Best Farmer Award-ಕೃಷಿ ಇಲಾಖೆಯಿಂದ ಕೃಷಿ ಪ್ರಶಸ್ತಿ ವಿತರಣೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

August 15, 2025 | Siddesh
Best Farmer Award-ಕೃಷಿ ಇಲಾಖೆಯಿಂದ ಕೃಷಿ ಪ್ರಶಸ್ತಿ ವಿತರಣೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
Share Now:

ರಾಜ್ಯ ಕೃಷಿ ಇಲಾಖೆಯಿಂದ 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿಕ ಪ್ರಶಸ್ತಿ(Krishika Prashasti Application) ಯೋಜನೆಯಡಿ ಅರ್ಹ ರೈತ ಮತ್ತು ರೈತ ಮಹಿಳೆಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಕುರಿತು ಸಂಪೂರ್ಣ ವಿವರವನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಪ್ರಶಸ್ತಿಯಡಿ ಬೆಳೆ ಸ್ಪರ್ಧೆಗೆ ಭಾಗವಹಿಸಲು ಇಚ್ಚಿಸುವ ರೈತ ಮತ್ತು ರೈತ ಮಹಿಳೆಯರಿಂದ(Farmer Award) ಪ್ರತ್ಯೇಕವಾಗಿ ಅನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದ್ದು ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಅನ್ವಯಿಸುವಂತೆ ನಿಗದಿತ ನಮೂನೆಯಲ್ಲಿ ಒಂದೇ ಅರ್ಜಿಯನ್ನು ಸಲ್ಲಿಸಬಹುದು ಎಂದು ಕೃಷಿ ಇಲಾಖೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Business Loan-ರಾಜ್ಯದ SC ST ಸಮುದಾಯದವರಿಗೆ ಗುಡ್ ನ್ಯೂಸ್! ಸ್ವಂತ ಉದ್ದಿಮೆಗೆ ₹2.0 ಲಕ್ಷ ಸಬ್ಸಿಡಿ!

ಆಸಕ್ತ ರೈತ ಮತ್ತು ರೈತ ಮಹಿಳೆಯರು(Raita prashasti) ಪ್ರತ್ಯೇಕವಾಗಿ ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ ನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಎಫ್‍ಐಡಿ (ಫ್ರೂಟ್ಸ್ ಐಡಿಂಟಿಫಿಕೇಶನ್) ಸಂಖ್ಯೆಯನ್ನು ಬಳಸಿಕೊಂಡು ಸಿಟಿಜನ್ ಲಾಗಿನ್‍ಗೆ ಅಥವಾ ಆರ್‍ಎಸ್‍ಕೆ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ/ಸಾರ್ವಜನಿಕ ಸಂಪರ್ಕ ಮೂಲಕ ಅರ್ಜಿಗಳನ್ನು 2025ನೇ ಆಗಸ್ಟ್ 30ರೊಳಗೆ ಸಲ್ಲಿಸಬೇಕು. ಸ್ಪರ್ಧಿಸಬಹುದಾದ ಬೆಳೆಗಳ ವಿವರಗಳು ಅರ್ಜಿ ನಮೂನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.

Who Can Apply For Farmer Award-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಕೃಷಿ ಇಲಾಖೆಯಿಂದ ಪ್ರಸ್ತುತ ಅರ್ಜಿಯನ್ನು ಆಹ್ವಾನಿಸಿರುವ ಕೃಷಿ ಪ್ರಶಸ್ತಿಗೆ ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತೆಯನ್ನು ಹೊಂದಿರು ರೈತರು ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಅರ್ಜಿದಾರ ರೈತ/ರೈತ ಮಹಿಳೆ ಹೆಸರಿಗೆ ಕೃಷಿ ಜಮೀನನ್ನು ಹೊಂದಿರಬೇಕು.

ಕಳೆದ 5 ವರ್ಷಗಳಲ್ಲಿ ಈ ಯೋಜನೆಯಡಿ ಪ್ರಶಸ್ತಿಯನ್ನು ಪಡೆದಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಬೆಳೆ ಸ್ಪರ್ಧೆಗೆ ಸ್ಪರ್ಧಿಸಲು ಕನಿಷ್ಠ 1 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿರಬೇಕು. ಹಾಗೂ ಕಂದಾಯ ದಾಖಲೆಯ ಪ್ರಕಾರ ಖಾತೆ ಹೊಂದಿರುವ ಸ್ವತಃ ಬೇಸಾಯದಲ್ಲಿ ತೊಡಗಿರುವ ಕ್ರಿಯಾಶೀಲ ರೈತರಾಗಿರಬೇಕು.

ಕುಟುಂಬದ ಒಬ್ಬರು ಮಾತ್ರ ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಬೆಳ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

ಇದನ್ನೂ ಓದಿ: Mobile Canteen Subsidy-ಮೊಬೈಲ್ ಕ್ಯಾಂಟಿನ್ ಸ್ಥಾಪನೆಗೆ ₹4.0 ಲಕ್ಷ ಸಹಾಯಧನ ಪಡೆಯಲು ಅರ್ಜಿ!

Krishi Prashasti

ಇದನ್ನೂ ಓದಿ: Dairy Farm Subsidy-ಹೈನುಗಾರಿಕೆ ಆರಂಭಿಸಲು ₹1.25 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Farmer Award Amount Details-ಹಂತವಾರು ಉತ್ತಮ ಕೃಷಿಕ ಪ್ರಶಸ್ತಿ ಬಹುಮಾನದ ಮೊತ್ತ ಎಷ್ಟು?

ರಾಜ್ಯ ಕೃಷಿ ಇಲಾಖೆಯಿಂದ ಕೃಷಿಕ ಪ್ರಶಸ್ತಿಗೆ ಆಯ್ಕೆಯಾಗುವ ಅರ್ಹ ಫಲಾನುಭವಿ ರೈತರಿಗೆ ಒಟ್ಟು ಮೂರು ಮಟ್ಟ ಅಂದರ ತಾಲೂಕು,ಜಿಲ್ಲ,ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗುತ್ತದೆ ಇದರ ಬಹುಮಾನ ಮೊತ್ತದ ವಿವರ ಹೀಗಿದೆ:

1) ತಾಲೂಕು ಮಟ್ಟ: ಪ್ರಥಮ-₹15,000 ದ್ವೀತಿಯ-₹10,000 ತೃತೀಯ-₹5,000
2) ಜಿಲ್ಲಾ ಮಟ್ಟ ಪ್ರಥಮ-₹30,000 ದ್ವೀತಿಯ-₹25,000 ತೃತೀಯ- ₹20,000
3) ರಾಜ್ಯ ಮಟ್ಟ: ಪ್ರಥಮ- ₹50,000 ದ್ವೀತಿಯ- ₹40,000 ತೃತೀಯ- ₹35,000

Selection Procces-ಆಯ್ಕೆ ಮಾಡುವ ವಿಧಾನ:

ರೈತರು ಅಗತ್ಯ ದಾಖಲೆಗಳ ಸಮೇತ ಅರ್ಜಿಯನ್ನು ಸಲ್ಲಿಸಿದ ಬಳಿಕ ಕೃಷಿ ಇಲಾಖೆ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ ನಂತರ ಬೆಳೆ ಕಟಾವಿಗೆ ಬಂದಾಗ ಮೀಟರ್ ಅಳತೆಯಲ್ಲಿ ಬೆಳೆಯನ್ನು ಕಟಾವು ಮಾಡಿ ಇಳುವರಿಯನ್ನು ನಮೂದಿಸಲಾಗುತ್ತದೆ ಇಲ್ಲಿ ಅತೀ ಹೆಚ್ಚು ಮೊದಲ ಮೂರು ಸ್ಥಾನದಲ್ಲಿ ಇಳುವರಿಯನ್ನು ಪಡೆದಿರುವ ರೈತರಿಗೆ ಪ್ರಥಮ,ದ್ವೀತಿಯ,ತೃತೀಯ ಬಹುಮಾನ ಮತ್ತು ಪ್ರಶಸ್ತಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Internship Program-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಇಂಟರ್ನ್‌ಶಿಪ್ ಯೋಜನೆ!ತಿಂಗಳಿಗೆ ರೂ 20,000/- ಗೌರವಧನ!

How To Apply-ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ರೈತರು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಕೃಷಿ ಇಲಾಕೆಯ ಕೆ-ಕಿಸಾನ್ ಪೋರ್ಟಲ್ ಅನ್ನು ನೇರವಾಗಿ ಭೇಟಿ ಮಾಡಿ ಸ್ವಂತ ತಾವೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

Farmer Award Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ:?

ಅರ್ಹ ರೈತರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗಿನ ಹಂತಗಳನ್ನು ಅನುಸರಿಸಿ ಅಧಿಕೃತ ಕೃಷಿ ಇಲಾಖೆಯ ಕೆ-ಕಿಸಾನ್ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Step-1: ಪ್ರಥಮದಲ್ಲಿ "Farmer Award Online Application" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೃಷಿ ಇಲಾಖೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: BPL Card-ಶೀಘ್ರದಲ್ಲಿ ರಾಜ್ಯ ಸರಕಾರದಿಂದ 12.68 ಲಕ್ಷ ಅಕ್ರಮ BPL ಕಾರ್ಡ ರದ್ದು: ಸಚಿವ ಕೆ ಹೆಚ್ ಮುನಿಯಪ್ಪ!

Farmer Award Online Application

ಇದನ್ನೂ ಓದಿ: Bhu Odetana Yojana-ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಗೆ ಶೇ 50% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ!

Step-2: ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಈ ಪೇಜ್ ನಲ್ಲಿ ಮುಖಪುಟದಲ್ಲಿ ಕಾಣುವ "ಕೃಷಿ ಪಶಸ್ತಿ ಅರ್ಜಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ರೈತರ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ "Get Details" ಬಟನ್ ಮೇಲೆ ಕ್ಲಿಕ್ ಮಾಡಿ

Step-3: ಇಲ್ಲಿ ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ವಿವರ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Documents For Farmer Award-ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು ಯಾವುವು?

ರೈತರು ಕೃಷಿ ಪ್ರಶಸ್ತಿಗೆ ಅರ್ಜಿಯನ್ನು ಹಾಕಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಒದಗಿಸುವುದು ಅವಶ್ಯಕವಾಗಿದೆ.

  • ಅರ್ಜಿದಾರ ರೈತರ ಆಧಾರ್ ಕಾರ್ಡ/Aadhar Card
  • ರೈತರ ಜಮೀನಿನ ಪಹಣಿ/RTC
  • ರೈತರ ಪೋಟೋ/Photo
  • ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Pass Book
  • ಬೆಳೆ ದೃಡೀಕರಣ ಪ್ರಮಾಣ ಪತ್ರ/Bele Drudikarana
  • ಮೊಬೈಲ್ ನಂಬರ್/Mobile Number

For More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು:

Agriculture Department Website-ಕೃಷಿ ಇಲಾಖೆಯ ಅಧಿಕೃತ ಜಾಲತಾಣ-Click Here
K-Kisan Website-ಕೆ-ಕಿಸಾನ್ ಪೋರ್ಟಲ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: