Scholarship Application-TVS ಪೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ!

August 27, 2025 | Siddesh
Scholarship Application-TVS ಪೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ!
Share Now:

ಟಿವಿಎಸ್ ಕಂಪನಿಯ(TVS) ಅಂಗ ಸಂಸ್ಥೆ TVS ಚೀಮಾ ಪೌಂಡೇಶನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು(TVS Company Scholariship)ಒದಗಿಸಲು ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಟಿವಿಎಸ್ ಮೋಟಾರ್ ಕಂಪನಿಯ ಸಂಸ್ಥಾಪಕ ಟಿಎಸ್ ಶ್ರೀನಿವಾಸನ್ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ "ಟಿವಿಎಸ್ ಚೀಮಾ ವಿದ್ಯಾರ್ಥಿವೇತನ/TVS Foundation Scholariship" ಕಾರ್ಯಕ್ರಮದಡಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಇಂಜಿನಿರಿಂಗ್,ಡಿಪ್ಲೋಮಾ ಮತ್ತು ನರ್ಸಿಂಗ್ ವ್ಯಾಸಂಗಕ್ಕೆ ಪ್ರವೇಶವನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉತೇಜನ ನೀಡಲು ಆರ್ಥಿಕ ನೆರವನ್ನು ಒದಗಿಸಲು ವಿದ್ಯಾರ್ಥಿವೇತನ ಪಡೆಯಲು ಅರ್ಜಿ(TVS Foundation Scholariship Apllication) ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Cotton MSP Price-ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ 8,110/- ರಂತೆ ಹತ್ತಿ ಖರೀದಿಗೆ ರೈತರ ನೋಂದಣಿ ಆರಂಭ!

TVS Foundation Scholariship-ವಿದ್ಯಾರ್ಥಿವೇತನ ಯೋಜನೆಗಳ ವಿವರ:

ಕರ್ನಾಟಕ ಮತ್ತು ತಮಿಳುನಾಡು ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳಿಗೆ ಈ ಕೆಳಗಿನ ವಿದ್ಯಾರ್ಥಿವೇತನ ಯೋಜನೆಯಡಿ ಸ್ಕಾಲರ್ಶಿಪ್ ಅನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

1) ಇಂಜಿನಿರಿಂಗ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕಾರ್ಯಕ್ರಮ.
2) ಡಿಪ್ಲೋಮಾ ವಿದ್ಯಾರ್ಥಿ ಸ್ಕಾಲರ್ಶಿಪ್ ಕಾರ್ಯಕ್ರಮ.

TVS Foundation Scholariship Eligibility Criteria-ಅರ್ಜಿ ಸಲ್ಲಿಸಲು ಅರ್ಹರು:

  • ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿಯು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಕ್ಕೆ ಸೇರಿದವರಾಗಿರಬೇಕು.
  • ವಿದ್ಯಾರ್ಥಿಯು ಇಂಜಿನಿರಿಂಗ್,ನರ್ಸಿಂಗ್,ಡಿಪ್ಲೋಮಾ ವ್ಯಾಸಂಗಕ್ಕೆ ಪ್ರವೇಶವನ್ನು ಪಡೆದಿರಬೇಕು.
  • ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮತ್ತು SSLC ಪರೀಕ್ಷೆಯಲ್ಲಿ ಶೇ 60% ಕ್ಕಿಂತ ಹೆಚ್ಚಿನ ಅಂಕವನ್ನು ಪಡೆದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  • ಅರ್ಜಿದಾರ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ಇಂಜಿನಿಯರಿಂಗ್ ವಿದ್ಯಾರ್ಥಿಗೆ- ₹8.0 ಲಕ್ಷ ನರ್ಸಿಂಗ್ ಮತ್ತು ಡಿಪ್ಲೋಮಾ ವಿದ್ಯಾರ್ಥಿಗೆ ₹5.0 ಲಕ್ಷ ದ ಒಳಗಿರಬೇಕು.

ಇದನ್ನೂ ಓದಿ: Free Tailoring Course-ಉಚಿತ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ! ಸಬ್ಸಿಡಿಯಲ್ಲಿ ಹೋಲಿಗೆ ಯಂತ್ರ!

Required Documents For TVS Scholariship Application-ಅರ್ಜಿ ಸಲ್ಲಿಸಲು ದಾಖಲೆಗಳು:

TVS ಪೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

  • ವಿದ್ಯಾರ್ಥಿಯ ಪೋಟೋ/Photo
  • ವಿದ್ಯಾರ್ಥಿಯ ಆಧಾರ್ ಕಾರ್ಡ/Aadhar
  • ವಿದ್ಯಾರ್ಥಿಯ 12 ನೇ ತರಗತಿ ಅಂಕಪಟ್ಟಿ/Marks Card
  • ವಿದ್ಯಾರ್ಥಿಯ ಮೊಬೈಲ್ ನಂಬರ್/Mobile Number
  • ಕುಟುಂಬದ ಆದಾಯ ಪ್ರಮಾಣ ಪತ್ರ/Income Certificate

ಇದನ್ನೂ ಓದಿ: Free Beautician Course-ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

How To Apply For TVS Foundation Scholariship-ಅರ್ಜಿ ಸಲ್ಲಿಸುವುದು ಹೇಗೆ?

TVS ಪೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು ಇದಕ್ಕಾಗಿ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ.

TVS Foundation Scholariship Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಹಂತ-1: "TVS Foundation Scholariship" ಈ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ TVS ಪೌಂಡೇಶನ್ ವಿದ್ಯಾರ್ಥಿವೇತನ ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Gruhalakshmi Amount-ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಈಗಲೇ ಚೆಕ್ ಮಾಡಿ!

TVS Foundation Scholariship

ಹಂತ-2: ಬಳಿಕ ಇಲ್ಲಿ ಮುಖಪುಟದಲ್ಲಿ "TVS Cheema Financial Assistance for Degree / Nursing Students 2025" ಮತ್ತು "TVS Cheema Financial Assistance for Diploma Students 2025" ಎರಡು ಆಯ್ಕೆಗಳು ಕಾಣಿಸುತ್ತವೆ ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಮುಂದಿನ ಪೇಜ್ ಗೆ ಪ್ರವೇಶ ಮಾಡಿದರೆ ಇಲ್ಲಿ ಕೆಳಗೆ "Apply Now" ಬಟನ್ ಮೇಲೆ ಕ್ಲಿಕ್ ಮಾಡಿ "Create an Account" ಆಯ್ಕೆಯ ಮೇಲೆ ಕ್ಲಿಕ್ ಮಾಡಿ User ID ಮತ್ತು Password ಅನ್ನು ರಚನೆ ಮಾಡಿಕೊಂಡು ಬಳಿಕ "Login" ಬಟನ್ ಮೇಲೆ ಕ್ಲಿಕ್ ಮಾಡಿ ಈ ವಿವರವನ್ನು ಹಾಕಿ ಲಾಗಿನ್ ಅದರೆ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

ಹಂತ-3: ಅರ್ಜಿ ನಮೂನೆ ತೆರೆದುಕೊಂಡ ಬಳಿಕ ಇಲ್ಲಿ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Phonepe App Useful Tips-ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಇದೆಯಾ? ತಪ್ಪದೇ ಈ ಸುದ್ದಿ ನೋಡಿ!

Last Date-ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅಂತಿಮ ದಿನಾಂಕ:

TVS ಪೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನ ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು 31 ಆಗಸ್ಟ್ 2025 ಕೊನೆಯ ದಿನಾಂಕವಾಗಿದೆ.

TVS Foundation Scholariship Amount-ಎಷ್ಟು ವಿದ್ಯಾರ್ಥಿವೇತನವನ್ನು ಒದಗಿಸಲಾಗುತ್ತದೆ?

TVS ಪೌಂಡೇಶನ್ ನಿಂದ ಇಂಜಿನಿರಿಂಗ್,ನರ್ಸಿಂಗ್ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಆಯಾ ಶಿಕ್ಷಣಕ್ಕೆ ಅನುಗುಣವಾಗಿ ವಿದ್ಯಾರ್ಥಿವೇತನವನ್ನು ನಿಗದಿಪಡಿಸಲಾಗಿದ್ದು ನಿಖರವಾದ ಮೊತ್ತವನ್ನು ಪೌಂಡೇಶನ್ ನಿಂದ ಪ್ರಕಟಿಸಿಲ್ಲ.

For More Information Helpline Details-ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ:

ಸಹಾಯವಾಣಿ ಸಂಖ್ಯೆ-011-43146600(Monday to Friday - 10:00 AM to 6 PM)
ಸಹಾಯವಾಣಿ ಮೇಲ್ ವಿಳಾಸ-[email protected]

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: