ಪ್ಯಾಕಿಂಗ್ ಘಟಕ,ದೀಪದ ಬತ್ತಿ ತಯಾರಿಕೆ: ಪೂಜೆಗೆ ಬಳಸುವ ಹತ್ತಿ ಬತ್ತಿಗಳ ತಯಾರಿಕಾ ಉದ್ಯಮ,ತಂಪು ಪಾನೀಯ ತಯಾರಿಕೆ: ಹಣ್ಣಿನ ರಸ, ಸೋಡಾ ಮತ್ತು ತಂಪು ಪಾನೀಯಗಳ ಉತ್ಪಾದನೆ.

(ಗಮನಿಸಿ: ಇವುಗಳಲ್ಲದೆ ಇನ್ನೂ ಹಲವಾರು ರೀತಿಯ ಉತ್ಪಾದನೆ ಮತ್ತು ಸೇವಾ ವಲಯದ ಸ್ವಂತ ಉದ್ಯೋಗಗಳಿಗೆ ಈ ಯೋಜನೆಯಡಿ ಸಾಲ ಸಿಗಲಿದೆ).

ಇದನ್ನೂ ಓದಿ: Scholarship Application-ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.

Required Documents For PMEGP Scheme-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಪಿಎಂಇಜಿಪಿ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು:

  • ಬ್ಯಾಂಕ್ ಪಾಸ್ ಬುಕ್
  • ರೇಷನ್ ಕಾರ್ಡ್ (ಪಡಿತರ ಚೀಟಿ)
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ: ಇತ್ತೀಚಿನ 1 ಫೋಟೋ.
  • ಆಧಾರ್ ಕಾರ್ಡ್
  • ಶಾಲೆ ಪ್ರಮಾಣ ಪತ್ರ: ವಿದ್ಯಾಹರ್ಹತೆಯ ದಾಖಲೆ (ಕನಿಷ್ಠ 8ನೇ ತರಗತಿ ಉತ್ತೀರ್ಣರಾದ ಅಂಕಪಟ್ಟಿ/ಟಿಸಿ).
  • ಜಾತಿ ಪ್ರಮಾಣ ಪತ್ರ: ವಿಶೇಷ ವರ್ಗದ (SC/ST/OBC/Minority) ಸಬ್ಸಿಡಿ ಕ್ಲೈಮ್ ಮಾಡಲು ಕಡ್ಡಾಯ.
  • ಜನಸಂಖ್ಯೆ ಪ್ರಮಾಣ ಪತ್ರ / ವಾಸ್ತವ್ಯ ದೃಢೀಕರಣ ಪತ್ರ: (ಆನ್ಲೈನ್ ನಲ್ಲಿ ಗ್ರಾಮ್ ಒನ್ ಕೇಂದ್ರದ ಮೂಲಕ ಪಡೆಯಬಹುದು)
  • ಪ್ಯಾನ್ ಕಾರ್ಡ್
  • ಯೋಜನಾ ವರದಿ (Project Report)

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: