HomeNew postsweedicide: ಮನೆಯಲ್ಲೇ ತಯಾರಿಸಿ ಪರಿಸರ ಸ್ನೇಹಿ ಕಳೆನಾಶಕ!

weedicide: ಮನೆಯಲ್ಲೇ ತಯಾರಿಸಿ ಪರಿಸರ ಸ್ನೇಹಿ ಕಳೆನಾಶಕ!

Weedicide: ರೈತರಿಗೆ ಇತೀಚಿನ ದಿನಗಳಲ್ಲಿ ಕಳೆ ನಿಯಂತ್ರಣ ಮಾಡುವುದು ಬಹು ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ ರೈತರು ರಾಸಾಯನಿಕ ಕಳೆನಾಶಕಗಳ ಮೊರೆ ಹೋಗಿದ್ದಾರೆ. ಇದನ್ನು ಹೊರತುಪಡಿಸಿ ರೈತರೇ ಹೇಗೆ ತಮ್ಮ ಮನೆಯಲ್ಲಿ ಕಳೆನಾಶಕ ತಯಾರಿಸಿಕೊಳ್ಳಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಮನೆಯಲ್ಲೇ ತಯಾರಿಸಿ ಪರಿಸರ ಸ್ನೇಹಿ ಕಳೆನಾಶಕ. ಇದು ಮಣ್ಣಿನ ಫಲವತ್ತತೆ ಹಾಳು ಮಾಡಲ್ಲ, ರೈತರ ಜೇಬಿಗೆ ಕನ್ನವೂ ಹಾಕಲ್ಲ. ಈ ಕಳೆನಾಶಕದ ತಯಾರಿಯೂ ಬಲು ಸುಲಭ, ಇದರ ಕಾರ್ಯನಿರ್ವಹಣೆ ಮಾತ್ರ ಪರಿಣಾಮಕಾರಿ. 

ನೈಸರ್ಗಿಕ ಕಳೆನಾಶಕಗಳನ್ನು ಬಳಸುವುದರಿಂದ ನಿಮ್ಮ ಬೆಳೆ ಹಾಗೂ ಭೂಮಿಗೆ ಯಾವುದೇ ತೊಂದರೆಯಾಗದೆ ಕಳೆಯನ್ನು ನಾಶಮಾಡಬಹುದು.

ಇದನ್ನೂ ಓದಿ: Ration card application: ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಈ ಜಿಲ್ಲೆಯವರಿಗೆ ಇನ್ನು 2 ದಿನ ಮಾತ್ರ ಅವಕಾಶ!

Home made weedicide: ಕಳೆನಾಶಕ ತಯಾರಿಸುವ ವಿಧಾನ:

2 ಕೆ.ಜಿಯಷ್ಟು ಎಕ್ಕದ ಗಿಡದ ಎಲೆಯನ್ನು ಚೆನ್ನಾಗಿ ರುಬ್ಬಿಕೊಂಡು, 10 ಲೀಟರ್ ಗೋಮೂತ್ರಕ್ಕೆ ಬೆರೆಸಬೇಕು. ನಂತರ ಅರ್ಧ ಕೆ.ಜಿ.ಯಷ್ಟು ಸುಣ್ಣದ ನೀರು( ಕಲ್ಲು ಸುಣ್ಣ) ಮಿಕ್ಸ್ ಮಾಡಬೇಕು, 2 ಕೆ.ಜಿ.ಯಷ್ಟು ಹರಳು ಉಪ್ಪನ್ನು ಬೆರೆಸಬೇಕು. 20 ಲೀಟರ್ ನೀರಿನೊಂದಿಗೆ ಇದನ್ನು ಮಿಶ್ರಣ ಮಾಡಿ, ಗಡಿಯಾರದ ಮುಳ್ಳಿನ ರೀತಿಯಲ್ಲಿ ತಿರುಗಿಸಬೇಕು. ಡ್ರಮ್ ಅನ್ನು ಗಾಳಿ ಆಡದ ಹಾಗೆ ಗೋಣಿಚೀಲದೊಂದಿಗೆ ಮುಚ್ಚಿ 1 ವಾರದವರೆಗೆ ಹಾಗೆಯೇ ಬಿಡಬೇಕಾಗುತ್ತದೆ. 

1 ವಾರದ ಬಳಿಕ ಚೆನ್ನಾಗಿ ಕಳಿತಿರುವ ಈ ಮಿಶ್ರಣಕ್ಕೆ ಎರಡು ದೊಡ್ಡದಾದ ನಿಂಬೆ ಹಣ್ಣಿನ ರಸವನ್ನು ಹಿಂಡಬೇಕು. ನಂತರ 1 ಲೀಟರ್ ಕಳೆನಾಶಕಕ್ಕೆ, 9 ಲೀಟರ್ ನೀರನ್ನು ಮಿಕ್ಸ್ ಮಾಡಿ ಸ್ಪ್ರೇ ಮಾಡುವುದರಿಂದ ಯಾವುದೇ ಕೆಮಿಕಲ್ ಇಲ್ಲದೆಯೇ ಕಳೆ ನಿರ್ವಹಣೆ ಮಾಡಬಹುದು. 

ಇದನ್ನೂ ಓದಿ: ನಿಮಗೆ ಇನ್ನೂ ಗೃಹಲಕ್ಷ್ಮಿ ಮೊದಲನೇ ಕಂತಿನ ಹಣ ಬಂದಿಲ್ವಾ? ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

ಮುಖ್ಯವಾಗಿ ಗಮನಿಸಿ:

ಆದರೆ ನೆನಪಿರಲಿ ಕಳೆನಾಶಕ ಸ್ಪ್ರೇ ಮಾಡುವಾಗ ಮುಖ್ಯ ಬೆಳೆಗೆ ತಾಕದಂತೆ ಎಚ್ಚರ ವಹಿಸಬೇಕು. ಯಾವುದೇ ಕಾರಣಕ್ಕೂ ಮುಖ್ಯ ಬೆಳೆಗೆ ಕಳೆನಾಶಕ ತಾಗಬಾರದು.

ಇತರೆ ಕಳೆನಾಶಕ ತಯಾರಿಕೆ ವಿಧಾನಗಳು:

  • ಒಂದು ಬಾಟಲಿನ ಅರ್ಧದಷ್ಟು ಬಿಳಿ ಡಿಸ್ಟಿಲ್ ವಿನೆಗರ್ (white distilled vinegar) ಕಾಲು ಭಾಗ ನೀರು, ಕಾಲು ಭಾಗ ಯಾವುದೇ ಡಿಶ್ವಾಶ್ (Dishwash) ಅನ್ನು ಮಿಶ್ರಣ ಮಾಡಿ ಕಳೆಗೆ ಸಿಂಪಡಣೆ ಮಾಡಿಯೂ ಕಳೆ ನಿರ್ವಹಣೆ ಮಾಡಬಹುದು.
  • ಒಂದು ಮಗ್ನಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಹರಳು ಉಪ್ಪನ್ನು ಸೇರಿಸಿ ಕಳೆಗೆ ಸಿಂಪಡಣೆ ಮಾಡಬಹುದು. 

ಇದನ್ನೂ ಓದಿ: LPG subsidy: ಅಡುಗೆ ಸಿಲಿಂಡರ್ ಸಬ್ಸಿಡಿ ಬಿಡುಗಡೆ! ಎಲ್‌ಪಿಜಿ ಸಬ್ಸಿಡಿ ಹೆಚ್ಚಿಸಿದ ಕೇಂದ್ರ ಸರಕಾರ.

ಪರಿಸರ ಸ್ನೇಹಿ ಕಳೆನಾಶಕ ತಯಾರಿಕೆ ಮತ್ತು ಸಿಂಪರಣೆ ವೀಡಿಯೋ:

ಇದನ್ನೂ ಓದಿ: Old age Pension: ಈ ಯೋಜನೆಯಡಿ ಪ್ರತಿ ತಿಂಗಳು 1200 ರೂ ವರೆಗೆ ಪಿಂಚಣಿ ಪಡೆಯಬವುದು!

Most Popular

Latest Articles

Related Articles