VA Selection List- 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ!

January 29, 2025 | Siddesh
VA Selection List- 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ!
Share Now:

ಕಂದಾಯ ಇಲಾಖೆಯಿಂದ ಖಾಲಿಯಿರುವ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ(VA Selection List) ನೇಮಕಾತಿಗೆ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿದ್ದು ಆಯಾ ಜಿಲ್ಲೆಯ ಅಧಿಕೃತ ಜಿಲ್ಲಾಡಳಿತದ ವೆಬ್ಸೈಟ್ ನಲ್ಲಿ ಈ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಕಂದಾಯ ಇಲಾಖೆಯ ಎಲ್ಲಾ ಯೋಜನೆಗಳನ್ನು ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ತಲುಪಿಸಲು ರಾಜ್ಯ ಸರಕಾರವು ಈ ಹುದ್ದೆಗಳನ್ನು ಸೃಷ್ಟಿಸಿದ್ದು ಈ ಹಿಂದೆ ಮೇರಿಟ್ ಆಧಾರದ ಮೇಲೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿತ್ತು ಆದರೆ ಈ ಬಾರಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವುದರ ಮೂಲಕ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ.

ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ಪ್ರಸ್ತುತ ಬಿಡುಗಡೆ ಮಾಡಿರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ತಮ್ಮ ಮೊಬೈಲ್ ನಲ್ಲೇ ಹೇಗೆ ನೋಡಬಹುದು? ಹಾಗೂ ಈ ಕುರಿತು ಇಲಾಖೆಯಿಂದ ಪ್ರಕಟಣೆಯಲ್ಲಿ ತಿಳಿಸಿರುವ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: e-swathu andolana-ಇ-ಸ್ವತ್ತು ಮಾಡಿಕೊಳ್ಳದವರಿಗೆ ಸಿಹಿ ಸುದ್ದಿ! ಇ-ಸ್ವತ್ತು ವಿತರಣಾ ಆಂದೋಲನ!

ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧಿಕೃತ ಜಾಲತಾಣದಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಅಭ್ಯರ್ಥಿಗಳು ಆಯಾ ಜಿಲ್ಲೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಪಟ್ಟಿಯನ್ನು ನೋಡಬಹುದು.

Mysuru DC Office-ಮೈಸೂರು ಜಿಲ್ಲೆಯ ಪ್ರಕಟಣೆ ವಿವರ ಹೀಗಿದೆ:

ಮೈಸೂರು ಜಿಲ್ಲಾ ಕಂದಾಯ ಘಟಕದ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಹತೆ ಪಡೆದಿರುವ ಒಟ್ಟು 3946 ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿಯಂತೆ 1 : 3 ಅನುಪಾತದಲ್ಲಿ ದಾಖಲಾತಿ ಪರಿಶೀಲನೆಗೆ ಆಹ್ವಾನಿಸಿ, 1 : 1 ಅನುಪಾತದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ, ಆಕ್ಷೇಪಣೆಗಳಿಗೆ ಅವಕಾಶ ನೀಡಿ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ,

ಸಿಂಧುತ್ವ ಪ್ರಮಾಣ ಪತ್ರ, ಪೊಲೀಸ್ ವರದಿ, ಎಸ್‌ಎಸ್‌ಎಲ್‌ಸಿ / ಪಿಯುಸಿ ಅಂಕಪಟ್ಟಿ ನೈಜತ ಪರಿಶೀಲಿಸಿಕೊಂಡು ನೇಮಕಾತಿ ಆದೇಶ ನೀಡಲು ವೇಳಾಪಟ್ಟಿಯಂತೆ ಕ್ರಮವಹಿಸಲು ಉಲ್ಲೇಖ (8) ರ ಸರ್ಕಾರದ ಪತ್ರದಲ್ಲಿ ನಿರ್ದೇಶಿಸಲಾಗಿದೆ.

ಸರ್ಕಾರದ ಆದೇಶದಂತೆ ಮೈಸೂರು ಜಿಲ್ಲಾ ಕಂದಾಯ ಘಟಕದ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳಿಗೆ ಅನುಗುಣವಾಗಿ 1 : 3 ಅನುಪಾತದಲ್ಲಿ ಪರಿಶೀಲನಾ ಪಟ್ಟಿಯನ್ನು ಉಲ್ಲೇಖ (9) ರಂತೆ ಪ್ರಕಟಿಸಿದ್ದು, ಅದರಂತೆ ದಿನಾಂಕ 02-01-2025 ರಿಂದ 04-01-2025 ರವರೆಗೆ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನ ನಡೆಸಲಾಗಿದೆ ಹಾಗೂ ಅಂಗವಿಕಲ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ನಡೆಸಿ ವರದಿ ಪಡೆಯಲಾಗಿದೆ.

ಇದನ್ನೂ ಓದಿ: Ration-ಇಲಾಖೆಯ ನಿಯಮದನ್ವಯ ಈ ಕೆಲಸ ಮಾಡದಿದ್ದಲ್ಲಿ ಫೆಬ್ರವರಿ 15ರಿಂದ ಪಡಿತರ ವಿತರಣೆ ರದ್ದು!

ಮುಂದುವರಿದು ಈ ದಿನಗಳಲ್ಲಿ ಗೈರು ಹಾಜರಾದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅಂತಿಮ ಅವಕಾಶ ನೀಡಿ ದಿನಾಂಕ 09-01-2025 ರಂದು ದಾಖಲಾತಿಗಳನ್ನು ಹಾಜರುಪಡಿಸಲು ಅವಕಾಶ ನೀಡಲಾಯಿತು. ದಿನಾಂಕ 20-12-2024 ರಂದು ಈ ಕಾರ್ಯಾಲಯದಿಂದ 1 : 3 ರ ಅನುಪಾತದಲ್ಲಿ ಸೆಟ್-1 ರಿಂದ ಸೆಟ್-3 ರವರೆಗೆ ಪ್ರಕಟಿಸಿದ ಪಟ್ಟಿಯು ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗೆ ಮಾತ್ರ ಪ್ರಕಟಿಸಿದ ಪಟ್ಟಿಯಾಗಿದ್ದು, ದಾಖಲಾತಿ ಪರಿಶೀಲನೆಯಲ್ಲಿ ನಿಗದಿತ ದಿನಗಳಂದು ಸಹ ಗೈರು ಹಾಜರಾದ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಗೆ ಪರಿಗಣಿಸಿರುವುದಿಲ್ಲ. ಹಾಗೂ ದಾಖಲಾತಿ ಪರಿಶೀಲನೆಗೆ ಹಾಜರಾಗಿ ನಿಗದಿತ ದೃಡೀಕರಣ ಪತ್ರವನ್ನು ಸಲ್ಲಿಸದ ಅಭ್ಯರ್ಥಿಯನ್ನು ನಿಯಮಾನುಸಾರ ಪರಿಗಣಿಸಿರುವುದಿಲ್ಲ.

ಅದರಂತೆ ಮೈಸೂರು ಜಿಲ್ಲಾ ಕಂದಾಯ ಘಟಕದ ಖಾಲಿ ಇರುವ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗೆ ಅರ್ಹ ಅಭ್ಯರ್ಥಿಗಳ 1 : 1 ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ಪಟ್ಟಿಯನ್ನು ಅನುಬಂಧಗಳಲ್ಲಿ ಉಲ್ಲೇಖ (10) ರಂತೆ ಪ್ರಕಟಿಸಿ ದಿನಾಂಕ 24-01-2025 ರ ಸಂಜೆ 5:30 ಗಂಟೆಯೊಳಗಾಗಿ ಆಕ್ಷೇಪಣೆಗಳನ್ನು ಪುಷ್ಟಿಕರಿಸುವ ದಾಖಲಾತಿಗಳೊಂದಿಗೆ ಈ ಕಾರ್ಯಾಲಯಕ್ಕೆ ಸಲ್ಲಿಸಲು ತಿಳಿಸಲಾಗಿದ್ದು,

ಇದನ್ನೂ ಓದಿ: Microfinance-ಮೈಕ್ರೋ ಫೈನಾನ್ಸ್ ಹಾವಳಿಗೆ ರಾಜ್ಯ ಸರಕಾರದಿಂದ ನೂತನ ನಿಯಮ ಜಾರಿ!

ಪ್ರಕಟಿಸಲಾದ 1 : 1 ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ಆಯ್ಕೆ ಪಟ್ಟಿಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ. ಅದರಂತೆ 1: 1 ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಈ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಧಿ ಇರುವ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳ ಪೈಕಿ ಒಟ್ಟು 66 ಹುದ್ದೆಗಳಿಗೆ ಸರ್ಕಾರದ ಸುತ್ತೋಲೆ ಹಾಗೂ ಆದೇಶಗಳಂತೆ ಮೆರಿಟ್ ಹಾಗೂ ಮೀಸಲಾತಿಯನ್ವಯ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ಪಟ್ಟಿಯನ್ನು ಅನುಬಂಧಗಳಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ!

Final VA Selection List-ಅಂತಿಮ ಆಯ್ಕೆ ಪಟ್ಟಿಯನ್ನು ಚೆಕ್ ಮಾಡುವ ವಿಧಾನ:

ಆಯಾ ಜಿಲ್ಲೆಯ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಅಭ್ಯರ್ಥಿಗಳು ತಮ್ಮ ಮೊಬೈಲ್ ನಲ್ಲೇ ಅಂತಿಮ ಆಯ್ಕೆ ಪಟ್ಟಿಯನ್ನು ಪಡೆಯಬಹುದಾಗಿದೆ.

ಹಂತ-1: ಮೊದಲಿಗೆ ಈ VA Selection List ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Marriage Registration-ಮದುವೆ ನೋಂದಣಿ ಮಾಡಿಕೊಳ್ಳಲು ಈ ದಾಖಲೆ ಕಡ್ಡಾಯ!

Final VA Selection List

ಹಂತ-2: ಬಳಿಕ ಮುಖಪುಟದಲ್ಲಿ ಕಾಣುವ "Village Administrative Officer Recruitment 2024-25 - Final Selection list & Additional Listnew
Village Administrative Officer Recruitment 2024-25 - Final Selection list & Additional List" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಹಂತ-3: ಇದಾದ ನಂತರ ಈ ಪೇಜ್ ನಲ್ಲಿ PDF ಪೈಲ್ ತೆರೆದುಕೊಳ್ಳುತ್ತದೆ ಇಲ್ಲಿ ಕೆಳಗೆ ಸ್ಕ್ರೋಲ್ ಮಾಡಿದರೆ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಹೆಸರುಗಳನ್ನು ನೋಡಬಹುದು.

ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧಿಕೃತ ವೆಬ್ಸೈಟ್ ಲಿಂಕ್ ಗಳು:

Bagalkot - https://bagalkot.nic.inBallari - https://ballari.nic.in Belagavi - https://belagavi.nic.in Bengaluru Rural - https://bengaluru.nic.in Bengaluru Urban - https://bengaluruurban.nic.in Bidar - https://bidar.nic.in Chamarajanagar - https://chamarajanagar.nic.inChikkaballapur - https://chikkaballapur.nic.inChikmagalur - https://chikmagalur.nic.in

Dakshina Kannada - https://dakshinakannada.nic.in Davangere - https://davangere.nic.in Dharwad - https://dharwad.nic.in Gadag - https://gadag.nic.in Hassan - https://hassan.nic.in Haveri - https://haveri.nic.in Kalaburagi (Gulbarga) - https://kalaburagi.nic.in

Kodagu - https://kodagu.nic.in Kolar - https://kolar.nic.in Koppal - https://koppal.nic.in Mandya - https://mandya.nic.in Mysuru (Mysore) - https://mysuru.nic.inRaichur - https://raichur.nic.inRamanagara - https://ramanagara.nic.in

Shivamogga - https://shivamogga.nic.in Tumakuru - https://tumakuru.nic.in Udupi - https://udupi.nic.in Uttara Kannada (Karwar) - https://uttarakannada.nic.in Vijayapura (Bijapur) - https://vijayapura.nic.in Yadgir - https://yadgir.nic.in Vijayanagara- https://vijayanagara.nic.in/

WhatsApp Group Join Now
Telegram Group Join Now
Share Now: