U-Go Scholarship-ಯು-ಗೋ ಸ್ಕಾಲರ್‌ಶಿಪ್ ಪ್ರೋಗ್ರಾಂ ಅಡಿ ಪದವಿ ವಿದ್ಯಾರ್ಥಿನಿಯರಿಗೆ 40,000 ವಿದ್ಯಾರ್ಥಿವೇತನ!

September 23, 2025 | Siddesh
U-Go Scholarship-ಯು-ಗೋ ಸ್ಕಾಲರ್‌ಶಿಪ್ ಪ್ರೋಗ್ರಾಂ ಅಡಿ ಪದವಿ ವಿದ್ಯಾರ್ಥಿನಿಯರಿಗೆ 40,000 ವಿದ್ಯಾರ್ಥಿವೇತನ!
Share Now:

ಯು-ಗೋ ಸ್ಕಾಲರ್‌ಶಿಪ್ ಪ್ರೋಗ್ರಾಂ 2025-26 ಅನ್ನು(U-Go Scholarship) ಯು-ಗೋದ ಕಂಪನಿ ವತಿಯಿಂದ ಅನುಷ್ಠಾನ ಮಾಡಲಾಗುತ್ತಿದ್ದು ಅರ್ಹ ವಿದ್ಯಾರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯಲು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಯು-ಗೋ ಸ್ಕಾಲರ್‌ಶಿಪ್ ಕಾರ್ಯಕ್ರಮ ಅಡಿಯಲ್ಲಿ(U-Go Scholarship Application) ಬೋಧನೆ, ನರ್ಸಿಂಗ್, ಫಾರ್ಮಸಿ, ಔಷಧ, ಎಂಜಿನಿಯರಿಂಗ್, ವಾಸ್ತುಶಿಲ್ಪ, ಕಾನೂನು ಇತ್ಯಾದಿಗಳಲ್ಲಿ ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳನ್ನು ಅನುಸರಿಸುತ್ತಿರುವ ಯುವತಿಯರಿಗೆ ಆರ್ಥಿಕವಾಗಿ ಬೆಂಬಲ ನೀಡುತ್ತದೆ.

ಇದನ್ನೂ ಓದಿ: Shivamogga Krishi Mela 2025-ಶಿವಮೊಗ್ಗ ಕೃಷಿ ಮೇಳಕ್ಕೆ ಅಧಿಕೃತ ದಿನಾಂಕ ನಿಗದಿ!

ಯು-ಗೋ ಸ್ಕಾಲರ್‌ಶಿಪ್ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿವೇತನ(Scholarship Amount)ಒದಗಿಸಲಾಗುತ್ತದೆ?ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಈ ಎಲ್ಲಾ ವಿಷಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

U-Go Scholarship Program Eligibility-ಅರ್ಜಿ ಸಲ್ಲಿಸಲು ಅರ್ಹತೆಗಳು:

ಬೋಧನೆ, ನರ್ಸಿಂಗ್, ಫಾರ್ಮಸಿ, ವೈದ್ಯಕೀಯ, ಎಂಜಿನಿಯರಿಂಗ್, ವಾಸ್ತುಶಿಲ್ಪ, ಕಾನೂನು ಇತ್ಯಾದಿಗಳಲ್ಲಿ ವೃತ್ತಿಪರ ಪದವಿ ಕೋರ್ಸ್‌ಗಳನ್ನು ಕಲಿಯುತ್ತಿರುವ ಯುವತಿಯರು ಅರ್ಹರು.
ಅರ್ಜಿದಾರರು ತಮ್ಮ ಪದವಿ ಕಾರ್ಯಕ್ರಮದ ಯಾವುದೇ ವರ್ಷದಲ್ಲಿ (ಕಳೆದ ವರ್ಷವನ್ನು ಹೊರತುಪಡಿಸಿ) ಓದುತ್ತಿರಬೇಕು.
ಅರ್ಜಿದಾರರು 10 ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ಕನಿಷ್ಠ 70% ಅಂಕಗಳನ್ನು ಪಡೆದಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 5 ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿರಬೇಕು.
ಭಾರತದಾದ್ಯಂತದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Jati Ganati Samikshe-ರಾಜ್ಯಾದ್ಯಂತ ಇಂದಿನಿಂದ ಜಾತಿಗಣತಿ ನಿಮ್ಮ ಬಳಿ ಈ ದಾಖಲೆಗಳನ್ನು ತೆಗೆದಿಟ್ಟುಕೊಳ್ಳಿ!

Scholarship Prizes & Rewards-ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿವೇತನ ಒದಗಿಸಲಾಗುತ್ತದೆ?

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ಕೆಳಗಿನ ಪಟ್ಟಿಯಲ್ಲಿರುವಂತೆ ವಿದ್ಯಾರ್ಥಿವೇತನವನ್ನು ಒದಗಿಸಲಾಗುತ್ತದೆ:

  • ಬೋಧನಾ ಕೋರ್ಸ್‌ಗಳಿಗೆ - ಎರಡು ವರ್ಷಗಳವರೆಗೆ ವರ್ಷಕ್ಕೆ ₹40,000
  • ನರ್ಸಿಂಗ್ ಮತ್ತು ಫಾರ್ಮಾ ಕೋರ್ಸ್‌ಗಳಿಗೆ - ನಾಲ್ಕು ವರ್ಷಗಳವರೆಗೆ ವರ್ಷಕ್ಕೆ ₹40,000
  • BCA, BSc ಮುಂತಾದ ಮೂರು ವರ್ಷಗಳ ಕೋರ್ಸ್‌ಗಳಿಗೆ - 3 ವರ್ಷಗಳವರೆಗೆ ವರ್ಷಕ್ಕೆ ₹40,000 ವರೆಗೆ
  • ಎಂಜಿನಿಯರಿಂಗ್, ಎಂಬಿಬಿಎಸ್, ಬಿಡಿಎಸ್, ಕಾನೂನು, ವಾಸ್ತುಶಿಲ್ಪ ಕೋರ್ಸ್‌ಗಳು ಇತ್ಯಾದಿಗಳಿಗೆ - ನಾಲ್ಕು ವರ್ಷಗಳವರೆಗೆ ವರ್ಷಕ್ಕೆ ₹60,000.

ಗಮನಿಸಿ: ಶೈಕ್ಷಣಿಕ ವೆಚ್ಚಗಳ 100% ಅನ್ನು ಭರಿಸಲು ಸ್ಕಾಲರ್‌ಶಿಪ್ ಅವಕಾಶ ನೀಡುತ್ತದೆ, ಇದರಲ್ಲಿ ಶೈಕ್ಷಣಿಕ ವೆಚ್ಚಗಳು (ಬೋಧನಾ ಶುಲ್ಕ, ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಪುಸ್ತಕಗಳು, ಇತ್ಯಾದಿ), ಜೀವನ ವೆಚ್ಚಗಳು (ಹಾಸ್ಟೆಲ್ ಶುಲ್ಕ, ಊಟದ ಶುಲ್ಕ, ಸಮವಸ್ತ್ರ, ಇತ್ಯಾದಿ), ಸಾಧನಗಳು (ಲ್ಯಾಪ್‌ಟಾಪ್, ಮೊಬೈಲ್, ಉಪಕರಣಗಳು, ಇತ್ಯಾದಿ), ಮಾಸಿಕ ಭತ್ಯೆ, ಇತ್ಯಾದಿ ಸೇರಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Land Documents Check-ಕೃಷಿ ಜಮೀನು ಖರೀದಿಗೂ ಮುನ್ನ ಕಡ್ಡಾಯವಾಗಿ ಪರಿಶೀಲಿಸಬೇಕಾದ ದಾಖಲೆಗಳು ಯಾವುವು?

U-Go Scholarship

ಇದನ್ನೂ ಓದಿ: Sprinkler Subsidy-PMKSY ಯೋಜನೆಯಡಿ ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್!

Last Date to Apply-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31 ಅಕ್ಟೋಬರ್ 2025

Application mode-ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಅರ್ಹ ವಿದ್ಯಾರ್ಥಿಗಳು ಅಗತ್ಯ ವಿವರ ಮತ್ತು ದಾಖಲೆಗಳನ್ನು ಸಿದ್ದಪಡಿಸಿಕೊಂಡು ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ "www.buddy4study.com" ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Step-1: ವಿದ್ಯಾರ್ಥಿಗಳು ಮೊದಲಿಗೆ ಈ "Scholarship Online Application" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Karnataka Jati Ganati-ರಾಜ್ಯದಲ್ಲಿ ಜಾತಿಗಣತಿಗೆ ಸಮೀಕ್ಷೆ ನಡೆಸಲು ಅಧಿಕೃತ ಆದೇಶ ಪ್ರಕಟ!

Step-2: ಇದಾದ ಬಳಿಕ ವೆಬ್ಸೈಟ್ ಅನ್ನು ಭೇಟಿ ಮಾಡಿ ಇಲ್ಲಿ ಬಲಗಡೆ ಗೋಚರಿಸುವ "Apply Now" ಆಯ್ಕೆಯ ಮೇಲೆ ಕ್ಲಿಕ್ ಮಾಡಿ "Create Account" ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಬೇಕು.

Step-3: ಬಳಿಕ "Login" ಬಟನ್ ಮೇಲೆ ಕ್ಲಿಕ್ ಮಾಡಿ User ID ಮತ್ತು Password ಅನ್ನು ಹಾಕಿ ಲಾಗಿನ್ ಅದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.

Scholarship Program Website-ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: