Udyam Certificate-ಉದ್ಯಮ್ ಸರ್ಟಿಫಿಕೇಟ್ ಪಡೆಯುವುದು ಹೇಗೆ? ಬ್ಯಾಂಕ್ ಸಾಲ ಪಡೆಯಲು ಈ ದಾಖೆಲೆ ಕಡ್ಡಾಯ!

October 3, 2025 | Siddesh
Udyam Certificate-ಉದ್ಯಮ್ ಸರ್ಟಿಫಿಕೇಟ್ ಪಡೆಯುವುದು ಹೇಗೆ? ಬ್ಯಾಂಕ್ ಸಾಲ ಪಡೆಯಲು ಈ ದಾಖೆಲೆ ಕಡ್ಡಾಯ!
Share Now:

ಗ್ರಾಮೀಣ ಮತ್ತು ನಗರ ಭಾಗದ ನಾಗರಿಕರು ಸಣ್ಣ ಮತ್ತು ಮಧ್ಯಮ ಮಟ್ಟದ ವಿವಿಧ ಉದ್ದಿಮೆಗಳನ್ನು ಪ್ರಾರಂಭಿಸಲು ರಾಜ್ಯ ಮತ್ತು ಕೇಂದ್ರ ಸರಕಾರದ ಸಹಾಯಧನ ಆಧಾರಿತ ಯೋಜನೆಯಡಿ ಸಬ್ಸಿಡಿಯನ್ನು(Udyam Certificate Importance) ಪಡೆಯಲು ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಲು ಉದ್ಯಮ್ ಸರ್ಟಿಫಿಕೇಟ್ ಅನ್ನು ಪಡೆಯುವುದು ಕಡ್ದಾಯವಾಗಿದ್ದು ಈ ದಾಖಲೆಯನ್ನು ಪಡೆಯುವುದರ ಕುರಿತು ಅವಶ್ಯಕ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇಂದಿನ ಅಂಕಣದಲ್ಲಿ ಸಾರ್ವಜನಿಕರು ಉದ್ಯಮ್ ಸರ್ಟಿಫಿಕೇಟ್(Udyam Certificate Application) ಅನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳೇನು? ಉದ್ಯಮ್ ಸರ್ಟಿಫಿಕೇಟ್ ಪಡೆಯುವುದರಿಂದ ಅಗುವ ಪ್ರಯೋಜನಗಳೇನು? ಎನ್ನುವ ಮಾಹಿತಿ ಸೇರಿದಂತೆ ಈ ಪ್ರಮಾಣ ಪತ್ರದ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: New Ration Card-ಹೊಸ ರೇಶನ್ ಕಾರ್ಡಗೆ ಅರ್ಜಿ ಸಲ್ಲಿಸಲು ಅವಕಾಶ: ಆಹಾರ ಸಚಿವ ಕೆ ಹೆಚ್ ಮುನಿಯಪ್ಪ!

Documents For Udyam Certificate-ಉದ್ಯಮ್ ಸರ್ಟಿಫಿಕೇಟ್ ಪಡೆಯಲು ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಅವಶ್ಯಕ?

ಉದ್ದಿಮೆಯನ್ನು ಆರಂಭಿಸಲು ಮಾಲೀಕರ ಹೆಸರಿನಲ್ಲಿ ಉದ್ಯಮ್ ಸರ್ಟಿಫಿಕೇಟ್ ಅನ್ನು ಪಡೆಯಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

  • ಆಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ಪೋಟೋ
  • ಮೊಬೈಲ್ ನಂಬರ್(ಒಟಿಪಿ ನೀಡಬೇಕು)

How To Apply For Udyam Certificate-ಅರ್ಜಿ ಸಲ್ಲಿಸುವುದು ಹೇಗೆ?

ಉದ್ಯಮ್ ಸರ್ಟಿಫಿಕೇಟ್ ಅನ್ನು ಪಡೆಯಲು ಅರ್ಜಿ ಸಲ್ಲಿಸಲು ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: SBI RD Scheme-ಎಸ್ ಬಿ ಐ ನಲ್ಲಿ ಪ್ರತಿ ತಿಂಗಳು ಕೇವಲ 610/- ರೂ ಉಳಿತಾಯ ಮಾಡಿ ₹1.0 ಲಕ್ಷ ಹಣ ಗಳಿಸಿ!

Udyam Certificate Information-ಉದ್ಯಮ್ ಸರ್ಟಿಫಿಕೇಟ್ ಏಕೆ ಮುಖ್ಯ?

ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಸಹಾಯಧನ ಆಧಾರಿತ ಯೋಜನೆಯಡಿ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಈ ದಾಖಲೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಅದ್ದರಿಂದ ಉದ್ಯಮ್ ಸರ್ಟಿಫಿಕೇಟ್ ದಾಖಲೆಯು ಒಂದು ಪ್ರಮುಖ ಹಾಗೂ ಮುಖ್ಯವಾಗಿ ಅವಶ್ಯಕ ದಾಖಲೆಗಳಲ್ಲಿ ಒಂದಾಗಿದೆ.

Udyam Certificate Benefits-ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಲು ಅವಶ್ಯಕ:

ಸಾರ್ವಜನಿಕರು ಈ ಕೆಳಗಿನ ಪಟ್ಟಿಯಲ್ಲಿರುವ ಸರಕಾರಿ ಯೋಜನೆ ಅಡಿಯಲ್ಲಿ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಮತ್ತು ಸಾಲದ ಮೇಲೆ ಶೇ35-50% ರಷ್ಟು ಸಬ್ಸಿಡಿಯನ್ನು ಪಡೆಯಲು ಉದ್ಯಮ್ ಸರ್ಟಿಫಿಕೇಟ್ ಅವಶ್ಯಕ.

  • PMFME-ಪ್ರಧಾನ ಮಂತ್ರಿ ಕಿರು ಆಹಾರ ನಿಯಮಬದ್ಧಗೊಳಿಸುವಿಕೆ ಯೋಜನೆ
  • PMEGP-ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ
  • NLM-ರಾಷ್ಟ್ರಿಯ ಜಾನುವಾರು ಮಿಷನ್))
  • ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ವಿವಿಧ ನಿಗಮಗಳ ಮೂಲಕ ಅನುಷ್ಥಾನ ಮಾಡುವ ಸ್ವಾವಲಂಬಿ ಸಾರಥಿ(Swalambi Sarati Yojane),ಉದ್ಯೋಗಿನಿ ಯೋಜನೆ(Udyogini),ಸ್ವಯಂ ಉದ್ಯೋಗ ನೇರ ಸಾಲ ಯೋಜನೆ(Swayam Udyoga Sala Yojane) ಅಡಿಯಲ್ಲಿ ಸೌಲಭ್ಯ ಪಡೆಯಲು ಈ ದಾಖಲೆ ಅವಶ್ಯಕ.

ಇದನ್ನೂ ಓದಿ: PMEGP ಯೋಜನೆ ಅಡಿಯಲ್ಲಿ ಶೇ 35% ಸಬ್ಸಿಡಿಯಲ್ಲಿ ಸ್ವಂತ ಉದ್ದಿಮೆ ಆರಂಭಿಸಲು ಅರ್ಜಿ ಆಹ್ವಾನ!

Udyam Certificate Online Application-ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು?

ಉದ್ಯಮ್ ಸರ್ಟಿಫಿಕೇಟ್ ಅನ್ನು ಪಡೆಯಲು ಅರ್ಜಿದಾರರು ಸ್ವಂತ ತಾವೇ ಈ ಕೆಳಗಿನ ವಿಧಾನವನ್ನು ಅನುಸರಿಸಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಉದ್ಯಮ್ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Step-1: ಅರ್ಜಿದಾರರು ಪ್ರಥಮದಲ್ಲಿ "Udyam Certificate Online Application" ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ.

Udyam Certificate application

ಇದನ್ನೂ ಓದಿ: Free Poultry Farm Training-12 ದಿನದ ಉಚಿತ ಕೋಳಿ ಮತ್ತು ಜೇನು ಸಾಕಾಣಿಕೆ ಹೈನುಗಾರಿಕೆ ತರಬೇತಿ!

Step-2: ನಂತರ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಂಡು ಲಾಗಿನ್ ಅಗಬೇಕು.

Step-3: ಲಾಗಿನ್ ಅದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ನಿಮ್ಮ ಪೋಟೋ ವನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ ಉದ್ಯಮ್ ಸರ್ಟಿಫಿಕೇಟ್

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: