Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNew postsIFS scheme: ಈ ಯೋಜನೆಯಡಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ 1.00 ಲಕ್ಷವರೆಗೆ...

IFS scheme: ಈ ಯೋಜನೆಯಡಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ 1.00 ಲಕ್ಷವರೆಗೆ ಸಹಾಯಧನ!

ರಾಜ್ಯ ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ಆಸಕ್ತಿಯಿರುವ ರೈತರಿಗೆ 2023-24 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿಯ ವಿಸ್ತರಣೆ ಹಾಗೂ ಜನಪ್ರಿಯಗೊಳಿಸುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಷ್ಥಾನ ಮಾಡಲಾಗುತ್ತಿದೆ.

ಸಮಗ್ರ ಕೃಷಿ ಪದ್ಧತಿಯೆಂದರೆ ಎರಡು ಅಥವಾ ಹೆಚ್ಚಿನ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಪರಸ್ಪರ ಅವಲಂಬನೆಯೊಂದಿಗೆ ಅಳವಡಿಸಿಕೊಳ್ಳುವುದು ಅಥವಾ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು, ರಾಜ್ಯದ ರೈತರು ಅನೇಕ ಶತಮಾನಗಳಿಂದ ವರ್ಷಪೂರ್ತಿ ಆದಾಯ ಮತ್ತು ಹೆಚ್ಚುವರಿ ಉದ್ಯೋಗಾವಕಾಶಗಳಂತಹ ಅನುಕೂಲಗಳಿಗಾಗಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸುತ್ತಿದ್ದಾರೆ. 

ಇದು ನೈಸರ್ಗಿಕ ತತ್ತ್ವವನ್ನು ಒಳಗೊಂಡಿರುವುದಲ್ಲದೆ, ಇದರ ಮೂಲಕ ಕೃಷಿ ಬೆಳೆಗಳ ಸಾಗುವಳಿ ಜೊತೆಗೆ ಕ್ಷೇತ್ರ ಮಟ್ಟದಲ್ಲಿ ಕೃಷಿಯೇತರ ಚಟುವಟಿಕೆಗಳಾದ ಜಾನುವಾರು, ಕೋಳಿ, ಮೀನುಗಾರಿಕೆ, ರೇಷ್ಮೆ ಇವುಗಳನ್ನು ಒಗ್ಗೂಡಿಸಿ ಅಧಿಕ ಆದಾಯ ಪಡೆಯಬಹುದಾಗಿರುತ್ತದೆ. ಸಮಗ್ರ ಕೃಷಿ ಪದ್ಧತಿಯಲ್ಲಿ ವಿಭಿನ್ನ ಚಟುವಟಿಕೆಗಳನ್ನು ಸಮತೋಲನದಲ್ಲಿ ಒಗ್ಗೂಡಿಸಿ ಪ್ರತಿಯೊಂದು ಘಟಕವು ಪೂರಕವಾಗಿ ಕೃಷಿ ಪದ್ಧತಿಗಳನ್ನು ಅಳವಡಿಸಲು ಹಾಗೂ ಒಂದರ ತ್ಯಾಜ್ಯವನ್ನು ಇನ್ನೊಂದರ ಸಂಪನ್ಮೂಲವಾಗಿ ಮರುಬಳಕೆ ಮಾಡಲಾಗುತ್ತದೆ.

ಸಮಗ್ರ ಕೃಷಿ ಪದ್ಧತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ವಿವಿಧ ಘಟಕಗಳು ಉತ್ತಮ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು, ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಲು, ನೀರಿನ ಒಳಹರಿವಿನ ಗರಿಷ್ಠ ಬಳಕೆಗೆ ಮತ್ತು ಅಧಿಕ ಇಳುವರಿಯನ್ನು ಪಡೆಯಲು ಸಹಾಯ ಮಾಡುತ್ತವೆ. ಸಮಗ್ರ ಕೃಷಿ ಪದ್ಧತಿ ಶ್ರಮದಾಯಕವಾಗಿದ್ದರೂ, ರೈತರ ಕುಟುಂಬಗಳು ವರ್ಷದುದ್ದಕ್ಕೂ, ಆದಾಯ ಪಡೆಯುವಂತೆ ತೊಡಗಿಸಿಕೊಳ್ಳಲು ಸಹಾಯಕವಾಗುತ್ತವೆ. ಸಮಗ್ರ ಕೃಷಿ ಪದ್ಧತಿಯನ್ನು ಕ್ಲಸ್ಟರ್ (ಗುಚ್ಛ) ಮಾದರಿಯಲ್ಲಿ ಅನುಷ್ಠಾನ ಮಾಡುವುದರಿಂದ, ಸಂಪನ್ಮೂಲಗಳ ಸದ್ಬಳಕೆ ಮತ್ತು ಸಾಮೂಹಿಕ ಉತ್ಪನ್ನಗಳ ಮಾರಾಟಕ್ಕಾಗಿ ಉತ್ತೇಜಿಸಬಹುದಾಗಿರುತ್ತದೆ. ಇದರಲ್ಲಿ ಉತ್ಪಾದನಾ ವೆಚ್ಚ ಕಡಿಮೆಯಿದ್ದು, ಸುಸ್ಥಿರ ಆಧಾರದ ಮೇಲೆ ಆದಾಯವನ್ನು ಹೆಚ್ಚಿಸುತ್ತದೆ.

ಸಮಗ್ರ ಕೃಷಿ ಪದ್ಧತಿಯು ಏಕ ಬೆಳಪದ್ಮತಿ ವಿಧಾನದಿಂದ ಬಹು ಬೆಳಪದ್ಧತಿ ಬದಲಾವಣೆಗೆ ಅವಕಾಶ ಕಲ್ಪಿಸುತ್ತದೆ. ಕೃಷಿ ಪದ್ಧತಿಗಳಲ್ಲಿ ಜಾನುವಾರು, ಬೆಳೆ ಉತ್ಪಾದನೆ, ತೋಟಗಾರಿಕೆ, ಇತರ ರೈತರ ಆದಾಯ ಹೆಚ್ಚಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತದೆ.

ಸಮಗ್ರ ಕೃಷಿ ಪದ್ಧತಿ ವಿಸ್ತರಣೆ ಹಾಗೂ ಜನಪ್ರಿಯಗೊಳಿಸುವ ಕಾರ್ಯಕ್ರಮದ ಗುರಿ ಹಾಗೂ ಉದ್ದೇಶಗಳು:

ಯೋಜನೆಯ ಗುರಿ:

2023-24 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ ಹಾಗೂ ಪಶುಸಂಗೋಪನೆಗಳನ್ನು ಒಗ್ಗೂಡಿಸಿ “ಸಮಗ್ರ ಕೃಷಿ ಪದ್ಧತಿ” ಮೂಲಕ ರೈತನ ಆದಾಯ ಹೆಚ್ಚಳ ಮಾಡುವುದು ಹಾಗೂ ಅಳವಡಿಸಿದ ಪ್ರದೇಶದಲ್ಲಿ, ಜಮೀನಿನಲ್ಲಿ ಬೆಳೆ ಉತ್ಪಾದಕತೆ, ಸುಸ್ಥಿರತೆ, ಸಮತೋಲನಾ ಆಹಾರ ಉತ್ಪಾದನೆ, ತಾಜ್ಯಗಳ ಮರುಬಳಕ ಹಾಗೂ ವರ್ಷಪೂರ್ತಿ ಆದಾಯ ಹೆಚ್ಚಿಸುವುದು ಮುಖ್ಯ ಗುರಿಯಾಗಿರುತ್ತದೆ.

ಉದ್ದೇಶಗಳು:

1, ಕೃಷಿ ಹಾಗೂ ಸಂಬಂಧಿತ ಕಾರ್ಯಕ್ಷೇತ್ರಗಳಲ್ಲಿ “ಸಮಗ್ರ ಕೃಷಿ ಪದ್ಧತಿ ಮಾದರಿಗಳನ್ನು ಸಿದ್ಧಪಡಿಸಿದ್ದು, ಆಯಾ ಕ್ಷೇತ್ರಕ್ಕೆ ಸೂಕ್ತವಾಗುವಂತೆ ಅಳವಡಿಸುವುದು.

2. ಉತ್ತಮ ಬೇಸಾಯ ಪದ್ಧತಿಗಳಾದ ನೂತನ ತಾಂತ್ರಿಕತೆಗಳು, ಅಧಿಕ ಇಳುವರಿ ಕೊಡುವ ತಳಿಗಳನ್ನು ಸಂಯೋಜನೆಯಲ್ಲಿ ಬಳಸುವುದು, 3. ರೈತರ ಆದಾಯ ಹೆಚ್ಚಿಸಲು ಕೃಷಿ ಜೊತೆಗೆ ಇತರ ಆದಾಯ ಬರುವ ಉದ್ಯಮಗಳನ್ನು ಅಳವಡಿಸಲು ಪ್ರೇರೇಪಿಸುವುದು.

ಇದನ್ನೂ ಓದಿ: Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.

ಆರ್ಥಿಕ ವೆಚ್ಚ:

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಸಮಗ್ರ ಕೃಷಿ ಮಾದರಿ ಸ್ಥಾಪಿಸಲು ಒಟ್ಟಾರೆ 72.736 ಕೋಟಿ ರೂಗಳ ಅನುದಾನ ಅನುಮೋದನೆಯಾಗಿದ್ದು, ರಾಜ್ಯಾದ್ಯಂತ ಮಳೆಯಾಶ್ರಿತ / ನೀರಾವರಿ ಮಾದರಿಗಳನ್ನು ಅಳವಡಿಸಲಾಗುವುದು. 2023-24 ನೇ ಸಾಲಿಗೆ ಎಲ್ಲಾ ಜಿಲ್ಲೆಗಳಲ್ಲಿ 4000 ಸಮಗ್ರ ಕೃಷಿ ಪದ್ಧತಿ ಮಾದರಿಗಳನ್ನು ಅನುಷ್ಠಾನಗೊಳಿಸಲು ರೂ. 20,00 ಕೋಟೆಗಳ ಕಾರ್ಯಕ್ರಮ ರೂಪಿಸಲಾಗಿದೆ.

2023-24 ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಸಮಗ್ರ ಕೃಷಿ ಪದ್ಮತಿ ಮಾದರಿಗಳನ್ನು ಅಳವಡಿಸಲು ಅವಕಾಶ ಕಲ್ಪಿಸಿದ್ದು, ರೈತರ ಆಸಕ್ತಿಯನ್ನು ಪರಿಗಣಿಸಿ ಬೇಡಿಕೆ ಇರುವ ಪಂಚಾಯಿತಿಯಲ್ಲಿ ಈಗಾಗಲೇ (2021-22 ಹಾಗೂ 2022-23 ನೇ ಸಾಲಿನಲ್ಲಿ) ಅನುಷ್ಮಾನ ಮಾಡಿದ್ದರೂ ಸಹ ಒಂದಕ್ಕಿಂತ ಹೆಚ್ಚು ಸಮಗ್ರ ಕೃಷಿ ಪದ್ಧತಿ ಮಾದರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಅನುಷ್ಠಾನ ಮಾಡದಿರುವ ಗ್ರಾಮ/ ಗ್ರಾಮ ಪಂಚಾಯಿತಿಗಳಲ್ಲಿ ಆದ್ಯತೆ ಮೇರೆಗೆ ಅನುಷ್ಠಾನ ಮಾಡಲಾಗುತ್ತದೆ.

ಯೋಜನೆಯ ವಿವರ ಹಾಗೂ ಅನುಷ್ಮಾನ ಮಾರ್ಗಸೂಚಿ ವಿವರ ಹೀಗಿದೆ:

ಕರ್ನಾಟಕ ರಾಜ್ಯದಲ್ಲಿ 6027 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ ಮಳೆ ಪ್ರಮಾಣದ ಆಧಾರದಲ್ಲಿ 4100 ಗ್ರಾಮ ಪಂಚಾಯಿತಿಗಳನ್ನು ಮಳೆಯಾಶ್ರಿತ ಪ್ರದೇಶಗಳಿಗಾಗಿ ಹಾಗೂ 1927 ಪಂಚಾಯಿತಿಗಳನ್ನು ನೀರಾವರಿ ಮಾದರಿಗಳಾಗಿ ಅನುಷ್ಠಾನಗೊಳಿಸಲು ಯೋಜಿಸಲಾಗಿರುತ್ತದೆ. ಈ ಯೋಜನೆಯಡಿ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಸ್ಥಾಪಿಸಲು ಯೋಜಿಸಿದ. ಪುಸಕ್ತ ವರ್ಷದಲ್ಲಿ ಅವಶ್ಯಕತೆ ಹಾಗೂ ಸದರಿ ಪ್ರದೇಶದ ಕೃಷಿ ಪದ್ಧತಿಯನ್ನಾಧರಿಸಿ ಮಳೆಯಾಶ್ರಿತ ಅಥವಾ ನೀರಾವರಿ ಸಮಗ್ರ ಕೃಷಿ ಪದ್ಮತಿಗಳಾಗಿ ಮಾದರಿಗಳನ್ನು ಅನುಷ್ಠಾನ ಮಾಡಹುದಾಗಿದ್ದು, ಸದರಿ ಮಾದರಿಗಳನ್ನು, ಇತರೆ ರೈತರಿಗೆ ಕಲಿಕಾ ಕ್ಷೇತ್ರವಾಗಿ ಸ್ಥಾಪಿಸಲು ಯೋಜಿಸಲಾಗಿದೆ.

ಫಲಾನುಭವಿ ಆಯ್ಕೆ ಹೇಗೆ ಮಾಡಲಾಗುತ್ತದೆ:

1. ಪ್ರತಿ ಪಂಚಾಯಿತಿಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮಾದರಿಯಂತೆ ಪ್ರತಿ ಹೋಬಳಿಯಲ್ಲಿ 8-10 ಸಮಗ್ರ ಕೃಷಿ ಪದ್ಧತಿ ತಾಕುಗಳನ್ನು ಆಯಾ ಜಿಲ್ಲೆಗಳ ಮಳೆಯಾಶ್ರಿತ ಪ್ರದೇಶ ಅಥವಾ ನೀರಾವರಿ ಪ್ರದೇಶಕ್ಕನುಗುಣವಾಗಿ ಸ್ಥಾಪಿಸುವುದು. ಪ್ರಸಕ್ತ ವರ್ಷದಲ್ಲಿ ಆದ್ಯತೆ ಮೇರೆಗೆ ಇಲ್ಲಿಯವರೆಗೆ ಅಂದರೆ 2021-22 ಮತ್ತು 2022-23 ನೇ ಸಾಲಿನಲ್ಲಿ ಅನುಷ್ಠಾನ ಮಾಡದಿರುವ ಪಂಚಾಯತಿಗಳಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡುವುದು ಹಾಗೂ ತದನಂತರ ಬೇಡಿಕೆ ಇರುವ ಪಂಚಾಯಿತಿಗಳಲ್ಲಿ ಒಂದಕ್ಕಿಂತ ಹೆಚ್ಚು ಮಾದರಿಯನ್ನು ಅನುಷ್ಠಾನ ಮಾಡುಲಾಗುತ್ತದೆ.

2. ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಗಳನ್ನು ಕನಿಷ್ಠ 1 ಎಕರೆಯಿಂದ ಗರಿಷ್ಠ 1 ಹೆಕ್ಟೇ‌ – ಪ್ರದೇಶದಲ್ಲಿ ಏರ್ಪಡಿಸಲಾಗುತ್ತದೆ.

3. ರೈತ ಸಂಪರ್ಕ ಕೇಂದ್ರವಾರು ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ ತಮ್ಮ ವ್ಯಾಪ್ತಿಯ ಅನುಷ್ಠಾನ ಮಾಡುವ ರೈತರ ಪಟ್ಟಿಯನ್ನು ಸಿದ್ಧಪಡಿಸಿ. ಫಲಾನುಭವಿಯು ಆಸಕ್ತ ಪ್ರಗತಿ ಪರ ರೈತನಾಗಿದ್ದು ಸಮಗ್ರ ಕೃಷಿ ಪದ್ಧತಿ ಅಳವಡಿಸಲು ಶೇ 50 ರಷ್ಟು ವಂತಿಕೆ ಭರಿಸಲು ಸಿದ್ಧನಾಗಿರಬೇಕು. ಇತರ ರೈತರು ಅಳವಡಿಸಲು ಸೂಕ್ತವಾಗುವಂತೆ ಮಾದರಿಯಾಗಿ ಸಮಗ್ರ ಕೃಷಿ ಪದ್ಧತಿಯ ತಾಕನ್ನು ರೂಪಿಸುವ ಮನೋಭಾವನೆ ಇರುವ ರೈತರನ್ನು ಆಯ್ಕೆ ಮಾಡಲಾಗುತ್ತದೆ.

4. ನಿಯಮಾನುಸಾರ ಪರಿಶಿಷ್ಟ ಜಾತಿ (17.15%), ಪರಿಶಿಷ್ಟ ಪಂಗಡ (6.95%) ರಂತ ಆಯ್ಕೆ ಮಾಡುವುದು. ಮಹಿಳೆಯರಿಗೆ (33%) ರಷ್ಟು, ಅಲ್ಪ ಸಂಖ್ಯಾತರಿಗೆ (15%) ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: Gruha joythi bill: ಗೃಹ ಜ್ಯೋತಿ ಯೋಜನೆಯ ಶೂನ್ಯ ವಿದ್ಯುತ್ ಬಿಲ್ ಹೇಗೆ ಬರಲಿದೆ ಇಲ್ಲಿದೆ ಸ್ಯಾಂಪಲ್ ಬಿಲ್.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಆಸಕ್ತ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬವುದು.

ಬೇಕಾಗುವ ದಾಖಲಾತಿಗಳು:

1. ಆಧಾರ್ ಕಾರ್ಡ

2. ಬ್ಯಾಂಕ್ ಪಾಸ್ ಬುಕ್

3. ಪೋಟೋ

4. ಪಹಣಿ/ಉತಾರ್/RTC

ಸಹಾಯಧನದ ವಿವರ ಪ್ರತಿ ಹೆಕ್ಟೇರ್ ಗೆ:

Most Popular

Latest Articles

- Advertisment -

Related Articles