ಭಾರತೀಯ ಜೀವ ವಿಮಾ ನಿಗಮದಿಂದ(LIC) ನೂತನ ಯೋಜನೆಯನ್ನು ಅರ್ಥಿಕವಾಗಿ ಮಹಿಳೆಯರ ಬೆಳವಣಿಗೆಗೆ ನೆರವು ನೀಡಲು “ಬಿಮಾ ಸಖಿ”(Bima Sakhi Yojana) ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದ್ದು ಈ ಯೋಜನೆಯ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಮನೆಯಲ್ಲೇ ಇದ್ದುಕೊಂಡು ಬಿಡುವಿನ ಸಮಯದಲ್ಲಿ ಏನಾದರು ಒಂದು(Lic Bima Sakhi) ಕೆಲಸ ಮಾಡಿ ಆದಾಯ ಗಳಿಕೆ ಮಾಡಿಕೊಳ್ಳಬೇಕು ಎನ್ನುವ ಆಸೆ ಇದ್ದವರು ಹಾಗೂ ಉದ್ಯೋಗಿಗಳು ಪಾರ್ಟ್ ಟೈಮ್ ನಲ್ಲಿ ಹಣ ಗಳಿಸುವ ಇಚ್ಚೆ ಹೊಂದಿರುವವರು, ವಿದ್ಯಾರ್ಥಿನಿಯರು, ಗೃಹಿಣಿಯರು, ಸ್ವಂತ ಉದ್ಯೋಗ ಮಾಡುತ್ತಿರುವವರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ಇದನ್ನೂ ಓದಿ: Vehicle ownership transfer-ವಾಹನ ಮಾರಿದ 14 ದಿನದ ಒಳಗಾಗಿ ಮಾಲೀಕತ್ವ ವರ್ಗಾವಣೆ ಕಡ್ಡಾಯ!
“ಬಿಮಾ ಸಖಿ” ಯೋಜನೆಯಡಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? “ಬಿಮಾ ಸಖಿ” ಆಗುವುದರಿಂದ ಪ್ರಯೋಜನಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.
Bima Sakhi Benefits-ಬಿಮಾ ಸಖಿ ಆಗುವುದರಿಂದ ಪ್ರಯೋಜನಗಳು:
ಭಾರತೀಯ ಜೀವ ವಿಮಾ ನಿಗಮವು ಮಹಿಳೆಯರಿಗೆ ಅರ್ಥಿಕವಾಗಿ ಸಬಲರಾಗಲು ಉತ್ತಮ ಜೀವನವನ್ನು ನಡೆಸಲು ನೆರವು ನೀಡಲು ಬಿಮಾ ಸಖಿ ಯೋಜನೆಯನ್ನು ನೂತನವಾಗಿ ಜಾರಿಗೆ ತಂದಿದ್ದು ಯಾರೆಲ್ಲ ಬಿಮಾ ಸಖಿಯಾಗಿ ಆಯ್ಕೆ ಅಗುತ್ತಾರೋ ಅವರಿಗೆ ನಿಗಮದಿಂದ ಪಾಲಿಸಿ ಕಮಿಷನ್, ಬೋನಸ್ ಕಮಿಷನ್, ರಿನಿವಲ್ ಕಮಿಷನ್ ಹಾಗೂ ಎಲ್ಲ ಇತರ 37 ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ.
ಮಹಿಳೆಯರಿಗೆ ಈ ಯೋಜನೆಯ ಮೂಲಕ ಪ್ರಾರಂಭಿಕ ಹಂತದಲ್ಲಿ ಪ್ರೋತ್ಸಾಹ ನೀಡಲು ಮೊದಲ ವರ್ಷ ತಿಂಗಳಿಗೆ ₹7,000 ಹಾಗೂ ಎರಡನೇ ವರ್ಷ ಪ್ರತಿ ತಿಂಗಳಿಗೆ ₹6,000 ಮತ್ತು ಮೂರನೇ ವರ್ಷ ಪ್ರತಿ ತಿಂಗಳಿಗೆ ₹5,000 ಗೌರವಧನವನ್ನು ನೀಡಲಾಗುತ್ತದೆ.
ಇದನ್ನೂ ಓದಿ: Kera suraksha insurance-ತೆಂಗಿನ ಮರ ಏರುವವರಿಗೆ ₹7 ಲಕ್ಷ ವಿಮಾ ಸೌಲಭ್ಯವನ್ನು ಪಡೆಯಲು ಅರ್ಜಿ!

Who Can apply For Bima Sakhi-ಬಿಮಾ ಸಖಿ ಆಗಲು ಅರ್ಜಿ ಸಲ್ಲಿಸಲು ಅರ್ಹರು:
- ಅರ್ಜಿದಾರರು ಭಾರತೀಯ ನಿವಾಸಿಯಾಗಿರಬೇಕು.
- ಅರ್ಜಿದಾರರ ವಯಸ್ಸು 18 ರಿಂದ 70 ವರ್ಷದ ಒಳಗಿರಬೇಕು.
- ಅರ್ಜಿದಾರರು 10 ನೇ ತರಗತಿಯನ್ನು ಪಾಸಾಗಿರಬೇಕು.
- ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ಸರಕಾರಿ ನೌಕರಿಯಲ್ಲಿರುವವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
Documents For Bima Sakhi-ಅರ್ಜಿ ಸಲ್ಲಿಸಲು ದಾಖಲಾತಿಗಳು:
A) ಅರ್ಜಿದಾರರ ಆದಾರ್ ಕಾರ್ಡ ಪ್ರತಿ
B) ಪಾನ್ ಕಾರ್ಡ
C) SSLC ಅಂಕಪಟ್ಟಿ
D) ಪೋಟೋ
E) ರದ್ದಾದ ಚೆಕ್ ಅಥವಾ ಬ್ಯಾಂಕ್ ಪಾಸ್ ಬುಕ್ ಮುಖಪುಟದ ಪ್ರತಿ
F) ಮೊಬೈಲ್ ನಂಬರ್
ಇದನ್ನೂ ಓದಿ: Property rights-ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟ! ತಂದೆ-ತಾಯಿಯನ್ನು ನೋಡಿಕೊಳ್ಳದವರಿಗಿಲ್ಲ ಆಸ್ತಿ!
Online Application For BIMA SAKHI-ಆನ್ಲೈನ್ ನಲ್ಲಿ ಭೀಮ ಸಖಿಗೆ ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ತಯಾರಿ ಮಾಡಿಕೊಂಡು ಭಾರತೀಯ ಜೀವ ವಿಮಾ ನಿಗಮದ(LIC) ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Step-1: ಮೊದಲಿಗೆ ಈ ಲಿಂಕ್ Bima Sakhi Application ಮೇಲೆ ಕ್ಲಿಕ್ ಮಾಡಿ ಅಧಿಕೃತ LIC ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?

Step-2: ಬಳಿಕ ಈ ಪೇಜ್ ನಲ್ಲಿ ಕೆಳಗೆ ಕಾಣುವ “Click Here For Bima sakhi” ಬಟನ್ ಮೇಲೆ ಕ್ಲಿಕ್ ಮಾಡಿದರೆ ಭೀಮ ಸಖಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
Step-3: ಇಲ್ಲಿ ಅರ್ಜಿದಾರರು ತಮ್ಮ ವೈಯಕ್ತಿಕ ವಿವರ ಮತ್ತು ಇನ್ನಿತರೆ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ಇನ್ನು ಹೆಚ್ಚಿನ ಮಾಹಿತಿ ಪಡೆಯಲು:
LIC Website-ಅಧಿಕೃತ ವೆಬ್ಸೈಟ್-Click here
Bima Sakhi Application link-ಅರ್ಜಿ ಸಲ್ಲಿಸಲು- Apply Now
Helpline-ಸಹಾಯವಾಣಿ- +91-8976862090(WhatsApp), +91-22-68276827(Call)