HomeNew postsInvalid ration card list-ಈ ಪಟ್ಟಿಯಲ್ಲಿ ಹೆಸರಿರುವವರಿಗಿಲ್ಲ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ!

Invalid ration card list-ಈ ಪಟ್ಟಿಯಲ್ಲಿ ಹೆಸರಿರುವವರಿಗಿಲ್ಲ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ!

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಪ್ರತಿ ತಿಂಗಳು ಹಾಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ಮಾರ್ಗಸೂಚಿ ಮೀರಿದ ರೇಷನ್ ಕಾರ್ಡಗಳನ್ನು ಪರಿಶೀಲನೆ ಮಾಡಿ ನಿಯಮ ಮೀರಿದ ಅಥವಾ ಮಾರ್ಗಸೂಚಿ ಪ್ರಕಾರ ಅನರ್ಹ ಕಾರ್ಡಗಳನ್ನು ಮರು ಪರಿಶೀಲನೆ ಮಾಡಿ ರದ್ದುಪಡಿಸಿಲಾಗುತ್ತದೆ.

ಈ ರೀತಿ ಪರಿಶೀಲನೆ ಮಾಡಿ ರದ್ದಾದ ರೇಷನ್ ಕಾರ್ಡಗಳ ವಿವರವಾದ ಪಟ್ಟಿಯನ್ನು ಪ್ರತಿ ತಿಂಗಳು ಜಿಲ್ಲಾವಾರು ಬೇರ್ಪಡಿಸಿ ಅನರ್ಹ ಪಡಿತರ ಚೀಟಿಯ ಪಟ್ಟಿಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ಜಾಲಾತಾಣದಲ್ಲಿ ಪ್ರಕಟಿಸಲಾಗುತ್ತದೆ. 

ಈ ಪಟ್ಟಿಯಲ್ಲಿಯಲಿರುವವರಿಗೆ ಸರಕಾರದಿಂದ ಪಡಿತರ ಚೀಟಿಗೆ ಸಿಗುವ ಯಾವುದೇ ಸೌಲಭ್ಯ ಉದಾಹರಣೆಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಡಿ ನೀಡುವ ಅರ್ಥಿಕ ಸಹಾಯಧನ ಸ್ಥಗಿತವಾಗುತ್ತದೆ.

ಇದನ್ನೂ ಓದಿ: Drought relief amount: ನವೆಂಬರ್ 30ರ ಒಳಗಾಗಿ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ಬರುತ್ತದೆ: ಸಚಿವ ಕೃಷ್ಣ ಬೈರೇಗೌಡ

Invalid ration card list- ಜಿಲ್ಲಾವಾರು ಪ್ರತಿ ತಿಂಗಳ ಅನರ್ಹ/ರದ್ದಾದ ರೇಷನ್ ಕಾರ್ಡ ಪಟ್ಟಿ ನೋಡುವ ವಿಧಾನ:

ಗ್ರಾಹಕರು ನೇರವಾಗಿ ನಿಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಪ್ರತಿ ತಿಂಗಳು ರದ್ದಾರ ಜಿಲ್ಲಾವಾರು ರೇಷನ್ ಕಾರ್ಡ ಪಟ್ಟಿಯನ್ನು ಮನೆಯಲೇ ಕುಳಿತು ಚೆಕ್ ಮಾಡಿಕೊಳ್ಳಬವುದು.

Step-1: ಮೊದಲ ಹಂತದಲ್ಲಿ ಗ್ರಾಹಕರು ಇಲ್ಲಿ ಕ್ಲಿಕ್ ಮಾಡಿ> ration card list ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್ಸೈಟ್ ಪ್ರವೇಶ ಮಾಡಬೇಕು. ನಂತರ ಮೊಬೈಲ್ ನಲ್ಲಿ ಚೆಕ್ ಮಾಡುವವರು ಕ್ರ‍ೋಮ್ ಬ್ರೌಸರ್ ನಲ್ಲಿ “Desktop view” ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ನೋಡುವುದು ಉತ್ತಮ ಎಲ್ಲಾ ಆಯ್ಕೆಗಳು ಸರಿಯಾಗಿ ಕಾಣುತ್ತವೆ.

Step-2: ವೆಬ್ಸೈಟ್ ಮುಖಪುಟ ಭೇಟಿ ಮಾಡಿದ ಬಳಿಕ ಅಲ್ಲೇ ಮೊದಲ ಪೇಜ್ ನಲ್ಲಿ ಗೋಚರಿಸುವ “ಇ-ಸೇವೆಗಳು” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Ration card cancellation: ಈ ನಿಯಮ ಪಾಲನೆ  ಮಾಡದಿದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ! ಇಲ್ಲಿದೆ ಸಂಪೂರ್ಣ ವಿವರ.

Step-3: “ಇ-ಸೇವೆಗಳು” ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಬಳಿಕ “ಇ-ಪಡಿತರ ಚೀಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆದು ಇಲ್ಲಿ ಒಂದು ಲಿಸ್ಟ್ ತೆರೆದುಕೊಳ್ಳುತ್ತದೆ ಈ ವಿಭಾಗದಲ್ಲಿ “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-4: “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಾಲ್ಕು ಆಯ್ಕೆಯ ಹೊಸ ಪುಟ ತೆರೆದುಕೊಳ್ಳುತ್ತದೆ ಈ ಪುಟದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು ಮತ್ತು ವರ್ಷ ಆಯ್ಕೆ ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ತಾಲ್ಲೂಕಿನ ರದ್ದುಗೊಳಿಸಲಾದ/ತಡೆಹಿಡಿಯಲಾದ ರೇಷನ್ ಕಾರ್ಡ ಪಟ್ಟಿ ತೋರಿಸುತ್ತದೆ.

Invalid ration card-ಒಂದೊಮ್ಮೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಹೀಗೆ ಮಾಡಿ:

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ರೇಷನ್ ಕಾರ್ಡಾ ಅನ್ನು ಹೊಂದಲು ಹೊರಡಿಸಿರುವ ಮಾರ್ಗಸೂಚಿಯನ್ನು ನೀವು ಪಾಲನೆ ಮಾಡಿದರು ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ (food inspector office) ಕಚೇರಿಯನ್ನು ಒಮ್ಮೆ ಭೇಟಿ ಮಾಡಿ ನಿಮ್ಮ ರೇಷನ್ ಕಾರ್ಡ ಅರ್ಜಿಯನ್ನು ಮರುಪರಿಶೀಲನೆ ಮಾಡಲು ಅರ್ಜಿ ಸಲ್ಲಿಸಿ.

ಇದನ್ನೂ ಓದಿ: November pension amount: ರಾಜ್ಯ ಸರಕಾರದಿಂದ 77 ಲಕ್ಷ ಜನರಿಗೆ ನವೆಂಬರ್ ತಿಂಗಳ ಪಿಂಚಣಿ ಹಣ ವರ್ಗಾವಣೆ! ಹಣ ಬಂದಿರುವುದನ್ನು ಚೆಕ್ ಮಾಡಲು ಈ ವೆಬ್ಸೈಟ್ ಭೇಟಿ ಮಾಡಿ.

Food inspector office- ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ವಿಳಾಸ ತಿಳಿಯುವ ವಿಧಾನ:

ಸಾರ್ವಜನಿಕರು ನಿಮ್ಮ ತಾಲ್ಲೂಕಿನಲ್ಲಿ ಆಹಾರ ಇಲಾಖೆಯ ಕಚೇರಿ ಎಲ್ಲಿ? ಇದೆ ಎಂದು ಹೇಗೆ ತಿಳಿದುಕೊಳ್ಳಬವುದು ಎಂದು ಈ ಕೆಳಗೆ ವಿವರಿಸಲಾಗಿದೆ.

ಈ ಲಿಂಕ್ https://ahara.kar.nic.in/Home/Offices ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ವೆಬ್ಸೈಟ್ ಭೇಟಿ ಮಾಡಬೇಕು ತದನಂತರ “Food inspector” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “District” ಆಯ್ಕೆ ಮಾಡಿಕೊಳ್ಳಬೇಕು.

ನಂತರ ನಿಮ್ಮ ತಾಲ್ಲೂಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಈ ರೀತಿ ನಿಮ್ಮ ಜಿಲ್ಲೆ ಮತ್ತು ತಾಲ್ಲೂಕನ್ನು ಆಯ್ಕೆ ಮಾಡಿಕೊಂಡ ಬಳಿಕ ನಿಮಗೆ ನಿಮ್ಮ ಹತ್ತಿರದ/ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿಯ ವಿಳಾಸ, ಅಧಿಕಾರಿ ಹೆಸರು, ಮೊಬೈಲ್ ಸಂಖ್ಯೆ ವಿವರ ತೋರಿಸುತ್ತದೆ.

Most Popular

Latest Articles

Related Articles