Traffic Fine 50% Offer-ವಾಹನ ಸವಾರರಿಗೆ ಸಿಹಿ ಸುದ್ದಿ: ಟ್ರಾಫಿಕ್ ಬಾಕಿ ದಂಡ ಪಾವತಿಗೆ ಶೇ 50% ರಿಯಾಯಿತಿ!

September 11, 2025 | Siddesh
Traffic Fine 50% Offer-ವಾಹನ ಸವಾರರಿಗೆ ಸಿಹಿ ಸುದ್ದಿ: ಟ್ರಾಫಿಕ್ ಬಾಕಿ ದಂಡ ಪಾವತಿಗೆ ಶೇ 50% ರಿಯಾಯಿತಿ!
Share Now:

ವಾಹನ ಮಾಲೀಕರಿಗೆ ಟ್ರಾಫಿಕ್ ದಂಡ ಪಾವತಿಗೆ ಉತೇಜನವನ್ನು ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರವು ಶೇ 50% ರಿಯಾಯಿತಿಯಲ್ಲಿ(Traffic Fine 50% Offer) ದಂಡವನ್ನು ಪಾವತಿ ಮಾಡಲು ವಾಹನ ಮಾಲೀಕರಿಗೆ ಕೊನೆಯ್ ಅವಕಾಶವನ್ನು ನೀಡಿದ್ದು ಈ ಕುರಿತು ಸಂಪೂರ್ಣ ವಿವರವನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಸೇರಿದಂತೆ ಇನ್ನಿತರೆ ಟ್ರಾಫಿಕ್ ನಿಯಮಗಳನ್ನು ಮೀರಿ ದಂಡ ಪಾವತಿಸಲು ಟ್ರಾಪಿಕ್ ಪೋಲಿಸ್ ವತಿಯಿಂದ ರಶೀದಿಯನ್ನು(Traffic Fine 50% Offer Scheme) ಪಡೆದವರು ಒಟ್ಟು ದಂಡದ ಮೊತ್ತಕ್ಕೆ ಶೇ 50% ರಿಯಾಯಿತಿಯಲ್ಲಿ ಹಣವನ್ನು ಪಾವತಿ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ.

ಇದನ್ನೂ ಓದಿ: B.Ed Admission-2025: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಬಿ.ಎಡ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

ವಾಹನ ಮಾಲೀಕರು ಶೇ 50% ರಿಯಾಯಿತಿಯಲ್ಲಿ ಸಂಚಾರಿ ದಂಡವನ್ನು(Kanrataka Traffic Police) ತಮ್ಮ ಮೊಬೈಲ್ ನಲ್ಲೇ ಹೇಗೆ ಪಾವತಿ ಮಾಡುವುದು? ಒಟ್ಟು ಎಷ್ಟು ದಿನ ಈ ಅವಕಾಶ ಜಾರಿಯಲ್ಲಿದೆ? ಯಾರಿಗೆಲ್ಲ ಈ ರಿಯಾಯಿತಿಯಲ್ಲಿ ಪಾವತಿ ಮಾಡಲು ಅವಕಾಶ ನೀಡಲಾಗಿದೆ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Traffic Fine 50% Offer Last Date-ಶೇ 50% ರಿಯಾಯಿತಿಯಲ್ಲಿ ದಂಡ ಪಾವತಿಸಲು ಪ್ರಮುಖ ದಿನಾಂಕಗಳು:

ಶೇ 50% ರಿಯಾಯಿತಿಯಲ್ಲಿ ಆನ್ಲೈನ್ ಮೂಲಕ ದಂಡ ಪಾವತಿ ಪ್ರಾರಂಭ- 23 ಆಗಸ್ಟ್ 2025
ಆನ್ಲೈನ್ ಮೂಲಕ ದಂಡ ಪಾವತಿಸಲು ಕೊನೆಯ ದಿನಾಂಕ- 12 ಸೆಪ್ಟೆಂಬರ್ 2025

Who Can Apply For This Scheme-ಯಾರಿಗೆಲ್ಲ ಈ ರಿಯಾಯಿತಿಯಲ್ಲಿ ಪಾವತಿ ಮಾಡಲು ಅವಕಾಶ ನೀಡಲಾಗಿದೆ?

  • ರಿಯಾಯಿತಿ ದರದಲ್ಲಿ ಸಂಚಾರಿ ದಂಡವನ್ನು ಪಾವತಿ ಮಾಡಲು ಸಂಚಾರಿ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ.
  • ಟ್ರ‍ಾಫಿಕ್ ಪೊಲೀಸ್ ಇಲಾಖೆಯಿಂದ ಸಂಚಾರಿ ಇ-ಚಲನ್ ಅನ್ನು 11 ಫೆಬ್ರವರಿ 2023 ರ ಒಳಗಾಗಿ ದಾಖಲಾಗಿರುವ ಪ್ರಕರಣಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • 11 ಫೆಬ್ರವರಿ 2023 ರ ನಂತರ ದಾಖಲಾದ ಪ್ರಕರಣಗಳಿಗೆ ಮುಂದಿನ ವರ್ಷ ಶೇ 50% ರಿಯಾಯಿತಿ ಒದಗಿಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Karnataka Guarantee Scheme-ಅನರ್ಹರಿಗಿಲ್ಲ ಗ್ಯಾರಂಟಿ ಯೋಜನೆ ಹಣ! ರಾಜ್ಯ ಸರಕಾರದಿಂದ ಮಹತ್ವದ ನಿರ್ಣಯ!

Traffic Fine

Online Traffic Fine Mobile Application-ಶೇ 50% ರಿಯಾಯಿತಿಯಲ್ಲಿ ದಂಡ ಪಾವತಿ ಮಾಡಲು ಮೊಬೈಲ್ ಅಪ್ಲಿಕೇಶನ್:

ವಾಹನ ಮಾಲೀಕರು ತಮ್ಮ ವಾಹನದ ಮೇಲಿರುವ ಎಲ್ಲಾ ಸಂಚಾರಿ ದಂಡವನ್ನು ಕರ್ನಾಟಕ ಒನ್ ಮೊಬೈಲ್ ಆಪ್ಯ್ ಅನ್ನು ಬಳಕೆ ಮಾಡಿಕೊಂಡು ಆನ್ಲೈನ್ ಮೂಲಕ ಕೆಳಗಿನ ಹಂತಗಳನ್ನು ಅನುಸರಿಸಿ ಪಾವತಿ ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಅವಕಾಶ ಮಾಡಿಕೊಡಲಾಗಿದೆ.

ಹಂತ-1: ವಾಹನ ಮಾಲೀಕರು ತಮ್ಮ ಮೊಬೈಲ್ ನಲ್ಲಿ ಮೊದಲಿಗೆ ಇಲ್ಲಿ ಕ್ಲಿಕ್ "Online Traffic Fine" ಮಾಡಿ ಗೂಗಲ್ ಪ್ಲೈ ಸ್ಟೋರ್ ಪವೇಶ ಮಾಡಿ ಕರ್ನಾಟಕ ಒನ್ ಮೊಬೈಲ್ ಆಪ್ಯ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Grama One-ನಿಮ್ಮ ಹಳ್ಳಿಯ ಗ್ರಾಮ ಒನ್ ಕೇಂದ್ರದಲ್ಲಿ ಯಾವುದಕ್ಕೆಲ್ಲ ಅರ್ಜಿ ಸಲ್ಲಿಸಬಹುದು?

Karanataka one

ಇದನ್ನೂ ಓದಿ: Bembala Bele Yojane-ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಕೂಡಲೇ ಈ ಕೆಲಸ ಮಾಡಿ!

ಹಂತ-2: ಅಧಿಕೃತ ಕರ್ನಾಟಕ ಒನ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಅಗತ್ಯ ವಿವರವನ್ನು ಹಾಕಿ ಲಾಗಿನ್ ಅಗಬೇಕು.

ಹಂತ-3: ಲಾಗಿನ್ ಅದ ನಂತರ ಇಲ್ಲಿ ಮುಖಪುಟದಲ್ಲಿ ಕಾಣುವ "Traffic Fine" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿ ಭರ್ತಿ ಮಾಡಿ ಶೇ 50% ರಿಯಾಯಿತಿಯಲ್ಲಿ ದಂಡವನ್ನು ಪಾವತಿ ಮಾಡಬಹುದು.

ಇದನ್ನೂ ಓದಿ: District Industries Centre-ಜಿಲ್ಲಾ ಕೈಗಾರಿಕಾ ಕೇಂದ್ರಗಳಿಂದ ಉಚಿತವಾಗಿ ಸಲಕರಣೆ ವಿತರಣೆ!

Helpline-ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯವಾಣಿ: 080-49203888
Karanataka one Mobile Application-ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಲಿಂಕ್-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: