Self Help Groups Subsidy-ಅಲ್ಪಸಂಖ್ಯಾತ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ₹ 2.00 ಲಕ್ಷ ಸಹಾಯಧನ!

September 18, 2025 | Siddesh
Self Help Groups Subsidy-ಅಲ್ಪಸಂಖ್ಯಾತ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ₹ 2.00 ಲಕ್ಷ ಸಹಾಯಧನ!
Share Now:

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿಯಮಿತದಿಂದ ಸ್ವ ಸಹಾಯ ಸಂಘದ ಮಹಿಳೆಯರಿಗೆ ಸ್ವಂತ ಉದ್ದಿಮೆಯನ್ನು ಆರಂಭಿಸಲು ₹2.00 ಲಕ್ಷ ಸಹಾಯಧನವನ್ನು(Self Help Groups Subsidy) ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅಲ್ಪಸಂಖ್ಯಾತ ಸಮುದಾಯದ ಸ್ವ-ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಯಲ್ಲಿ ತೊಡಗಿಸಿ ಅವರನ್ನು ಆರ್ಥಿಕ ಸ್ವಾಲಂಬಿಯನ್ನಾಗಿ ಮಾಡುವ ಸಲುವಾಗಿ, ರಾಷ್ಟೀಕೃತ/ಶೆಡ್ಯೂಲ್‌ ಬ್ಯಾಂಕ್/RBI ನಿಂದ ಮಾನ್ಯತೆ ಪಡೆದ ವಿವಿಧ ಆರ್ಥಿಕ ಸಂಸ್ಥೆಗಳಿಂದ ಸಾಲವನ್ನು ಪಡೆದು ಈ ಮೊತ್ತಕ್ಕೆ ಶೇ.50 ಅಥವಾ ಗರಿಷ್ಠ ರೂ.2.00 ಲಕ್ಷದ ವರೆಗೆ ಸಬ್ಸಿಡಿಯನ್ನು ಪಡೆಯಲು "ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ/Self Help Group Business Loan Subsidy Yojane" ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ.

ಇದನ್ನೂ ಓದಿ: Azim Premji Foundation-ಅಜೀಂ ಪ್ರೇಮ್‌ಜಿ ಫೌಂಡೇಶನ್ ನಿಂದ ವಿದ್ಯಾರ್ಥಿನಿಯರಿಗೆ ₹30,000 ಸ್ಕಾಲರ್‌ಶಿಪ್!

Self Help Groups Business Loan Subsidy Details-ಯೋಜನೆ ಮತ್ತು ಸಹಾಯಧನ ಮೊತ್ತದ ವಿವರ:

ಅಲ್ಪಸಂಖ್ಯಾತ ಸಮುದಾಯದ ಸ್ವ-ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಯಲ್ಲಿ ತೊಡಗಿಸಿ ಅವರನ್ನು ಆರ್ಥಿಕ ಸ್ವಾಲಂಬಿಯನ್ನಾಗಿ ಮಾಡುವ ಸಲುವಾಗಿ, ರಾಷ್ಟೀಕೃತ/ಶೆಡ್ಯೂಲ್‌ ಬ್ಯಾಂಕ್/RBI ನಿಂದ ಮಾನ್ಯತೆ ಪಡೆದ ವಿವಿಧ ಆರ್ಥಿಕ ಸಂಸ್ಥೆಗಳಿಂದ ಪಡೆಯುವ ಸಾಲಕ್ಕೆ ಘಟಕ ವೆಚ್ಚದ ಶೇ.50 ಅಥವಾ ಗರಿಷ್ಠ ರೂ.2.00 ಲಕ್ಷ ಸಹಾಯಧನವನ್ನು ನಿಗಮದಿಂದ ಒದಗಿಸಲಾಗುತ್ತದೆ.

ಸಹಾಯಧನವು ಬ್ಯಾಕ್‌ಎಂಡ್‌ ಸಬ್ಸಿಡಿಯಾಗಿದ್ದು ಸ್ವಸಹಾಯ ಸಂಘಗಳು ಆರ್ಥಿಕ ಬ್ಯಾಂಕ್‌ಗಳಿಂದ ಪಡೆದ ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುವುದು.

ಇದನ್ನೂ ಓದಿ: Bele Vime Amount: ಮುಂಗಾರು ಹಂಗಾಮಿನ 291.92 ಕೋಟಿ ಬೆಳೆ ವಿಮೆ ರೈತರ ಖಾತೆಗೆ: ಸಚಿವ ಪ್ರಿಯಾಂಕ್ ಖರ್ಗೆ

Business Loan Subsidy

Self Help Groups Subsidy Scheme-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿಯಮಿತದಿಂದ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ನಿಗಮದಿಂದ ನಿಗದಿಪಡಿಸಿರುವ ಅರ್ಹ ಮಾನದಂಡಗಳ ಪಟ್ಟಿ ಈ ಕೆಳಗಿನಂತಿದೆ:

  • ಈ ಯೋಜನೆಯಡಿ ಸಹಾಯಧನ ಪಡೆಯುವ ಸ್ವಸಹಾಯ ಸಂಘ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಾಗಿರಬೇಕು.
  • ಮಹಿಳಾ ಸ್ವಸಹಾಯ ಸಂಘದ ಸದಸ್ಯರು ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.
  • ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರ ಸಂಖ್ಯೆ 10 ರಿಂದ 20 ರೊಳಗಿರಬೇಕು.
  • ಮಹಿಳಾ ಸ್ವಸಹಾಯ ಸಂಘದಲ್ಲಿ ಒಂದು ಕುಟುಂಬದ ಒಬ್ಬರು ಸದಸ್ಯರಿಗೆ ಮಾತ್ರ ಅವಕಾಶವಿರುತ್ತದೆ.
  • ನಿಗಮದ ಸಹಾಯಧನ ಪಡೆಯಲು ಸ್ವಸಹಾಯ ಗುಂಪು ರಚನೆಯಾಗಿ ಕನಿಷ್ಠ 6 ತಿಂಗಳಾಗಿರಬೇಕು.
  • ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಕುಟುಂಬದ ಆದಾಯ ರೂ.6.00 ಲಕ್ಷ ಮೀರಿರಬಾರದು.
  • ಸ್ವಸಹಾಯ ಸಂಘದ ಸದಸ್ಯರ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.
  • ಸ್ವಸಹಾಯ ಸಂಘವು ಕಡ್ಡಾಯವಾಗಿ ಉಪನೊಂದಾವಣಿ ಅಧಿಕಾರಿಯವರಿಂದ ನೊಂದಣಿಯಾಗಿರಬೇಕು.
  • ಸ್ವಸಹಾಯ ಸದಸ್ಯರ ಕುಟುಂಬದ ಯಾವುದೇ ಸದಸ್ಯರು ರಾಜ್ಯ/ಕೇಂದ್ರ ಸರ್ಕಾರದ ಉದ್ಯೋಗಿಗಳಾಗಿರಬಾರದು.
  • ಮಹಿಳಾ ಸ್ವಸಹಾಯ ಗುಂಪು ನಿಯಮಿತವಾಗಿ ಸಭೆಗಳನ್ನು ನಡೆಸತಕ್ಕದ್ದು (ಕನಿಷ್ಠ ತಿಂಗಳಿಗೆ ಒಂದು ಸಭೆ).

ಇದನ್ನೂ ಓದಿ: Free Bike Repair Training-ಉಚಿತ ಬೈಕ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

How To Apply For Self Help Groups Subsidy Yojana-ಅರ್ಜಿ ಸಲ್ಲಿಸುವುದು ಹೇಗೆ?

ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಹಾಕಬಹುದು ಅಥವಾ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Online Apply Method-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸವ ವಿಧಾನ:

ನಿಗಮದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಇಲ್ಲಿ ವಿವರಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿದಾರರು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

Step-1: ಸದಸ್ಯರು ಅರ್ಜಿಯನ್ನು ಸಲ್ಲಿಸಲು ಮೊದಲಿಗೆ ಇಲ್ಲಿ ಕ್ಲಿಕ್ "Self Help Groups Subsidy Online Application" ಮಾಡಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿಯಮಿತದ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: NMMS Scholarship-ಎನ್‍ಎಂಎಂಎಸ್ ಯೋಜನೆಯಡಿ ಪ್ರತಿ ತಿಂಗಳು 1,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Self Help Groups Business Loan Subsidy Application

ಇದನ್ನೂ ಓದಿ: Ration Card Correction-ರ‍ೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ!

Step-2: ಬಳಿಕ ಈ ಪುಟದಲ್ಲಿ ಮೇಲೆ ಕಾಣುವ "ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಹಾಕಿ OTP ಪಡೆದು ಲಾಗಿನ್ ಅಗಿ.

Step-3: ಲಾಗಿನ್ ಅದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಅವಶ್ಯವಾಗಿ ಭರ್ತಿ ಮಾಡಲು ಕೇಳಿರುವ ಎಲ್ಲಾ ವಿವರ ಮತ್ತು ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Required Documents For Application-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಅವಶ್ಯಕ?

ಈ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಸ್ವಸಹಾಯ ಗುಂಪಿನ ಸದಸ್ಯರು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಸ್ವಸಹಾಯ ಸದಸ್ಯರ ಗುಂಪಿನ ಪ್ರತಿ ಸದಸ್ಯರ 2 ಪಾಸ್ ಪೋರ್ಟ್‌ ಅಳತೆಯ ಭಾವ ಚಿತ್ರ/Photo.

ಸ್ವಸಹಾಯ ಗುಂಪಿನ ಸದಸ್ಯರ ಅಲ್ಪಸಂಖ್ಯಾತರ ಪ್ರಮಾಣ ಪತ್ರ/Caste Certificate.

ಸ್ವಸಹಾಯ ಗುಂಪಿನ ಸದಸ್ಯರ ಆದಾಯ ಪ್ರಮಾಣ ಪತ್ರ/Income Certificate.

ಪ್ರತಿ ಸದಸ್ಯರ ಆಧಾರ್‌ ಕಾರ್ಡ್‌ ಪ್ರತಿ/Aadhar Card.

ಸ್ವಸಹಾಯ ಗುಂಪಿನ ಸ್ವಯಂ ಉದ್ಯೋಗ ಚಟುವಟಿಕೆಯ ಯೋಜನಾ ವರದಿ/DPR.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: