BPL Card Cancellation- 3.65 ಲಕ್ಷ ಅನರ್ಹ BPL ಕಾರ್ಡ ರದ್ದು: ಸಿಎಂ ಸಿದ್ದರಾಮಯ್ಯ

September 12, 2025 | Siddesh
BPL Card Cancellation- 3.65 ಲಕ್ಷ ಅನರ್ಹ BPL ಕಾರ್ಡ ರದ್ದು: ಸಿಎಂ ಸಿದ್ದರಾಮಯ್ಯ
Share Now:

ಆಹಾರ ಇಲಾಖೆಯಿಂದ ಈಗಾಗಲೇ ಅನರ್ಹ ಬಿಪಿಎಲ್ ಕಾರ್ಡ(BPL Ration Card) ಹೊಂದಿರುವ ನಾಗರಿಕರ ಪತ್ತೆ ಕಾರ್ಯವನ್ನು ತ್ವರಿತವಾಗಿ ಮಾಡಲಾಗುತ್ತಿದ್ದು ಈ ವಿಷಯಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿಯಲ್ಲಿ ನಡೆದ ಪ್ರಗತಿ ಪರೀಶಿಲನಾ ಸಭೆಯಲ್ಲಿ ಒಟ್ಟು 3.65 ಲಕ್ಷ ಅನರ್ಹ BPL ಕಾರ್ಡ ಗಳನ್ನು ರದ್ದು ಮಾಡಲಾಗಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದಲ್ಲದೇ ಈ ಪರಿಶೀಲನಾ ಕಾರ್ಯದಲ್ಲಿ ಯಾವುದೇ ರೀತಿಯಿಂದಲು ಅರ್ಹ ಕಾರ್ಡದಾರರಿಗೆ ತೊಂದರೆ ಉಂಟಾಗಬಾರದು ಎಂದು ಆಹಾರ ಇಲಾಖೆಯ(Ahara Ilake)ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದಲ್ಲದೇ ಅರ್ಹ ಅರ್ಜಿದಾರರಿಗೆ ಈವರೆಗೆ ಬಿಪಿಎಲ್ ಕಾರ್ಡ ವಿತರಣೆ ಮಾಡಿಲ್ಲದೇ ಇದ್ದರೆ ಕೂಡಲೇ ಅಂತಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಇದನ್ನೂ ಓದಿ: IDFC First Bank Scholarship-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ IDFC First ಬ್ಯಾಂಕ್ ನಿಂದ 1.0 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಮುಖ್ಯಮಂತ್ರಿಯವರ(CM Siddaramaiah) ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ ರದ್ದು ಮಾಡುವುದರ ಬಗ್ಗೆ ಯಾವೆಲ್ಲ ನಿರ್ಣಯಗಳನ್ನು ಮತ್ತು ಸೂಚನೆಗಳನ್ನು ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎನ್ನುವ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

BPL Card Rules In Karnataka-ರದ್ದಾದ ಬಿಪಿಎಲ್ ಕಾರ್ಡದಾರ ವಿವರ ಹೀಗಿದೆ:

ಈ ಕೆಳಗಿನ ಪಟ್ಟಿಯಲ್ಲಿರುವ ಮಾನದಂಡಗಳ ಆಧಾರದ ಮೇಲೆ ಬಿಪಿಎಲ್ ಕಾರ್ಡ ಅನ್ನು ರದ್ದು ಮಾಡಲಾಗಿದೆ.

ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರು ಬಿಪಿಎಲ್ ಕಾರ್ಡ ಹೊಂದಿದವರ ಕಾರ್ಡಗಳನ್ನು ರದ್ದು ಮಾಡಿ ಎಪಿಎಲ್ ಕಾರ್ಡಗಳಾಗಿ ಪರಿವರ್ತಿಸಲಾಗಿದೆ.

7.5 ಎಕರೆಗಿಂತ ಹೆಚ್ಚಿನ ಜಮೀನನ್ನು ಹೊಂದಿರುವವರು.

ಜಿಎಸ್.ಟಿ ಪಾವತಿ ಮಾಡುತ್ತಿರುವ ಫಲಾನುಭವಿಗಳು ಹೊಂದಿರುವ ಕಾರ್ಡ ರದ್ದುಪಡಿಸಲಾಗಿದೆ.

ಕೌಟುಂಬದಲ್ಲಿ ಸರಕಾರಿ ನೌಕರಿಯಲ್ಲಿದ್ದು ಸಹ ಬಿಪಿಎಲ್ ಕಾರ್ಡ ಹೊಂದಿರುವ ಕಾರ್ಡಗಳನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ: Traffic Fine 50% Offer-ವಾಹನ ಸವಾರರಿಗೆ ಸಿಹಿ ಸುದ್ದಿ: ಟ್ರಾಫಿಕ್ ಬಾಕಿ ದಂಡ ಪಾವತಿಗೆ ಶೇ 50% ರಿಯಾಯಿತಿ!

Cancelled BPL Card List

ಇದನ್ನೂ ಓದಿ: Bembala Bele Yojane-ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಕೂಡಲೇ ಈ ಕೆಲಸ ಮಾಡಿ!

Karnataka Food Department-ಆಹಾರ ಇಲಾಖೆಯಿಂದ ಮರು ಪರಿಶೀಲನೆಗೆ ಅವಕಾಶ:

ಅನರ್ಹ ಬಿಪಿಎಲ್ ಕಾರ್ಡದಾರರ ಪಟ್ಟಿಯನ್ನು ಸಿದ್ದಪಡಿಸಿದ ಕೂಡಲೇ ಇಂತಹ ಕಾರ್ಡ್ ಗಳನ್ನು ನೇರವಾಗಿ ರದ್ದು ಮಾಡದೇ ನ್ಯಾಯಬೆಲೆ ಅಂಗಡಿವಾರು ಪಟ್ಟಿಗಳನ್ನು ನೋಟಿಸ್ ಕಳುಹಿಸಿ ಬಿಪಿಎಲ್ ಕಾರ್ಡ ಹೊಂದಿರುವ ಅನರ್ಹರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಟ್ಟಿಯಿಂದ ತಮ್ಮ ಹೆಸರು ಕೈಬಿಡುವುದರ ಬಗ್ಗೆ ಅವಲಾನ್ನು ಸ್ವೀಕರಿಸಿದ ಬಳಿಕವೇ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

Ineligible Ration Card List-3.65 ಲಕ್ಷ ಅನರ್ಹ BPL ಕಾರ್ಡ ರದ್ದು: ಸಿಎಂ ಸಿದ್ದರಾಮಯ್ಯ:

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಆಹಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯದ್ಯಂತ ಎಲ್ಲಾ ಜಿಲ್ಲೆಗಳನ್ನು ಸೇರಿ ಒಟ್ಟು 3.65 ಲಕ್ಷ ಅನರ್ಹ BPL ರದ್ದು ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಹಿತಿಯನ್ನು ತಿಳಿಸಿದ್ದಾರೆ.

ಇದನ್ನೂ ಓದಿ: B.Ed Admission-2025: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಬಿ.ಎಡ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

Eligible Ration Card Holders-ಅರ್ಹರಿದ್ದರು ನಿಮ್ಮ ಕಾರ್ಡ ರದ್ದಾದರೆ ಹೀಗಿದೆ ಮಾಡಿ:

ಒಂದೊಮ್ಮೆ ಆಹಾರ ಇಲಾಖೆಯ ಮಾರ್ಗಸೂಚಿಯ ಪ್ರಕಾರ ಅರ್ಹರಿದ್ದರು ನಿಮ್ಮ ಬಿಪಿಎಲ್ ರದ್ದಾದರೆ ಕೂಡಲೇ ಅಗತ್ಯ ಪೂರಕ ದಾಖಲೆಗಳ ಸಮೇತ ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಮರುಪರಿಶೀಲನೆ ಮಾಡಲು ಅರ್ಜಿಯನ್ನು ಸಲ್ಲಿಸಿ ರದ್ದಾದ ಕಾರ್ಡ ಅನ್ನು ಮರಳಿ ಪಡೆಯಬಹುದು.

Cancelled Ration Card List-ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲೇ ನೋಡಿ:

ಸಾರ್ವಜನಿಕರು ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ನಲ್ಲೇ ಪ್ರತಿ ತಿಂಗಳು ರದ್ದಾಗುವ ರೇಶನ್ ಕಾರ್ಡದಾರ ಪಟ್ಟಿಯನ್ನು ನೋಡಬಹುದು.

Ahara Ilake Website-ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: