Lok sabha election-2024: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ಪರಿಶೀಲಿಸಲು ವೆಬ್ಸೈಟ್ ಲಿಂಕ್ ಬಿಡುಗಡೆ.
ಇನ್ನೆನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಗೆ(Lok sabha election-2024) ವೋಟ್ ಮಾಡುವ ದಿನ ಬರಲಿದ್ದು ನಾಗರಿಕರು ಈ ಲೇಖನದಲ್ಲಿ ವಿವರಿಸಿಸುವ ಮಾಹಿತಿಯನ್ನು ಅನುಸರಿಸಿ ವೋಟರ್ ಲಿಸ್ಟ್ ನಲ್ಲಿ(voter list) ನಿಮ್ಮ ಹೆಸರು ಇದಿಯಾ? ಎಂದು ನಿಮ್ಮ ಮೊಬೈಲ್ ನಲ್ಲೇ ಪರಿಶೀಲಿಸಿಕೊಳ್ಳಬಹುದು.
ಇನ್ನೆನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಗೆ(Lok sabha election-2024) ವೋಟ್ ಮಾಡುವ ದಿನ ಬರಲಿದ್ದು ನಾಗರಿಕರು ಈ ಲೇಖನದಲ್ಲಿ ವಿವರಿಸಿಸುವ ಮಾಹಿತಿಯನ್ನು ಅನುಸರಿಸಿ ವೋಟರ್ ಲಿಸ್ಟ್ ನಲ್ಲಿ(voter list) ನಿಮ್ಮ ಹೆಸರು ಇದಿಯಾ? ಎಂದು ನಿಮ್ಮ ಮೊಬೈಲ್ ನಲ್ಲೇ ಪರಿಶೀಲಿಸಿಕೊಳ್ಳಬಹುದು.
ಮತ ಚಲಾಯಿಸಲು ಕೇವಲ ಮತದಾರರ ಗುರುತಿನ ಚೀಟಿ ಇದ್ದರೆ ಸಾಕಾಗುವುದಿಲ್ಲ ಅಲ್ಲದೇ ಮತದಾರರ ಪಟ್ಟಿ ಕಾಲಕಾಲಕ್ಕೆ ಪರಿಷ್ಕರಣೆ ಅಗುತ್ತಿರುತ್ತದೆ ಕೆಲವೊಮ್ಮೆ, ಕೆಲವು ಹೆಸರುಗಳು ವಿನಃ ಕಾರಣ ತಾಂತ್ರಿಕ ಸಮಸ್ಯೆಗಳಿಂದ ಮಾಯವಾಗುತ್ತವೆ ಅಥವಾ ಹಲವಾರು ಕಾರಣಗಳಿಂದಾಗಿ ಪಟ್ಟಿಯಿಂದ ಹೆಸರಗಳನ್ನು ತೆಗೆದುಹಾಕಲಾಗಿದೆ. ಆದ್ದರಿಂದ ಚುನಾವಣೆಗೆ ಮುಂಚಿತವಾಗಿ ಸಾರ್ವಜನಿಕರು ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಒಮ್ಮೆ ಪರಿಶೀಲಿಸುವುದು ಅತೀ ಮುಖ್ಯ.
ಎರಡು ವಿಧಾನ ಅನುಸರಿಸಿ ಸಾರ್ವಜನಿಕರು ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ಖಚಿತಪಡಿಸಿಕೊಳ್ಳಬಹುದು. ಈ ಎರಡು ವಿಧಾನದ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನಿ ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: Voter ID- ವೋಟರ್ ಐಡಿ ತಿದ್ದುಪಡಿಗೆ ಕೊನೆಯ ಅವಕಾಶ! ಇಲ್ಲಿದೆ ನೀವೇ ಅರ್ಜಿ ಸಲ್ಲಿಸುವ ವಿಧಾನ.
How to check your name in voter list 2024? : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ಪರಿಶೀಲಿಸುವುದು ಹೇಗೆ?
ವಿಧಾನ-1: ನಿಮ್ಮ ವೋಟರ್ ಐಡಿಯ ಎಪಿಕ್ ಸಂಖ್ಯೆ ಹಾಕಿ ಚೆಕ್ ಮಾಡಬಹುದು:
ಸಾರ್ವಜನಿಕರು ಚುನಾವಣೆ ಆಯೋಗದ ಅಧಿಕೃತ https://electoralsearch.eci.gov.in ಈ ಜಾಲತಾಣವನ್ನು ನೇರವಾಗಿ ಭೇಟಿ ಮಾಡಿ ನಿಮ್ಮ ವೋಟರ್ ಐಡಿಯ ಎಪಿಕ್ ಸಂಖ್ಯೆಯನ್ನು ಹಾಕಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ಖಚಿತಪಡಿಸಿಕೊಳ್ಳಬಹುದು.
Step-1: ಮೊದಲಿಗೆ ಈ voter list status ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು. ಬಳಿಕ ಈ ಪುಟದಲ್ಲಿ "Search by EPIC" ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕು.
Step-2: ತದನಂತರ ನಿಮ್ಮ ವೋಟರ್ ಐಡಿ/ಗುರುತಿನ ಚೀಟಿ/Voter ID ಯ ಬಲ ಬದಿಯಲ್ಲಿರುವ ಎಪಿಕ್ ಸಂಖ್ಯೆಯನ್ನು/EPIC Number * ಹಾಕಿ ಪಕ್ಕದಲ್ಲಿ ಕಾಣುವ ರಾಜ್ಯ/State* ಆಯ್ಕೆ ವಿಭಾಗದಲ್ಲಿ ಕರ್ನಾಟಕ ಎಂದು ಆಯ್ಕೆ ಮಾಡಿಕೊಂಡು ಕ್ಯಾಪ್ಚ್ ಕೋಡ್/Captcha Code * ಅನ್ನು ನಮೂದಿಸಿ Search ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ವೋಟರ್ ಐಡಿಯ ಸಂಪೂರ್ಣ ವಿವರ ತೋರಿಸುತ್ತದೆ.
ಇದನ್ನೂ ಓದಿ: NVS Recruitment- ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೋದಕೇತರ ಹುದ್ದೆಗಳ ಭರ್ಜರಿ ನೇಮಕಾತಿ! 1377 ಹುದ್ದೆಗಳಿಗೆ ಅರ್ಜಿ ಆಹ್ವಾನ.
ಈ ರೀತಿ ವಿಧಾನ ಅನುಸರಿಸಿ ಪರಿಶೀಲಿಸಿದಾಗ ನಿಮ್ಮ ವೋಟರ್ ಐಡಿ ವಿವರ ತೋರಿಸಿಲ್ಲದಿದ್ದಲ್ಲಿ ಈ ಕೆಳಗೆ ತಿಳಿಸಿರುವ ವಿಧಾನ-2 ಅನ್ನು ಅನುಸರಿಸಿ ಒಮ್ಮೆ ಚೆಕ್ ಮಾಡಿ ಅಲ್ಲಿಯೂ ನಿಮ್ಮ ಹೆಸರು ತೋರಿಸದಿದ್ದಲ್ಲಿ ನಿಮ್ಮ ಹಳ್ಳಿಯ ಮತಗಟ್ಟೆ ಅಧಿಕಾರಿಯನ್ನು ಭೇಟಿ ಮಾಡಿ ಈ ಕುರಿತು ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: Free electronics repair training- ಉಚಿತ ಟಿ ವಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
Voter list- ವಿಧಾನ-2: ನಿಮ್ಮ ಹಳ್ಳಿಯ ವೋಟರ್ ಲಿಸ್ಟ್ ನಲ್ಲಿ ಹೆಸರು ಇರುವುದನ್ನು ಚೆಕ್ ಮಾಡುವ ವಿಧಾನ:
ಚುನಾವಣಾ ಆಯೋಗದಿಂದ ಈಗಾಗಲೇ ಅಂತಿಮ ಮತದಾರರ ಪಟ್ಟಿಯನ್ನು "ಕರ್ನಾಟಕ ಮುಖ್ಯ ಚನಾವಣಾಧಿಕಾರಿ" ರವರ ಅಧಿಕೃತ ವೆಬ್ಸೈಟ್ ನಲ್ಲಿ ಜನವರಿ 22,2024 ರಂದು ಪ್ರಕಟಿಸಲಾಗಿದ್ದು ಸಾರ್ವಜನಿಕರು ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಬೇಕು.
Step-1: ಮೊದಲಿಗೆ ಈ ಲಿಂಕ್ Voter list check ಮೇಲೆ ಒತ್ತಿ ಆಧಿಕೃತ ವೆಬ್ಸೈಟ್ "ಕರ್ನಾಟಕ ಮುಖ್ಯ ಚನಾವಣಾಧಿಕಾರಿ" ರವರ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು. ತದನಂತರ ಈ ಪುಟದ ಬಲ ಬದಿಯ ಮೇಲೆ ತೋರಿಸುವ "ಅಂತಿಮ ಮತದಾರರ ಪಟ್ಟಿ-2024" ಆಯ್ಕೆಯ ಮೇಲೆ ಮೇಲೆ ಕ್ಲಿಕ್ ಮಾಡಬೇಕು.
Step-2: ಇದಾದ ಬಳಿಕ "ಅಂತಿಮ ಮತದಾರರ ಪಟ್ಟಿ-2024" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ವಿಧಾನಸಭಾ ಕ್ಷೇತ್ರ, ಭಾಷೆ ಅನ್ನು ಆಯ್ಕೆ ಮಾಡಿಕೊಂಡರೆ ಕೆಳಗಡೆ ನಿಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಯ ಪಟ್ಟಿ ತೋರಿಸುತ್ತದೆ.
ಇದನ್ನೂ ಓದಿ: BSF Recruitment 2024- SSLC, ITI ಪಾಸಾದವರಿಗೆ BSF ನಲ್ಲಿ ಉದ್ಯೋಗವಕಾಶ!
Step-3: ಇಲ್ಲಿ ನಿಮ್ಮ ಮತಗಟ್ಟೆಯನ್ನು ಹುಡುಕಿ ಮೇಲೆ ತೋರಿಸುವ ಕ್ಯಾಪ್ಚ್ ಕೋಡ್ ನಮೂದಿಸಿ "DraftRoll - 2024" ವಿಭಾಗದಲ್ಲಿರುವ Download ಐಕಾನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮತಗಟ್ಟೆಯ ಎಲ್ಲಾ ಮತದಾರರ ಅಂತಿಮ ಪಟ್ಟಿ ತೋರಿಸುತ್ತದೆ ಇದರಲ್ಲಿ ನಿಮ್ಮ ಹೆಸರು ಇದಿಯಾ? ಇಲ್ಲವಾ? ಎಂದು ಚೆಕ್ ಮಾಡಿಕೊಳ್ಳಬೇಕು.
ಇನ್ನು ಹೆಚ್ಚಿನ ಮಾಹಿತಿಗಾಗಿ:
ರಾಜ್ಯ ಮುಖ್ಯ ಚುನಾವಣಾಧಿಕಾರಿ ಅಧಿಕೃತ ವೆಬ್ಸೈಟ್ ಲಿಂಕ್: Click here
ವೋಟರ್ ಅಧಿಕೃತ ವೆಬ್ಸೈಟ್- Click here
ಸಹಾಯವಾಣಿ: 1950 ಅಥವಾ 180042551950
ವೋಟರ್ ಐಡಿ ಕುರಿತು ನಮ್ಮ ಪುಟದ ಇತರೆ ಅಂಕಣಗಳು: click here