SIM Card-ಹೊಸ ಸಿಮ್ ಕಾರ್ಡ ಖರೀದಿಗೆ ಈ ನಿಯಮ ಪಾಲಿಸುವುದು ಕಡ್ದಾಯ!

January 8, 2026 | Siddesh
SIM Card-ಹೊಸ ಸಿಮ್ ಕಾರ್ಡ ಖರೀದಿಗೆ ಈ ನಿಯಮ ಪಾಲಿಸುವುದು ಕಡ್ದಾಯ!
Share Now:

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಮತ್ತು ಕೇಂದ್ರ ಸರ್ಕಾರವು ಮೊಬೈಲ್ ಪೋನ್ ಗಳಿಗೆ ಅತೀ ಮುಖ್ಯವಾಗಿ ಬೇಕಾಗುವ ಸಿಮ್ ಕಾರ್ಡ್(New Sim Card) ಖರೀದಿ ವೇಳೆ ನಡೆಯುವ ದುರ್ಬಳಕೆಯನ್ನು ತಡೆಗಟ್ಟಲು ಮಹತ್ವದ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು. ಮೊಬೈಲ್‌ ಉಪಯೋಗವು ಎಲ್ಲ ಕುಟುಂಬಗಳಲ್ಲೂ ಸಾಮಾನ್ಯವಾದ ಈ ಕಾಲದಲ್ಲಿ, ಸಿಮ್ ಕಾರ್ಡ್ ಪಡೆಯುವ ಪ್ರಕ್ರಿಯೆಯನ್ನು ಇನ್ನಷ್ಟು ಕಟ್ಟುನಿಟ್ಟಿನ ಮತ್ತು ಪಾರದರ್ಶಕವಾಗಿಸಲು ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

ಹೊಸ ನಿಯಮಗಳು ಮುಖ್ಯವಾಗಿ ನಕಲಿ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್(SIM Card) ಪಡೆಯುವವರನ್ನು ಪತ್ತೆಹಚ್ಚುವುದು, ಸೈಬರ್ ಅಪರಾಧಗಳನ್ನು ಕಡಿಮೆ ಮಾಡುವುದು ಮತ್ತು ಗ್ರಾಹಕರ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದ್ದು ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Kuri Shed Subsidy-ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣಕ್ಕೆ ರೂ 70,000 ಪಡೆಯುವುದು ಹೇಗೆ!

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್(Mobile) ಬಳಕೆದಾರ ಸಂಖ್ಯೆಯು ದಿನೇ ದಿನೇ ಹೆಚ್ಚುತಿದ್ದು ಪೋನ್ ಬಳಕೆದಾರರು ಡಿಜಿಟಲ್ ಮಾಧ್ಯಮಗಳನ್ನು ಬಳಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅತೀ ಮುಖ್ಯವಾಗಿದೆ. ನಕಲಿ ದಾಖಲೆಯನ್ನು ಸಲ್ಲಿಸಿ ಅಥವಾ ಬೇರೊಬ್ಬರ ದಾಖಲೆಯನ್ನು ಸಲ್ಲಿಸಿ ಸಿಮ್ ಖರೀದಿ ಮಾಡುವ ವಂಚನೆಗಳಿಗೆ ಬ್ರೇಕ್ ಹಾಕಲು ಸರ್ಕಾರವು ನೂತನ ನಿಯಮವನ್ನು ಜಾರಿಗೆ ತಂದಿದೆ.

SIM Card Purchase Rules-ಹೊಸ ಸಿಮ್ ಕಾರ್ಡ ಖರೀದಿಗೆ– ಈಗಿನಿಂದ ಬದಲಾದ ನಿಯಮಗಳು:

ಹೊಸ ಸಿಮ್ ಕಾರ್ಡ್ ಖರೀದಿಸುವವರು ಈಗಿನಿಂದ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು:

1) ಖುದ್ದಾಗಿ ಹಾಜರಿರಬೇಕು:

ಸಿಮ್ ಖರೀದಿದಾರರು ಯಾವುದೇ ಪ್ರತಿನಿಧಿ/ಮಧ್ಯವರ್ತಿಯ ಮೂಲಕ ಸಿಮ್ ಪಡೆಯಲು ಅವಕಾಶವಿಲ್ಲ. ನೀವು ಸ್ವತಃ ಹಾಜರಿದ್ದು ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಇದನ್ನೂ ಓದಿ: Morarji Desai admission-ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭ!

2) ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ:

ಸಿಮ್ ಕಾರ್ಡ್ ಪಡೆಯುವಾಗ ಆಧಾರ್ ಕಾರ್ಡ್‌ನ ಬೆರಳಚ್ಚು (Biometric Aadhaar Verification) ನೀಡುವುದು ಈಗಿನಿಂದ ಕಡ್ಡಾಯವಾಗಿದೆ.

3) Photo Verification:

ಟೆಲಿಕಾಂ ಕಂಪನಿಗಳು ಗ್ರಾಹಕರ ನವೀನ ಫೋಟೋ ವೆರಿಫಿಕೇಶನ್‍‌ನ್ನು ಕೂಡ ಅವಶ್ಯವಾಗಿ ಮಾಡಲೇಬೇಕು.

4) E-KYC ಮಾಡದೇ ಸಿಮ್ ನೀಡಿದರೆ ಕಂಪನಿಗೆ ಕಠಿಣ ಕ್ರಮ:

ಟೆಲಿಕಾಂ ಕಂಪನಿಗಳು ಆಧಾರ್ ದೃಢೀಕರಣ ಅಥವಾ e-KYC ಮಾಡದೇ ಸಿಮ್ ಮಾರಾಟ ಮಾಡಿದರೆ ಅವರಿಗೆ ಕೇಂದ್ರದಿಂದ ಕಠಿಣ ದಂಡ ಮತ್ತು ಕಾನೂನು ಕ್ರಮ ಜರುಗಲಿದೆ.

ಇದನ್ನೂ ಓದಿ: Bele Parihara Amount-ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆ!

SIM Card

ಇದನ್ನೂ ಓದಿ: Whatsapp Banking-ಗ್ರಾಹಕರಿಗೆ ಸಿಹಿ ಸುದ್ದಿ: ಈಗ ವಾಟ್ಸಾಪ್ ನಲ್ಲೇ ಬ್ಯಾಂಕಿಂಗ್ ಸೇವೆ ಲಭ್ಯ!

5) AI ತಂತ್ರಜ್ಞಾನ ಬಳಕೆ:

ನಕಲಿ ದಾಖಲೆಗಳ ಆಧಾರದಲ್ಲಿ ಸಿಮ್ ಪಡೆಯುವವರನ್ನು ಗುರುತಿಸಲು ಸರ್ಕಾರ ಈಗ AI–Artificial Intelligence ತಂತ್ರಜ್ಞಾನವನ್ನು ಸಹ ಬಳಸಲಿದೆ.

Mobile SIM Card-ದುರ್ಬಳಕೆಗೆ ಪೂರ್ಣ ಬ್ರೇಕ್!

ಸಿಮ್ ಕಾರ್ಡಗಳನ್ನು ನಕಲಿ ದಾಖಲೆಗಳಿಂದ ತೆಗೆದುಕೊಂಡು ಸೈಬರ್ ವಂಚನೆ, OTP ದುರ್ಬಳಕೆ, ಫ್ರಾಡ್ ಕಾಲ್‌ಗಳು, ಬ್ಯಾಂಕ್ ಮೋಸಗಳು, ಇತ್ಯಾದಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮಗಳು ಪರಿಣಾಮಕಾರಿ ಆಗಲಿವೆ. AI ತಂತ್ರಜ್ಞಾನ ಹಾಗೂ ಬಯೋಮೆಟ್ರಿಕ್ ಪರಿಶೀಲನೆಯಿಂದ ಇಂತಹ ಅಕ್ರಮಗಳನ್ನು ಕಡಿಮೆ ಮಾಡಬಹುದು ಎಂದು ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ: Online Land Records-ರೈತರು ಇನ್ಮುಂದೆ ತಮ್ಮ ಜಮೀನಿನ ದಾಖಲೆ ಪಡೆಯುವುದು ಭಾರೀ ಸುಲಭ!

Documents For SIM Card Purchase-ಹೊಸ ಸಿಮ್ ಕಾರ್ಡ ಖರೀದಿ ಮಾಡಲು ಅಗತ್ಯ ದಾಖಲೆಗಳ ಪಟ್ಟಿ:

ಖರೀದಿದಾರರ ಆಧಾರ್ ಕಾರ್ಡ
ಖುದ್ದು ಸಿಮ್ ಖರೀದಿ ಮಾಡುವವರು ಹಾಜರಿರಬೇಕು
ಪೋಟೋ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: