NMMS Scholarship-ಎನ್‍ಎಂಎಂಎಸ್ ಯೋಜನೆಯಡಿ ಪ್ರತಿ ತಿಂಗಳು 1,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

September 16, 2025 | Siddesh
NMMS Scholarship-ಎನ್‍ಎಂಎಂಎಸ್ ಯೋಜನೆಯಡಿ ಪ್ರತಿ ತಿಂಗಳು 1,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Share Now:

2025-26ನೇ ಸಾಲಿನಲ್ಲಿ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ವಿದ್ಯಾರ್ಥಿವೇತನ (National Means-cum-Merit Scholarship- NMMS) ಕಾರ್ಯಕ್ರಮದಡಿಯಲ್ಲಿ Department of School Education & Literacy ನವದೆಹಲಿ ಇಲಾಖೆಯ ಮೂಲಕ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿರುತ್ತದೆ.

ವಿದ್ಯಾರ್ಥಿವೇತನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಪರೀಕ್ಷೆಯಲ್ಲಿ ತೆಗೆದುಕೊಂಡು ಉತ್ತಮ ಅಂಕಗಳನ್ನು ಗಳಿಸಿದವರು ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿದ್ದು, ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಕೂಡಲೇ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Ration Card Correction-ರ‍ೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ!

ಕೆ.ಎಸ್.ಇ.ಎ.ಬಿಯ(kseab) ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ವತಿಯಿಂದ 2025-26ನೇ ಸಾಲಿನ ಕೇಂದ್ರ ಸರ್ಕಾರದ ಎನ್‍ಎಂಎಂಎಸ್ ವಿದ್ಯಾರ್ಥಿ ವೇತನಕ್ಕಾಗಿ ಪರೀಕ್ಷೆಯನ್ನು ಬರೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

How To Apply For NMMS Scholarship-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ನಮೂನೆ ಹಾಗೂ ಇತರೆ ವಿವರಗಳನ್ನು ಆನ್‍ಲೈನ್‍ನಲ್ಲಿ ಲಭ್ಯವಿದ್ದು, ಶಾಲಾ ಮುಖ್ಯ ಶಿಕ್ಷಕರ ಮೂಲಕ ವೆಬ್ ಸೈಟ್ https://kseab.karnataka.gov.in/ ನಲ್ಲಿ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 15 ರಂದು ಅಂತಿಮ ದಿನವಾಗಿರುತ್ತದೆ.

Last Date For NMMS Scholarship Application-ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳ ವಿವರ:

ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು 15 ಅಕ್ಟೋಬರ್ 2025 ಅಂತಿಮ ದಿನಾಂಕವಾಗಿರುತ್ತದೆ.
ಅರ್ಹತಾ ಪರೀಕ್ಷೆ ನಡೆಯುವ ದಿನಾಂಕ: 07 ಡಿಸೆಂಬರ್ 2025

ಇದನ್ನೂ ಓದಿ: Free Mushroom Training-ಉಚಿತ ಅಣಬೆ ಬೇಸಾಯ ತರಬೇತಿ ಈಗಲೇ ಅರ್ಜಿ ಸಲ್ಲಿಸಿ!

NMMS Scholarship application

ಇದನ್ನೂ ಓದಿ: Mysuru Udyogamela-2025: ಮೈಸೂರಿನಲ್ಲಿ ಉದ್ಯೋಗ ಮೇಳ ನಿರುದ್ಯೋಗಿಗಳಿಗೆ ನೋಂದಣಿಗೆ ಅವಕಾಶ!

NMMS Scholarship Eligibility-ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳೇನು?

ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು 9 ಮತ್ತು 11ನೇ ತರಗತಿಗಳಲ್ಲಿ ಕನಿಷ್ಠ ಶೇ.55 ರಷ್ಟು ಮತ್ತು 10ನೇ ತರಗತಿಯಲ್ಲಿ ಕನಿಷ್ಠ ಶೇ.60 ರಷ್ಟು ಅಂಕಗಳನ್ನು ಗಳಿಸಬೇಕಾಗುತ್ತದೆ. ಪ್ರಜಾತಿ/ಪ.ಪಂ ವಿದ್ಯಾರ್ಥಿಗಳಿಗೆ ಶೇ.5ರಷ್ಟು ವಿನಾಯಿತಿ ಇರುತ್ತದೆ.

ವಿದ್ಯಾರ್ಥಿವೇತನದ ಮುಂದುವರಿಕೆಗೆ ವಿದ್ಯಾರ್ಥಿಯು ಅಧ್ಯಯನ ನಡೆಸುತ್ತಿರುವ ತರಗತಿಯ ಫಲಿತಾಂಶ ಪ್ರಕಟವಾದ ನಂತರದ 3 ತಿಂಗಳ ಒಳಗಾಗಿ ಮುಂದಿನ ತರಗತಿಗೆ ದಾಖಲಾತಿ ಪಡೆಯುವುದು ಕಡ್ಡಾಯ.

ಆಯ್ಕೆಯಾದ ವಿದ್ಯಾರ್ಥಿಗಳು ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ (Local body schools) ಶಾಲೆ/ಕಾಲೇಜಿನಲ್ಲಿ ಮಾತ್ರ ತಮ್ಮ ವಿದ್ಯಾಭ್ಯಾಸ ಮುಂದುವರಿಸಬೇಕು.

ಇದನ್ನೂ ಓದಿ: Gruhalakshmi Hana-ಗೃಹಲಕ್ಷ್ಮಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ಶೀಘ್ರದಲ್ಲಿ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ವಿದ್ಯಾರ್ಥಿಯು 9, 10 ಮತ್ತು 11ನೇ ತರಗತಿಯಲ್ಲಿ ಪ್ರಥಮ ಪ್ರಯತ್ನ (First Attempt) ದಲ್ಲೇ ತೇರ್ಗಡೆಯಾಗಬೇಕು

ವಿದ್ಯಾರ್ಥಿಗಳು ಯಾವುದಾದರೂ ಒಂದು ಯೋಜನೆಯ ವಿದ್ಯಾರ್ಥಿವೇತನವನ್ನು ಮಾತ್ರ ಪಡೆಯಲು ಅರ್ಹರಾಗಿರುತ್ತಾರೆ.

ITI ಹಾಗೂ Diploma ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವವರು ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವುದಿಲ್ಲ.

ವಿದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ: BPL Card-ಅನರ್ಹ ಬಿಪಿಎಲ್ ಕಾರ್ಡದಾರರಿಗೆ ನೋಟಿಸ್! ನಿಮಗೆ ನೋಟಿಸ್ ಬಂದರೆ ಏನು ಮಾಡಬೇಕು

NMMS Scholarship

ಇದನ್ನೂ ಓದಿ: JK Tyre Shiksha Scholarship-ಜೆಕೆ ಟೈರ್ ಸ್ಕಾಲರ್ಶಿಪ್ ವಿದ್ಯಾರ್ಥಿನಿಯರಿಗೆ ರೂ 25,000/- ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

NMMS Scholarship-ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಹೇಗೆ ವಿತರಣೆ ಮಾಡಲಾಗುತ್ತದೆ?-

ಈ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ 9ನೇ ತರಗತಿಯಿಂದ ಮಾಸಿಕ ರೂ.1000/-ರಂತೆ ವರ್ಷಕ್ಕೆ ರೂ.12,000/- ಗಳನ್ನು 4 ವರ್ಷಗಳವರೆಗೆ (ದ್ವಿತೀಯ ಪಿ.ಯು.ಸಿ ಯವರೆಗೆ) ವಿದ್ಯಾರ್ಥಿವೇತನವನ್ನು MOE DoSEL ವತಿಯಿಂದ ನೀಡಲಾಗುತ್ತದೆ, ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ DoSEL ನವದೆಹಲಿ ರವರು ಸಿದ್ದಪಡಿಸಿರುವ ಎನ್.ಎಸ್.ಪಿ. 2.0 ವೆಬ್‌ಸೈಟ್: www.scholorships.gov.in ನಲ್ಲಿ ನೋಂದಾಯಿಸಿದವರಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

NMMS Scholarship Helpline-ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ-ದೂರವಾಣಿ ಸಂಖ್ಯೆ: 080-23341615
NMMS Scholarship Notification-ಅಧಿಕೃತ ಪ್ರಕಟಣೆ ಪ್ರತಿ-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: