Togari Bembala Bele-ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕುರಿತು ಮತ್ತೊಂದು ಆದೇಶ ಪ್ರಕಟ!

May 1, 2025 | Siddesh
Togari Bembala Bele-ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕುರಿತು ಮತ್ತೊಂದು ಆದೇಶ ಪ್ರಕಟ!
Share Now:

ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು, ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ(Togari Kharidi Kendra) ಅವಧಿಯನ್ನು ಮೇ ತಿಂಗಳ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಘೋಷಿಸಿದ್ದಾರೆ. ಮೂಲತಃ ಮೇ 1 ರಂದು ಕೊನೆಗೊಳ್ಳಬೇಕಿದ್ದ ಖರೀದಿ ಅವಧಿಯನ್ನು, ನಿಗದಿತ ಖರೀದಿ ಪ್ರಮಾಣವನ್ನು ತಲುಪದ ಕಾರಣ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ.

ಕೇಂದ್ರ ಸರ್ಕಾರವು 3.06 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು(Minimum Support Price dal) ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮತಿ ನೀಡಿದೆ. ಇದುವರೆಗೆ 1.83 ಲಕ್ಷ ಮೆಟ್ರಿಕ್ ಟನ್ ಖರೀದಿಯಾಗಿದ್ದು, ರೈತರು 2.70 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಸುಮಾರು 93,000 ಮೆಟ್ರಿಕ್ ಟನ್ ಖರೀದಿ ಮಾಡಬೇಕಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Gruhalakshmi-ಗೃಹಲಕ್ಷ್ಮಿ ಫಲಾನುಭವಿಗಳಿಗೆ ಭರ್ಜರಿ ಸಿಹಿ ಸುದ್ದಿ! ಒಂದೇ ಬಾರಿಗೆ 3 ತಿಂಗಳ ಹಣ!

ಕೇಂದ್ರ ಸರ್ಕಾರವು ಪ್ರತಿ ಟನ್‌ಗೆ ₹7,550 ಬೆಂಬಲ ಬೆಲೆಯನ್ನು(Bembala Bele) ನಿಗದಿಪಡಿಸಿದೆ. ಆದರೆ, ಈ ಬೆಲೆ ಕಡಿಮೆ ಎಂದು ರೈತರು ಹೆಚ್ಚಿನ ಬೆಲೆಗೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು, ಪ್ರತಿ ಕ್ವಿಂಟಾಲ್‌ಗೆ ₹450 ಪ್ರೋತ್ಸಾಹ ಧನ ಘೋಷಿಸಲಾಗಿದೆ. ಇದರಿಂದ, ಒಟ್ಟಾರೆ ಪ್ರತಿ ಕ್ವಿಂಟಾಲ್‌ಗೆ ₹8,000 ದರದಲ್ಲಿ ತೊಗರಿ ಖರೀದಿಯಾಗಲಿದೆ. ರೈತರು ಈ ಅವಕಾಶವನ್ನು ಬಳಸಿಕೊಂಡು ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ತೊಗರಿಯನ್ನು ಮಾರಾಟ ಮಾಡಬಹುದು ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

Minimum Support Price-ತೊಗರಿ ಖರೀದಿಗೆ ಬೆಂಬಲ ಬೆಲೆ ವಿವರ ಹೀಗಿದೆ:

ಕೇಂದ್ರ ಸರ್ಕಾರವು ತೊಗರಿಗೆ ₹7,550 ಪ್ರತಿ ಕ್ವಿಂಟಾಲ್‌ಗೆ ಬೆಂಬಲ ಬೆಲೆ ನಿಗದಿಪಡಿಸಿದೆ. ಇದಕ್ಕೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ₹450 ಪ್ರೋತ್ಸಾಹ ಧನ ಸೇರಿ, ರೈತರಿಗೆ ಪ್ರತಿ ಕ್ವಿಂಟಾಲ್‌ಗೆ ₹8,000 ದೊರೆಯಲಿದೆ.

ಇದನ್ನೂ ಓದಿ: Crop Insurance Status-ನಿಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಹಣ ಜಮಾ ವಿವರ ಚೆಕ್ ಮಾಡಿ!

Togari Bembala Bele

Rules For Togari MSP Yojana-ರೈತರಿಂದ ತೊಗರಿ ಖರೀದಿಸಲು ನಿಗದಿಪಡಿಸಿರುವ ಮಾನದಂಡಗಳು:

ತೊಗರಿ ಬೆಳೆಗಾರರಿಂದ ಪ್ರತಿ ಎಕರೆಗೆ ನಿಗದಿತ ಕ್ವಿಂಟಾಲ್‌ನಂತೆ, ಒಬ್ಬ ರೈತನಿಂದ ಗರಿಷ್ಠ ಕ್ವಿಂಟಾಲ್ ತೊಗರಿಯನ್ನು ಖರೀದಿಸಲಾಗುವುದು.

ಅರ್ಹ ರೈತರು ತಮ್ಮ ಹತ್ತಿರದ PACS/FPO/TAPCMS ಕೇಂದ್ರಗಳಲ್ಲಿ ಕೃಷಿ ಇಲಾಖೆಯಿಂದ ನೀಡಲಾದ ಫ್ರೂಟ್ಸ್ ಐಡಿ ಸಂಖ್ಯೆಯನ್ನು ಒದಗಿಸಿ ನೋಂದಣಿ ಮಾಡಿಕೊಂಡು ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಹುದು ಎಂದು ಕೃಷಿ ಮಾರಾಟ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ತಿಳಿಸಿದೆ.

ಇದನ್ನೂ ಓದಿ: RTC And Mutation-ಪಹಣಿ ಮತ್ತು ಮ್ಯುಟೇಷನ್ ಮಾಡಲು ಆನ್‍ಲೈನ್ ಅರ್ಜಿ!

Required Documents For Togari MSP-ಒದಗಿಸಬೇಕಾದ ಅಗತ್ಯ ದಾಖಲೆಗಳು:

  • ರೈತರ ಆಧಾರ್ ಕಾರ್ಡ್ ಪ್ರತಿ/Aadhar Card
  • ಬ್ಯಾಂಕ್ ಪಾಸ್‌ಬುಕ್/Bank Pass Book
  • ಜಮೀನಿನ ಪಹಣಿ/ಊತಾರ್/RTC
  • ಮೊಬೈಲ್ ಸಂಖ್ಯೆ/Mobile Number

MSP Scheme DBT Amount-ಮಾರಾಟದ ಹಣವನ್ನು ಹೇಗೆ ಜಮಾ ಮಾಡಲಾಗುತ್ತದೆ?

ರೈತರು ತೊಗರಿ ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ನೋಂದಣಿಯನ್ನು ಮಾಡಿಕೊಂಡು ನಿಗದಿಪಡಿಸಿದ ದಿನಾಂಕದಂದು ತಮ್ಮ ಉತ್ಪನ್ನವನ್ನು ಮಾರಾಟ ಮಾಡಿದ ಬಳಿಕ 10-15 ದಿನದ ನಂತರ ತಾವು ಸಲ್ಲಿಸಿರುವ ಬ್ಯಾಂಕ್ ಅಂದರೆ ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ತೊಗರಿ ಮಾರಾಟ ಮಾಡಿದ ಹಣ ಜಮಾ ಅಗುತ್ತದೆ.

ಇದನ್ನೂ ಓದಿ: Bangalore university-ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿವಿಧ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

For More Information-ಹೆಚ್ಚಿನ ಮಾಹಿತಿ ಪಡೆಯಲು:

ರೈತರು ಈ ಕುರಿತು ತಮ್ಮ ತಾಲೂಕಿನ ಕೃಷಿ ಮಾರಾಟ ಇಲಾಖೆ ಅಥವಾ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಕಚೇರಿಗಳನ್ನು ಸಂಪರ್ಕಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: