Ration Card eKYC-ರೇಶನ್ ಕಾರ್ಡ ಇ-ಕೆವೈಸಿ ಕುರಿತು ಮಹತ್ವದ ಮಾಹಿತಿ ಪ್ರಕಟ!

July 7, 2025 | Siddesh
Ration Card eKYC-ರೇಶನ್ ಕಾರ್ಡ ಇ-ಕೆವೈಸಿ ಕುರಿತು ಮಹತ್ವದ ಮಾಹಿತಿ ಪ್ರಕಟ!
Share Now:

ಪಡಿತರ ಚೀಟಿಯನ್ನು(Ration Card) ಹೊಂದಿರುವ ಗ್ರಾಹಕರಿಗೆ ಈಗಾಗಲೇ ತಿಳಿದಿರುವ ಹಾಗೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ ರೇಶನ್ ಅನ್ನು(Karnataka Food Department) ಪಡೆಯಲು ಇ-ಕೆವೈಸಿಯನ್ನು ಮಾಡಿಸಿಕೊಳ್ಳುವುದನ್ನು ಆಹಾರ ಇಲಾಖೆಯಿಂದ ಕಡ್ಡಾಯ ಮಾಡಲಾಗಿದ್ದು ಒಂದೊಮ್ಮೆ ಇ-ಕೆವೈಸಿ ಮಾಡಿಸದೇ ಇದ್ದಲ್ಲಿ ಅಂತಹ ರೇಶನ್ ಕಾರ್ಡದಾರರಿಗೆ ರೇಶನ್ ವಿತರಣೆ ಸ್ಥಗಿತಗೊಳ್ಳಿದೆ ಈ ಸಂಬಂಧ ಇ-ಕೆವೈಸಿ ಕುರಿತು ಒಂದಿಷ್ಟು ಅವಶ್ಯಕ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ರೇಶನ್ ಕಾರ್ಡನ ಇ-ಕೆವೈಸಿಯನ್ನು(Ration Card eKYC) ಮಾಡಿಸಲು ದೂರದ ಊರಿನಿಂದ ಸಂಬಂಧಪಟ್ಟ ಸರ್ಕಾರಿ ಕಚೇರಿಗಳಿಗೆ ಅಲೆದಾಟ ಮಾಡುವುದನ್ನು ತಪ್ಪಿಸಲು ತಾವು ಇದ್ದಲ್ಲಿಯೇ ಸರಳ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಪಡಿತರ ಚೀಟಿಯ ಇ-ಕೆವೈಸಿಯನ್ನು(Ahara Ilake) ಮಾಡಿಕೊಳ್ಳುವ ವಿಧಾನದ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: GKVK Diploma Agriculture-ಬೆಂಗಳೂರು ಕೃಷಿ ವಿವಿಯಿಂದ ಡಿಪ್ಲೊಮಾ ಕೃಷಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಇದಲ್ಲದೇ ಈ ಲೇಖನದಲ್ಲಿ ಪಡಿತರ ಚೀಟಿ ಹೊಂದಿರುವವರು ಇ-ಕೆವೈಸಿಯನ್ನು ಏಕೆ? ಮಾಡಿಸಬೇಕು? ಮತ್ತು ಈಗಾಗಲೇ ಇ-ಕೆವೈಸಿಯನ್ನು ಮಾಡಿಕೊಂಡಿರುವ ಗ್ರಾಹಕರು ಇ-ಕೆವೈಸಿ ಅಗಿರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ? ಹಾಗೂ ಮೊಬೈಲ್ ಅಪ್ಲಿಕೇಶನ್ ಅನ್ನು(Ration Card eKYC Mobile Application) ಬಳಕೆ ಮಾಡಿಕೊಂಡು ಇ-ಕೆವೈಸಿ ಮಾಡುವ ವಿಧಾನದ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ತಿಳಿಸಲಾಗಿದೆ.

Ration Card E-KYC Is Mandatory-ಪ್ರತಿ ತಿಂಗಳು ರೇಷನ್ ಪಡೆಯಲು ಇ-ಕೆವೈಸಿ ಕಡ್ಡಾಯ:

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ನಾಗರಿಕರಿಗೆ ಆಹಾರ ಉತ್ಪನ್ನಗಳನ್ನು ಅತೀ ಕಡಿಮೆ ದರದಲ್ಲಿ ವಿತರಣೆ ಮಾಡಲು ಅರ್ಹ ಗ್ರಾಹಕರನ್ನು ಗುರುತಿಸಲು ರೇಶನ್ ಕಾರ್ಡ ಅನ್ನು ವಿತರಣೆ ಮಾಡಲಾಗಿದ್ದು ಇದರನ್ವಯ ಪಡಿತರ ಚೀಟಿಯನ್ನು ಬಳಕೆ ಮಾಡಿಕೊಂಡು ಪ್ರತಿ ತಿಂಗಳು ರೇಶನ್ ಅನ್ನು ಪಡೆಯಲು ಗ್ರಾಹಕರು ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಇದನ್ನೂ ಓದಿ: Gruhalakshmi Amount-2025: ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

Why do e-KYC-ಇ-ಕೆವೈಸಿ ಏಕೆ ಮಾಡಬೇಕು?

ಆಹಾರ ಇಲಾಖೆಯ ಮಾರ್ಗಸೂಚಿಯನ್ವಯ ರೇಶನ್ ಕಾರ್ಡದಾರರು ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಕೊಳ್ಳಬೇಕು ಇದಕ್ಕೆ ಪ್ರಮುಖ ಕಾರಣಗಳ ಪಟ್ಟಿ ಹೀಗಿದೆ:

ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಾಗೂ ಫಲಾನುಭವಿಯ ನೈಜತೆಯನ್ನು ಖಚಿತಪಡಿಸಿಕೊಳ್ಳು ಇ-ಕೆವೈಸಿ ಮಾಡಬೇಕು.

ನಕಲಿ ಪಡಿತರ ಚೀಟಿಗಳನ್ನು ಪತ್ತೆ ಮಾಡಲು ಇ-ಕೆವೈಸಿ ಸಹಕಾರಿಯಾಗಿದೆ.

ಪಡಿತದ ಚೀಟಿದಾರರ ಪ್ರಸ್ತುತ ವೈಯಕ್ತಿಕ ವಿವರವನ್ನು ಕಾಲ ಕಾಲಕ್ಕೆ ಡಿಜಿಟಲ್ ವ್ಯವಸ್ಥೆಯಲ್ಲಿ ನವೀಕರಣ ಮಾಡಲು ಇ-ಕೆವೈಸಿ ಅತ್ಯಗತ್ಯ.

ಪಡಿತರಚೀಟಿಯಲ್ಲಿ ಮರಣ ಹೊಂದಿದ ಸದಸ್ಯರನ್ನು ಗುರುತಿಸಲು ಇ-ಕೆವೈಸಿ ಸಹಕಾರಿಯಾಗಿದೆ.

ಇದನ್ನೂ ಓದಿ: PMMVY Yojana-ಮಾತೃವಂದನಾ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ ₹11,000 ರೂ ಸಹಾಯಧನ!

Ration Card eKYC Method-ಮನೆಯಲ್ಲೇ ಕುಳಿತು ರೇಶನ್ ಕಾರ್ಡ ಇ-ಕೆವೈಸಿ ಮಾಡಲು ಅವಕಾಶ:

ಪಡಿತರ ಚೀಟಿ/ರೇಶನ್ ಕಾರ್ಡದಾರರು ಯಾವುದೇ ಸರ್ಕಾರಿ ಕಚೇರಿಯನ್ನು ಅಲೆದಾಡದೇ ಮನೆಯಲ್ಲೇ ಕುಳಿತು ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಕೆಳಗಿನ ವಿಧಾನವನ್ನು ಅನುಸರಿಸಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ರೇಶನ್ ಕಾರ್ಡ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶವಿರುತ್ತದೆ.

Step-1: ರೇಶನ್ ಕಾರ್ಡದಾರರು ಪ್ರಥಮ ಹಂತದಲ್ಲಿ ಈ ಕೆಳಗೆ ನೀಡಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ Mera e-KYC App ಮತ್ತು Aadhar Face ID ಹೆಸರಿನ ಎರಡು ಮೊಬೈಲ್ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
Aadhar Face ID:- Download Now, Mera e-KYC App:- Download Now

ಇದನ್ನೂ ಓದಿ: Milk Incentive-9.07 ಲಕ್ಷ ರೈತರ ಖಾತೆಗೆ 2,854 ಕೋಟಿ ಹಾಲಿನ ಪ್ರೋತ್ಸಾಹಧನ!

Ration Card eKYC

Step-2: ಬಳಿಕ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡಿರುವ "Mera e-KYC App" ಅಪ್ಲಿಕೇಶನ್ ಅನ್ನು ಒಪನ್ ಮಾಡಿ ರಾಜ್ಯ/Select State ಆಯ್ಕೆಯ ಮೇಲೆ ಕ್ಲಿಕ್ ಮಾಡಿ Karnataka ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ "Generate OTP" ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ ಲಾಗಿನ್ ಅಗಬೇಕು.

Step-3: ಬಳಿಕ ಈ ಪೇಜ್ ನಿಮ್ಮ ವಿವರ ವೈಯಕ್ತಿಕ ವಿವರ ಗೋಚರಿಸುತ್ತದೆ ಇದನ್ನು ಸರಿಯಾಗಿ ಇದಿಯಾ ಎಂದು ಒಮ್ಮೆ ಚೆಕ್ ಮಾಡಿ ಕೊನೆಯಲ್ಲಿ'ಫೇಸ್-ಇ-ಕೆವೈಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಈಗ ಕ್ಯಾಮೆರಾ ನಿಮ್ಮ ಮುಂದೆ ತೆರೆಯುತ್ತದೆ. ಕ್ಯಾಮೆರಾದಿಂದ ಸ್ವಲ್ಪ ದೂರದಲ್ಲಿ ನಿಂತು ನಿಮ್ಮ ಸ್ಪಷ್ಟ ಫೋಟೋವನ್ನು ಕ್ಲಿಕ್ ಮಾಡಿ. ಕ್ಯಾಮೆರಾದಲ್ಲಿ ನಿಮ್ಮ ಮುಖ ಸಂಪೂರ್ಣವಾಗಿ ಗೋಚರಿಸುತ್ತದೆ ಫೋಟೋ ಕ್ಲಿಕ್ ಮಾಡಿದ ತಕ್ಷಣ, ನಿಮ್ಮ ಇ-ಕೆವೈಸಿ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: Home Subsidy Scheme-ಮೀನುಗಾರಿಕೆ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ!

ವಿಶೇಷ ಸೂಚನೆ: ಮೊಬೈಲ್ ಅಪ್ಲಿಕೇಶನ್ ಮೂಲಕ ಇ-ಕೆವೈಸಿ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ ಅತಂಹ ಗ್ರಾಹಕರು ತಮ್ಮ ಹಳ್ಳಿ ವ್ಯಾಪ್ತಿಯಲ್ಲಿನ ನ್ಯಾಯಬೆಲೆ ಅಂಗಡಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ವಿವರ ಮತ್ತು ಬೆರಳಚ್ಚನ್ನು ನೀಡಿ ಇ-ಕೆವೈಸಿಯನ್ನು ಮಾಡಿಕೊಳ್ಳಬಹುದು.

Online Ratio Card eKYC Status-ಈಗಾಗಲೇ ಇ-ಕೆವೈಸಿ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

ಪಡಿತರ ಚೀಟಿದಾರರು ಈಗಾಗಲೇ ಇ-ಕೆವೈಸಿ ಅಗಿರುವುದನ್ನು ತಮ್ಮ ಮೊಬೈಲ್ ನಲ್ಲೇ ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಚೆಕ್ ಮಾಡಿಕೊಳ್ಳಲು ಅವಕಾಶವಿದ್ದು ಇದಕ್ಕಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.

Step-1: ಮೊದಲಿಗೆ ಈ Ratio Card eKYC Status ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆಯ Ahara ತಂತ್ರಾಂಶವನ್ನು ಭೇಟಿ ಮಾಡಿ.

Step-2: ಬಳಿಕ ಈ ಪುಟದಲ್ಲಿ ಬಲ ಬದಿಯಲ್ಲಿ ಕಾಣುವ "ಇ-ಸ್ಥಿತಿ" ಬಟನ್ ಮೇಲೆ ಕ್ಲಿಕ್ ಮಾಡಿ ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ ವಿಭಾಗದಲ್ಲಿ ನಿಮ್ಮ ವಿಭಾಗದ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ನಂತರ ಈ ಪುಟದಲ್ಲಿ "ಪಡಿತರ ಚೀಟಿ ವಿವರ" ಬಟನ್ ಮೇಲೆ ಕ್ಲಿಕ್ ಮಾಡಿ "with Out OTP" ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ರೇಶನ್ ಕಾರ್ಡ ನಂಬರ್ ಅನ್ನು ಹಾಕಿ "Go" ಬಟನ್ ಮೇಲೆ ಕ್ಲಿಕ್ ಮಾಡಿದರೆ Member Count    ಆಯ್ಕೆಯಲ್ಲಿ eKYC Done ಎಂದು ತೋರಿಸಿ ಎಲ್ಲಾ ಸದಸ್ಯರ ಸಂಖ್ಯೆಯನ್ನು ತೋರಿಸಿದರೆ ನಿಮ್ಮ ರೇಷನ್ ಕಾರ್ಡ ಇ-ಕೆವೈಸಿ ಅಗಿದೆ ಎಂದು ಒಂದೊಮ್ಮೆ eKyc Remaining ಆಯ್ಕೆಯಲ್ಲಿ ಸದಸ್ಯರ ಸಂಖ್ಯೆ ತೋರಿಸಿದರೆ ಇ-ಕೆವೈಸಿ ಅಗುವುದು ಇನ್ನು ಬಾಕಿ ಉಳಿದಿದೆ ಎಂದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: