- Advertisment -
HomeGovt SchemesUchitha Holige Yantra-ಗ್ರಾಮೀಣ ಕೈಗಾರಿಕೆ ಇಲಾಖೆಯಿಂದ ಉಚಿತ ಹೊಲಿಗೆ ಯಂತ್ರ!

Uchitha Holige Yantra-ಗ್ರಾಮೀಣ ಕೈಗಾರಿಕೆ ಇಲಾಖೆಯಿಂದ ಉಚಿತ ಹೊಲಿಗೆ ಯಂತ್ರ!

ಮಹಿಳೆಯರಿಗೆ ಸ್ವಾವಲಂಬನೆ ಜೀವನವನ್ನು ಕಟ್ಟಿಕೊಳ್ಳಲು ಗ್ರಾಮೀಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಉಚಿತ ಹೊಲಿಗೆ ಯಂತ್ರ(Uchitha Holige Yantra Yojane) ವಿತರಣಾ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತದೆ.

ಅರ್ಥಿಕವಾಗಿ ಮಹಿಳೆಯರು ಸಬಲರಾಗುವುದನ್ನು ಉತ್ತೇಜನ ನೀಡಲು ಸ್ವ-ಉದ್ಯೋಗವನ್ನು ಮಾಡಿ ನೆರವು ನೀಡಲು ಪ್ರತಿ ವರ್ಷ ಗ್ರಾಮೀಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಟೈಲರಿಂಗ್ ಮಶಿನ್(Free Sewing Machine) ಗಳನ್ನು ನೀಡಲಾಗುತ್ತದೆ. ಈ ಇಲಾಖೆಯಿಂದ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆಯಲು ಯಾವೆಲ್ಲ? ಕ್ರಮಗಳನ್ನು ಅನುಸರಿಸಬೇಕು ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Solar Subsidy-ಮನೆ ಮೇಲೆ ಸೋಲಾರ್ ಅಳವಡಿಕೆಗೆ ₹78,000 ರೂ ಸಬ್ಸಿಡಿ ಪಡೆಯಲು ಅರ್ಜಿ!

ಟೈಲರಿಂಗ್ ನಲ್ಲಿ ಆಸಕ್ತಿಯನ್ನು ಹೊಂದಿರುವ ಮಹಿಳೆಯರು ಈ ಇಲಾಖೆಯ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಸ್ವಾವಲಂಬನೆ ಜೀವನವನ್ನು ರೂಪಿಸಿಕೊಳ್ಳಲು ಯೋಜನೆಯನ್ನು ಹಾಕಿಕೊಳ್ಳಬಹುದು? ಈ ಸೌಲಭ್ಯವನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿರುವ ಅರ್ಹತೆಗಳೇನು? ಇನ್ನಿತರೆ ವಿವರ ಈ ಕೆಳಗಿನಂತಿದೆ.

Who Can Apply For Free Sewing Machine Yojana-ಅರ್ಜಿ ಸಲ್ಲಿಸಲು ಇಲಾಖೆ ನಿಗದಿಪಡಿಸಿರುವ ಅರ್ಹತೆಗಳು:

1) ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.

1) ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.

2) ಅರ್ಜಿದಾರರ ಕುಟುಂಬದ ಒಂದು ವರ್ಷದ ಆದಾಯವು ಗ್ರಾಮೀಣ ಪ್ರದೇಶದಲ್ಲಿ 98,000 ರೂ ಹಾಗೂ ಪಟ್ಟಣ ಪ್ರದೇಶದಲ್ಲಿ 1,20,000 ರೂ ಅಗಿರಬೇಕು.

ಇದನ್ನೂ ಓದಿ: Fertilizer Shop- ಬೀಜ ಮತ್ತು ಗೊಬ್ಬರ ಅಂಗಡಿ ಪರವಾನಗಿ ಪಡೆಯುವುದು ಹೇಗೆ? ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?

Uchitha Holige Yantra

3) ಈ ಹಿಂದೆ ರಾಜ್ಯ ಮತ್ತು ಕೇಂದ್ರ ಸರಕಾರದ ಯಾವುದೇ ಯೋಜನೆಯಡಿ ಹೊಲಿಗೆ ಯಂತ್ರಕ್ಕೆ ಸಹಾಯಧನ ಪಡೆದಿರಬಾರದು.

4) ಅರ್ಜಿದಾರರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರಬೇಕು.

5) ಸರಕಾರಿ ನೌಕರಿಯಲ್ಲಿರುವ ಕುಟುಂಬದವರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: E-Swathu Application-90 ಲಕ್ಷ ಆಸ್ತಿಗಳ ಇ-ಸ್ವತ್ತು ಬಾಕಿ! ಇ-ಸ್ವತ್ತು ಎಲ್ಲಿ ಮಾಡಿಸಬೇಕು? ಪ್ರಯೋಜನಗಳೇನು?

Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

a) ಅರ್ಜಿದಾರರ ಪೋಟೋ
b) ಜನ್ಮ ದಿನಾಂಕ ಪ್ರಮಾಣ ಪತ್ರ
c) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
d) ಪಡಿತರ ಚೀಟಿ ಪ್ರತಿ
e) ಮತದಾರರ ಗುರುತಿನ ಚೀಟಿ
f) ಟೈಲರಿಂಗ್ ವೃತ್ತಿ ಮಾಡುತ್ತಿರುವ ಬಗ್ಗೆ ಪಂಚಾಯತ್ ವತಿಯಿಂದ ಪ್ರಮಾಣ ಪತ್ರ

ಇದನ್ನೂ ಓದಿ: Bagar Hukum-ಬಗರ್ ಹುಕುಂ ಯೋಜನೆಯ ಅರ್ಜಿ ವಿಲೇವಾರಿಗೆ ನೂತನ ಆದೇಶ ಪ್ರಕಟ!

Uchitha Holige Yantra yojane

How to Apply For Free Sewing Machine Scheme-ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಅರ್ಹ ಅರ್ಜಿದಾರರು ಎರಡು ವಿಧಾನ ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಗಾಮ್ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ನೇರವಾಗಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Seva Sindhu Portal-ಸೇವಾ ಸಿಂಧು ಪೋರ್ಟಲ್ – Click here

ಸೂಚನೆ- ಈ ಯೋಜನೆಯಡಿ ಪ್ರತಿ ವರ್ಷ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗುತ್ತದೆ, ಪ್ರಸ್ತುತ ಅನುದಾನ ಲಭ್ಯತೆಯ ಆಧಾರದ ಮೇಲೆ ಅರ್ಜಿಯನ್ನು ಇಲಾಖೆಯಿಂದ ಆಹ್ವಾನಿಸಲಾಗುತ್ತದೆ, ಒಮ್ಮೆ ಅರ್ಜಿ ಆಹ್ವಾನದ ಕುರಿತು ನಿಮ್ಮ ಜಿಲ್ಲೆಯ ಕೈಗಾರಿಕೆ ಇಲಾಖೆಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ವಿಚಾರಿಸಿಕೊಳ್ಳಬಹುದು.

- Advertisment -
LATEST ARTICLES

Related Articles

- Advertisment -

Most Popular

- Advertisment -