Karnataka Weather forecast-2024: ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ! ಇಲ್ಲಿದೆ ರಾಜ್ಯದ ಮಳೆ ಮುನ್ಸೂಚನೆ!
ಕರ್ನಾಟಕ ಮಳೆ ಮಾಹಿತಿಯ ನಕ್ಷೆಯ ಪ್ರಕಾರ ರಾಜ್ಯದಲ್ಲಿ ಕಳೆದ ಗಂಟೆಗಳಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿರಗುಡಿ ವ್ಯಾಪ್ತಿಯಲ್ಲಿ ಅತ್ಯಧಿಕ 104 ಮಿಲಿ ಮೀಟರ್ ಮಳೆ(Weather forecast-2024) ದಾಖಲಾಗಿರುತ್ತದೆ.
ಕರ್ನಾಟಕ ಮಳೆ ಮಾಹಿತಿಯ ನಕ್ಷೆಯ ಪ್ರಕಾರ ರಾಜ್ಯದಲ್ಲಿ ಕಳೆದ ಗಂಟೆಗಳಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿರಗುಡಿ ವ್ಯಾಪ್ತಿಯಲ್ಲಿ ಅತ್ಯಧಿಕ 104 ಮಿಲಿ ಮೀಟರ್ ಮಳೆ(Weather forecast-2024) ದಾಖಲಾಗಿರುತ್ತದೆ.
ಉಳಿದಂತೆ ಮಂಡ್ಯ, ಶಿವಮೊಗ್ಗ, ಮೈಸೂರು, ಹಾಸನ, ರಾಯಚೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಉತ್ತಮ ಮಳೆ ಬಂದಿರುತ್ತದೆ.
ಇದನ್ನೂ ಓದಿ: SSLC ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ : MTS, Clerks ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ!
Karnataka Weather forecast-2024: ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ!
ರಾಜ್ಯದ ವಿವಿಧೆಡೆ ಇಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ.
ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಕೆಲವೆಡೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: Guest Teachers Recruitment-2024: ಸರ್ಕಾರಿ ಶಾಲೆಗಳಲ್ಲಿ 35,000 ಅತಿಥಿ ಶಿಕ್ಷಕರ ಭರ್ತಿಗೆ ಅನುಮೋದನೆ!
Tomorrow Weather forecast- ನಾಳೆ (06-06-2024) ಬೆಳಿಗ್ಗೆ 8-00 ಗಂಟೆವರೆಗಿನ ರಾಜ್ಯದ ಹವಾಮಾನ ಮುನ್ಸೂಚನೆ ಮಾಹಿತಿ:
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.
ವಿಜಯಪುರ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಬೆಂಗಳೂರು ಉತ್ತರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚೆನೆ ಇದೆ.
ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಪಾವಗಢ, ಚಿತ್ರದುರ್ಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಮಳೆಯ ಮುನ್ಸೂಚೆನೆ ಇದೆ.
ಇದನ್ನೂ ಓದಿ: mp election result-2024: ಲೋಕಸಭೆ ಚುನಾವಣೆ ಲೈವ್ ಫಲಿತಾಂಶ ನೋಡಲು ಮೊಬೈಲ್ ಅಪ್ಲಿಕೇಶನ್!
ಉಳಿದ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
Mansoon rain updates-2024: ಮುಂಗಾರು ಮಳೆ ಮಾಹಿತಿ ಹೀಗಿದೆ:
ಈಗಿನ ಪ್ರಕಾರ ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಭೂಮಧ್ಯ ರೇಖೆಗಿಂತ ಕೆಳಗೆ ಹಿಂದೂ ಮಹಾಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಂತಹ ತಿರುವಿಕೆಯು ಶಿಥಿಲಗೊಳ್ಳುತ್ತಿದೆ. ಜೂನ್ 6 ರಿಂದ 9ರ ತನಕ ಮುಂಗಾರು ಸ್ವಲ್ಪ ಚುರುಕಾದರೂ ನಂತರ ಮತ್ತೆ ದುರ್ಬಲಗೊಳ್ಳುವ ಲಕ್ಷಣಗಳಿವೆ. ಈಗ ಅರಬ್ಬಿ ಸಮುದ್ರ ದಕ್ಷಿಣ ಭಾಗದಿಂದ ಶ್ರೀಲಂಕಾ ಮೂಲಕ ಬಂಗಾಳಕೊಲ್ಲಿಗೆ ಬೀಸುತ್ತಿರುವ ಗಾಳಿಯ ಒತ್ತಡವೂ ಕಡಿಮೆಯಾಗುವ ಸೂಚನೆಗಳಿರುವುದರಿಂದ ಒಳನಾಡು ಭಾಗಗಳಲ್ಲಿ ಈಗ ಆಗುತ್ತಿರುವ ಮಳೆಯು ಇನ್ನೆರಡು ದಿನಗಳಲ್ಲಿ ಕಡಿಮೆಯಾಗುವ ಲಕ್ಷಣಗಳಿವೆ. ಒಟ್ಟಿನಲ್ಲಿ ಮುಂಗಾರು ಮುಂದಿನ 10 ದಿನಗಳವರೆಗೂ ದುರ್ಬಲವಾಗಿರಲಿದೆ.
ಇದನ್ನೂ ಓದಿ: Karmika card-ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯ ನೋಂದಾಯಿತ ಸದಸ್ಯರಾಗಲು ಅರ್ಜಿ ಆಹ್ವಾನ!
Next 1 week rain forecast- ಮುಂದಿನ ಒಂದು ವಾರದ(05-06-2024 to 13-06-2024) ಮಳೆ ಮುನ್ಸೂಚನೆ ನಕ್ಷೆಯ ವಿವರ ಹೀಗಿದೆ:
ಕರಾವಳಿ ಜಿಲ್ಲೆಗಳಲ್ಲಿ ಅಂದರೆ ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ,ಮಂಗಳೂರು, ವಿಜಾಪುರ, ಬೀದರ್ ಜಿಲ್ಲೆಯ ವ್ಯಾಪ್ತಿಯಲ್ಲಿ 60 ಮಿಲಿ ಮೀಟರ್ ನಿಂದ 125 ಮಿಮಿ ಮಳೆ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ 20 ಮಿಲಿ ಮೀಟರ್ ನಿಂದ 40 ಮಿಮಿ ಮಳೆ ಮುನ್ಸೂಚನೆ ನೀಡಲಾಗಿದೆ.