Life Insurance-ಪಿ ಎಫ್ ಖಾತೆದಾರರಿಗೆ ಶೂನ್ಯ ಪ್ರೀಮಿಯಂಗೆ 7 ಲಕ್ಷ ರೂ. ಜೀವ ವಿಮೆ!

June 12, 2026 | Siddesh
Life Insurance-ಪಿ ಎಫ್ ಖಾತೆದಾರರಿಗೆ ಶೂನ್ಯ ಪ್ರೀಮಿಯಂಗೆ 7 ಲಕ್ಷ ರೂ. ಜೀವ ವಿಮೆ!
Share Now:

ಹೊಸದಿಲ್ಲಿ: ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬದ ಆರ್ಥಿಕ ಭದ್ರತೆಗೆ ಕೇಂದ್ರ ಸರ್ಕಾರವು ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ನೌಕರರ ಭವಿಷ್ಯ ನಿಧಿ (EPF) ಖಾತೆ ಹೊಂದಿರುವ ಎಲ್ಲಾ ಉದ್ಯೋಗಿಗಳಿಗೆ ಯಾವುದೇ ಪ್ರೀಮಿಯಂ ಇಲ್ಲದೆ ಉಚಿತವಾಗಿ ಗರಿಷ್ಠ 7 ಲಕ್ಷ ರೂಪಾಯಿಗಳವರೆಗೆ ಜೀವ ವಿಮೆ ಸೌಲಭ್ಯ ಸಿಗಲಿದೆ. ಇದು 'ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ' (EDLI - Employees' Deposit Linked Insurance) ಯೋಜನೆಯಾಗಿದ್ದು, ಇತ್ತೀಚಿನ ಕೇಂದ್ರದ ತಿದ್ದುಪಡಿಯ ಪ್ರಕಾರ ಇದರ ಕನಿಷ್ಠ ಲಾಭವನ್ನು 2.5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಒಂದು ವೇಳೆ ಉದ್ಯೋಗಿಯು ಮೃತಪಡುವ ಮುನ್ನ ಅವರ ಪಿಎಫ್ ಬ್ಯಾಲೆನ್ಸ್ 50 ಸಾವಿರ ರೂ.ಗಿಂತ ಕಡಿಮೆ ಇದ್ದರೂ ಸಹ, ಕನಿಷ್ಠ 50 ಸಾವಿರ ರೂಪಾಯಿಗಳ ವಿಮಾ ಪರಿಹಾರದ ವ್ಯಾಪ್ತಿಯನ್ನು ಒದಗಿಸಲಾಗಿದೆ.

ಈ ವಿಮಾ ರಕ್ಷಣೆಯು ಇಪಿಎಫ್/EPF ಖಾತೆ ಹೊಂದಿರುವ ಪ್ರತಿಯೊಬ್ಬ ಉದ್ಯೋಗಿಗೂ ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ. ಇದಕ್ಕಾಗಿ ಉದ್ಯೋಗಿಯು ಯಾವುದೇ ಪ್ರತ್ಯೇಕ ಪ್ರೀಮಿಯಂ ಪಾವತಿಸಬೇಕಾಗಿಲ್ಲ ಅಥವಾ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯವೂ ಇಲ್ಲ. ಕಂಪನಿಯು ಉದ್ಯೋಗಿಯ ಇಪಿಎಫ್ ಖಾತೆಗೆ ಕೊಡುಗೆ ನೀಡುವಾಗ, ಅದರ ಜೊತೆಗೆ ಉದ್ಯೋಗಿಯ ಮೂಲ ವೇತನದ ಶೇಕಡಾ 0.5 ರಷ್ಟು ಹಣವನ್ನು ಈ ಇಡಿಎಲ್‌ಐ ಯೋಜನೆಗೆ ಜಮಾ ಮಾಡುತ್ತದೆ. ಯಾವುದೇ ಇಪಿಎಫ್ ಸದಸ್ಯರು ಉದ್ಯೋಗದಲ್ಲಿದ್ದಾಗ ಮರಣ ಹೊಂದಿದರೆ ಮಾತ್ರ ಈ ವಿಮಾ ರಕ್ಷಣೆ ಸಿಗಲಿದ್ದು, ಅವರ ನಾಮಿನಿ ಅಥವಾ ಕಾನೂನುಬದ್ಧ ವಾರಸುದಾರರು ಈ ವಿಮಾ ಹಣವನ್ನು ಕ್ಲೈಮ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Farmer Award-ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ವಿಮಾ ಕವರೇಜ್ ಮೊತ್ತವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂದರೆ, ಉದ್ಯೋಗಿಯ ಹಿಂದಿನ 12 ತಿಂಗಳ ಸರಾಸರಿ ವೇತನ ಮತ್ತು ಅವರ ಖಾತೆಯಲ್ಲಿರುವ ಪಿಎಫ್ ಶಿಲ್ಕನ್ನು (ಬ್ಯಾಲೆನ್ಸ್) ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ. ಆದರೆ, ಈ ಸೌಲಭ್ಯ ಪಡೆಯಲು ಮೃತರ ಇಪಿಎಫ್ ಖಾತೆಯು ಕನಿಷ್ಠ 12 ತಿಂಗಳುಗಳ ಕಾಲ ಸಕ್ರಿಯವಾಗಿರಬೇಕು. ಸಂಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಯಾವುದೇ ಅಡೆತಡೆಯಿಲ್ಲದೆ ವಿಮಾ ಹಣ ಪಾವತಿಯಾಗಬೇಕಾದರೆ, ಉದ್ಯೋಗಿಗಳು ತಮ್ಮ ಪಿಎಫ್ ಖಾತೆಯಲ್ಲಿ ತಕ್ಷಣವೇ ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

PF Account-ತಕ್ಷಣ ಏನು ಮಾಡಬೇಕು?

ಇ-ನಾಮಿನೇಷನ್: ಪ್ರತಿಯೊಬ್ಬ ಉದ್ಯೋಗಿಯೂ ತಕ್ಷಣವೇ ತಮ್ಮ ಇಪಿಎಫ್ ಖಾತೆಗೆ 'ಇ-ನಾಮಿನೇಷನ್' ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ವಿವರಗಳನ್ನು ಹಂಚಿಕೊಳ್ಳಿ: ನಿಮ್ಮ ಯುಎಎನ್ (UAN) ಹಾಗೂ ಇಪಿಎಫ್ ಖಾತೆಗಳ ವಿವರಗಳನ್ನು ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಿ.

ಮಾಹಿತಿ ಅಪ್ಡೇಟ್: ನಾಮಿನಿ ವಿವರಗಳು ನಿಖರವಾಗಿ ಅಪ್ಡೇಟ್ ಆಗಿದ್ದರೆ ಮಾತ್ರ, ಸಂಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಯಾವುದೇ ಅಡೆತಡೆಯಿಲ್ಲದೆ ವಿಮಾ ಹಣ ಸಕಾಲಕ್ಕೆ ಪಾವತಿಯಾಗುತ್ತದೆ.

ಇದನ್ನೂ ಓದಿ: GKVK Krishi Mele-2026: ಅಕ್ಟೋಬರ್ 15 ರಿಂದ 18 ರ ವರೆಗೆ ಜಿಕೆವಿಕೆಯಲ್ಲಿ ‘ಬೆಂಗಳೂರು ಕೃಷಿಮೇಳ-2026'

How To Update EPF Nominee-ನಿಮ್ಮ ಮೊಬೈಲ್ ನಲ್ಲೇ ನಾಮಿನಿ ಅಪ್ಡೇಟ್ ಮಾಡಿ:

ಪಿ ಎಫ್ ಖಾತೆದಾರರು ಕೆಳಗಿನ ವಿಧಾನವನ್ನು ಅನುಸರಿಸಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ಪಿ ಎಫ್ ಖಾತೆಗೆ ನಾಮಿನಿ ಅನ್ನು ಸೇರ್ಪಡೆ ಮಾಡಬಹುದು:

Step-1: ಮೊದಲಿಗೆ ಈ EPF Nominee Update ಲಿಂಕ್ ಮೇಲೆ ಕ್ಲಿಕ್ ಮಾಡಿ ಇಪಿಎಫ್‌ಒ ಪೋರ್ಟಲ್‌ಗೆ ಭೇಟಿ ನೀಡಿ, ನಿಮ್ಮ 12 ಅಂಕಿಯ UAN, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಹಾಕಿ ಲಾಗಿನ್ ಆಗಿ.

Step-2: ಮುಖಪುಟದಲ್ಲಿರುವ 'Manage' ಮೆನುವಿಗೆ ಹೋಗಿ, ಅಲ್ಲಿ 'E-nomination' ಮೇಲೆ ಕ್ಲಿಕ್ ಮಾಡಿ.

Step-3: ನಿಮ್ಮ ಪ್ರೊಫೈಲ್‌ನಲ್ಲಿ ಫೋಟೋ, ಶಾಶ್ವತ ವಿಳಾಸ ಅಪ್ಡೇಟ್ ಆಗಿರದಿದ್ದರೆ, ಮೊದಲು ಅದನ್ನು ಪೂರ್ಣಗೊಳಿಸಲು ಪೋರ್ಟಲ್ ಸೂಚಿಸುತ್ತದೆ.

ಇದನ್ನೂ ಓದಿ: Police Police Constable-ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಈ ದಾಖಲೆ ಸಲ್ಲಿಸುವುದು ಕಡ್ಡಾಯ!

Step-4: 'Family Declaration' ಅಡಿಯಲ್ಲಿ 'Yes' ಎಂದು ಆಯ್ಕೆ ಮಾಡಿ. ನಂತರ ನಾಮಿನಿಯ ಆಧಾರ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ನಿಮಗೂ ಅವರಿಗೂ ಇರುವ ಸಂಬಂಧ ಮತ್ತು ಬ್ಯಾಂಕ್ ವಿವರಗಳನ್ನು ಹಾಕಿ, ಅವರ ಫೋಟೋ ಅಪ್‌ಲೋಡ್ ಮಾಡಿ.

Step-5: ನೀವು ಒಬ್ಬರಿಗಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದು. ಪ್ರತಿಯೊಬ್ಬ ನಾಮಿನಿಗೂ ಎಷ್ಟು ಶೇಕಡಾ (%) ಹಣ ಸಿಗಬೇಕು ಎಂಬುದನ್ನು ನಮೂದಿಸಿ (ಒಟ್ಟು 100% ಆಗಿರಬೇಕು). ನಂತರ 'Save EPF Nomination' ಕ್ಲಿಕ್ ಮಾಡಿ.

Step-6: ಕೊನೆಯದಾಗಿ, 'Pending Nomination' ಅಡಿಯಲ್ಲಿರುವ 'e-Sign' ಆಪ್ಷನ್ ಕ್ಲಿಕ್ ಮಾಡಿ. ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ ಸಬ್ಮಿಟ್ ಮಾಡಿದರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: PC Job Notification-3,395 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟ!

EPF Insurance Claim Method-ಕ್ಲೇಮ್ ಮಾಡುವುದು ಹೇಗೆ?

ಇಪಿಎಫ್ ಸದಸ್ಯರು ಸೇವೆಯಲ್ಲಿದ್ದಾಗ ಮರಣ ಹೊಂದಿದರೆ, ಅವರ ನಾಮಿನಿ ಅಥವಾ ಕಾನೂನುಬದ್ಧ ವಾರಸುದಾರರು ಈ ಕೆಳಗಿನ ದಾಖಲೆಗಳೊಂದಿಗೆ ಕ್ಲೇಮ್ ಮಾಡಬಹುದು:

  • ಮರಣ ಪ್ರಮಾಣಪತ್ರ (Death Certificate)
  • ನಾಮಿನಿಯ ಕೆವೈಸಿ (KYC) ವಿವರಗಳು
  • ಬ್ಯಾಂಕ್ ಪಾಸ್‌ಬುಕ್ (Bank Passbook)
  • ಆಧಾರ್ ಕಾರ್ಡ್

ಈ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಫಾರ್ಮ್ 5 ಇಡಿಎಲ್‌ಐ (Form 5 EDLI) ಅನ್ನು ಭರ್ತಿ ಮಾಡಬೇಕು. ಈ ಅರ್ಜಿಯನ್ನು ಉದ್ಯೋಗಿ ಕೆಲಸ ಮಾಡುತ್ತಿದ್ದ ಕಂಪನಿ ಅಥವಾ ನೇರವಾಗಿ ಇಪಿಎಫ್‌ಒ (EPFO) ಕಚೇರಿಗೆ ಸಲ್ಲಿಸುವ ಮೂಲಕ ವಿಮಾ ಹಣವನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: