Pouthi Khata Abhiyana-ಮರಣ ಹೊಂದಿದವರ ಹೆಸರಿನಿಂದ ಜಮೀನಿನ ಮಾಲೀಕತ್ವ ವರ್ಗಾವಣೆ ಈಗ ಭಾರೀ ಸುಲಭ!

September 9, 2025 | Siddesh
Pouthi Khata Abhiyana-ಮರಣ ಹೊಂದಿದವರ ಹೆಸರಿನಿಂದ ಜಮೀನಿನ ಮಾಲೀಕತ್ವ ವರ್ಗಾವಣೆ ಈಗ ಭಾರೀ ಸುಲಭ!
Share Now:

ರಾಜ್ಯಾದ್ಯಂತ ಕಂದಾಯ ಇಲಾಖೆಯಿಂದ(Karnataka Revenue Department) ಎಲ್ಲಾ ಜಿಲ್ಲೆಗಳಲ್ಲಿ ಜಮೀನಿನ ಪಹಣಿ(Pahani) ಅಥವಾ ಊತಾರ್ ನಲ್ಲಿ ಮರಣ ಹೊಂದಿರುವ ಮಾಲೀಕರ ಹೆಸರು ಇದ್ದರೆ ಇಂತಹ ಹೆಸರನ್ನು ವಜಾ ಮಾಡಿ ಪ್ರಸ್ತುತ ವಾರಸುದಾರರ ಹೆಸರಿಗೆ ಮಾಲೀಕತ್ವವನ್ನು ವರ್ಗಾವಣೆ ಮಾಡಲು ಪೌತಿ ಖಾತೆ(Pouthi Khathe) ಅಭಿಯಾನವನ್ನು ಮಾಡಲಾಗುತ್ತಿದ್ದು ಇಂದಿನ ಅಂಕಣದಲ್ಲಿ ಈ ಕುರಿತು ಸಂಪೂರ್ಣ ವಿವರವನ್ನು ಹಂಚಿಕೊಳ್ಳಲಾಗಿದೆ.

ಇಂದಿನ ಲೇಖನದಲ್ಲಿ ರೈತರು ಮೃತರ ಹೆಸರಿನಲ್ಲಿರುವ ಜಮೀನಿನ ಮಾಲೀಕತ್ವವನ್ನು(Land Ownership) ವರ್ಗಾವಣೆ ಮಾಡಲು ಅನುಸರಿಸಬೇಕಾದ ಅಗತ್ಯ ಕ್ರಮಗಳ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ಬಳಿಯಿರುವ ವಾಟ್ಸಾಪ್(Whatsapp)ಗುಂಪುಗಳಲ್ಲಿ ಶೇರ್ ಮಾಡಿ ಎಲ್ಲಾ ಭಾಗದ ರೈತರಿಗೂ ಈ ಅಭಿಯಾನದ ಕುರಿತು ಮಾಹಿತಿಯನ್ನು ತಿಳಿಸಲು ತಮ್ಮೊಂದಿಗೆ ಕೈಜೋಡಿಸಿ.

ಇದನ್ನೂ ಓದಿ: Reliance Scholarships-2025: ಪದವಿ ವಿದ್ಯಾರ್ಥಿಗಳಿಗೆ ರಿಲಯನ್ಸ್ ಸಂಸ್ಥೆಯಿಂದ ₹ 2.0 ಲಕ್ಷ ಸ್ಕಾಲರ್‌ಶಿಪ್‌!

ಈ ಲೇಖನದಲ್ಲಿ ರಾಜ್ಯಾದ್ಯಂತ ನಡೆಯಿತ್ತಿರುವ ಪೌತಿ ಖಾತೆ ಅಭಿಯಾನದ ಕುರಿತು ಮಾಹಿತಿ ಹಾಗೂ ಮೃತರ ಹೆಸರನ್ನು ಪಹಣಿಯಿಂದ ವಜಾ ಮಾಡಲು ಅವಶ್ಯಕ ದಾಖಲೆಗಳು, ಹೇಗಿರಲಿದೆ ಪೌತಿ ಖಾತೆ ಅಭಿಯಾನ(Pouthi Khathe Abhiyana)? ಮತ್ತು ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಳ್ಳುವುದರಿಂದ ಯಾವೆಲ್ಲ ಪ್ರಯೋಜನಗಳಿವೆ,ಮೊಬೈಲ್ ನಲ್ಲಿ ಉಚಿತವಾಗಿ ನಿಮ್ಮ ಜಮೀನಿನ ಮಾಲೀಕರ ವಿವರವನ್ನು ಹೇಗೆ ಪಡೆಯಬಹುದು? ಈ ವಿಷಯಗಳ ಬಗ್ಗೆ ವಿವರಿಸಲಾಗಿದೆ.

Karnataka Pouthi Khatha Campaign-ರಾಜ್ಯಾದ್ಯಂತ ಪೌತಿ ಖಾತೆ ಅಭಿಯಾನ:

ಕಂದಾಯ ಇಲಾಖೆ ಅಡಿಯಲ್ಲಿ ಹಳ್ಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಆಡಳಿತಾಧಿಕಾರಿ ಮತ್ತು ಗ್ರಾಮ ಸಹಾಯಕರ ಸಹಯೋಗದಲ್ಲಿ ಜಮೀನಿನ ಪಹಣಿಯಲ್ಲಿರುವ ಮೃತ ಮಾಲೀಕರ ಹೆಸರನ್ನು ತೆಗೆದು ಪ್ರಸ್ತುತ ಉಳುಮೆ ಮಾಡುವ ಅಥವಾ ಜಮೀನನ್ನು ಸಾಗುವಳಿ ಮಾಡುತ್ತಿರುವ ವಾರಸುದಾರ ಮಾಲೀಕರ ಹೆಸರಿಗೆ ಜಮೀನಿನ ಮಾಲೀಕತ್ವವನ್ನು ಬದಲಾವಣೆ ಮಾಡಲು ಪೌತಿ ಖಾತೆ ಅಭಿಯಾನವನ್ನು ಅನುಷ್ಠಾನ ಮಾಡಲಾಗುತ್ತಿದೆ.

ಇದನ್ನೂ ಓದಿ: Bembala Bele Yojane-ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಕೂಡಲೇ ಈ ಕೆಲಸ ಮಾಡಿ!

Pouthi Khatha Abhiyana-ಹೇಗಿರಲಿದೆ ಪೌತಿ ಖಾತೆ ಅಭಿಯಾನ?

ಕಂದಾಯ ಇಲಾಖೆ ವತಿಯಿಂದ ಹಳ್ಳಿ ಮಟ್ಟದಲ್ಲಿ ನೇಮಕವಾಗಿರುವ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕರ ನೇತೃತ್ವದಲ್ಲಿ ಒಂದು ಹಳ್ಳಿಯಲ್ಲಿರುವ ಒಟ್ಟು ಜಮೀನಿನ ಪಹಣಿಯಲ್ಲಿ ಮೃತರ ಹೆಸರು ಇರುವ ಜಮೀನಿನ ಪಹಣಿಗಳನ್ನು ಗುರುತಿಸಿ ಇಂತಹ ಜಮೀನಿನ ಪ್ರಸ್ತುತ ವಾರಸುದಾರರಿಗೆ ಪೌತಿ ಖಾತೆ ಅಭಿಯಾನದ ಕುರಿತು ಮಾಹಿತಿಯನ್ನು ನೀಡಿ ಅಗತ್ಯ ದಾಖಲೆಗಳನ್ನು ಪಡೆದು ಮೃತರ ಹೆಸರನ್ನು ಪಹಣಿಯಿಂದ ವಜಾ ಮಾಡಲಾಗುತ್ತದೆ.

Documents For Pouthi Khatha-ಮೃತರ ಹೆಸರನ್ನು ಪಹಣಿಯಿಂದ ವಜಾ ಮಾಡಲು ಅವಶ್ಯಕ ದಾಖಲೆಗಳು:

ಜಮೀಣಿನ ಪಹಣಿಯಲ್ಲಿ ಮೃತರ ಹೆಸರು ಜಂಟಿಯಾಗಿದ್ದರೆ ಅಥವಾ ಮೃತರ ಹೆಸರಿನಲ್ಲಿ ಜಮೀನು ಇದ್ದಲ್ಲಿ ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವ ದಾಖಲೆಗಳ ಸಮೇತ ನಿಮ್ಮ ಹಳ್ಳಿಯ ಗ್ರಾಮ ಆಡಳಿತಾಧಿಕಾರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ.

  • ಎಲ್ಲಾ ವಾರಸುದಾರರ ಆಧಾರ್ ಕಾರ್ಡ ಪ್ರತಿ/Aadhar.
  • ಕುಟುಂಬದ ವಂಶವೃಕ್ಷ/Vamshavruksha.
  • ವಂಶವೃಕ್ಷ ಪ್ರಮಾಣ ಪತ್ರ ಪಡೆಯುವಾಗ ಸಲ್ಲಿಸಿರುವ ಕೋರ್ಟ್ ಅಫಿಡವಿಟ್/Court Affidavit
  • ಜಮೀನಿನ ಪಹಣಿ/RTC
  • ಮೊಬೈಲ್ ನಂಬರ್/Pahani

ಇದನ್ನೂ ಓದಿ: District Industries Centre-ಜಿಲ್ಲಾ ಕೈಗಾರಿಕಾ ಕೇಂದ್ರಗಳಿಂದ ಉಚಿತವಾಗಿ ಸಲಕರಣೆ ವಿತರಣೆ!

What Is Pouthi Khatha-ಮೃತ ಹೆಸರಿನಿಂದ ಜಮೀನಿನ ವರ್ಗಾವಣೆಯೇ ಪೌತಿ ಖಾತೆ:

ಕಂದಾಯ ಇಲಾಖೆಯ ಭಾಷೆಯಲ್ಲಿ ಪೌತಿ ಖಾತೆ ಮಾಡಿಕೊಳ್ಳುವುದು ಎಂದರೆ ಜಮೀನಿನ ಮಾಲೀಕತ್ವವು ಮೃತರ ಹೆಸರಿನಲ್ಲಿದ್ದು ಗ್ರಾಮ ಲೆಕ್ಕಾಧಿಕಾರಿ ಅಥವಾ ಗ್ರಾಮ ಆಡಳಿತಾಧಿಕಾರಿ ಅವರ ಬಳಿ ಅರ್ಜಿಯನ್ನು ಸಲ್ಲಿಸಿ ಮಾಲೀಕತ್ವವನ್ನು ಪ್ರಸ್ತುತ ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಪೌತಿ ಖಾತೆ ಎಂದು ಕರೆಯಲಾಗುತ್ತದೆ.

How To Apply For Pouthi Khatha-ಅರ್ಜಿ ಸಲ್ಲಿಸುವುದು ಹೇಗೆ?

ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪೌತಿ ಖಾತೆ ಅಭಿಯಾನ ನಡೆಯುತ್ತಿದ್ದು ರೈತರು ಈ ಅಭಿಯಾನದ ಪ್ರಯೋಜನವನ್ನು ಪಡೆಯಲು ಪಹಣಿಯ ಜಮೀನಿನ ಮಾಲೀಕರ ವಿಭಾಗದಲ್ಲಿ ಮೃತರ ಹೆಸರು ಇದ್ದಲ್ಲಿ ಕೂಡಲೇ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಅಥವಾ ಗ್ರಾಮ ಆಡಳಿತಾಧಿಕಾರಿಯನ್ನು ಭೇಟಿ ಮಾಡಿ ಮೃತರ ಹೆಸರನ್ನು ವಜಾ ಮಾಡಲು ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Swachh Bharat Mission-ಶೌಚಾಲಯ ನಿರ್ಮಾಣಕ್ಕೆ ₹12,000/- ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!

Pouthi Khatha Benefits-ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಳ್ಳುವುದರಿಂದ ಯಾವೆಲ್ಲ ಪ್ರಯೋಜನಗಳಿವೆ:

ರೈತರು ಪ್ರಸ್ತುತ ವಾರಸುದಾರರ ಹೆಸರಿಗೆ ತಮ್ಮ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಳ್ಳುವುದರಿಂದ ಅಗುವ ಪ್ರಯೋಜನಗಳ ಪಟ್ಟಿ ಈ ಕೆಳಗಿನಂತಿದೆ:

ಜಮೀನಿನ ಮೇಲೆ ಅತೀ ಕಡಿಮೆ ಬಡ್ಡಿದರದಲ್ಲಿ ಬೆಳೆ ಸಾಲವನ್ನು ಪಡೆಯಲು ಸಹಕಾರಿಯಾಗಿದೆ.
ಬೆಳೆ ವಿಮೆ,ಬೆಳೆ ಪರಿಹಾರ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದು.
ಕೃಷಿ,ತೋಟಗಾರಿಕೆ,ರೇಷ್ಮೆ ಇಲಾಖೆಯಲ್ಲಿನ ಸಬ್ಸಿಡಿ ಯೋಜನೆಗಳ ಪ್ರಯೋಜನ ಪಡೆಯಬಹುದು.
ಸಬ್ಸಿಡಿಯಲ್ಲಿ ಕೃಷಿ ಯಂತ್ರೋಪಕಣ ಪಡೆಯಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: Muskaan Scholarship-ಮುಸ್ಕಾನ್ ವಿದ್ಯಾರ್ಥಿವೇತನ ಯೋಜನೆಯಡಿ ₹12,000 ಸ್ಕಾಲರ್ಶಿಪ್!

Online RTC-ಮೊಬೈಲ್ ನಲ್ಲಿ ಉಚಿತವಾಗಿ ನಿಮ್ಮ ಜಮೀನಿನ ಮಾಲೀಕರ ವಿವರವನ್ನು ಪಡೆಯಬಹುದು:

ರೈತರು ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಜಮೀನಿನ ಮಾಲೀಕರ ವಿವರವನ್ನು ಒಂದೆರಡು ಕ್ಲಿಕ್ ನಲ್ಲಿ ಮನೆಯಲ್ಲಿ ಕುಳಿತ ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ "Bhoomi Online RTC" ಮಾಡಿ ಅಧಿಕೃತ ಕಂದಾಯ ಇಲಾಖೆಯ Bhoomi ವೆಬ್ಸೈಟ್ ಅನ್ನು ಪ್ರವೇಶ ಮಾಡಿ.

Step-2: ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ,ಹಳ್ಳಿ ಮತ್ತು ಸರ್ವೆ ನಂಬರ್ ಹಾಕಿ "Go" ಬಟನ್ ಮೇಲೆ ಕ್ಲಿಕ್ ಮಾಡಿಬೇಕು.

Step-3: ಇದಾದ ನಂತರ ಇಲ್ಲಿ ನಿಮ್ಮ ಸರ್ವೆ ನಂಬರಿನ ಹಿಸ್ಸಾ ಸಂಖ್ಯೆಯನ್ನು ನಮೂದಿಸಿ ವರ್ಷವನ್ನು ಆಯ್ಕೆ ಮಾಡಿಕೊಂಡು "Fetch Details" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಮಾಲೀಕರ ವಿವರ ಮತ್ತು ಜಮೀನಿನ ವಿಸ್ತೀರ್ಣದ ವಿವರ ತೋರಿಸುತ್ತದೆ ಇದೆ ಪೇಜ್ ನಲ್ಲಿ ಕೊನೆಯಲ್ಲಿ ಕಾಣುವ "View" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಅಧಿಕೃತ ಪಹಣಿ/ಊತಾರ್ ಪ್ರತಿ ತೆರೆದುಕೊಳ್ಳುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: