Bele parihara-2023: ಬೆಳೆ ಹಾನಿ ಪರಿಹಾರ ಪರಿಷ್ಕೃತ ಮೊತ್ತದ ವಿವರ, ಮತ್ತು ಬೆಳೆ ಪರಿಹಾರದ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

ಬೆಳೆ ಹಾನಿ ಪರಿಹಾರಕ್ಕೆ(Bele hani application) ಅರ್ಜಿ ಸಲ್ಲಿಸಿದ ರೈತರು ರಾಜ್ಯ ಸರಕಾರ ಪರಿಹಾರ ತಂತ್ರಾಂಶ(Bele hani parihara status check)ಭೇಟಿ ಮಾಡಿ ತಮ್ಮ ಅರ್ಜಿ ಸ್ಥಿತಿ ಮತ್ತು ಪರಿಹಾರದ ಹಣ ಎಷ್ಟು ಜಮಾ ಅಗಿದೆ ಎಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬವುದಾಗಿದೆ.

Bele parihara-2023: ಬೆಳೆ ಹಾನಿ ಪರಿಹಾರ ಪರಿಷ್ಕೃತ ಮೊತ್ತದ ವಿವರ, ಮತ್ತು ಬೆಳೆ ಪರಿಹಾರದ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

ಅತೀಯಾದ ಮಳೆಯಿಂದಾಗಿ ಬೆಳೆ ಹಾನಿಯಾದ(bele hani parihara) ರೈತರಿಗೆ ಕಂದಾಯ ಇಲಾಖೆಯಿಂದ ವಿಪತ್ತು ನಿರ್ವಹಣಾ  ನಿಧಿಯಡಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾಗುವ ಬೆಳೆಗೆ ನೀಡುವ ಇನ್ ಪುಟ್ ಸಬ್ಸಿಡಿ ಪರಿಹಾರ ದರವನ್ನು ಈ ಹಿಂದಿನ ವರ್ಷದಲ್ಲಿ ಹೆಚ್ಚಿಸಿ, ಫಲಾನುಭವಿಗಳಿಗೆ ಪರಿಷ್ಕೃತ ಪರಿಹಾರದ ಮೊತ್ತಕ್ಕೆ ಅರ್ಜಿ ಸ್ವೀಕರಿಸಲಾಗಿತ್ತು ಅದೇ ರೀತಿ ಈ ವರ್ಷವು ಅದೇ ಪರಿಷ್ಕೃತ ಮೊತ್ತಕ್ಕೆ ಅರ್ಜಿ ಸಲ್ಲಿಸಬವುದು.

ಸಧ್ಯ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದ ಹಾಗೂ ನದಿ ಹರಿವಿನಿಂದ ಉಂಟಾಗುವ ಪ್ರವಾಹದಿಂದ ಜನ-ಜಾನುವಾರು, ಮನೆ, ಬೆಳೆ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳ ಹಾನಿ ಸಂಭವಿಸುತ್ತಿದ್ದು ಪ್ರತಿ ವರ್ಷ ದಂತೆ ಬೆಳೆಹಾನಿ ಆಗುವ ಪ್ರಕರಣಗಳಿಗೆ ವಿಪತ್ತು ನಿಧಿಯ ಮಾರ್ಗಸೂಚಿಯಂತೆ ಅರ್ಹ ಫಲಾನುಭವಿಗಳಿಂದ ಅರ್ಜಿ ಪಡೆದು ಪರಿಷ್ಕೃತ ದರದಲ್ಲಿ ಪರಿಹಾರವನ್ನು ಪಾವತಿಸುವ ಪಕ್ರಿಯೆಗೆ ಶೀಘ್ರದಲ್ಲಿ ಆರಂಭವಾಗಲಿದೆ. 

bele parihara-ಬೆಳೆ ಹಾನಿ ಪರಿಹಾರ ಪರಿಷ್ಕೃತ ಮೊತ್ತದ ವಿವರ

ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್​ಗೆ ವಿಪತ್ತು ನಿರ್ವಹಣೆ ನಿಧಿ ಮಾರ್ಗಸೂಚಿ ದರ 8500 ರೂ. ಆಗಿದ್ದು, ಇದ್ಕಕೆ ರಾಜ್ಯ ಸರ್ಕಾರ 5100 ರೂ. ಹೆಚ್ಚುವರಿಯಾಗಿ ನಿಗದಿಪಡಿಸಿದ್ದು, ಒಟ್ಟು 13,600 ರೂ. ಪರಿಹಾರವನ್ನು ಪ್ರತಿ ಹೆಕ್ಟೇರ್​ಗೆ ನೀಡಲಾಗುತ್ತದೆ. ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್​ಗೆ ವಿಪತ್ತು ನಿರ್ವಹಣೆ ನಿಧಿ ಮಾರ್ಗಸೂಚಿ ದರ 17,000 ರೂ. ಇದ್ದು, ಇದ್ಕಕೆ ರಾಜ್ಯ ಸರ್ಕಾರದಿಂದ 8000 ರೂ. ಹೆಚ್ಚುವರಿಯಾಗಿ ನಿಗದಿಪಡಿಸಿದ್ದು, ಒಟ್ಟು 25000 ರೂ. ಪರಿಹಾರವನ್ನು ಪ್ರತಿ ಹೆಕ್ಟೇರ್​ಗೆ ವಿತರಿಸಲಾಗುತ್ತದೆ.

ವಾಣಿಜ್ಯ ಬೆಳೆಗಳಿಗೆ ಅಂದರೆ ಬಹು ವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್​ಗೆ(2.5 ಎಕರೆಗೆ) ವಿಪತ್ತು ನಿರ್ವಹಣೆ ನಿಧಿ ಮಾರ್ಗಸೂಚಿ ದರ 22500 ರೂ. ಆಗಿದ್ದು, ಇದ್ಕಕೆ ರಾಜ್ಯ ಸರ್ಕಾರ 5500 ರೂ. ಹೆಚ್ಚುವರಿಯಾಗಿ ನಿಗದಿಪಡಿಸಿಲಾಗಿತ್ತು, ಒಟ್ಟು 28,000 ರೂ. ಪರಿಹಾರವನ್ನು ಪ್ರತಿ ಹೆಕ್ಟೇರ್​ಗೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಮತ್ತಷ್ಟು ಸರಳ! ಅರ್ಜಿ ಸಲ್ಲಿಸಲು ಇನ್ನು ಮುಂದೆ ಮೇಸೆಜ್ ಗಾಗಿ ಕಾಯಬೇಕಿಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಲಕರ್.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಬೆಳೆ ಹಾನಿಯಾದವರು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ , ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಅರ್ಜಿ ಸಲ್ಲಿಸಬವುದು ಮನೆ ಹಾನಿಯಾದರು ನಿಮ್ಮ ಗ್ರಾಮ ಪಂಚಾಯಚಿಯಲ್ಲಿ ಅರ್ಜಿ ಸಲ್ಲಿಸಬೇಕು.

ಅಗತ್ಯ ದಾಖಲಾತಿಗಳೇನು?

1. ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
2. ಬ್ಯಾಂಕ್ ಪಾಸ್ ಬುಕ್ ಪ್ರತಿ.
3. ಪಹಣಿ/ಉತಾರ್/RTC ಪ್ರತಿ.

(ಸೂಚನೆ: ಹಾನಿಯಾದ ಪ್ರದೇಶದ ಒಂದು ಪೋಟೋ ನಿಮ್ಮ ಬಳಿ ಮೊಬೈಲ್ ನಲ್ಲಿ ಇಟ್ಟುಕೊಂಡಿರಿ)

ಅರ್ಜಿ ವಿಲೇವಾರಿ ಪ್ರಕ್ರಿಯೆ:

ಅರ್ಹ ಫಲಾನುಭವಿಗಳಿಗೆ ಗ್ರಾಮ ಲೆಕ್ಕಾಧಿಕಾರಿ, ಸಂಬಂಧಪಟ್ಟ ತಹಶೀಲ್ದಾರ್ ದೃಢೀಕರಣದೊಂದಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಡಿಜಿಟಲ್ ಸಿಗ್ನೇಚರ್ ದೃಢೀಕರಣಗೊಂಡ ನಂತರ ನೇರವಾಗಿ ಫಲಾನುಭವಿಗಳ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ಕೂಡಲೇ ಪರಿಹಾರವನ್ನು ಜಮಾ ಮಾಡಲಾಗುತ್ತದೆ. 

How to check bele parihara payment details-ಬೆಳೆ ಪರಿಹಾರದ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವೆಬ್ಸೈಟ್ ಲಿಂಕ್:

ಬೆಳೆ ಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರು ರಾಜ್ಯ ಸರಕಾರ ಪರಿಹಾರ ತಂತ್ರಾಂಶ ಭೇಟಿ ಮಾಡಿ ತಮ್ಮ ಅರ್ಜಿ ಸ್ಥಿತಿ ಮತ್ತು ಪರಿಹಾರದ ಹಣ ಎಷ್ಟು ಜಮಾ ಅಗಿದೆ ಎಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬವುದಾಗಿದೆ.

ರಾಜ್ಯ ಸರಕಾರದಿಂದ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ(Parihara) ಮೊದಲ ಹಂತದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಂದ ಅಪ್ಲೋಡ್ ಮಾಡಲಾಗುತ್ತದೆ ನಂತರ  ಎಲ್ಲಾ ರೈತರ ವಿವರನ್ನು ಜಿಲ್ಲಾಡಲಿತದ ಲಾಗಿನ್ ಗೆ ವರ್ಗಾಹಿಸಲಾಗುತ್ತದೆ ನಂತರ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಪರಿಹಾರದ ಹಣವನ್ನು ನೇರ ನಗದು ವರ್ಗಾವಣೆ(DBT) ಮೂಲಕ ಫಲಾನುಭವಿ ರೈತರ ಖಾತೆಗೆ ವರ್ಗಾಹಿಸಲಾಗುತ್ತದೆ. ರೈತರು ಈ ಕೆಳಗಿನ ವಿಧಾನ ಅನುಸರಿಸಿ ತಮ್ಮ ಅರ್ಜಿಯ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬವುದು.

Step-1: ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಈ https://landrecords.karnataka.gov.in/PariharaPayment/ ಕೊಂಡಿಯ ಮೇಲೆ ಕ್ಲಿಕ್ ಮಾಡಿ ಅರ್ಜಿ "ಆಧಾರ್ ಸಂಖ್ಯೆ/Aadhar Number" ಎಂದು ಆಯ್ಕೆ ಮಾಡಿಕೊಳ್ಳಬೇಕು. 

Step-2: ತದನಂತರ "Calamity Type" "Flood" ವರ್ಷ ಆಯ್ಕೆ ಮಾಡಿಕೊಂಡು ಅರ್ಜಿದಾರರ ಆಧಾರ್ ಸಂಖ್ಯೆಯನ್ನು ನಮೂದಿಸಿ ಕ್ಯಾಪ್ಚ ಟೈಪ್ ಮಾಡಿ "ವಿವರಗಳನ್ನು ಪಡೆಯಲು/Fetch Details" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಈ ಪುಟದಲ್ಲಿ ಅರ್ಜಿದಾರರ ಹಣ ಸಂದಾಯ ವಿವರಗಳು ಮತ್ತು ಜಮೀನಿನ ವಿವರ ಗೋಚರಿಸುತ್ತದೆ, ಪರಿಹಾರ ಮೊತ್ತ, ಬ್ಯಾಂಕ್ ಹೆಸರು, ಪರಿಹಾರ ಜಮಾ ಅದ ದಿನಾಂಕ, ಹಣ ಸಂದಾಯ ಸ್ಥಿತಿ, ಬೆಳೆ, ಸರ್ವೆ ನಂಬರ್ ಹೀಗೆ ಹಲವು ಮಾಹಿತಿಯನ್ನು ಇಲ್ಲಿ ತೋರಿಸುತ್ತದೆ.

ಈ ಜಲಾತಾಣದಲ್ಲಿ ಹಿಂದಿನ ವರ್ಷದ ಮಾಹಿತಿಯು ಲಭ್ಯ:

https://parihara.karnataka.gov.in/service89/PaymentDetailsReport.aspx ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವರ್ಷ, ಹಂಗಾಮು(kharif), Select calamity ಆಯ್ಕೆಯಲ್ಲಿ "Flood" ಎಂದು ಕ್ಲಿಕ್ ಮಾಡಬೇಕು ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಹಿಂದಿನ ವರ್ಷದ ಅಂದರೆ 2022 ನೇ ವರ್ಷದಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಪರಿಹಾರ ಜಮಾ ಅಗಿರುವ ಗ್ರಾಮವಾರು ಪಟ್ಟಿಯನ್ನು ಪಡೆಯಬವುದು.

ಇದನ್ನೂ ಓದಿ: Pm kisan: ಪಿ ಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಕೇಂದ್ರ ಸರಕಾರ!