Solar Pumpset Subsidy-ಶೇ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ ಸೆಟ್ ಇಂದೇ ಅರ್ಜಿ ಸಲ್ಲಿಸಿ!

December 6, 2025 | Siddesh
Solar Pumpset Subsidy-ಶೇ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ ಸೆಟ್ ಇಂದೇ ಅರ್ಜಿ ಸಲ್ಲಿಸಿ!
Share Now:

ರೈತರ ಪಂಪ್ ಸೆಟ್ ಗಳಿಗೆ ನಿರಂತರವಾಗಿ ವಿದ್ಯುತ್ ಅನ್ನು ಪೂರೈಕೆ ಮಾಡಲು ಕುಸುಮ್ ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಅನ್ನು(Solar Pumpset Subsidy Application) ಅಳವಡಿಸಿಕೊಳ್ಳಲು ಸಹಾಯಧನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಪ್ರಕಟಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೈತರಿಗೆ ಕೃಷಿ ಬೆಳೆಗಳಿಗೆ ಸಮರ್ಪಕವಾಗಿ ಹಗಲಿನ ವೇಳೆಯಲ್ಲಿ ನೀರನ್ನು ಒದಗಿಸಲು ಶೇ 80% ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್(Solar Pumpset subsidy)ಅನ್ನು ತಮ್ಮ ಜಮೀನಿನಲ್ಲಿ ಸ್ಥಾಪನೆ ಮಾಡಿಕೊಳ್ಳಲು ಅರ್ಹ ರೈತರನ್ನು ಆಯ್ಕೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: TATA Scholarship-ಟಾಟಾ ಗ್ರೂಪ್‌ ಕಂಪನಿ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ 15,000/- ವಿದ್ಯಾರ್ಥಿವೇತನ!

ಪ್ರಸ್ತುತ ಲೇಖನದಲ್ಲಿ ಸೋಲಾರ್ ಪಂಪ್ ಸೆಟ್ ಗೆ ಸಬ್ಸಿಡಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಏನಿದು ಸೋಲಾರ್ ಸಬ್ಸಿಡಿ ಕುಸುಮ್ ಬಿ(KUSUMA-B Yojana) ಯೋಜನೆ? ಎಷ್ಟು ಸಬ್ಸಿಡಿ ಒದಗಿಸಲಾಗುತ್ತದೆ? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇದರ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

KUSUMA-B: ಸೋಲಾರ್ ಪಂಪ್ ಸೆಟ್ ಸಬ್ಸಿಡಿಗೆ ಕುಸುಮ್ ಬಿ ಯೋಜನೆ:

ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮೋಟಾರ್ ಪಂಪ್ ಸೆಟ್ ಗಳಿಗೆ ನಿರಂತರವಾಗಿ ವಿದ್ಯುತ್ ಅನ್ನು ಪೂರೈಕೆ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಶೇ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಕೆ ಮಾಡಲು ಕುಸುಮ್ ಬಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Free Photoghrapy Training-ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!

ಸೋಲಾರ್ ಪಂಪ್ ಸೆಟ್ HP ವಾರು ಸಬ್ಸಿಡಿ ವಿವರ:

ರೈತರು ತಮ್ಮ ಜಮೀನಿನಲ್ಲಿ ಸೋಲಾರ್ ಪಂಪ್ ಸೆಟ್ ಅನ್ನು ಸ್ಥಾಪನೆ ಮಾಡಿಕೊಳ್ಳಲು ಕೇಂದ್ರ ಸರಕಾರ ಶೇ 50% ರಾಜ್ಯ ಸರಕಾರ ಶೇ 20% ಸಹಾಯಧನವನ್ನು ಒದಗಿಸುತ್ತಿದ್ದು ರೈತರು ಶೇ 20% ಪಾವತಿ ಮಾಡಿ ಸೋಲಾರ್ ಪಂಪ್ ಸೆಟ್ ಸ್ಥಾಪನೆ ಮಾಡಿಕೊಳ್ಳಬಹುದು. ಇದಕ್ಕಾಗಿ HP ವಾರು ಸಬ್ಸಿಡಿ ಮತ್ತು ರೈತರ ಪಾವತಿ ಮೊತ್ತದ ಮಾಹಿತಿ ಹೀಗಿದೆ:

ಸೌರ ಪಂಪ್ ಸಬ್ಸಿಡಿರೈತರ ವಂತಿಕೆ
3 HP4,12,764/-92,068/-
5 HP5,95,146/-1,21,473/-
7.5 HP8,41,956/-1,82,294/-
10 HP10,50,381/-4,02,017/-

ಇದನ್ನೂ ಓದಿ: AHFL Scholarship-ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ₹50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Last Date For Application- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಡಿಸೆಂಬರ್ 2025

How To Apply For Solar Pumpset Subsidy-ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ರೈತರು ತಮ್ಮ ಜಮೀನಿನಲ್ಲಿ ಸಬ್ಸಿಡಿಯಲ್ಲಿ ಸೋಲಾರ್ ಪಂಪ್ ಸೆಟ್ ಅನ್ನು ಅಳವಡಿಸಿಕೊಳ್ಳಲು ಹತ್ತಿರದ ಗ್ರಾಮ್ ಒನ್ ಕೇಂದ್ರ/ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ತಾಲ್ಲೂಕಿನ ಎಸ್ಕಾಂ/ವಿದ್ಯುತ್ ಸರಬರಾಜು ಕಂಪನಿ ಕವೇರಿಯನ್ನು ಭೇಟಿ ಮಾಡಿಯು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ಸ್ವಂತ ನೀವೆ ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಹಾಕಬಹುದು.

Solar Pumpset Subsidy

Solar Pumpset Subsidy Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:

ರೈತರು ಸೋಲಾರ್ ಪಂಪ್ ಸೆಟ್ ಅನ್ನು ಸಹಾಯಧನದಲ್ಲಿ ಪಡೆಯಲು ರಾಜ್ಯ ಸರಕಾರದ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Step-1: ಮೊದಲಿಗೆ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ.

ಇದನ್ನೂ ಓದಿ: E- Swathu Website-ಪಂಚಾಯತ್ ರಾಜ್ ಇಲಾಖೆಯಿಂದ ಇ-ಸ್ವತ್ತು 2.0 ತಂತ್ರಾಂಶ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ!

Step-2: ನಂತರ ಇಲ್ಲಿ ಮುಖಪುಟದಲ್ಲಿ ಮೇಲೆ ಕಾಣುವ "Farmer Registration/Vendor Selection (Componet-B)"ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ OTP ಅನ್ನು ನಮೂದಿಸಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-3: ಈ ಪೇಜ್ ನಲ್ಲಿ ನಿಮ್ಮ ಹೆಸರು ಇನ್ನಿತರೆ ವೈಯಕ್ತಿಕ ವಿವರ ಹಾಗೂ ಕೊನೆಯಲ್ಲಿ ಸೋಲಾರ್ ಪಂಪ್ ಸೆಟ್ ಸರಬರಾಜು ಕಂಪನಿಯ ವಿವರ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.

Required Documents-ಅರ್ಜಿ ಸಲ್ಲಿಸಲು ದಾಖಲೆಗಳು:

ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ರೈತರು ಒದಗಿಸಬೇಕಾದ ಅವಶ್ಯಕ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ರೈತರ ಆಧಾರ್ ಕಾರ್ಡ
  • ಪೋಟೋ
  • ಬ್ಯಾಂಕ್ ಪಾಸ್ ಬುಕ್
  • ಜಮೀನಿನ ಪಹಣಿ/ಉತಾರ್
  • ರೇಶನ್ ಕಾರ್ಡ ಪ್ರತಿ
  • ಮೊಬೈಲ್ ನಂಬರ್

ಇದನ್ನೂ ಓದಿ: Indira Kit-ಇಂದಿರಾ ಆಹಾರ ಕಿಟ್ ವಿತರಣೆಗೆ ಕ್ಯೂಆರ್ ಕೋಡ್!

Solar Pumpset Yojana Benefits-ಸೋಲಾರ್ ಪಂಪ್ ಸೆಟ್ ಅಳವಡಿಕೆಯ ಪ್ರಯೋಜನಗಳು:

ರಾಜ್ಯ ಮತ್ತು ಕೇಂದ್ರ ಸರಕಾರದಿಂದ ರೈತರಿಗೆ ಹಗಲಿನ ಸಮಯದಲ್ಲಿ ತಮ್ಮ ಬೆಳೆಗಳಿಗೆ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಸೋಲಾರ್ ಪಂಪ್ ಸೆಟ್ ಯೋಜನೆ ಇದಾಗಿದೆ.

ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಕುಸುಮ್ ಬಿ ಯೋಜನೆಯನು ಜಾರಿಗೆ ತರಲಾಗಿದ್ದು, ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು, ಸೌರಶಕ್ತಿ ಬಳಕೆಯ ಉತ್ತೇಜನಕ್ಕೆ ಸರ್ಕಾರದಿಂದ ಶೇ.80 ರಷ್ಟು ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ.

ಕುಸುಮ್ ಬಿ ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್ಸೆಟ್ ಅಳವಡಿಸಲು ಒತ್ತು ನೀಡಿ ರಾಜ್ಯ ಸರ್ಕಾರವುಸಬ್ಸಿಡಿ ಮೊತ್ತವನ್ನು ಶೇ. 30 ರಿಂದ ಶೇ. 50ಕ್ಕೆ ಹೆಚ್ಚಿಸಿದೆ.ಕುಸುಮ್ ಬಿ ಯೋಜನೆಯಡಿ ರೈತರಿಗೆ ಸೌರ ಫಲಕಗಳು, ಸಬ್ಮರ್ಸಿಬಲ್/ಸರ್ಫೇಸ್ ಡಿಸಿ ಪಂಪ್ಗಳು, ಮೌಂಟಿಂಗ್ ಸ್ಟ್ರಕ್ಟರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ನೀಡಲಾಗುತ್ತದೆ.

ಸೌರ ಪಂಪ್ ಸೆಟ್ ಅಳವಡಿಕೆ ಯಿಂದಾಗಿ ಸುಮಾರು 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಪೂರೈಕೆಯನ್ನು ಪಡೆಯಬಹುದಾಗಿದೆ.

ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೋಲಾರ್ ಪಂಪ್ ಸೆಟ್ ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಒದಗಿಸುತ್ತಾರೆ.

Solar Pumpset Scheme Helpline-ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು:

ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್- Apply Now
ರೈತ ಸಹಾಯವಾಣಿ: 0836-2222535

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: