Shivamogga Krishi Mela 2025-ಶಿವಮೊಗ್ಗ ಕೃಷಿ ಮೇಳಕ್ಕೆ ಅಧಿಕೃತ ದಿನಾಂಕ ನಿಗದಿ!

September 22, 2025 | Siddesh
Shivamogga Krishi Mela 2025-ಶಿವಮೊಗ್ಗ ಕೃಷಿ ಮೇಳಕ್ಕೆ ಅಧಿಕೃತ ದಿನಾಂಕ ನಿಗದಿ!
Share Now:

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಶಿವಮೊಗ್ಗ ವತಿಯಿಂದ ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಲ ಸಹಯೋಗದೊಂದಿಗೆ ಕೃಷಿ ಮತ್ತು ತೋಟಗಾರಿಕಾ ಮೇಳವನ್ನು ಆಯೋಜನೆಗೆ ವಿವಿಯಿಂದ ಅಧಿಕೃತ ದಿನಾಂಕವನ್ನು ಘೋಷಣೆ ಮಾಡಲಾಗಿದೆ.

2025-26 ನೇ ಸಾಲಿನಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಶಿವಮೊಗ್ಗ ವತಿಯಿಂದ "ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ" ಎನ್ನುವ ಘೋಷ ವಾಕ್ಯದ ಅಡಿಯಲ್ಲಿ ಈ ಬಾರಿಯ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Jati Ganati Samikshe-ರಾಜ್ಯಾದ್ಯಂತ ಇಂದಿನಿಂದ ಜಾತಿಗಣತಿ ನಿಮ್ಮ ಬಳಿ ಈ ದಾಖಲೆಗಳನ್ನು ತೆಗೆದಿಟ್ಟುಕೊಳ್ಳಿ!

ಪ್ರಸ್ತುತ ಲೇಖನದಲ್ಲಿ ಶಿವಮೊಗ್ಗ ಕೃಷಿ ಮೇಳವನ್ನು ಯಾವ ದಿನಾಂಕದಂದು ಆಯೋಜನೆ ಮಾಡಲಾಗಿದೆ? ಮೇಳದಲ್ಲಿ ಯಾವೆಲ್ಲ ವಿಭಾಗದಲ್ಲಿ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ? ಈ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Shivamogga Krishi Mela Date-ಕೃಷಿ ಮೇಳ ನಡೆಯುವ ದಿನಗಳು:

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಶಿವಮೊಗ್ಗ ವತಿಯಿಂದ 07,08,09,10 ನವೆಂವರ್ 2025 ರಂದು ಒಟ್ಟು ನಾಲ್ಕು ದಿನ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: Land Documents Check-ಕೃಷಿ ಜಮೀನು ಖರೀದಿಗೂ ಮುನ್ನ ಕಡ್ಡಾಯವಾಗಿ ಪರಿಶೀಲಿಸಬೇಕಾದ ದಾಖಲೆಗಳು ಯಾವುವು?

Shivamogga Krishi Mela Place-ಕೃಷಿ ಮೇಳ ನಡೆಯುವ ಸ್ಥಳ:

ಕೃಷಿ ಮಹಾವಿದ್ಯಾಲಯ ಅವರಣ, ನವುಲೆ ಶಿವಮೊಗ್ಗದಲ್ಲಿ ಒಟ್ಟು ನಾಲ್ಕು ದಿನ ಕೃಷಿ ಮತ್ತು ತೋಟಗಾರಿಕೆ ಮೇಳವನ್ನು ಆಯೋಜನೆ ಮಾಡಲಾಗಿದೆ.

Krishi Mela-ಕೃಷಿ ಮೇಳದ ವಿಶೇಷತೆಗಳು:

  • ತಂತ್ರಜ್ಞಾನ ಉದ್ಯಾನವನ.
  • ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ.
  • ಅಂತರ್ಜಲ ಮರುಪೂರಣ.
  • ಹೈ-ಟೆಕ್ ತೋಟಗಾರಿಕೆ.
  • ಪುಷ್ಪ ಕೃಷಿ, ತಾರಸಿ ತೋಟ ಮತ್ತು ಲಂಬ ತೋಟ ಪ್ರಾತ್ಯಕ್ಷೀಕೆ.
  • ಜೇನು ವನ ಮತ್ತು ಕೀಟ ಪ್ರಪಂಚ.
  • ಪರಿಸರ ಕೃಷಿ ಪ್ರವಾಸೋದ್ಯಮ.
  • ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ತಾಂತ್ರಿಕತೆಗಳು.
  • ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ.

ಇದನ್ನೂ ಓದಿ: Sprinkler Subsidy-PMKSY ಯೋಜನೆಯಡಿ ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್!

Krishimela
  • ಸಾವಯವ ಕೃಷಿ, ಅಣಬೆ ಬೇಸಾಯ.
  • ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು.
  • ಕೊಲ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ.
  • ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು.
  • ಹವಾಮಾನ ಆಧಾರಿತ ಕೃಷಿ ತಾಂತ್ರಿಕತೆ ಪ್ರಾತ್ಯಕ್ಷಿಕೆ.
  • ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆ ಪ್ರದರ್ಶನ
  • ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ.
  • ಪ್ರಗತಿಪರ ರೈತ ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರಧಾನ.
  • ರೈತ-ವಿಜ್ಞಾನಿ ಸಂವಾದ ಕಾರ್ಯಕ್ರಮ.

ಇದನ್ನೂ ಓದಿ: Karnataka Jati Ganati-ರಾಜ್ಯದಲ್ಲಿ ಜಾತಿಗಣತಿಗೆ ಸಮೀಕ್ಷೆ ನಡೆಸಲು ಅಧಿಕೃತ ಆದೇಶ ಪ್ರಕಟ!

Shivamogga Krishimela

ಇದನ್ನೂ ಓದಿ: HDFC Scholarship-HDFC ಬ್ಯಾಂಕ್ ವತಿಯಿಂದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್!

Shivamogga Krishi Mela Stall Booking-ಶಿವಮೊಗ್ಗ ಮೇಳದಲ್ಲಿ ಮುಂಚಿತವಾಗಿ ಮಳಿಗೆಯನ್ನು ಕಾಯ್ದಿರಿಸಲು ಈ ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ:

ಡಾ. ಬಿ.ಸಿ. ಹನುಮಂತಸ್ವಾಮಿ, ಸಹ ವಿಸ್ತರಣಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ. ಶಿವಮೊಗ್ಗ, ಮೊಬೈಲ್-9448255252

ಡಾ. ಕಲ್ಲೇಶ್ವರ ಸ್ವಾಮಿ ಸಿ.ಎಂ.. ಪ್ರಾಧ್ಯಾಪಕರು (ಕೀಟಶಾಸ್ತ್ರ ವಿಭಾಗ) ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ, ಮೊಬೈಲ್ - 9449537578

ಡಾ. ಗಿರೀಶ್ ಆರ್., ವಿಜ್ಞಾನಿ (ಸಸ್ಯ ಸಂರಕ್ಷಣೆ), ಕೆ.ವಿ.ಕೆ. ಶಿವಮೊಗ್ಗ, ಮೊಬೈಲ್ - 9739916660

ಡಾ. ನಾಗರಾಜ್ ಆರ್., ಹಿರಿಯ ತಾಂತ್ರಿಕ ಅಧಿಕಾರಿ, ಕೆ.ವಿ.ಕೆ. ಶಿವಮೊಗ್ಗ, ಮೊಬೈಲ್ - 9353493824

Shivamogga Agriculture University Website-ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: