Sprinkler Subsidy-PMKSY ಯೋಜನೆಯಡಿ ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್!

September 21, 2025 | Siddesh
Sprinkler Subsidy-PMKSY ಯೋಜನೆಯಡಿ ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್!
Share Now:

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಕೃಷಿಕರಿಗೆ ಬೆಳೆಗಳಿಗೆ ನೀರನ್ನು ಒದಗಿಸಲು ಸ್ಪಿಂಕ್ಲರ್ ಸೆಟ್ ಮತ್ತು ಪೈಪ್ ಅನ್ನು ಹೊಂದಲು ಶೇ 90% ಸಬ್ಸಿಡಿಯನ್ನು ಒದಗಿಸಲಾಗುತ್ತಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ವಿವರಿಸಲಾಗಿದೆ.

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ 2025-26 ನೇ ಸಾಲಿನ ರಾಷ್ಟ್ರೀಯ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ(PMKSY) ಎಲ್ಲಾ ವರ್ಗದ ರೈತರಿಗೆ ಶೇ 90 ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್(Sprinkler Set ) ಅನ್ನು ಖರೀದಿ ಮಾಡಲು ಅವಕಾಶವಿದ್ದು ಅರ್ಹ ರೈತರು ತಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಈ ಯೋಜನೆ ಪ್ರಯೋಜನವನ್ನು ಪಡೆಯಬಹುದು.

ಇದನ್ನೂ ಓದಿ: Karnataka Jati Ganati-ರಾಜ್ಯದಲ್ಲಿ ಜಾತಿಗಣತಿಗೆ ಸಮೀಕ್ಷೆ ನಡೆಸಲು ಅಧಿಕೃತ ಆದೇಶ ಪ್ರಕಟ!

ಬೆಳೆಗಳಿಗೆ ನೀರಿನ ಅವಶ್ಯಕಯಿರುವ ಸಮಯದಲ್ಲಿ ರೈತರು ತಮ್ಮ ಬೆಳೆಗಳಿಗೆ ನೀರನ್ನು ಒದಗಿಸಲು ತುಂತುರು ನೀರಾವರಿ ಘಟಕವನ್ನು(Sprinkler Set Application) ಬಳಕೆ ಮಾಡಿಕೊಂಡು ಬೆಳೆಗಳಿಗೆ ಸಮರ್ಪಕವಾಗಿ ನೀರನ್ನು ಒದಗಿಸಬಹುದು.

Sprinkler Set Amount-ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಎಷ್ಟು ಹಣ ಪಾವತಿಸಬೇಕು?

ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಿ ಶೇ 90 ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಮತ್ತು ಕಪ್ಪು ಪೈಪ್ ಅನ್ನು ಪಡೆಯಲು ರೈತರು ಪೈಪ್ ಸರಬರಾಜು ಕಂಪನಿಗೆ ₹4,667/- ರೂ ರೈತರ ವಂತಿಕೆಯನ್ನು ಪಾವತಿ ಮಾಡಿ ತುಂತುರು ನೀರಾವರಿ ಘಟಕವನ್ನು(Sprinkler Set) ಖರೀದಿ ಮಾಡಬಹುದು.

ಇದನ್ನೂ ಓದಿ: HDFC Scholarship-HDFC ಬ್ಯಾಂಕ್ ವತಿಯಿಂದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್!

Sprinkler pipes Details-ತುಂತುರು ನೀರಾವರಿ ಘಟಕ/ಸ್ಪಿಂಕ್ಲರ್ ಸೆಟ್ ಘಟಕದಲ್ಲಿ ಯಾವೆಲ್ಲ ಪರಿಕರಗಳನ್ನು ಒದಗಿಸಲಾಗುತ್ತದೆ?

ತುಂತುರು ನೀರಾವರಿ ಘಟಕ/ಸ್ಪಿಂಕ್ಲರ್ ಸೆಟ್ ಘಟಕದಲ್ಲಿ ಈ ಕೆಳಗಿನ ಪಟ್ಟಿಯಲ್ಲಿರುವ ಪರಿಕರಗಳನ್ನು ಒದಗಿಸಲಾಗುತ್ತದೆ.

  • 30 ಪೈಪ್ಸ್ ಮತ್ತು 5 ಜೆಟ್ಸ್
  • ಕ್ಲಾಂಪ್ಸ್, ಕಪಲರ್ಸ್,ಎಂಡ್ ಕ್ಯಾಪ್ಸ್,
  • ವಾಷರ್ಸ್,T ಪರಿಕರಗಳನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: Bank Account KYC-ನಿಮ್ಮ ಬ್ಯಾಂಕ್ ಖಾತೆ ಸಕ್ರಿಯಗೊಳಿಸಲು ಇ-ಕೆವೈಸಿ ಮಾಡಿಸಲು ಸೂಚನೆ!

Sprinkler

ಇದನ್ನೂ ಓದಿ: Deepika Scholarship Scheme-ದೀಪಿಕಾ ವಿದ್ಯಾರ್ಥಿವೇತನ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ರೂ.30,000/-ಸ್ಕಾಲರ್‌ಶಿಪ್‌!

Required Documents For Sprinkler pipes-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ತುಂತುರು ನೀರಾವರಿ ಘಟಕ/ಸ್ಪಿಂಕ್ಲರ್ ಸೆಟ್ ಘಟಕಕ್ಕೆ ಅರ್ಜಿಯನ್ನು ಸಲ್ಲಿಸಲು ರೈತರು ಒದಗಿಸಬೇಕಾದ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ:

  • ಅರ್ಜಿದಾರ ರೈತರ ಜಮೀನಿನ ಪಹಣಿ
  • ರೈತರ ಆಧಾರ್ ಕಾರ್ಡ ಪ್ರತಿ
  • ರೈತರ ಬ್ಯಾಂಕ್ ಪಾಸ್ ಬುಕ್ ಪ್ರತಿ
  • ರೈತರ ಬೆಳೆ ಧೃಡೀಕರಣ ಪ್ರಮಾಣ ಪತ್ರ
  • ಕೊಳವೆ ಭಾವಿ ಧೃಡೀಕರಣ ಪತ್ರ
  • ₹100 ರೂ ಛಾಪಾ ಕಾಗದ
  • ತೋಟಗಾರಿಕೆ ಇಲಾಖೆಯಿಂದ NOC
  • ಪೋಟೋ

ಇದನ್ನೂ ಓದಿ: Samaja Kalyana Ilake-ಡಾ.ಬಾಬು ಜಗಜೀವನ ಚರ್ಮ ನಿಗಮದಿಂದ ವಸತಿ ಯೋಜನೆಯಡಿ ಅರ್ಜಿ ಆಹ್ವಾನ!

How To Apply For Sprinkler Set Yojana-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ರೈತರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು ಅಥವಾ ನೇರವಾಗಿ ಅಧಿಕೃತ ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Who Can Apply For Sprinkler Set Scheme-ಅರ್ಜಿ ಸಲ್ಲಿಸಲು ಅರ್ಹರು:

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.

ಅರ್ಜಿದಾರರು ತಮ್ಮ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರಬೇಕು ಮತ್ತು ಅಧಿಕೃತ ಪಹಣಿ ಪ್ರತಿ ಹೊಂದಿರಬೇಕು.

ಅರ್ಜಿದಾರರು PMKSY ಯೋಜನೆಯಡಿ ಕಳೆದ 7 ವರ್ಷಗಳಲ್ಲಿ ಸ್ಪಿಂಕ್ಲರ್ ಸೆಟ್ ಅನ್ನು ಪಡೆದಿರಬಾರದು.

ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಅರ್ಜಿ ಸಲ್ಲಿಸಿ ಸಬ್ಸಿಡಿ ಪಡೆಯಲು ಅವಕಾಶವಿರುತ್ತದೆ.

Sprinkler Pipe Online Application-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ:

ರೈತರು ಸ್ವಂತ ತಮ್ಮ ಮೊಬೈಲ್ ನಲ್ಲಿ ಕೃಷಿ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.ಇದಕ್ಕಾಗಿ ಈ ಕೆಳಗಿನ ನೀಡಿರುವ ಲಿಂಕ್ ಬಳಕೆ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ-Apply Now

Sprinkler Subsidy

ಅನುದಾನ ಲಭ್ಯತೆ ಆಧಾರದ ಮೇಲೆ ಸ್ಪಿಂಕ್ಲರ್ ಸೆಟ್ ವಿತರಣೆ:

ಕೃಷಿ ಇಲಾಖೆಯಿಂದ ರೈತರಿಗೆ ಸ್ಪಿಂಕ್ಲರ್ ಸೆಟ್ ಅನ್ನು ಒದಗಿಸಲು ಆಯಾ ತಾಲ್ಲೂಕುಗಳಲ್ಲಿ ಲಭ್ಯವಿರುವ ಅನುದಾನದ ಲಭ್ಯತೆ ಆಧಾರ ಮೇಲೆ ಮೊದಲು ಅರ್ಜಿ ಸಲ್ಲಿಸಿದ ರೈತರ ಅನುಸಾರವಾಗಿ ಜೇಷ್ಠತೆ ಆಧಾರ ಮೇಲೆ ಸ್ಪಿಂಕ್ಲರ್ ಸೆಟ್ ಅನ್ನು ವಿತರಣೆ ಮಾಡಲಾಗುತ್ತದೆ.

  • Agriculture Department-ಕೃಷಿ ಇಲಾಖೆಯ ವೆಬ್ಸೈಟ್- CLICK HERE
  • Helpline-ಸಹಾಯವಾಣಿ- 1800 425 3553

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: