Electric bill Details: ಒಂದು ವರ್ಷದಲ್ಲಿ ನಿಮ್ಮ ಮನೆಯ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ಹೇಗೆ ತಿಳಿಯಬವುದು? ಇಲ್ಲಿದೆ ವೆಬ್ಸೈಟ್ ಲಿಂಕ್

ತಮ್ಮ ಮನೆಯ ವಿದ್ಯುತ್ ಬಳಕೆಯ(electric bill) ಕುರಿತು ಗ್ರಾಹಕರು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಮನೆಯಲ್ಲಿ ಕುಳಿತು ಯಾವುದೇ ಕಚೇರಿ ಭೇಟಿ ಮಾಡದೇ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬವುದಾಗಿದೆ

Electric bill Details: ಒಂದು ವರ್ಷದಲ್ಲಿ ನಿಮ್ಮ ಮನೆಯ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ಹೇಗೆ ತಿಳಿಯಬವುದು? ಇಲ್ಲಿದೆ ವೆಬ್ಸೈಟ್ ಲಿಂಕ್
KEB- electric bill information

ತಮ್ಮ ಮನೆಯ ವಿದ್ಯುತ್ ಬಳಕೆಯ(electric bill) ಕುರಿತು ಗ್ರಾಹಕರು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಮನೆಯಲ್ಲಿ ಕುಳಿತು ಯಾವುದೇ ಕಚೇರಿ ಭೇಟಿ ಮಾಡದೇ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬವುದಾಗಿದೆ, ಯಾವೆಲ್ಲ ಮಾಹಿತಿ ಮತ್ತು ಸೌಲಭ್ಯಗಳು ಈ ವೆಬ್ಸೈಟ್ ನಲ್ಲಿ ಲಭ್ಯ? ವೆಬ್ಸೈಟ್ ಲಿಂಕ್ ಯಾವುದು? ಎಂದು ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ರಾಜ್ಯ ವಿವಿಧ ಎಸ್ಕಾಂಗಳ ಜಾಲತಾಣ ಭೇಟಿ ಮಾಡಿ ನಿಮ್ಮ ಮನೆಯಲ್ಲಿ ಸರಾಸರಿ ಒಂದು ವರ್ಷದಲ್ಲಿ ಎಷ್ಟು ಯುನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ ಎಂದು ತಿಳಿಯಬವುದು, ಮತ್ತು ಕಳೆದ ಹಿಂದಿನ 12 ತಿಂಗಳ ವಿದ್ಯುತ್ ಬಿಲ್ ಮೊತ್ತ ಇತರೆ ವಿವರದ ಸಂಪೂರ್ಣ ಮಾಹಿತಿ ಸಿಗುತ್ತದೆ, ಇದರ ಜೊತೆಗೆ ಈ ವೆಬ್ಸೈಟ್ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ನ ಹೆಸರು ಬದಲಾವಣೆಗೆ ಅರ್ಜಿಯನ್ನು ಸಹ ಹಾಕಬವುದಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದಲ್ಲಿ ನಿಮ್ಮ ಅಪ್ತರಿಗೂ ತಪ್ಪದೇ ಶೇರ್ ಮಾಡಿ.

ಸರಾಸರಿ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ತಿಳಿಯುವ ವಿಧಾನ: 

Step-1:https://onlineservices.bescom.org/ ಲಿಂಕ್ ಮೇಲೆ ಕ್ಲಿಕ್ ಮಾಡಿ ಬೆಸ್ಕಾಂನ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು.

Step-2: ನೀವು ಮೊದಲ ಭಾರಿಗೆ ಈ ವೆಬ್ಸೈಟ್ ಪ್ರವೇಶ ಮಾಡಿದ್ದಲ್ಲಿ ನಿಮ್ಮ (ಗ್ರಾಹಕರ)ವಿವರವನ್ನು "Register" ಬಟಲ್ ಮೇಲೆ ಕ್ಲಿಕ್ ಮಾಡಿ Connection ID, Date pf birth, email id, , mobile number ,password ರಚನೆ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಇ ಪುಟದ ಎಲ್ಲಾ ಕಾಲಂ ವಿವರ ಭರ್ತಿ ಮಾಡಿದ ನಂತರ ಕೊನೆಯಲ್ಲಿ ಕಾಣುವ "save" ಬಟನ್ ಮೇಲೆ ಕ್ಲಿಕ್ ಮಾಡಿದಾಗ "Registered Successfully" ಎಂದು  ಗೋಚರಿಸುತ್ತದೆ.

ಗಮನಿಸಿ: ನೀವು ನಮೂದಿಸಿದ user name ಮತ್ತು password ಒಂದು ಕಡೆ ಬರೆದಿಟ್ಟುಕೊಳ್ಳಿ.

Step-3: ನೀವು ರಚನೆ ಮಾಡಿಕೊಂಡ user name ಮತ್ತು password ಅನ್ನು ಈ ಜಾಲತಾಣದ ಮುಖಪುಟದಲ್ಲಿ ಕಾಣುವ User id mattu password ಕಾಲಂ ನಲ್ಲಿ ಹಾಕಿ(ಮೇಲೆ Cuctomer ಎಂದು ಆಯ್ಕೆ ಮಾಡಿಕೊಳ್ಳಿ) "LOGIN" ಬಟನ್ ಮೇಲೆ ಕ್ಲಿಕ್ ಮಾಡಿ.

Step-4: LOGIN ಅದ ನಂತರ ನಿಮ್ಮ ವಿದ್ಯುತ್ ಬಿಲ್ ವಿವರದ ಪುಟ ತೆರೆದುಕೊಳ್ಳುತ್ತದೆ ಇಲ್ಲಿ "MY acconut" ಆಯ್ಕೆಯ ಮೇಲೆ ಕ್ಲಿಕ್ ಮಾಡಿ "Accont summary" ಬಟಲ್ ಮೇಲೆ ಕ್ಲಿಕ್ ಮಾಡಿದರೆ ಕಳೆದ ಹಿಂದಿನ 12 ತಿಂಗಳ ಬಿಲ್ ವಿವರ ಮತ್ತು ಸರಾಸರಿ ಇಲ್ಲಿಯವರೆಗೆ ಬಳಕೆ ಮಾಡಿದ ವಿದ್ಯುತ್ ವಿವರ ಗೋಚರಿಸುತ್ತದೆ.

ಈ ಪುಟದಲ್ಲಿ 8 ಕಾಲಂ ನ "Avg Cons" ಹೆಸರಿನ ಕೆಳಗೆ ತೋರಿಸ ಸಂಖ್ಯೆಯೆ ಸರಾಸರಿ ವಿದ್ಯುತ್ ಬಳಕೆ ಯುನಿಟ್ ಅಗಿರುತ್ತದೆ.

ಇದನ್ನೂ ಓದಿ: Gruha joythi bill: ಗೃಹ ಜ್ಯೋತಿ ಯೋಜನೆಯ ಶೂನ್ಯ ವಿದ್ಯುತ್ ಬಿಲ್ ಹೇಗೆ ಬರಲಿದೆ ಇಲ್ಲಿದೆ ಸ್ಯಾಂಪಲ್ ಬಿಲ್.

ಈ ವೆಬ್ಸೈಟ್ ನ ಇತರೆ ಸೌಲಭ್ಯಗಳ ವಿವರ ಹೀಗಿದೆ:

1. ಈ ವೆಬ್ಸೈಟ್ ಮೂಲಕ ನಿಮ್ಮ ವಿದ್ಯುತ್ ಬಿಲ್ ನ ಹೆಸರನ್ನು ಬದಲಾಯಿಸಲು ಅರ್ಜಿ ಸಲ್ಲಿಸಬವುದು.

2. tariff change, Load Reduction, Load Enhancement. ಈ ಸೇವೆಗಳು ಈ ವೆಬ್ಸೈಟ್ ನಲ್ಲಿ ಲಭ್ಯ.

ಈ ಮೇಲೆ ವಿವರಿಸಿದ ವೆಬ್ಸೈಟ್ ನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(Bescom) ವ್ಯಾಪ್ತಿ ಗ್ರಾಹಕರು ಮಾತ್ರ ನಿಮ್ಮ ವಿದ್ಯುತ್ ಬಿಲ್ ಬಳಕೆ ಕುರಿತು ವಿವರವನ್ನು ಪಡೆಯಬವುದು ಉಳಿದ ವಿಭಾಗದ ಗ್ರಾಹಕರು ತಮ್ಮ ತಮ್ಮ ವ್ಯಾಪ್ತಿಯ ಎಸ್ಕಾಂ ನ ಅಧಿಕೃತ ವೆಬ್ಸೈಟ್ ಗಳ ಲಿಂಕ್ ಅನ್ನು ಈ ಕೆಳಗೆ ಹಾಕಲಾಗಿದ್ದು ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ ನಿಮ್ಮ ಮನೆಯ ವಿದ್ಯುತ್ ಬಳಕೆ ವಿವರ ಇತ್ಯಾದಿ ಮಾಹಿತಿಯನ್ನು ನಿಮ್ಮ ಮನೆಯಲ್ಲೇ ಕುಳಿತು ತಿಳಿದಿಕೊಳ್ಳಬವುದಾಗಿದೆ.

Hescom-ಹೆಸ್ಕಾಂ: https://www.hescom.co.in/SCP/Myhome.aspx 

mescom- ಮೆಸ್ಕಾಂ: https://mescom.karnataka.gov.in/info-3/Online+Payment+System/en

Gescom- ಜೆಸ್ಕಾಂ: https://gescom.karnataka.gov.in/info-3/Online+Payments/kn

ಇದನ್ನೂ ಓದಿ: Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.