- Advertisment -
HomeNew postsVehicle ownership transfer-ವಾಹನ ಮಾರಿದ 14 ದಿನದ ಒಳಗಾಗಿ ಮಾಲೀಕತ್ವ ವರ್ಗಾವಣೆ ಕಡ್ಡಾಯ!

Vehicle ownership transfer-ವಾಹನ ಮಾರಿದ 14 ದಿನದ ಒಳಗಾಗಿ ಮಾಲೀಕತ್ವ ವರ್ಗಾವಣೆ ಕಡ್ಡಾಯ!

ಬೈಕ್ ಸೇರಿದಂತೆ ಇನ್ನಿತರ ವಾಹನಗಳನ್ನು ಎರಡನೇ ವ್ಯಕ್ತಿಗೆ ಮಾರಾಟ ಮಾಡಿದ ಬಳಿಕ ಆ ವಾಹನದ ಮಾಲೀಕತ್ವ(Vehicle ownership transfer) ವನ್ನು ಇಂತಿಷ್ಟು ದಿನದ ಒಳಗಾಗಿ ಖರೀದಿ ಮಾಡಿದ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಮೋಟಾರು ವಾಹನಗಳ ಇಲಾಖೆಯು ಈ ಕುರಿತು ನೂತನ ನಿಯಮವನ್ನು ಜಾರಿಗೆ ತರಲು ಸಿದ್ದತೆಯನ್ನು ನಡೆಸಿದೆ.

ಈಗಾಗಲೇ ಬಹುತೇಕ ಜನರಿಗೆ ಈ ಬಗ್ಗೆ ತಿಳಿದಿದ್ದು ಒಮ್ಮೆ ಹಳೆ ವಾಹನಗಳನ್ನು ಎರಡನೇ ವ್ಯಕ್ತಿಗೆ ಮಾರಾಟ ಮಾಡಿದ ಬಳಿಕ ಮಾಲೀಕತ್ವವನ್ನು ಆ ವ್ಯಕ್ತಿಯ ಹೆಸರಿಗೆ ಬದಲಾವಣೆ ಮಾಡದಿದ್ದಲ್ಲಿ ಅನೇಕ ತೊಂದರೆಗಳನ್ನು ಮೂಲ ಮಾಲೀಕರು ಅನುಭವಿಸಬೇಕಾಗುತ್ತದೆ ಈ ಕಿರಿಕಿರಿಯನ್ನು ತಪ್ಪಿಸಲು ಹಾಗೂ ಅನಗತ್ಯ ಕ್ರಿಮಿನಲ್ ಕೆಲಸಗಳಿಗೆ ವಾಹನ ಬಳಕೆಯನ್ನು ಮಾಡುವುದನ್ನು ತಪ್ಪಿಸಲು ಯಾರು ವಾಹನ ಬಳಕೆ ಮಾಡುತ್ತಾರೋ ಅವರ ಹೆಸರಿಗೆ ವಾಹನ ನೊಂದಣಿ ಮಾಡಿಕೊಳ್ಳಲು ಇಂತಿಷ್ಟು ದಿನಗಳನ್ನು ನಿಗದಿಪಡಿಸಲು ಮುಂದಾಗಿದೆ.

ಇದನ್ನೂ ಓದಿ: Kera suraksha insurance-ತೆಂಗಿನ ಮರ ಏರುವವರಿಗೆ ₹7 ಲಕ್ಷ ವಿಮಾ ಸೌಲಭ್ಯವನ್ನು ಪಡೆಯಲು ಅರ್ಜಿ!

ವಾಹನದ ಮೂಲ ಮಾಲೀಕರು ಮತ್ತೊಬ್ಬರಿಗೆ ವಾಹನವನ್ನು ಮಾರಾಟ ಮಾಡಿದ ಬಳಿಕ ಅವರ ಹೆಸರಿಗೆ ಆ ವಾಹನದ ಮಾಲೀಕತ್ವವನ್ನು ವರ್ಗಾವಣೆ ಮಾಡದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಈ ಕುರಿತು ಕೇಂದ್ರ ಸರಕಾರದ ಮೋಟಾರು ವಾಹನಗಳ ಇಲಾಖೆಯು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

Vehicle ownership transfer-ವಾಹನ ಮಾರಿದ 14 ದಿನದ ಒಳಗಾಗಿ ಮಾಲೀಕತ್ವ ವರ್ಗಾವಣೆ ಕಡ್ಡಾಯ:

ಕೇಂದ್ರ ಸರಕಾರದ ಮೋಟಾರು ವಾಹನಗಳ ಇಲಾಖೆಯ ನೂತನ ನಿಯಮದ ಅನ್ವಯ ಒಬ್ಬ ವ್ಯಕ್ತಿಯು ತನ್ನ ವಾಹನವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ ಬಳಿಕ ಈ ಹಿಂದೆ ಮಾಲೀಕತ್ವವನ್ನು ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿತ್ತು ಆದರೆ ಈಗ 14 ದಿನದ ಒಳಗಾಗಿ ವಾಹನದ ಮಾಲೀಕತ್ವವನ್ನು ಖರೀದಿ ಮಾಡಿದ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಲು ಸೂಕ್ತ ಅರ್ಜಿಯನ್ನು ಸಲ್ಲಿಸಿ ಮಾಲೀಕತ್ವವನ್ನು ಖರೀದಿ ಮಾಡಿದವರ ಹೆಸರಿಗೆ ವರ್ಗಾವಣೆ ಮಾಡಬೇಕು ಎಂದು ನೂತನ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

ಮಾಲೀಕತ್ವ ವರ್ಗಾವಣೆ ಮಾಡದಿದ್ದರೆ ಮೂಲ ಮಾಲೀಕರೆ ಹೊಣೆ:

ಒಂದೊಮ್ಮೆ ನಿರ್ಲಕ್ಷ ಮಾಡಿ ವಾಹನವನ್ನು ಮಾರಾಟ ಮಾಡಿದ ಬಳಿಕ ಅ ವಾಹನದ ಮಾಲೀಕತ್ವವನ್ನು ಖರೀದಿ ಮಾಡಿದ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡದಿದ್ದರೆ ಆ ವ್ಯಕ್ತಿಯು ಯಾವುದೇ ಬಗ್ಗೆಯ ಅಪಘಾತ ಇನ್ನಿತರೆ ಕ್ರಿಮಿನಲ್ ಕೆಲಸಕ್ಕೆ ವಾಹನವನ್ನು ಬಳಕೆ ಮಾಡಿದರೆ ಮೂಲ ಮಾಲೀಕರೇ ಇದಕ್ಕೆ ಹೊಣೆಯಾಗುತ್ತಾರೆ ಎಂದು ಈಗಾಗಲೇ ಅನೇಕ ಜನರಿಗೆ ಈ ನಿಯಮದ ಕುರಿತು ಮಾಹಿತಿ ಇರುತ್ತದೆ ಅದ್ದರಿಂದ ತಪ್ಪದೇ ವಾಹನವನ್ನು ಮಾರಾಟ ಮಾಡಿದ ಬಳಿಕ ಶೀಘ್ರದಲ್ಲಿ ಮಾಲೀಕತ್ವವನ್ನು ವರ್ಗಾವಣೆ ಮಾಡುವುದು ಸೂಕ್ತ.

ಇದನ್ನೂ ಓದಿ: Property rights-ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟ! ತಂದೆ-ತಾಯಿಯನ್ನು ನೋಡಿಕೊಳ್ಳದವರಿಗಿಲ್ಲ ಆಸ್ತಿ!

Vehicle ownership transfer

Vehicle ownership transfer application-ವಾಹನ ಮಾಲೀಕತ್ವ ಬದಲಾವಣೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ವಾಹನದ ಮಾಲೀಕತ್ವ ಬದಲಾವಣೆಗೆ ಅರ್ಜಿ ಸಲ್ಲಿಸಲು ಇಚ್ಚೆ ಹೊಂದಿರುವವರು ನಿಮ್ಮ ತಾಲ್ಲೂಕಿನ/ಜಿಲ್ಲೆಯ RTO ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Documents for Vehicle ownership transfer-ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2) ವಾಹನದ RC
3) ಇನ್ಸೂರೆನ್ಸ್ ಪ್ರಮಾಣ ಪತ್ರ
4) ಹೊಗೆ ಪ್ರಮಾಣ ಪತ್ರ
5) ಲೋನ್ ಕ್ಲಿಯೆರೆನ್ಸ್ ಪ್ರಮಾಣ ಪತ್ರ
6) NOC ಪ್ರಮಾಣ ಪತ್ರ(ಅನ್ವಯಿಸಿದಲ್ಲಿ ಮಾತ್ರ)
7) ಮೊಬೈಲ್ ನಂಬರ್

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?

For more information- ಇನ್ನು ಹೆಚ್ಚಿನ ಮಾಹಿತಿಗಾಗಿ:

ಕೇಂದ್ರದ ಮೋಟಾರು ವಾಹನಗಳ ಇಲಾಖೆ- CLICK HERE
ರಾಜ್ಯದ ಮೋಟಾರು ವಾಹನಗಳ ಇಲಾಖೆ- CLICK HERE

- Advertisment -
LATEST ARTICLES

Related Articles

- Advertisment -

Most Popular

- Advertisment -