fertilizer feeder- ಕೇವಲ 100 ರೂ ಗೆ ತಯಾರಾಯ್ತು ಗೊಬ್ಬರ ಹಾಕುವ ಸಾಧನ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

fertilizer feeder: ಈ ವರ್ಷ ಕೃಷಿ ಮೇಳದಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಈ ತಂಡದಿಂದ ರೈತರಿಗೆ ಕಡಿಮೆ ಖರ್ಚಿನಲ್ಲಿ ಗೊಬ್ಬರ ಹಾಕುವ ಸಾಧನವನ್ನು ಹೇಗೆ ತಯಾರಿಸಿಕೊಳ್ಳಬವುದು ಎಂದು ತಿಳಿಸಿಕೊಳ್ಳುಲು ವಿದ್ಯಾರ್ಥಿಗಳು ಈ ಸಾಧನವನ್ನು ತಾವೇ ಸಿದ್ದಪಡಿಸಿ ಮೇಳಕ್ಕೆ ಬಂದ ರೈತರಿಗೆ ಇದರ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಹೌದು ರೈತ ಬಾಂಧವರೇ ಕೇಳಿದ ತಕ್ಷಣ ಇಷ್ಟು ಕಡಿಮೆ ವೆಚ್ಚದಲ್ಲಿ ಎಂದ ತಕ್ಷಣ ನಂಬಲು ಅಸಾಧ್ಯ ಅನಿಸಿದರು ಇದು ವಾಸ್ಥವದಲ್ಲಿ ಸತ್ಯವಾಗಿಸಿದು ಕೃಷಿ ವಿಶ್ವವಿದ್ಯಾಲಯಯ, ದಾರವಾಡದ ಸ್ನೇಹ ತಂಡದ ಕೃಷಿ ಪದವೀಧರ ವಿದ್ಯಾರ್ಥಿಗಳು.

ಈ ವರ್ಷ ಕೃಷಿ ಮೇಳದಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಈ ತಂಡದಿಂದ ರೈತರಿಗೆ ಕಡಿಮೆ ಖರ್ಚಿನಲ್ಲಿ ಗೊಬ್ಬರ ಹಾಕುವ ಸಾಧನವನ್ನು ಹೇಗೆ ತಯಾರಿಸಿಕೊಳ್ಳಬವುದು ಎಂದು ತಿಳಿಸಿಕೊಳ್ಳುಲು ವಿದ್ಯಾರ್ಥಿಗಳು ಈ ಸಾಧನವನ್ನು ತಾವೇ ಸಿದ್ದಪಡಿಸಿ ಮೇಳಕ್ಕೆ ಬಂದ ರೈತರಿಗೆ ಇದರ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ರೈತರು ಸಾಮಾನ್ಯವಾಗಿ ಬೆಳೆಗಳಿಗೆ ಮೇಲು ಗೊಬ್ಬರವನ್ನು ಕೋಡುವಾಗ ಒಂದು ಚೀಲದಲ್ಲಿ ಅಥವಾ ಬಕೆಟ್ ನಲ್ಲಿ ಗೊಬ್ಬರವನ್ನು ಹಾಕಿಕೊಂಡು ಬಳಿಕ ಜಮೀನಿನಲ್ಲಿ ಕೈಯಿಂದ ಚಲ್ಲುತಾ ಹೋಗುತ್ತಾರೆ ಈ ಸಾಂಪ್ರದಾಯಕ ಪದ್ದತಿಯು ಹೆಚ್ಚು ಶ್ರಮ ಮತ್ತು ಕೆಲವು ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿರುತ್ತದೆ. ಈ ತಾಂತ್ರಿಕ ಸಮಸ್ಯೆಯನ್ನು ಸಲ್ಪ ಮಟ್ಟಿಗೆ ಸರಿಪಡಿಸುವ ಮಾರ್ಗ ಈ ನೂತನ ಗೊಬ್ಬರ ಹಾಕುವ ಸಾಧನದಲ್ಲಿ ಸಾಧ್ಯ ಎನ್ನುತ್ತಾರೆ ಕೃಷಿ ವಿಶ್ವವಿದ್ಯಾಲಯ, ದಾರವಾಡದ ಸ್ನೇಹ ತಂಡದ ಕೃಷಿ ವಿದ್ಯಾರ್ಥಿಗಳು.

ಇದನ್ನೂ ಓದಿ: Parihara list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರಿದ್ಯಾ? ಚೆಕ್ ಮಾಡಿ.

fertilizer feeder-ಗೊಬ್ಬರ ಹಾಕುವ ಸಾಧನವನ್ನು ಹೇಗಿದೆ ತಯಾರಿಸಲಾಗಿದೆ?

ಈ ಸಾಧನ ತಯಾರಿಸಲು ರೈತರ ಬಳಿಕ ಈಗಾಗಲೇ ಹಾಳಾಗಿರುವ ಹಳೆಯ ಔಷದಿ ಪಂಪ್/ನ್ಯಾಪ್ ಸ್ಯಾಕ್ ಸ್ಪ್ರೇಯರ್ ಅನ್ನು ತೆಗೆದುಕೊಂಡು ನಂತರ ಇದನ್ನು 2 ಪೋರ್ಟಬಲ್ ಪೈಪ್ ಮತ್ತು 3-3.5 ಅಡಿಯ ಒಂದು ಇಂಚು ಉದ್ದದ ಎರಡು PVC ಪೈಪ್ ಅನ್ನು ಬಳಕೆ ಮಾಡಿಕೊಂಡು ಈ ಸಾಧನವನ್ನು ತಯಾರಿಸಲಾಗಿದೆ.

ಇದನ್ನೂ ಓದಿ: New ration shop- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?

ಗೊಬ್ಬರ ಹಾಕುವ ಸಾಧನದ ಬಳಕೆ ವಿಧಾನ ಹೇಗೆ?

ಈ ಸಾಧನದಲ್ಲಿ ರೈತರು ಒಂದು ಬಾರಿಗೆ 20 ಕೆಜಿವರೆಗೆ ಗೊಬ್ಬರವನ್ನು ಹಾಕಿಕೊಂಡು ಜಮೀನಿನ ಎಲ್ಲಾ ಭಾಗಕ್ಕೆ ಒಂದೇ ಸಮನಾಗಿ ಗೊಬ್ಬರವನ್ನು ಹಾಕಬವುದು ಮೊದಲು ಔಷದಿ ಪಂಪ್ ಟ್ಯಾಂಕಿನ ಒಳಗೆ ಗೊಬ್ಬರವನ್ನು ತುಂಬಿಸಿ ಔಷದಿ ಪಂಪ್ ಅನ್ನು ಹೇಗೆ ಹೆಗಲಿಗೆ ಹಾಕಿಕೊಳ್ಳುತೇವೆಯೋ ಅದೇ ರೀತಿ ಈ ಸಾಧನವನ್ನು ಹೆಗಲಿಗೆ ಹಾಕಿಕೊಂಡು PVC ಪೈಪ್ ನ ಎರಡು ಬದಿಯಲ್ಲಿ ರಂದ್ರದ ಮೇಲೆ ಬೆರಳನ್ನು  ಇಟ್ಟುಕೊಂಡು ನಮಗೆ ಗೊಬ್ಬರ ಹಾಕುವ ಸಮಯದಲ್ಲಿ ಆ ಬೆರಳುಗಳನ್ನು ತೆಗೆದುಕೊಂಡು ಜಮೀನಿನಲ್ಲಿ ಸಾಗುತ್ತ ಹೋದರೆ ಆಯ್ತು ಅಷ್ಟೇ.

fertilizer feeder benefits-ಈ ಸಾಧನ ಬಳಕೆ ಪ್ರಯೋಜನಗಳೇನು?

ರೈತರು ಸಾಂಪ್ರದಾಯಕ ಪದ್ದತಿಯನ್ನು ಬಳಕೆ ಮಾಡುವುದರ ಬದಲಿಗೆ ಈ ಸಾಧನವನ್ನು ಬಳಕೆ ಮಾಡಿ ಗೊಬ್ಬರ ಹಾಕುವುದರಿಂದ ಮೊದಲನೆಯದಾಗಿ ಬೆಳೆ ಸುಳಿಯ ಬಾಗಕ್ಕೆ ಗೊಬ್ಬರ ಬಿಳುವುದು ತಪ್ಪುತ್ತದೆ.

ಜಮೀನಿನ ಎಲ್ಲಾ ಭಾಗಕ್ಕೂ ಸರಿ-ಸಮಾನಾಗಿ ಗೊಬ್ಬರ ಹಾಕಿದಂತಾಗುತ್ತದೆ ಸ್ವಂಟ ನೋವು ಇರುವ ವ್ಯಕ್ತಿಗಳು ಬಾಗಿ ಗೊಬ್ಬರ ಹಾಕಲು ಸಮಸ್ಯೆಯಿದಲ್ಲಿ ಅಂತಹ ರೈತರಿಗೆ ಈ ಸಾಧನ ನೆರವಾಗುತ್ತದೆ.

ಗೊಬ್ಬರ ಜಮೀನಿನಲ್ಲಿ ಅನವಶ್ಯಕವಾಗಿ ಬೇರೆ ಜಾಗದಲ್ಲಿ ಬಿದ್ದು ಪೋಲಾಗುವುದನ್ನು ತಪ್ಪಿಸಬವುದಾಗಿದೆ.

ಇದನ್ನೂ ಓದಿ: Sprinkler set Subsidy-ಕೃಷಿ ಇಲಾಖೆಯಿಂದ ಶೇ 90 ರಷ್ಟು ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

ಗೊಬ್ಬರ ಹಾಕುವ ಸಾಧನದ  ವಿಡಿಯೋ: fertilizer feeder video  

ಏನಿದು ಸ್ನೇಹ ತಂಡ?

ಕೃಷಿ ವಿಶ್ವವಿದ್ಯಾಲಯ,ದಾರವಾಡದ ವಿದ್ಯಾರ್ಥಿಗಳೇ ಹಲವು ವರ್ಷಗಳಿಂಡ ರಚಿಸಿಕೊಂಡಿರುವ ಕೃಷಿ ವಿದ್ಯಾರ್ಥಿಗಳ ತಂಡವಾಗಿದ್ದು ಈ ತಂಡದ ಮೂಲಕ ಪ್ರತಿ ವರ್ಷ ಪ್ರಗತಿಪರ ರೈತರ ತಾಕಿಗೆ ಕ್ಷೇತ್ರ ಅದ್ಯಯನ ಪ್ರವಾಸ ಕೈಗೊಂಡು ಪ್ರತಿ ಭಾರೀ ನಡೆಯುವ ಕೃಷಿ ಮೇಳದಲ್ಲಿ ರೈತರಿಗೆ ಕಡಿಮೆ ಖರ್ಚಿನಲ್ಲಿ ಅಳವಡಿಸಿಕೊಳ್ಳಬವುದಾದ ತಾಂತ್ರಿಕತೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡುತ್ತಿದ್ದಾರೆ. ಈ ರೀತಿಯ ಪ್ರಯತ್ನಗಳು ಇನ್ನು ಮುಂದಿನ ದಿನಗಳನ್ನು ಹೆಚ್ಚಾಗಲಿ ಎನ್ನುವುದು ನಮ್ಮ ತಂಡದ ಆಶಯ.

ಇನ್ನು ಹೆಚ್ಚಿನ ಮಾಹಿತಿಗಾಗಿ ಸ್ನೇಹ ತಂಡದ ವೆಬ್ಸೈಟ್ ಲಿಂಕ್: click here