Bembala Bele Yojane-ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಕೂಡಲೇ ಈ ಕೆಲಸ ಮಾಡಿ!

September 7, 2025 | Siddesh
Bembala Bele Yojane-ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಕೂಡಲೇ ಈ ಕೆಲಸ ಮಾಡಿ!
Share Now:

ರೈತರು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ರಾಗಿಯನ್ನು(Ragi Bembala Bele)ಮಾರಾಟ ಮಾಡಲು ತಪ್ಪದೇ ಕಡ್ಡಾಯವಾಗಿ ಮಾಡಬೇಕಾದ ಬಹುಮುಖ್ಯ ಅಂಶಗಳ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕೇಂದ್ರ ಸರಕಾರವು ರಾಗಿ ಬೆಳೆಗಾರಿಂದ ಬೆಂಬಲ ಬೆಲೆಯಲ್ಲಿ ರಾಗಿಯನ್ನು ಖರೀದಿ(Ragi Kharidi Kendra) ಮಾಡಲು ಅರ್ಹ ರೈತರಿಂದ ಮೊದಲಿಗೆ ನೋಂದಣಿಯನ್ನು ಮಾಡಿಕೊಂಡು ಬಳಿಕ ರೈತರಿಂದ ರಾಗಿಯನ್ನು ಖರೀದಿ ಮಾಡಲಾಗುತ್ತದೆ ಈ ನಿಟ್ಟಿನಲ್ಲಿ ರೈತರು ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ತಪ್ಪದೇ ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ತಿಳಿದು ನಿಮ್ಮ ವಿವರವನ್ನು ಸರಿಪಡಿಸಿಕೊಳ್ಳಿ.

ಇದನ್ನೂ ಓದಿ: District Industries Centre-ಜಿಲ್ಲಾ ಕೈಗಾರಿಕಾ ಕೇಂದ್ರಗಳಿಂದ ಉಚಿತವಾಗಿ ಸಲಕರಣೆ ವಿತರಣೆ!

Finger Millet MSP Price-2025: ಪ್ರತಿ ಕ್ವಿಂಟಾಲ್ ರಾಗಿಗೆ 4,886/- ರೂ ಬೆಂಬಲ ಬೆಲೆ:

2025-26 ನೇ ಸಾಲಿಗೆ ಕೇಂದ್ರ ಸರಕಾರದಿಂದ ರೈತರಿಂದ ನೇರವಾಗಿ ಖರೀದಿ ಮಾಡುವ ಪ್ರತಿ ಪ್ರತಿ ಕ್ವಿಂಟಾಲ್ ರಾಗಿಗೆ 4,886/- ರೂ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ.

Last Year Finger Millet MSP-ಕಳೆದ ವರ್ಷಕ್ಕಿಂತ 596 ರೂ ಹೆಚ್ಚಳ:

ಕೇಂದ್ರ ಸರಕಾರವು ಕಳೆದ ವರ್ಷ ರೈತರಿಂದ ನೇರವಾಗಿ ಖರೀದಿ ಮಾಡುವ ರಾಗಿಗೆ ಪ್ರತಿ ಕ್ವಿಂಟಾಲ್ ಗೆ ಹಿಂದಿನ ವರ್ಷ 4,290 ರೂ ಅನ್ನು ನಿಗದಿಪಡಿಸಲಾಗಿತ್ತು ಪ್ರಸ್ತುತ 2025 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆಯನ್ನು ಬೆಳೆಯುವ ರೈತರಿಂದ ನೇರವಾಗಿ ಖರೀದಿ ಮಾಡುವ ಪ್ರತಿ ಕ್ವಿಂಟಾಲ್ ರಾಗಿಗೆ 596 ರೂ ಹೆಚ್ಚಳ ಮಾಡಿ 4,886/- ರೂ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: Swachh Bharat Mission-ಶೌಚಾಲಯ ನಿರ್ಮಾಣಕ್ಕೆ ₹12,000/- ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!

Ragi Bembala Bele-ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡುವುದು ಹೇಗೆ?

ರಾಗಿಯನ್ನು ಬೆಳೆದಿರುವ ರೈತರು ತಮ್ಮ ಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಮೊದಲಿಗೆ ಕೃಷಿ ಇಲಾಖೆಯಿಂದ ಖಾಸಗಿ ನಿವಾಸಿಗಳ(PR) ಮೂಲಕ ನಡೆಸುವ ಬೆಳೆ ಸಮೀಕ್ಷೆಯ ವರದಿಯಲ್ಲಿ ಈ ವರ್ಷದ ಮುಂಗಾರು ಹಂಗಾಮಿನ ಸಮೀಕ್ಷೆಯಲ್ಲಿ "ರಾಗಿ" ಎಂದು ನಮೂದಿಸಿರಬೇಕು ಈ ರೀತಿ ಇದ್ದಲ್ಲಿ ಮಾತ್ರ ರೈತರು ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ.

Fruits ID-ಪ್ರೂಟ್ಸ್ ಐಡಿಯನ್ನು ಹೊಂದಿರಬೇಕು:

ರೈತರು ಬೆಳೆ ಸಮೀಕ್ಷೆಯಲ್ಲಿ ಬೆಳೆ ಮಾಹಿತಿ "ರಾಗಿ" ಎಂದು ನಮೂದಿಸಿರುವುದರ ಜೊತೆಗೆ ಕೃಷಿ ಇಲಾಖೆಯಡಿ ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುವ ರೈತ ಸಂಪರ್ಕ ಕೇಂದ್ರದಲ್ಲಿ ಜಮೀನಿಗೆ ಸಂಬಂಧಪಟ್ಟ ಪಹಣಿ ಮತ್ತು ರೈತರ ಬ್ಯಾಂಕ್ ಪಾಸ್ ಬುಕ್,ಆಧಾರ್ ಕಾರ್ಡ ಪ್ರತಿಯನ್ನು ನೀಡಿ ಪ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿಯನ್ನು ಮಾಡಿಕೊಂಡು ಪ್ರೂಟ್ಸ್ ಐಡಿಯನ್ನು ಹೊಂದಿರಬೇಕಾಗುತ್ತದೆ.

ಇದನ್ನೂ ಓದಿ: Muskaan Scholarship-ಮುಸ್ಕಾನ್ ವಿದ್ಯಾರ್ಥಿವೇತನ ಯೋಜನೆಯಡಿ ₹12,000 ಸ್ಕಾಲರ್ಶಿಪ್!

Raagi Bembala Bele-ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಕೂಡಲೇ ಈ ಕೆಲಸ ಮಾಡಿ:

2025 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ರಾಗಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಖರೀದಿಯನ್ನು ಮಾಡಲು ಮುಂಚಿತವಾಗಿ ಆನ್ಲೈನ್ ನಲ್ಲಿ ರೈತರ ನೋಂದಣಿಯನ್ನು ಮಾಡಿಕೊಳ್ಳಲು ಖರೀದಿ ಕೇಂದ್ರಗಳನ್ನು ಡಿಸೆಂಬರ್ ಬಳಿಕ ಪ್ರತಿ ವರ್ಷದಂತೆ ಈ ವರ್ಷವು ತರೆಯಲಾಗುತ್ತದೆ.

ಆದ್ದರಿಂದ ರೈತರು ಇದಕ್ಕೂ ಮೊದಲು ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಕಡ್ಡಾಯವಾಗಿ ಕೂಡಲೇ ಬೆಳೆ ಸಮೀಕ್ಷೆಯಲ್ಲಿ ರಾಗಿ ಎಂದು ನಿಮ್ಮ ಜಮೀನಿನ ಬೆಳೆ ಮಾಹಿತಿ ದಾಖಲಾಗಿದಿಯಾ?ಎಂದು ಖಚಿತಪಡಿಸಿಕೊಳ್ಳಿ ತಪ್ಪಾಗಿ ಬೆಳೆ ಮಾಹಿತಿ ರಾಗಿ ಬದಲು ಬೇರೆ ಬೆಳೆ ದಾಖಲಾಗಿದ್ದರೆ ಅಥವಾ ನಿಮ್ಮ ಜಮೀನಿನ ಬೆಳೆ ಮಾಹಿತಿ ದಾಖಲಾಗದೇ ಇದ್ದರೆ ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಈ ಮಾಹಿತಿಯನ್ನು ಸರಿಪಡಿಸಿಕೊಳ್ಳಿ.

ಇದನ್ನೂ ಓದಿ: New GST Rates-ಕೇಂದ್ರ ಸರಕಾರದಿಂದ ರೈತರಿಗೆ ಸಿಹಿ ಸುದ್ದಿ: ಟ್ರಾಕ್ಟರ್ ಖರೀದಿಯ ಮೇಲೆ GST ದರದಲ್ಲಿ ಭಾರೀ ಇಳಿಕೆ!

Crop Survey Report-ನಿಮ್ಮ ಜಮೀನಿನ "ಬೆಳೆ ಸಮೀಕ್ಷೆ" ವರದಿಯನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಿರಿ:

ರೈತರು ಕೃಷಿ ಇಲಾಖೆಯಿಂದ ಪ್ರತಿ ವರ್ಷ ಮೂರು ಹಂಗಾಮುಗಳಲ್ಲಿ ನಡೆಸಿರುವ ಮೊಬೈಲ್ ಆಪ್ಲಿಕೇಶನ್ ಆಧಾರಿತ ಬೆಳೆ ಸಮೀಕ್ಷೆ ವರದಿಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ನೋಡಲು ಅವಕಾಶವಿದ್ದು ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ರೈತರು ಎರಡು ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ತಿಳಿದುಕೊಳ್ಳಬಹುದು ಇದರ ವಿವರ ಹೀಗಿದೆ:

ವಿಧಾನ-1: ಈ "Crop Name Details Check" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ "Crop Survey" ವೆಬ್ಸೈಟ್ ಅನ್ನು ಪ್ರವೇಶ ಮಾಡಿ ನಂತರ ಈ ಪುಟದಲ್ಲಿ ವರ್ಷ/Year,Season/ಹಂಗಾಮು ಆಯ್ಕೆ ಮಾಡಿಕೊಂಡು "Go" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದೆ ಹೋಗಬೇಕು.

ತದನಂತರ ಈ ಪೇಜ್ ನಲ್ಲಿ ಮೇಲೆ ಕಾಣುವ "View PR Uploaded Crop Info" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆತಾಲ್ಲೂಕು,ಹೋಬಳಿ,ಹಳ್ಳಿ ಮತ್ತು ಸರ್ವೆ ನಂಬರ್ ಅನ್ನು ಹಾಕಿ "Get Crop Survey Details" ಬಟನ್ ಮೇಲೆ ಕ್ಲಿಕ್ ಮಾಡಿ ಸರ್ವೆ ನಂಬರ್ ವಾರು ಬೆಳೆ ಮಾಹಿತಿ ಯಾವುದು ಇದೆ ಎನ್ನುವ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬಹುದು.

ಇದನ್ನೂ ಓದಿ: Free CCTV Training-ಉಚಿತ ಸಿಸಿಟಿವಿ ಅಳವಡಿಕೆ ಮತ್ತು ಸರ್ವೀಸಿಂಗ್ ತರಬೇತಿಗಾಗಿ ಅರ್ಜಿ ಆಹ್ವಾನ!

ವಿಧಾನ-2: ಬೆಳೆ ದರ್ಶಕ ಅಪ್ಲಿಕೇಶನ್ ಮೂಲಕ/Bele Dharshak App:

ರೈತರು ಈ "Download Bele Dharshak" ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ಬೆಳೆ ದರ್ಶಕ/Bele Darshak ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಅಪ್ಲಿಕೇಶನ್ ಅನ್ನು ಒಪನ್ ಮಾಡಿ ನಿಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ,ಹಳ್ಳಿ ಸರ್ವೆ ನಂಬರ್ ವಿವರವನ್ನು ಹಾಕಿ ಬೆಳೆ ಮಾಹಿತಿ ವಿವರವನ್ನು ನೋಡಬಹುದು ಇದಲ್ಲೇ ಇಲ್ಲಿ ನಮೂದಿಸಿರುವ ಬೆಳೆ ಮಾಹಿತಿ ತಪ್ಪಾಗಿದ್ದರೆ ಈ ಅಪ್ಲಿಕೇಶನ್ ಮೂಲಕವೇ ಮರು ಸರ್ವೆ ಮಾಡಲು ಸಂಬಂಧಪಟ್ಟ ಇಲಾಖೆಗೆ ಆಕ್ಷೇಪಣೆ ಅರ್ಜಿಯನ್ನು ಸಲ್ಲಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: