Rain forecast- ಇಲ್ಲಿದೆ ರಾಜ್ಯದ ಮಳೆ ಮುನ್ಸೂಚನೆ ಸಮಗ್ರ ಮಾಹಿತಿ!

ಕರ್ನಾಟಕ ಮಳೆ ಪ್ರಮಾಣ ನಕ್ಷೆ(Karnataka rain forecast) ಮಾಹಿತಿಯನ್ವಯ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹಿರೇಜಂಜೂರು ಗ್ರಾಮದಲ್ಲಿ ಅತ್ಯಧಿಕ 79.5 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ. ಉಳಿದಂತೆ ಉತ್ತರ ಮತ್ತು ಮದ್ಯ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಬಂದಿರುತ್ತದೆ.

Rain forecast- ಇಲ್ಲಿದೆ ರಾಜ್ಯದ ಮಳೆ ಮುನ್ಸೂಚನೆ ಸಮಗ್ರ ಮಾಹಿತಿ!

ಕರ್ನಾಟಕ ಮಳೆ ಪ್ರಮಾಣ ನಕ್ಷೆ(Karnataka rain forecast) ಮಾಹಿತಿಯನ್ವಯ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹಿರೇಜಂಜೂರು ಗ್ರಾಮದಲ್ಲಿ ಅತ್ಯಧಿಕ 79.5 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ. ಉಳಿದಂತೆ ಉತ್ತರ ಮತ್ತು ಮದ್ಯ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಬಂದಿರುತ್ತದೆ.

ನಾಳೆ (15-04-2024) ಬೆಳಿಗ್ಗೆ 8-00 ಗಂಟೆವರೆಗಿನ ರಾಜ್ಯದ ಮಳೆ ಮುನ್ಸೂಚನೆ ಮಾಹಿತಿ ಹೀಗಿದೆ:

ಕಾಸರಗೋಡು ಸೇರಿದಂತೆ ಕರ್ನಾಟಕದ(rain forecast) ಕರಾವಳಿ ಜಿಲ್ಲೆಗಳಲ್ಲಿ ಸಂಜೆ, ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇರುತ್ತದೆ. ಸುಳ್ಯ, ಸುಬ್ರಹ್ಮಣ್ಯ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಸಹ ಇದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಜೆ, ರಾತ್ರಿ ಅಲ್ಲಲ್ಲಿ ಸಣ್ಣ ಪ್ರಮಾಣದ ಮೋಡದ ವಾತಾವರಣದ ಮುನ್ಸೂಚನೆ ನೀಡಲಾಗಿದೆ. 

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ  ಜಿಲ್ಲೆಗಳಲ್ಲಿ ಸಂಜೆ, ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ. ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇರುತ್ತದೆ. ಉಳಿದಂತೆ ರಾಜ್ಯದ ಉಳಿದ ಭಾಗಗಳಲ್ಲಿ ಸಂಜೆ, ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇರುತ್ತದೆ.

ಇದನ್ನೂ ಓದಿ: Bele vime-2024: ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಚೆಕ್ ಮಾಡಲು ಲಿಂಕ್ ಬಿಡುಗಡೆ!

ಇವತ್ತು ಹಾಗೂ ನಾಳೆ  ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಎಪ್ರಿಲ್ 16 ರಿಂದ ಮಲೆನಾಡಿನ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ಇರುತ್ತದೆ. ಆಮೇಲಿನ ದಿನಗಳಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆ ಜಾಸ್ತಿಯಾಗುವ ಲಕ್ಷಣಗಳಿವೆ. ಒಳನಾಡು ಭಾಗಗಳಲ್ಲಿ ಎಪ್ರಿಲ್ 20ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇರುತ್ತದೆ.

Next 7 days rain forecast- ಮುಂದಿನ 7 ದಿನದ ಮಳೆ ಮುನ್ಸೂಚನೆ:

ಮುಂದಿನ 7 ದಿನದ ಸಂಚಿತ ಮಳೆ ಮುನ್ಸೂಚನೆ ನಕ್ಷೆ:

ಇದನ್ನೂ ಓದಿ: Bele vime status-2024: ಇಲ್ಲಿದೆ ಸರ್ವೆ ನಂಬರ್ ಹಾಕಿ ಎಷ್ಟು? ಬೆಳೆ ವಿಮೆ ಬಂದಿದೆ ಎಂದು ಚೆಕ್ ಮಾಡುವ ವಿಧಾನ! 

ಕರ್ನಾಟಕ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಮುಂದಿನ 7 ದಿನದ ಸಂಚಿತ ಮಳೆ ಮುನ್ಸೂಚನೆ ನಕ್ಷೆಯನ್ವಯ ದಿನಾಂಕ: 14-04-2024 ರಿಂದ 22-04-2024 ರವರೆಗೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಅಲ್ಲಲ್ಲಿ (20-50 ಮಿ ಮೀ) ಉತ್ತಮ ಮಳೆ ಮುನ್ಸೂಚನೆ ನೀಡಲಾಗಿದೆ.

ಉಳಿದಂತೆ ಕಲಬುರ್ಗಿ ಮತ್ತು ಬೆಳಗಾವಿ ಜಿಲ್ಲೆಯನ್ನು ಹೊರತುಪಡಿಸಿ ಸಾಧಾರಣದಿಂದ ಮಧ್ಯಮದವರೆಗೆ(2.5-20 ಮಿ ಮೀ) ಮಳೆ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Bele vime Claim enquiry- ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಕುರಿತು ಯಾರಲ್ಲಿ ವಿಚಾರಿಸಬೇಕು?

Weather forecast channel- ಮಳೆ ಮುನ್ಸೂಚನೆ ನೀಡುವ ವಾಟ್ಸಾಪ್ ಚಾನೆಲ್- Join Now

KSNDMC, Bengalore ಅಧಿಕೃತ ಎಕ್ಸ್ ಖಾತೆ- Follow Now

Rain forecast helpline- ವರುಣಮಿತ್ರ ಸಹಾಯವಾಣಿ- "9243345433" ಈ ಸಹಾಯವಾಣಿಗೆ ಕರೆ ಮಾಡಿ ಮಳೆ ಮುನ್ಸೂಚನೆ ಮಾಹಿತಿಯನ್ನು ಮೊಬೈಲ್ ಮೂಲಕವೇ ಪಡೆದುಕೊಳ್ಳಬಹುದು.

ಮಾಹಿತಿ ಕೃಪೆ: ಸಾಯಿಶೇಖರ್ ಬಿ & KSNDMC, Bengalore