Monsoon update 2024-ರಾಜ್ಯದ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ ಸಾಧ್ಯತೆ! ಇಲ್ಲಿದೆ ಮುಂಗಾರು ಪ್ರವೇಶ ದಿನಾಂಕ!

ಕರ್ನಾಟಕ ಮಳೆ ನಕ್ಷೆ ಮಾಹಿತಿಯನ್ವಯ ಕಳೆದ 24 ಗಂಟೆಗಳಲ್ಲಿ 16th ಮೇ 8.30AM ರಿಂದ 17th ಮೇ 2024 ರ 8.30AM ರವರೆಗೆ, ಅತ್ಯಧಿಕ 99.5 ಮಿಮೀ  ಮಳೆಯು(Weather-2024) ರಾಯಚೂರು ಜಿಲ್ಲೆಯ ರಾಯಚೂರು ತಾಲ್ಲೂಕಿನ ಜಂಬಲದಿನ್ನಿ ವ್ಯಾಪ್ತಿಯಲ್ಲಿ  ದಾಖಲಾಗಿರುತ್ತದೆ.

Monsoon update 2024-ರಾಜ್ಯದ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ ಸಾಧ್ಯತೆ! ಇಲ್ಲಿದೆ ಮುಂಗಾರು ಪ್ರವೇಶ ದಿನಾಂಕ!
Monsoon update -2024

ಕರ್ನಾಟಕ ಮಳೆ ನಕ್ಷೆ ಮಾಹಿತಿಯನ್ವಯ ಕಳೆದ 24 ಗಂಟೆಗಳಲ್ಲಿ 16th ಮೇ 8.30AM ರಿಂದ 17th ಮೇ 2024 ರ 8.30AM ರವರೆಗೆ, ಅತ್ಯಧಿಕ 99.5 ಮಿಮೀ  ಮಳೆಯು(Weather-2024) ರಾಯಚೂರು ಜಿಲ್ಲೆಯ ರಾಯಚೂರು ತಾಲ್ಲೂಕಿನ ಜಂಬಲದಿನ್ನಿ ವ್ಯಾಪ್ತಿಯಲ್ಲಿ  ದಾಖಲಾಗಿರುತ್ತದೆ.

Rain forecast-2024: ನಾಳೆ ಬೆಳಗ್ಗೆ (18-05-2024)ರ ಬೆಳಿಗ್ಗೆ 8-00 ಗಂಟೆವರೆಗಿನ ರಾಜ್ಯದ ಮಳೆ ಮುನ್ಸೂಚನೆ:

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. 

ಚಿಕ್ಕಮಗಳೂರು, ಕೊಡಗು, ಹಾಸನ, ಹೆಚ್ಚಿನ ಭಾಗಗಳಲ್ಲಿ, ಶಿವಮೊಗ್ಗ ಜಿಲ್ಲೆಯ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚೆನೆ ಇದೆ. 

ಇದನ್ನೂ ಓದಿ: Parihara Payment Failed Cases-ರೈತರ ಖಾತೆಗೆ ಬರ ಪರಿಹಾರ ಜಮಾ ಅಗದಿರಲು ಕಾರಣಗಳ ಪಟ್ಟಿ ಬಿಡುಗಡೆ!

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು, ಪಾವಗಢ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ. 
ಚಿತ್ರದುರ್ಗ, ದಾವಣಗೆರೆ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ.

ಮೇ 17ರಿಂದ 23ರ ತನಕ ರಾಜ್ಯದ ಈ ಭಾಗದಲ್ಲಿ ಉತ್ತಮ ಮಳೆ ಸಾಧ್ಯತೆ ಇರುತ್ತದೆ:

ಈಗಿನಂತೆ ಮೇ 22ರ ನಂತರ ಪ್ರಭಲ ಮುಂಗಾರು ಮಾರುತಗಳು ಅಂಡಮಾನ್ ಕಡೆ ಚಲಿಸುವುದರಿಂದ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿವೆ. 

ಇದನ್ನೂ ಓದಿ: Parihara New order-ರೈತರಿಗೆ ಬರ ಪರಿಹಾರ ವಿತರಣೆ ಕುರಿತು ನೂತನ ಆದೇಶ ಪ್ರಕಟ!

ಮೇ 17ರಿಂದ 23ರ ತನಕ ರಾಜ್ಯದ ದಕ್ಷಿಣ ಕರಾವಳಿ (ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು), ಮಲೆನಾಡು ಹಾಗೂ ದಕ್ಷಿಣ ಒಳನಾಡು ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇದೆ.

Monsoon update 2024-ಮುಂಗಾರು ಮಳೆ ಮಾಹಿತಿ:

ಈ ವರ್ಷದ ಮುಂಗಾರು ಮಳೆಯು ಅಧಿಕೃತವಾಗಿ ಬಂಗಾಳಕೊಲ್ಲಿಯ ಆಗ್ನೆಯ ಭಾಗಕ್ಕೆ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಮೇ 19ರಂದು ಪ್ರವೇಶ ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ () ಮೂನ್ಸೂಚನೆ ನೀಡಿದೆ.

ಮುಂಗಾರು ಮಳೆಯು ಮೇ 19ರಿಂದ 7-8 ದಿನಗಳ ಬಳಿಕ ಕೇರಳ ಪ್ರವೇಶ ಮಾಡಲಿದ್ದು, ಒಂದೆರಡು ದಿನಗಳ ಬಳಿಕ ಕರ್ನಾಟಕದ ಕರಾವಳಿ ಪ್ರವೇಶ ಮಾಡಲಿದೆ.

ಇದನ್ನೂ ಓದಿ: Adhar bara parihara status-ನಿಮ್ಮ ಆಧಾರ್ ನಂಬರ್ ಹಾಕಿ ಬರ ಪರಿಹಾರದ ಸಂಪೂರ್ಣ ವಿವರ ಪಡೆಯಿರಿ!